Saturday, April 17, 2010

ಬಲಶಾಲಿ ಈ ಪುಟಾಣಿ!!

ನೀವು ಉತ್ತರ ಸುಲಭವಾಗಿ ಊಹಿಸಿರಬಹುದು ಅಂತ ಭಾವಿಸಿದ್ದೇನೆ 
Sirius ಅಥವಾ ಲುಬ್ದಕ ಇದು ನಮಗೆ ಆಗಸಲ್ಲಿ ಕಾಣುವ ತಾರೆಗಳಲ್ಲೇ  ಅತ್ಯಂತ ಪ್ರಕಾಶಮಾನವಾದುದು(ಅದಕ್ಕಿಂತಲೂ ಉಜ್ವಲವಾದ್ದು ಯಾವುದಾದ್ರೂ ಇದ್ದ್ರೆ ಅದು ಗ್ರಹ ಅಥವಾ ಬೇರೆ ಯಾವುದೋ ಕಾಯವಾಗಿರಬೇಕು)
.Sirius ತಾರೆ ಮಹಾವ್ಯಾಧ ಅಥವಾ ಓರಿಯನ್ ನಿಹಾರಿಕೆಯ  ಕೆಳಗಿರುವ ಮಹಾಶ್ವಾನ ಅಥವಾ ಕ್ಯಾನಿಸ್-ಮೇಜರ್ ನಕ್ಷತ್ರಪುಂಜದಲ್ಲಿದೆಲ್ಲಿದೆ ಇವತ್ತು ಆಗಸವನ್ನು ನೀವು ದಿಟ್ಟಿಸಿ ನೋಡಿದರೆ ಅದು ಈ ಸಿರೀಸ್ ತಾರೆ ಸುಮಾರು ನಮ್ಮ ತಲೆಯ ಮೇಲೇ ಸ್ವಲ್ಪವಷ್ಟೇ ದಕ್ಷಿಣದ ಕಡೆಗಿದೆ ಅದರ ಅತ್ಯಂತ ಉಜ್ವಲ ಕಾಂತಿ ನಮ್ಮನ್ನು ಸೆಳೆಯದಿರದು
ಈ ತಾರೆ ಬೆಳಗಿನ ಹೊತ್ತು ಉದಯಿಸಿದರೆ ಈಜಿಪ್ಟಿಯನ್ನರು ನೈಲ್ ನದಿಯಲ್ಲಿ ವಾರ್ಷಿಕ-ಪ್ರವಾಹ ಬರುವುದು ಅಂತ ಅರಿಯುತ್ತಿದ್ದರು

(photo  downloaded from net)

ಇದ್ರ ಕಾಂತಿಮಾನ -೧.೪೬(- 1.46) ಇದು ೮.೭(8.7) Light Year  ದೂರವಿದೆ ಹಲವು ತಾರೆಗಳಿಗೆ ಹೋಲಿಸಿದರೆ ಇದು ಸೂರ್ಯನಿಗೆ ಹತ್ತಿರ ಅನ್ನಿಸಬಹುದು ಇದು ಸೂರ್ಯನಿಗಿಂತ ೨೬(26) ಪಟ್ಟು ಉಜ್ವಲವಾಗಿದೆ

ಈ ತಾರೆಯ ಪ್ರಸ್ತಾಪ ಇಲ್ಲೇಕೆ ಅನ್ನಬಹುದು, ಇದೆ ಅದು ಶ್ವೇತ-ಕುಬ್ಜಗಳಿಗೆ ?
ಅದು ಇರುವುದು ಈ ತಾರೆಯಲ್ಲಿ ಅಲ್ಲ ಈ ತಾರೆಯ ಪುಟಾಣಿ ಮಿತ್ರನಲ್ಲಿ
ನಿಮಗೆ ಗೊತ್ತಿರುವಂತೆ ವಿಶ್ವದಲ್ಲಿ ಬಹುಪಾಲು ಜೋಡಿ ತಾರೆಗಳಿವೆ  ಹೀಗೆ ಇದೂ ಕೂಡ ಒಂದು
ಈ   ಸಿರೀಸ್ ತಾರೆಯ ಜೊತೆಗೊಬ್ಬ ಪುಟಾಣಿ ತಾರೆ ಇದೆ ಅದು ಸಿರಿಸ್ ಅನ್ನು ಸುತ್ತುತ್ತಿರಬೇಕಲ್ಲ ಆದರೆ ಹಾಗಾಗಿಲ್ಲ ಬದಲಾಗಿ ಅವೆರಡೂ ಒಟ್ಟಿಗೆ ಅಪ್ಪಾಲೆ-ತಿಪ್ಪಾಲೆ  ಆಡುವಂತೆ ಸುತ್ತುತ್ತಿವೆ ಅಷ್ಟು ಬಲಶಾಲಿ ಆ ಪುಟಾಣಿ!! ಅದರ ಹೆಸರು  PUP

(photo  downloaded from net)
ಅದು  ಸಿರೀಸ್  ಗಿಂತ ೧/೧೦೦೦೦(1/10000) ಪಟ್ಟು ಚಿಕ್ಕದಾಗಿದೆ ಕ್ಷೀಣವಾಗಿದೆ
ಸಿರೀಸ್  ತಾರೆಯ ರೋಹಿತವನ್ನು ಒಮ್ಮೆ ಪರೀಕ್ಷಿಸಿದಾಗ ಅದರಲ್ಲಿ ಎರ‍ಡು ಗುಣಲಕ್ಷಣಗಳು ಕಂಡು ಬಂದಾಗ ಈ ಪುಟಾಣಿ ತಾರೆ ಪತ್ತೆಯಾಯಿತು
ಇದನ್ನು ವಿಶೇಷ ಸೌಲಭ್ಯ ಉಳ್ಳ ಅತೀ ಶಕ್ತಿಶಾಲಿ ದೂರದರ್ಶಕದಿಂದ ಮಾತ್ರ ವೀಕ್ಷಿಸಲು ಸಾಧ್ಯ
ಇದು ಕೇವಲ ೪೨೦೦೦(42000) K.M ವ್ಯಾಸವಿದೆ 
ಆದರೆ ಇದು ಸೂರ್ಯನಿಗಿಂತ ಸ್ವಲ್ಪ ಭಾರವಾಗಿದೆ ಅಂದರೆ ಇದು  ಎಷ್ಟು ಸಾಂದ್ರವಾಗಿರಬಹುದು ಯೋಚಿಸಿ

