Thursday, April 14, 2011

ಏಡಿ ನಿಹಾರಿಕೆಯಲ್ಲೂ ಈ ತರಹದ ಒಂದು ಕಾಯವಿದೆ


ಕಳೆದ ಬಾರಿ ಪ್ರಸ್ತಾಪಿಸಿದ ಕಾಯಗಳನ್ನು ಪಲ್ಸರ್ ಎನ್ನುವರು ಅಂತಾ ನಿಮಗೆಲ್ಲ ತಿಳಿದಿದೆ (Pulsating Radio Stars)
ಏಡಿ ನಿಹಾರಿಕೆಯಲ್ಲೂ ಈ ತರಹದ ಒಂದು ಕಾಯವಿದೆ
ಏಡಿ ನಿಹಾರಿಕೆ ಸೂಪರ್ ನೋವಾ ದಿಂದ ಉಳಿದಿರುವ ಅವಶೇಷ ಅಂತ ನಿಮಗೆ ಗೊತ್ತಿದೆ
ಹಾಗೆ ಅದು ಈಗಲೂ ಸೆಕೆಂಡಿಗೆ ಸುಮಾರು ೧೫ ರಿಂದ ೧೭ ಸಾವಿರ ಕಿಲೋಮೀಟರ್ ವೇಗದಲ್ಲಿ ಹಿಗ್ಗುತ್ತಿದೆಯಂತೆ
ಸೂಪರ್ ನೋವಾ ಸ್ಫೋಟದಿಂದ ಉಳಿದ ಕೇಂದ್ರ ನ್ಯೂಟ್ರಾನ್ ತಾರೆ ಅಂದರೆ ಪಲ್ಸಾರ್ ಆಗಿ ಹೋಗಿದೆ ಇದು ಕೇವಲ ೧೦೫೪ ನೇ ಇಸವಿಯಲ್ಲಿ ಸಂಭವಿಸಿದ ಸೂಪರ್ ನೋವಾದ ಅವಶೇಷ
ಏಡಿ ನಿಹಾರಿಕೆಯ ಕೇಂದ್ರದಲ್ಲಿರುವ ಪಲ್ಸಾರ್ ಅನ್ನು ರೇಡಿಯೋ ದೂರದರ್ಶಕ ಅಥವಾ ಎಕ್ಸ್-ರೆ ದೂರದರ್ಶ್ಕ ದಿಂದ
ಕಾಣಬಹುದು


(Photo-downloaded from net )
ತಾರೆಗಳ ಲೋಕದ ಮತ್ತೋಂದು ತರಲೆ ಪ್ರಶ್ನೆ
ಶ್ವೇತಕುಬ್ಜಗಳು ಅಂದರೆ  White Dwarfs  ಅತೀ ಸಾಂದ್ರಕಾಯಗಳು ಅಂತ ಗೊತ್ತು ಹಾಗೆ ಅವುಗಳಲ್ಲಿನ ಒಂದು ಕ್ಯೂಬಿಕ್-ಸೆಂಟೀಮೀಟರ್ ಗಾತ್ರದ ವಸ್ತು ಭೂಮಿಯ ಮೇಲೆ ಸುಮಾರು 15 ರಿಂದ 40 ಟನ್ ಭಾರವಿರುತ್ತದೆ ಅಂತಲೂ ನಿಮಗೆ ತಿಳಿದಿದೆ
ಈಗ ನಾನು ತಿಳಿಸುತ್ತಿರುವ ನ್ಯೋಟ್ರಾನ್ ತಾರೆಗಳು  White Dwarfs ಗಿಂತಲೂ ಖಂಡಿತಾ ಸಾಂದ್ರ ಕಾಯಗಳಾಗಿರಲೇಬೇಕು
ಹಾಗಾದರೆ ಊಹಿಸಿ ನೋಡೋಣ ನ್ಯೂಟ್ರಾನ್ ತಾರೆಯಲ್ಲಿನ ಒಂದು ಕ್ಯೂಬಿಕ್-ಸೆಂಟೀಮೀಟರ್ ಅಂದರೆ ಒಂದು ಚಮಚೆಯಷ್ಟು ವಸ್ತು ಭೂಮಿಯಲ್ಲಿ ಎಷ್ಟು ಭಾರವಿರಬಹುದು ಅಂತ
ಮುಂದಿನ ಸಂಚಿಕೆಯಲ್ಲಿ ಮತ್ತೆ ಬರುವೆ !
ಬೈ!