ನಮ್ಮ ಸೂರ್ಯನೂ ಮುಂದೆ ಓಂದು ದಿನ ನಮ್ಮ ಭೂಮಿಯಷ್ಟು ಗಾತ್ರದ ಶ್ವೇತ-ಕುಬ್ಜವಾಗುತ್ತಾನೆ
ಶ್ವೇತ-ಕುಬ್ಜಗಳಲ್ಲಿ ಏನು ಕ್ರಿಯೆಗಳು ನಡೆಯತ್ತವೆ ಅಂತ ಮುಂದಿನ ಸಂಚಿಕೆಯಲ್ಲಿ ತಿಳಿಸುತ್ತೇನೆ

Thursday, April 15, 2010

White Dwarfs ಲಕ್ಷಣಗಳು

ಆಟದ ದಾಳವನ್ನು ತೋಟ್ಟಿಲಲ್ಲಿನ ಮಗು ಸಹ ಎತ್ತಬಲ್ಲದು ,ಅದು ಕಬ್ಬಿಣದಿಂದ ಆಗಿದ್ದರೆ ದೊಡ್ಡದಾಗಿದ್ದರೆ  ನೀವು ಎತ್ತಬಹುದು ಆದರೆ-White Dwarf- ತಂದ ಅಷ್ಟು ಗಾತ್ರದ ವಸ್ತು ಸುಮಾರು ೧೬ ರಿಂದ ೪೦ ಟನ್ ಭಾರವಿರುತ್ತದೆ
ಆದ್ದರಿಂದ -White Dwarfs ಗಳದ್ದು ಅತೀ ಚಿಕ್ಕ ಗಾತ್ರ ಅತೀವ ತಾಪ ,ಅವುಗಳು H-R Diagram ನಲ್ಲಿ  ಕೆಳಗಿನ-ಎಡ ಮೂಲೆಯಲ್ಲಿರುತ್ತವೆ(view H-R Diagram in older posts)
ಇದೆಲ್ಲಾ ಲಕ್ಷಣಗಳು ಅವಕ್ಕೆ ಇರುವುದರಿಂದ -White Dwarfs- ಅತೀವ ಗುರುತ್ವ ಬಲ 

ಈಗ ಒಂದು ಸರಳ ಪ್ರಶ್ನೆ ನಮ್ಮ ಆಗಸದಲ್ಲೇ  ಅತ್ಯಂತ  ಉಜ್ವಲ -ತಾರೆ ಯಾವುದು ಗೊತ್ತೇ? ಅದರ ವಿಶೇಷತೆ ಏನು ಗೊತ್ತಾ? 
ಮುಂದಿನ ಸಂಚಿಕೆ ದಿನಾಂಕ   -April-17-2010-ರಂದು  ಸಮಯ -08:30pm ಕ್ಕೆ  ಪ್ರಕಟವಾಗಲಿದೆ

Tuesday, April 13, 2010

ತಾರೆ-ವಜ್ರ-ಬಿಳಿ-ಕುಬ್ಜಗಳು(White -Dwarfs)

ಹೀಗೆ ಸೂರ್ಯ ದೈತ್ಯನಾದಾಗ ಸುಮಾರು ಭೂಮಿಯ ವರೆಗೂ ಹಿಗ್ಗುತ್ತಾನೆ .ಆಗ ಅದನ್ನು ನಿಜ ಅರ್ಥದ "ಪ್ರಳಯ "ಅನ್ನಬಹುದು ಆದರೆ  ಭಯಪಡುವ ಅಗತ್ಯವಿಲ್ಲ,ಆಗ ನಾವಲ್ಲ ನಮ್ಮ ಮರಿಮಕ್ಕಳ-ಮರಿಮಕ್ಕಳೂ ಕಾಲಕ್ಕೂ ಇದು ಆಗುವುದಿಲ್ಲ(ಈ ಮಾನವ ಅದಕ್ಕೂ ಮೊದಲೇ ಭೂಮಿಯನ್ನು ಹಾಳುಮಾಡುವುದಿಲ್ಲ ಅನ್ನೋ ಗ್ಯಾರಂಟೀ ಕೋಡಲಾಗದು)  ಇದು ಅಗುವುದು ಸುಮಾರು 6 billion ವರ್ಷಗಳ ನಂತರ
ತಾರೆಗಳ ಹೊರಪದರದಲ್ಲಿ ಎನೂ ಹೆಚ್ಚಿನ ಕ್ರಿಯೆ ನಡೆಯದೆ ಅದು ಹರಡಿ ಹೋದನಂತರ ಕೇಂದ್ರದ ಕತೆ ಏನಾಯಿತು ಅಂತ ನೋಡೋಣ
ಹೀಲಿಯಮ್ ಪರಮಾಣುಗಳು ಕೆಂದ್ರದಲ್ಲಿವೆ ಗುರುತ್ವಬಲ ಹೆಚ್ಚುತ್ತಿದೆ ಹೀಲಿಯಮ್ ನಿಂದ ತುಂಬಿದ ಕೇಂದ್ರ ಇನ್ನೂ ಕುಗ್ಗಿಸಲು ನೋಡುತ್ತಿದೆ ಆಗ