Wednesday, April 13, 2011

ಮತ್ತೆ ಬಂದಿರುವೆ ತಾರಲೋಕದ ತರಲೆಗಳನ್ನು ನಿಮ್ಮ ಮುಂದಿಡಲು


ಮತ್ತೆ ಬಂದಿರುವೆ ತಾರಲೋಕದ ತರಲೆಗಳನ್ನು ನಿಮ್ಮ ಮುಂದಿಡಲು(ಅವುಗಳ ಚಿತ್ರವನ್ನು ಹಾಗೆಂದುಕೊಳ್ಳೋಣ)
ಖಗೋಲ ವಿಸ್ಮಯವೋಂದರ ಚಿತ್ರ ನನಗೇಕೋ ಲಭ್ಯವಾಗಲಿಲ್ಲ ದೂರದ ಕಾಯಗಳ ಫೊಟೋ ತೆಗೆಯುವುದು ಸ್ವಲ್ಪ ತ್ರಾಸದಾಯಕ ಅದರೂ ಮತ್ತೆ ಪ್ರಯತ್ನಿಸುವೆ ಚಿತ್ರ ತೆಗೆಯಲು ಸಾದ್ಯವಾದರೆ ನೋಡುವ.
ಆ  ಬಾನಾಗಸದ ವಿಸ್ಮಯ ಏನೆಂದು ದೂರದರ್ಶನ ,ಪತ್ರಿಕೆಯಲ್ಲಿ ನೋಡಿದ್ದೀರ ಎಂದುಕೊಂಡಿರುವೆ
ಕಳೆದ ಬಾರಿ ತಿಳಿಸುತ್ತಿದ್ದೆ ಬಾನಿನಿಂದ ಬರುತ್ತಿದ್ದ ರೇಡಿಯೋ ತರಂಗಗಳ ಬಗ್ಗೆ
ಎಲ್ಲಾ ತಾರೆಗಳೂ ರೇಡಿಯೋ ಅಲೆಗಳನ್ನು ಬಿಡುಗಡೆ ಮಾಡುತ್ತವೆ ನಮ್ಮ ಸೂರ್ಯನೂ ಸಹ. ಅದರ ಪ್ರಸ್ತಾಪವಿರಲಿ,
ನಾನು ತಿಳಿಸಿದ ರೇಡಿಯೋಅಲೆಗಳು ಎಲ್ಲಿನವು ?
ಕೆಲಕಾಲನಂತರ ಪತ್ತೆಯಾದ್ದದ್ದು ಇಷ್ಟು
ಅವು ಯಾವುದೋ ತಿರುಗುವ ಕಾಯಗಳಿಂದ ಬರುತ್ತಿರಬೇಕು ಹಾಗೆ ಅವು ಎಲೆಕ್ಟ್ರಾನುಗಳನ್ನು ನಮ್ಮ Particle Accelerators ಗಳಂತೆ ವಿಪರೀತ ವೇಗದಲ್ಲಿ ಆಗಸದಲ್ಲಿ ಚಿಮ್ಮಿಸುತ್ತಿರಬೇಕು
ಅವು ಏನು?
ಅಧ್ಯಯನದಿಂದ ತಿಳಿದು ಬಂದದ್ದಿಷ್ಟು
ಸೂಪರ್ ನೋವಾ ಆಸ್ಫೋಟನೆಯ ನಂತರವೂ ಕೆಲವೊಮ್ಮೆ ಸ್ಫೋಟಿಸಿದ ತಾರೆಯ ಕೇಂದ್ರ ಉಳಿದಿರುತ್ತದೆ
ಅದು ಸಹ ಮತ್ತೆ ಗುರುತ್ವದಿಂದ ಕುಗ್ಗಲಾರಂಭಿಸುತ್ತದೆ ಆಗ ಅ ತಿರುಳು ಪ್ರಚಂಡ ಸಾಂದ್ರತೆಯ ಕಾಯಗಳಾಗುವುದುಂಟು
ಆ ಕಾಯದ ಹೊರಭಾಗದಲ್ಲಿ ಅಯಾನುಗಳಿದ್ದು ಅವು ಎಲೆಕ್ಟ್ರಾನುಗಳನ್ನು ಚಿಮ್ಮಿಸುತ್ತವೆ ಪ್ರಚಂಡ ಗುರುತ್ವದ ಕಾರಣ ಆ ಕಾಯದ ಕಾಂತಕ್ಷೇತ್ರವೂ ಬಹು ಪ್ರಬಲ. ಈ ರೀತಿಯ ಕಾಯವೊಂದು ಅತೀ ವೇಗವಾಗಿ ನಿಖರ ಆವರ್ತನೆಯಲ್ಲಿ ತಿರುಗುವುದರಿಂದ ರೇಡಿಯೋ ಅಲೆಗಳು ಉಂಟಾಗುತ್ತವೆ
ಈ ರೀತಿಯ ಕಾಯಗಳನ್ನು ಏನೆನ್ನುತ್ತಾರೆ ಅಂತ ನಿಮಗೆ ಗೊತ್ತೆ ಇದೆ
ಆದರೂ ಹೊಸ ವಿಚಾರಗಳು ಗೊತ್ತಿದ್ದರೆ ತಿಳಿಸಿ?
ಇದರ ಬಗ್ಗೆ ಮುಂದಿನ ಸಂಚಿಕೆಯಲ್ಲಿ ತಿಳಿಸುವೆ 
ಬೈ!
(next   post  tomorrow    14 April 2011Thursday  06:00 AM-scheduled )

 

Saturday, March 19, 2011

ಇಂದಿನ ಚಂದಿರನನ್ನು ನೋಡಿದಿರಾ


ಎಲ್ಲರಿಗೂ ಮತ್ತೊಮ್ಮೆ ನಮಸ್ಕಾರಗಳು
ಇಂದಿನ ಚಂದಿರನನ್ನು ನೋಡಿದಿರಾ
ಅಪರೂಪಕ್ಕೋಮ್ಮೆ ಹೀಗೆ ಭುವಿಗೆ ಚಂದಿರ ಸಮೀಪಿಸುವುದುಂಟು
ಅದೇನೋ ಸೂಪರ್ ಮೂನ್ ಭಯವಂತೆ! ಹಾಗೇನೂ ಇಲ್ಲ
ಇಂದು ಅಂದರೆ ೧೯-ಮಾರ್ಚ್ ೨೦೧೧ ರ ಸುಮಾರು ೦೭:೨೦ pm  ನಿಂದ ಚಂದಿರ ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತಾನಂತೆ
ಹಾಗೆ ನಾಳೆ ಬೆಳಿಗ್ಗೆ ಸುಮಾರು ೦೩:೩೦ ಕ್ಕೆ ಚಂದಿರ ಅತೀ ಹೆಚ್ಚು ಪ್ರಕಾಶಮಾನವಾಗುತ್ತಾನಂತೆ
ನಾಳೆ ಚಂದಿರನ  ಫೋಟೋ  ಸಮೇತ  ಬರುವೆ. 
ಜಪಾನ್ ಅಣುಸ್ಥಾವರದ ಸಮಸ್ಯೆ ಬಲು ಶೀಘ್ರವಾಗಿ ಬಗೆಹರಿಯಲಿ ಎಂದು ಬಯಸೋಣ
ಹೋಳಿ ಹಬ್ಬದ ಶುಭಾಷಯಗಳು, ರಾಸಾಯನಿಕಯುಕ್ತ ಬಣ್ಣಗಳ ಬಗ್ಗೆ ಎಚ್ಚರವಿರಲಿ. ಸಾಧ್ಯವಾದರೆ ಅರೋಗ್ಯ-ಪರಿಸರಕ್ಕೆ ಅಪಾಯವಿಲ್ಲದ ನೈಸರ್ಗಿಕ ಬಣ್ಣಗಳನ್ನು ಬಳಸೋಣ