ಹೀಲಿಯಮ್-ಹೀಲಿಯಮ್  ನಡುವೆ ಕ್ರಿಯೆಗಳು ನಡೆಯಲಾರಂಭಿಸುತ್ತವೆ
ಆದರೆ ಈ ಕ್ರಿಯೆ ನಡೆಯಲು ಇನ್ನೂ-ಹೆಚ್ಚಿನ ತಾಪಮಾನ ಅಗತ್ಯ ಅದು ಈ ಸ್ಥಿತಿಯಲ್ಲಿ ಮಾತ್ರ ಲಭ್ಯ
ಈ ಕಾಯಗಳ ಗಾತ್ರ ಕಿರಿದು ಆದರೆ ತಾಪ ಅಧಿಕ ಇವು ಬಿಳಿ-ಕುಬ್ಜಗಳು(White -Dwarfs)
ಇವುಗಳ ಗಾತ್ರ ಸುಮಾರು ನಮ್ಮ ಭೂಮಿಯಷ್ಟು ,ತಾಪ ಸೂರ್ಯನ ಮೂರುಪಟ್ಟು 
ಇಲ್ಲಿ ಸುಮಾರು ೧೫೦೦೦ ಡಿಗ್ರಿ ತಾಪವಿದೆ ಗುರುತ್ವವೂ ಹೆಚ್ಚಿದೆ ಆಗ ಹೀಲಿಯಮ್ ಪರಮಾಣುಗಳು ಸೇರಿ ಕಾರ್ಬನ್ ಆಗುತ್ತದೆ ಅದೂ ಅತೀ ಒತ್ತಡದಲ್ಲಿ 
ನಿಮಗೆ ಗೊತ್ತಿರುವಂತೆ ಹೆಚ್ಚಿನ ಒತ್ತಡದಲ್ಲಿ ಕಾರ್ಬನ್ ಸಿಲುಕಿದರೆ ವಜ್ರ ಆಗಬಲ್ಲದು
ಈ ಮೂಲಕ ಈ  White -Dwarfsಗಳು ವಿಶ್ವದ ದೋಡ್ಡ ವಜ್ರಗಳಿಂದ ಅದ ಕಾಯಗಳಾಗಿವೆ 
ಹಳೆಯ ಕತೆಗಳಲ್ಲಿ "ಹರಳುಗಳ-ಕಣಿವೆ","ರತ್ನಗಳ-ಬೆಟ್ಟ" ಇದರ ಬಗ್ಗೆ ಕೇಳಿರುತ್ತೇವೆ ಅಲ್ಲಿ ಹೋದರೆ ನಮಗೆ ಬೇಕಾದಷ್ಟು ರತ್ನಗಳನ್ನು ಪಡೆಯಬಹುದು ಅಂತಾ ಕನಸು ಕಂಡಿರಬಹುದು
ಹೀಗೆ ಈ--White -Dwarfs--ಗಳ ಬಳಿ ಹೋದರೆ ಬೇಕಾದಷ್ಟು ವಜ್ರವನ್ನು ಕತ್ತರಿಸಿ ತರಬಹುದಲ್ಲವೇ ?
ಅದು ಅಷ್ಟು ಸುಲಭವಲ್ಲ!!!!!
ಏಕೆ ಅಂತ ಕೇಳೋ ಮೊದಲು ಈಗ ಕೇಳಿ ಕಳೆದ ಬಾರಿಯ ಪ್ರಶ್ನೆಗೆ ಉತ್ತರ
ನಮಗೆ ತಿಳಿದಿರುವಂತೆ ವಿಶ್ವದಲ್ಲಿ ದೋಡ್ದ ವಜ್ರಗಳಿರೋದು LUCY ಅನ್ನೋ ಒಂದು --White -Dwarfs-ನಲ್ಲಿ

ಅಲ್ಲಿ ಹೋಗುತ್ತೀರಾ ಹಾಗದರೆ ವಿಳಾಸ ಬರೆದುಕೋಳ್ಳಿ


                       (PHOTO  - Science Daily)
ಅದು ಇರೋದು Centaurs ನಿಹಾರಿಕೆಯಲ್ಲಿ . ಅದು ಇರೋದು 10 ^34 carats,(34 zeros followed by 1)
ನಿಮಗೇನಾದರು ಹೋಗೋಕೆ ಸಾಧ್ಯವಾದರೆ ಸ್ವಲ್ಪ ,-ವಜ್ರವನ್ನು --ಕೋಡೋದು ಬೇಡ ತೋರಿಸಿ ಸಾಕು ಆದರೆ,ಆದರೆ 
ಅದು ಇರೋ ದೂರ ಮಾತ್ರ ಕೇವಲ 40 ಜ್ಯೋತಿರ್ವರ್ಷಗಳು ಸಾಧ್ಯವಾದರೆ ನನಗೆ ಅದರ ಚಿತ್ರ ಕಳಿಸಿದರೆ ಸಾಕು ಪ್ಲೀಸ್
ಸದ್ಯಕ್ಕೆ ನನಗೆ ಸಿಕ್ಕಿರೋ ಅದರ ಚಿತ್ರವನ್ನು ನೋಡಿ  --
ನಮ್ಮ ಸೂರ್ಯ ಸಹ ಹೀಗೇ ---ಅಗುತ್ತಾನೆ

ಇದರ ಬಗ್ಗೆ ಇನ್ನೂ ವಿಸ್ಮಯಕಾರಿ ಸಂಗತಿಗಳಿವೆ 
ಈಗ  ಈ ಬಾರಿಯ ಪ್ರಶ್ನೆ--
-White -Dwarfs--ರಲ್ಲಿನ ಒಂದು ಕ್ಯೂಬಿಕ್ ಸೆಂಟೀ-ಮೀಟರ್ ಗಾತ್ರದ( ಕೇವಲ ಒಂದು ಹಾವು-ಏಣಿ ಆಟದ  ದಾಳದ ಗಾತ್ರದ್ದು) ವಸ್ತುವನ್ನು ಏನಾದರೂ ಭೂಮೆಗ ತರಲು ಸಾಧ್ಯವಾದರೆ ಅದರ ತೂಕ ಎಷ್ಟಿರಬಹುದು ಊಹಿಸಿ ನೋಡೋಣ ?

ಮುಂದೇನಾಗುತ್ತೆ ತಿಳಿಸುತ್ತೇನೆ
ಬೈ!

("ನನ್ನ ಇನ್ನೋಂದು ಬ್ಲಾಗ್ ನಲ್ಲಿ ಸೂರ್ಯನ ಸಂದರ್ಶನವಿದೆ ನೋಡಿ")

("ಗ್ರಹಣ" ಇನ್ನೋಂದು ಬ್ಲಾಗ್ ಹೆಸರು ಬದಲಿಸಲು ಯೋಚಿಸಿದ್ದೇನೆ ಇದನ್ನು ತರಾತುರಿಯಲ್ಲಿ ಗ್ರಹಣದ ಚಿತ್ರಗಳಿಗಾಗಿ ಪ್ರಾರಂಭಿಸಿದೆ ಆದರೆ ಯಾವಾಗಲೂ ಗ್ರಹಣವಿರಬೇಕಲ್ಲ,ಆದ್ದರಿಂದ ಬೇರೆ ಹೆಸರು ಸೂಕ್ತ-"ಗ್ರಹಣ" ಏಕೋ ಋಣಾತ್ಮಕ ಅರ್ಥ ನೀಡುತ್ತದೆ ಅನ್ನಿಸುತ್ತೆ ,ಅದ್ದರಿಂದ ಪ್ರಿಯ ಬ್ಲಾಗ್ ಮಿತ್ರರೇ ನೀವೇ ಒಂದು ಒಳ್ಳೆಯ ಹೆಸರು ತಿಳಿಸಿ ನೋಡೋಣ ಪ್ಲೀಸ್ -ನನ್ನ ಲೇಖನಗಳಿಗೆ ಅನುಗುಣವಾಗಿರುವಂತಿರಲಿ-ನಿಮ್ಮ ಸಲಹೆಗಳಿಗೆ ಸ್ವಾಗತ  )

Friday, March 19, 2010

ತಾರಾ ಲೋಕದ ದೈತ್ಯರು

ಒಂದು ಮಗು ಹುಟ್ಟಿದಾಗ ಹೆಚ್ಚು ತೂಕವಿದ್ದರೆ ಅದು ಹೆಚ್ಚು ಆರೋಗ್ಯವಾಗಿರುತ್ತದೆ ಎನ್ನಬಹುದು ಆದ್ರೆ ತಾರೆಗಳಲ್ಲಿ ಈ ಲೆಕ್ಕಚಾರ ತಳೆಕೆಳಗಾಗುತ್ತದೆ

ತಾರೆ ಹುಟ್ಟುವಾಗ ಹೆಚ್ಚು ದ್ರವ್ಯರಾಶಿ ಹೊಂದಿದಂತೇ ಅದರ ಆಯುಷ್ಯ ಕಡಿಮೆ .ಆರಂಭಿಕ ದ್ರವ್ಯರಾಶಿ ಕಡಿಮೆ ಇದ್ದ ಹಾಗೆ ಅದರ ಆಯಸ್ಸು ಹೆಚ್ಚು ಏಕೆ ಅಂತ ನೀವು ಊಹಿಸಿರಬಹುದಲ್ಲವೇ ?
ಸರಳ ದ್ರವ್ಯರಾಶಿ ಹೆಚ್ಚು ಇದ್ದಂತೆ ಗುರುತ್ವದ ಸೆಳೆತವೂ ಹೆಚ್ಚು ಆಗ ಹೆಚ್ಚು ಹೆಚ್ಚು ಹೈಡ್ರೂಜನ್ ಅನ್ನು ತಾರೆ ದಹಿಸುತ್ತದೆ ಹಾಗೆ ಬೇಗ ಹೈಡ್ರೋಜನ್ ಮುಗಿಯಲೂ ಬಹುದು