ಹಿಂದಿನ ಸಂಚಿಕೆಯಲ್ಲಿ ತಿಳಿಸಿದ ಬಾನಿನಿಂದ ಬರುತ್ತಿದ್ದ ರೇಡೀಯೋ ತರಂಗಗಳ ಬಗ್ಗೆ ಸದ್ಯದಲ್ಲೆ ತಿಳಿಸುವೆ,ಲೇಖನಗಳು  ಮುಂದುವರೆಯುತ್ತವೆ ನನಗೂ ಬೇಸರವಾಗುತ್ತೆ ಕಾಯಿಸಲು
ಸದ್ಯದಲ್ಲೆ ಮುಂದುವರೆಸುವೆ
ಮತ್ತೊಮ್ಮೆ ಹೋಳಿ ಹಬ್ಬದ ಶುಭಾಷಯಗಳು

Thursday, January 13, 2011

ಏನಿವು ಅರ್ಥವಾಗದ ಸಂಕೇತಗಳು?

ಹೊಸವರ್ಷದ ,2011ನೇ ಇಸವಿಯ ಶುಭಾಷಯಗಳು
6 ಅಗಸ್ಟ್ 1967,Jocelyn Bell ಎಂಬ ಪದವಿ ವಿದ್ಯಾರ್ಥಿ ಕೇಂಬ್ರಿದ್ಜ್ ವಿಶ್ವವಿದ್ಯಾಲಯಕ್ಕೆ ಸೇರಿದ Mullard Radio Astronomy Observatory ರಲ್ಲಿ ರೇಡಿಯೋ ಅಂಟೆನಾಗಳನ್ನು ಬಾನಿನತ್ತ ತಿರುಗಿಸಿ ಬಾನಿನಿಂದ ಬರುವ Scintillation  ಸಂಕೇತಗಳನ್ನು ಅಭ್ಯಸಿಸುತ್ತಿದ್ದ , Scintillation ಅಂದರೆ ಒಂದು ವಿದ್ಯುತ್ಕಾಂತೀಯ ವಿಕಿರಣ ,ಪ್ಲಾಸ್ಮಾ ಸ್ಥಿತಿಯಲ್ಲಿರುವ ಮೋಡದ ಮೂಲಕ ಹಾದು ಹೋದಾಗ ಅದು ಕೆಲವು ಅರ್ಕ್-ಸೆಕೆಂಡ್ ಕೋನದಲ್ಲಿ(ಒಂದು ಸೆಕೆಂಡಿನ ೩೬೦೦ ನೇ ಒಂದು ಭಾಗ) ಅಂತರದಲ್ಲಿ ಮಿಣುಕುವಂತೆ ಭಾಸವಾಗುತ್ತದೆ
ಹಾಗೆ ಬಾನಿನಿಂದ ಬರುವ ರೇಡಿಯೋ ಅಲೆಗಳನ್ನು ಅಭ್ಯಸಿಸುವಾಗ ಆಗಸದ ಒಂದು  ಕಡೆಯಿಂದ ವಿಚಿತ್ರವಾದ  ಸಂಕೇತಗಳು ಬರತೋಡಗಿದವು
ಅವು ಹೇಗಿದ್ದವೆಂದು ಕೇಳಿ 
ನಾವು ಬೆಳ್ಳಂಬೆಳಿಗ್ಗೆ ರೇಡಿಯೋ ಆಲಿಸಿದರೆ ರೇಡಿಯೋ ಕೇಂದ್ರ ಪ್ರಾರಂಭಿಸುವಾಗ ಅದರ ತರಂಗಾಂತರ,ಅವರ್ತ ಸಂಖ್ಯೆ ತಿಳಿಸುತ್ತಾರೆ  ಅದು ಕೆಲವು ಮೆಗಾ-ಹರ್ಟ್ಸ್ ಗಳಲ್ಲಿರುತ್ತದೆ ಅಂದರೆ ಒಂದು ಸೆಕೆಂಡಿಗೆ ಸುಮಾರು ಕೆಲವು ದಶಲಕ್ಶ ಬಾರಿ ಅದು ಕಂಪಿಸುತ್ತದೆ ಎಂಬರ್ಥ