ಸರಿ ಹಾಗೆ ಹೈಡ್ರೋಜನ್ ಕಡಿಮೆಯಾದ ತಾರೆಗಳಲ್ಲಿ ಏನಾಗುತ್ತದೆ ಅಂತ ನೋಡೋಣ

ನಿಮಗೆ ಗೊತ್ತಿರುವಂತೆ ಹೈಡ್ರ‍ೋಜನ್ ಪರಮಾಣು ದ್ರವ್ಯರಾಶಿ ಕಡಿಮೆ ಹಾಗೆಯೇ ಹೀಲಿಯಮ್  ದ್ರವ್ಯರಾಶಿ ಹೆಚ್ಚು
ನಿಮಗೆ ಗೊತ್ತಿರುವಂತೆ ಹೈಡ್ರೋಜನ್  ಪರಮಾಣುಗಳು ಸೇರಿ ಹೀಲಿಯಮ್ ಆಗುತ್ತೇ ಅಂತ ಅ ಹೀಲಿಯಮ್ ಪರಮಾಣುಗಳು ದ್ರವ್ಯರಾಶಿ ಹೆಚ್ಚಿರುವಂತೆ ತಾರೆಯ ಕೇಂದ್ರದತ್ತ ಸಾಗುತ್ತವೆ ಕೋನೆಗೋಂದು ಕಾಲಕ್ಕೆ ಕೇಂದ್ರದಲ್ಲಿ ಕೇವಲ ಹೀಲಿಯಮ್ ತುಂಬಿ ಹೋಗುತ್ತದೆ ಆದರೂ ತಾರೆಯ  ಹೊರ ಪದರದಲ್ಲಿ ನ್ಯೂಕ್ಲಿಯರ್ ಕ್ರಿಯೆಗಳು ಮುಂದುವರೆಯುತ್ತವೆ  ಆಗ ಹೊರಪದರ ತಾನಾಗಿಯೇ ಹಿಗ್ಗಲಾರಂಭಿಸುತ್ತವೆ ಅಗ ತಾರೆಯ ಬಾಹ್ಯ ತಾಪಮಾನ ಕುಸಿಯುತ್ತದೆ ಸುಮಾರು  ೩೦೦೦(3000degree) ಡಿಗ್ರಿಗೆ ಇದು " ತಾರೆಯ ಕೆಂಪು ದೈತ್ಯ ಸ್ಥಿತಿ" ನಮ್ಮ ಸೂರ್ಯನೂ ಹಲವು ಬಿಲಿಯನ್ ವರ್ಷಗಳ ನಂತರ ಹೀಗೆ  ಆಗುತ್ತಾನೆ ಸೂರ್ಯ ಸುಮಾರು ಭೂಮಿಯ ಕಕ್ಷೆಯವರೆಗೂ ಹಿಗ್ಗಬಹುದು (ಇಗೇನೂ ಹಾಗಾಗುವುದಿಲ್ಲ ಬಿಡಿ ನಾವೇನೂ ಸುಟ್ಟು ಹೋಗುವ ಭಯವಿಲ್ಲ ಆದರೆ ಅದಕೂ ಮೋದಲೇ ಈ ಸ್ವಾರ್ಥಿ ಮಾನವ ಭೂಮಿಯನ್ನು ನಾಶ ಮಾಡಲೂ ಬಹುದು ಇದಾಗುವುದು ಸುಮಾರು----ಬಿಲಿಯನ್ ವರ್ಷಗಳ ನಂತರ ) ಆಗ ಅ ತಾರೆಯನ್ನು H-R Diagram ನಲ್ಲಿ ಅನ್ವಯಿಸಿದರೆ ಒಂದು ಮೂಲೆಗೆ ಬರುತ್ತವೆ ಅಂದರೆ ತಾಪಮಾನ ಕಡಿಮೆ ಗಾತ್ರ ಹೆಚ್ಚು H-R Diagram ಮತ್ತೋಮ್ಮೆ ಹಳೆಯ ಪೋಸ್ಟ ನಲ್ಲಿ ನೋಡಿ 

ಈ ತರಹದ ತಾರೆಗಳು ಆಗಸದಲ್ಲಿ ಗಲವು ಇವೆ ಅದರಲ್ಲಿ ಪ್ರಮುಖವಾದದ್ದು ಓರಿಯನ್ ನಕ್ಷತ್ರ ಪುಂಜದಲ್ಲಿರುವ "ಬಿಟಲ್ ಗೀಸ್ " ಹೀಗೆ  ಕೆಂಪು ದೈತ್ಯಗಳು ಉಂಟಾಗುತ್ತವೆ 
ಕೆಲಕಾಲಾನಂತರ ಆ ಕೆಂಪು ದೈತ್ಯದ ಹೊರಪದರ  ಸಂಪೂರ್ಣ ಹೊರಕ್ಕೆ ಆಕಾಶದಲ್ಲಿ ಹರಡಿಹೋಗುತ್ತದೆ ಅದನ್ನು ಪ್ಲಾನೆಟರಿ-ನೆಬ್ಯುಲಾ ಎನ್ನುತ್ತಾರೆ ಏಕೆಂದರೆ ಇದೇ  ಮುಂದೆ ಗ್ರಹಗಳ ಉಗಮಕ್ಕೂ ಕಾರಣವಾಗಬಹುದು ಇದಕ್ಕೆ ಉದಾಹರಣೆ ಹೆಲಿಕ್ಸ್-ನೆಬ್ಯುಲಾ



ಆ ಕೆಂಪು ದೈತ್ಯಗಳ ಹೊರಪದರ ಎನೋ ಹೋರಟುಹೋಯಿತು ಆದ್ರೆ ಕೇದ್ರದಲ್ಲಿರುವ ಹೀಲಿಯಮ್ ಪದರ ಹಾಗೆ ಇದೆಯಲ್ಲ ಅದರಲ್ಲಿ ಏನಾಗಬಹುದು ಅಂತ ಕಾತರವಿದ್ದರೆ ನಿರೀಕ್ಷಿಸಿ

ಸರಿ ಈ ಪ್ರಶ್ನೆಗೆ ಉತ್ತರ  ಕೊಡಿ ನೋಡೋಣ 

ವಿಶ್ವದಲ್ಲಿ ಅತೀ ದೋಡ್ಡ ವಜ್ರಗಳು ಎಲ್ಲಿವೆ ಅಂತ 

ತಮ್ಮ ಕಮೆಂಟ್ ಗಳಲ್ಲಿ ನನಗೆ ಪ್ರಶ್ನೆಗಳನ್ನು, ಅನುಮಾನಗಳನ್ನು  ತಿಳಿಸಿದರೆ ಹೆಚ್ಚು ಅನುಕೂಲವಾಗುತ್ತದೆ
ಹಾಗೆ ತಪ್ಪುಗಳಿದ್ದರೆ ತಿಳಿಸಿ ನಿಮಗೆ ಇನ್ನೂ ಹೆಚ್ಚು ಗೋತ್ತಿದ್ದರೆ ಖಂಡಿತಾ ತಿಳಿಸಿ
ಬೈ!!!

ತಾರೆಗಳು ಕೋಟಿಗಟ್ಟಲೇ ವರ್ಷ ಮುಂದುವರೆಯುವುದು ಹೇಗೆ?

ನಿಮಗೆ ಓರಿಯನ್ ಅಥವಾ ಮಹಾವ್ಯಾಧ ನಿಹಾರಿಕೆ ಗೊತ್ತಿರಬಹುದು ಅದರಲ್ಲಿನ ಓರಿಯನ್ ನೆಬ್ಯುಲಾ ಹೆಸರು ಕೇಳಿರಬಹುದು ಅದರಲ್ಲಿ ತಾರೆಗಳು ಹುಟ್ಟುತ್ತಿವೆ ಅದೂ ನಾಲ್ಕು ಇರಬಹುದು ಅದರಲ್ಲಿ  ಈಗಷ್ಟೇ ಪರಮಾಣು ಕ್ರಿಯೆಗಳು ಪ್ರಾರಂಭವಾಗಿವೆ

ವಿಶ್ವದಲ್ಲಿ  ಬಹುಪಾಲು ತಾರೆಗಳು ಜೊತೆಯಾಗಿಯೇ ಇರುತ್ತವೆ  ಅಥವಾ ಒಂದನ್ನೋಂದು ಸುತ್ತುತ್ತವೆ(ಅಪ್ಪಾಲೆ-ತಿಪ್ಪಾಲೆ ಆಡುವಂತೆ) ಆದರೆ ನಮ್ಮ ಸೂರ್ಯ ಏಕೋ ಎಕಾಂಗಿ 

ಅನಿಲದ ಮೊಡಗಳು ಸಾಂದ್ರವಾಗಿ ಪರಮಾಣು ಕ್ರಿಯೆಗಳನ್ನು ನಡೆಸುವಷ್ಟು ತಾಪ ಉಂಟಾದಾಗ ಅದರಲ್ಲಿ ಶಕ್ತಿ ಉತ್ಪಾದನೆಯಾಗುತ್ತದೆ  ಅಂತ ಕಳೆದ ಬಾರಿ ತಿಳಿಸಿದ್ದೆ  ಹಾಗಾದರೆ ಈ ಕ್ರಿಯೆಗಳು ಕೋಟಿಗಟ್ಟಲೇ ವರ್ಷ ಮುಂದುವರೆಯುವುದು ಹೇಗೆ?
ಅದನ್ನು ಹ್ಯಾನ್ಸ್ ಬೆಥೆ ಕಾರ್ಬನ್-ಚಕ್ರದ ವಿವರಣೆಯ ಸಹಾಯದಿಂದ   ತಿಳಿಸುತ್ತಾರೆ
ಅದು ಹೇಗೆ ಅಂತಾ ನೋಡೋಣ ....ಸಂಕೀರ್ಣವಾಗಿದೆ ಅಂದುಕೋಳ್ಳಬೇಡಿ ತಾರೆಯ ಜೀವನದ ಸ್ಥಿರತೆಯನ್ನು ಕೇವಲ ಒಂದು ನ್ಯೂಕ್ಲ್ಯರ್ ಕ್ರಿಯೆಗಳ ಸಮೂಹದಿಂದ ವಿವರಿಸುತ್ತಾರೆ ಹೀಗೆ 
೧)ಮೊದಲು  ಮೂರು ಹೈಡ್ರ‍ೋಜನ್ ಸೇರಿ ಹೀಲಿಯಮ್ ಆಗುತ್ತೆ ಅಂತ ತಿಳಿದಿದೆ ಇದು ಅಪಾರ ಶಕ್ತಿಯನ್ನು ಬಿಡುಗಡೇ ಮಾಡುತ್ತೆ
೨)ಎರಡು ಹೀಲಿಯಮ್ ಮತ್ತೆ ಸೇರಿ ನಾಲ್ಕು ಪ್ರೋಟನ್ ಉಳ್ಳ ಹೀಲಿಯಮ್ ಆದೀತು ಅದರೊಂದಿಗೆ ಪ್ರೋಟನ್ ಹಾಗು Energy ಬರುತ್ತದೆ 
೩)ಈಗ ತಾಪಮಾನ ಏರಡು ಕೋಟಿಯನ್ನೂ ಮೀರಿದಾಗ  ಹೀಲಿಯಮ್ ಪರಮಾಣುಗಳು ಸೇರಿ ಕಾರ್ಬನ್ ಬರುತ್ತದೆ ಈ ಕಾರ್ಬನ್ ನ್ಯೂಕ್ಲಿಯಗಳು ಜಲಜನಕದ ಪರಮಾಣುಗಳನ್ನು ಒಂದರ ಹಿಂದೆ ಒಂದರಂತೆ ಸಾಲಾಗಿ ಪ್ರತಿಕ್ರಿಯೆ ನಡೆಸುವಂತೆ ಕಾರಣವಾಗುತ್ತದೆ 
ಕೋನೆಗೆ ಕಾರ್ಬನ್ ವೇಗವರ್ಧಕದಂತೆ(Catalist ) ವರ್ತಿಸಿ ಕಾರ್ಬನ್ ಯಥಾವತ್ತಾಗಿ ತನ್ನ ಮೂಲರೂಪಕ್ಕೆ ಹಿಂದಿರುಗುತ್ತದೆ 
ಎಲ್ಲಿಯವರೆಗೂ ಈ ಕಾರ್ಬನ್ ಚಕ್ರ ನಿರಂತರವಾಗಿರುವುದೋ ಅಲ್ಲಿಯವರೆಗೆ ತಾರೆ ಸ್ಥಿರವಾಗಿರುತ್ತದೆ
ಕಾರ್ಬನ್ ಚಕ್ರದ ಚಿತ್ರ ನೋಡಿ ಸ್ಪಷ್ಟವಾಗಿ ತಿಳಿಯಬಹುದು
(ಚಿತ್ರ-ದರ್ಶನ)



ಈ ಸ್ಥಿರತೆಯ ಅಂತ್ಯ ಹೇಗಾಗಬಹುದು ಅಂತ  ನೋಡೋಣ 
ಅದು ಆಗೋದು ಹೈಡ್ರೂಜನ್ ಪರಮಾಣುಗಳ ಸಂಖ್ಯೆ ಕಡಿಮೆಯಾದಾಗ ಅದನ್ನು ಮುಂದಿನ ಸಂಚಿಕೆಯಲ್ಲಿ ತಿಳಿಸುವೆ (ಸೂರ್ಯನ ಒಳಗೆ ಏನಿದೆ? ಸೂರ್ಯನ ರಚನೆಯ ಬಗ್ಗೆ "ಗ್ರಹಣ"ದಲ್ಲಿ ಸದ್ಯದಲ್ಲೇ ತಿಳಿಸುತ್ತೇನೆ)
ಬೈ

Thursday, March 18, 2010

ಪ್ಲಾಸ್ಮಾ ಸ್ಥಿತಿ

ಹ್ಯಾನ್ಸ್ ಬೆಥೆ ಹಾಗು ಕಾರ್ಲ್ ವೀಜಾಕ್ಕರ್ ಎನ್ನುವವರು ತಾರೆಗಳಲ್ಲಿನ  ಪರಮಾಣು ಕ್ರಿಯೆಗಳ ರಹಸ್ಯವನ್ನು ವಿವರಿಸಿದರು 
 ಅದರಲ್ಲಿ ಎರಡು ರೀತಿಯ ಕ್ರಿಯೆಗಳು ನಡೆಯುತ್ತವೆ 
1)Hydrogen cycle
2)Carbon Cycle

 ಮೊದಲು ಹೈಡ್ರೋಜನ್ ಪರಮಾಣುಗಳೆಲ್ಲಾ ತಮ್ಮ ಎಲೆಕ್ಟ್ರಾನ್ ಗಳನ್ನು ಕಳೆದುಕೋಂಡು  ಒಂದು ಪ್ರೊಟಾನ್ ಮಾತ್ರ ಉಳಿಸಿಕೊಳ್ಳುತ್ತವೆ ಈ ಸ್ಥಿತಿಯನ್ನೇ ಪ್ಲಾಸ್ಮಾ ಸ್ಥಿತಿ ಎನ್ನುವುದು 

ಈ ಪ್ರೋಟಾನ್ ಗಳು(ಹೈಡ್ರೊಜನ್ ಪರಮಾಣು ಕೇಂದ್ರಗಳು ಅಥವಾ ನ್ಯೂಕ್ಲಿಯಸ್) ಎರಡು ಪ್ರೋಟಾನ್ ಸೇರಿ ಡ್ಯೂಟೇರಿಯಮ್ ಆಗುತ್ತದೆ ಅದಕ್ಕೆ ಮತ್ತೆ ಒಂದು ಪ್ರೋಟನ್ ಸೇರಿ  ಹೀಲಿಯಮ್ ಆಗುತ್ತದೆ




ಈ ಕ್ರಿಯೆಗಳೇ ಸೂರ್ಯನಲ್ಲಿ ಅಪಾರ ಶಕ್ತಿ ಹೊಮ್ಮಲು ಕಾರಣವಾಗುತ್ತವೆ
ಈ ರೀತಿ ತಾರೆಗಳಲ್ಲಿ  ಅಪಾರ ಪ್ರಮಾಣದ ಹೈಡ್ರೋಜನ್ ಹೀಲಿಯಮ್ ಅಗುತ್ತಿರುತ್ತದೆ
ಒಂದು ಸೆಕೆಂಡಿಗೆ ಸೂರ್ಯ ಎಷ್ಟು ಹೈಡ್ರೋಜನ್ ದಹಿಸಬಹುದು ಅಂತಾ ಊಹಿಸಿ ಹೇಳಿ ನೋಡೋಣ

ಈ ಕ್ರಿಯೆಗಳು ನಡೆಯಲು ಸುಮಾರು ಎರಡು ಕೋಟಿ ಡಿಗ್ರೀ ತಾಪಮಾನ ಹಾಗು ಮಹಾ ಒತ್ತಡ ಬೇಕು ಆದ್ದರಿಂದ 
ಇದನ್ನು ಭೂಮಿಯಲ್ಲಿ ಕೃತಕವಾಗಿ ನಿರಂತರ ಶಕ್ತಿಮೂಲವಾಗಿ ಬಳಸಲಾಗದು ಆದ್ರೆ ಇದನ್ನು ಹೈಡ್ರೋಜನ್-ಬಾಂಬ್ ರೂಪದಲ್ಲಿ ಉಪಯೋಗಿಸಬಹುದು

ನಿಮಗೆ ಒಂದು ವಿಸ್ಮಯ ಗೊತ್ತೇ ಗುರುತ್ವ-ಬಲ ವಿಶ್ವದ ಅತ್ಯಂತ ಕ್ಷೀಣವಾದ ಬಲ ಆದರೆ ಪರಮಾಣು ಬಲ ವಿಶ್ವದ ಅತ್ಯಂತ ಶಕ್ತಿಶಾಲಿ ಬಲ  ಅದ್ರೂ ತಾರೆಗಳಲ್ಲಿ ಇವೆರಡರ ನಡುವೆ ಹೋರಾಟ ನಡೆಯುತ್ತೇ ಅಂದ್ರೆ ವಿಸ್ಮಯವಲ್ಲವೇ ಕೊನೆಗೆ ಗೆಲ್ಲುವವರು ತ್ಯಾರು ಗೊತ್ತೆ? 
ಗುರುತ್ವವೇ!!!!! ಖಂಡಿತಾ ಗುರುತ್ವವೇ ಇದೇ ಪ್ರಕೃತಿಯ ಸೋಜಿಗ ಬಲಶಾಲಿಗಳೇ ಗೆಲ್ಲಬೇಕು ಅಂತಾ ಪ್ರಕೃತೀ ಕೂಡ ಒಪ್ಪಲ್ಲಾ ಗೊತ್ತಾ

ಆನೆ ಇರುವೆ ಕತೆ ಮಾತ್ರವಲ್ಲ ,ನಮ್ಮಲ್ಲಿ ಮಾತ್ರವಲ್ಲಾ ತಾರೆಗಳಲ್ಲೂ ಹೀಗಾಗುತ್ತದೆ
 ಹೇಗೆ ಅಂತ ಮುಂದಿನ ಸಂಚಿಕೆಯಲ್ಲಿ ತಿಳಿಸುವೆ

ಕೊನೆಗೆ  ಪ್ರಶ್ನೆ  ನೆನಪಿಟ್ಟುಕೋಳ್ಳಿ ಸೂರ್ಯ  ಎಷ್ಟು ಹೈಡ್ರೂಜನ್ ಉರಿಸಬಹುದು ಅಂತಾ
ಉತ್ತರ ಊಹಿಸುತ್ತಿರಿ ಮುಂದಿನ ಸಂಚಿಕೆಯಲ್ಲಿ ಸೂರ್ಯನ-ತಾರೆಗಳ  ಪಾಕಶಾಲೆಯ  ಸಂಪ್ರೂರ್ಣ ಪರಿಚಯ ಮಾಡಿಕೋಡುತ್ತೇನೆ 

ಬೈ!

ಗುರುತ್ವ - ವಿಕಿರಣ ಹಗ್ಗ ಜಗ್ಗಾಟ

ವಿಜ್ಞಾನ-ತಾರೆಎಲ್ಲರಿಗೂ ಹೊಸ ಸಂವತ್ಸರದ ಶುಭಾಶಯಗಳು

ಭೂಮಿಯಿಂದ ನೋಡಿದಾಗ ಸೂರ್ಯ ಎಲ್ಲಾ ರಾಶಿಗಳನ್ನು ಒಂದು ಸುತ್ತು ಪೂರೈಸಿದಂತೆ ತೋರುವುದೇ ಒಂದು ಸಂವತ್ಸರ ಅದಕ್ಕೂ ಮೊದಲು ಸೂರ್ಯ ಏನಾಗಿದ್ದ ಅಂತ ತಿಳಿಯುವ ಬನ್ನಿ

ಈ ರೀತಿ ಅಂತರಿಕ ಕ್ರಿಯೆಗಳು ಪ್ರಾರಂಭವಾದ ನಂತರ ಆ ಅನಿಲಗಳು ಕುಗ್ಗಿ ಒಂದು ಆಕಾರಕ್ಕೆ ಬರುತ್ತವೆ ಹಾಗು  ಅದರಲ್ಲಿ ಈಗ ಪರಮಾಣು ಕ್ರಿಯೆಗಳು ಪ್ರಾರಂಭವಾಗುತ್ತವೆ ಅದನ್ನು ಈಗ Proto Star  ಎನ್ನುತ್ತಾರೆ



ನೀವು Tug-OF_Warಆಟ ನೋಡಿರಬಹುದು ಅದರಲ್ಲಿ ಎರಡೂ ತಂಡದವರು  ವಿರುದ್ದ ದಿಕ್ಕಿನಲ್ಲಿ ಹಗ್ಗ ಜಗ್ಗುವುದನ್ನು ಕಂಡಿರಬಹುದು ಹೀಗೆ ತಾರೆಗಳಲ್ಲೂ ಸಹ ಗುರುತ್ವ ಹಾಗು ವಿಕಿರಣಗಳು ವಿರುದ್ಧ ದಿಕ್ಕಿನಲ್ಲಿ ವರ್ತಿಸುವುದರಿಂದ ತಾರೆ ಸ್ಥಿರವಾಗುತ್ತದೆ

ಅದು ಹೇಗೆಂದರೆ ತಾರೆಯೋಳಗೆ ನಡೆವ ಕ್ರಿಯೆಗಳು ಹೊರಮುಖ ತಳ್ಳಿದರೆ ಗುರುತ್ವ ಒಳಮುಖ ತಳ್ಳುತ್ತದೆ ಇದರಿಂದ ತಾರೆಯ ಗಾತ್ರ ಸ್ಥಿತಿ ಹಾಗು ಕ್ರಿಯೆಗಳು ಬಹುಕಾಲ ಅಂದರೆ ಬಿಲಿಯನ್ ಗಟ್ಟಲೇ  ವರ್ಷ ಮುಂದುವರೆಯಬಲ್ಲವು 
ಮುಂದಿನ ಸಂಚಿಕೆಯಲ್ಲಿ ನೋಡೋಣ ತಾರೆಗಳಲ್ಲಿ  ನಡೆವ  ಪರಮಾಣು ಕ್ರಿಯೆಗಳೇನು ಅಂತ