ಆದರೆ ನಾನು ತಿಳಿಸುತ್ತಿರುವ ವಿಷಯದಲ್ಲಿರುವ ಬಾನಿನಿಂದ ಬರುವ ಸಂಕೇತಗಳಲ್ಲಿನ ಎರಡ್ ಅಲೆಗಳ ನಡುವಿನ ಆಂತರ ನಿಖರವಾಗಿ 1.3373011512 ಸೆಕೆಂಡ್ ಗಳಷ್ಟಿತ್ತು ಇಷ್ಟು ನಿಖರವಾದ ರೆಡಿಯೋ ಅಲೆಗಳನ್ನು ಭೂಮಿಯ ಮೇಲೆ ನಮಗೆ ಲಭ್ಯವಿರುವ ಯಾವುದೇ Electronic Instrument ಗಳಿಂದ ಉತ್ಪಾದಿಸಲು ಸಾಧ್ಯವಿಲ್ಲ (ಇದು ೧೯೬೭ನೇ ಇಸವಿಯಲ್ಲಿ ಪತ್ತೆಯಾಗಿದ್ದರೂ ಇಂದಿಗೂ ಅಷ್ಟು ನಿಖರವಾದ ಅಲೆಗಳನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ)
ಹಾಗಾದರೆ ಆ ರೇಡಿಯೋ ಅಲೆಗಳು ಎಲ್ಲಿಂದ ಬಂದವು ?
ಅನ್ಯಗ್ರಹ ಜೀವಿಗಳೇನಾಅದರುನ ನಮ್ಮನ್ನು ಸಂಪರ್ಕಿಸಲು ಅ ರೀತಿಯ ಸಂಕೇತಗಳನ್ನು ಕಳುಹಿಸುತ್ತಿದ್ದವೋ ? ಎನು? ಹೇಗಿರಬಹುದು?

ಮುಂದಿನ ಸಂಚಿಕಯಲ್ಲಿ ನಿರೀಕ್ಷಿಸಿ!!
ಬೈ

Sunday, December 19, 2010

ನಾವೆಲ್ಲಾ ಸೂಪರ್ನೋವಾದ ತುಣುಕುಗಳಷ್ಟೆ!

ಆ ಉಲ್ಕೆಯಲ್ಲಿನ ಆ ಉಲ್ಕೆಯಲ್ಲಿನ Elementsಸೂರ್ಯನ ಹುಟ್ಟಿಗೂ ಮೊದಲಿನದಾಗಿರಬೇಕಲ್ಲ
ಅದರ ರಹಸ್ಯವಿಷ್ಟೆ

ಸೂರ್ಯ-ಸೌರವ್ಯೂಹ ಜನ್ಮ ತಾಳುವ ಮೊದಲು ಸೂರ್ಯನಗಿಂತ ಭಾರಿ ಗಾತ್ರದ ತಾರೆಯೋಂದು ಸೂರ್ಯ-ಸೌರವ್ಯೂಹ ಈಗಿರುವ ಸ್ಥಳದಲ್ಲಿ ಇದ್ದಿರಬೇಕು ಅದು ಸೂಪರ್ನೋವಾ ಅಸ್ಫೋಟನೆಗೋಂಡು ಅದರ್ ಚೂರುಗಳು ಎಲ್ಲೆಡೆಗೆ ಚದುರಿರಬೇಕು ಹಾಗೆ ಅವು ಸೂರ್ಯನಿಂದ ಕಾಲಕ್ರಮೇಣ ಅಕರ್ಷಿತಗೋಂಡು ಸೂರ್ಯನ ಸುತ್ತ ಸುತ್ತುತ್ತಿರಬೇಕು ಈ ಕಾರಣದಿಂದ ಈ ಎಲ್ಲಾ -Elements ಭೂಮಿ ಸೌರವ್ಯೂಹದಲ್ಲಿ ಕಂಡುಬರುತ್ತಿವೆ
ಅಂದರೆ ನಮ್ಮ ದೇಹದಲ್ಲಿರುವುದೂ ಈ -Elements ಗಳೇ ಅಲ್ಲವೇ

ವಿಜ್ಞಾನಿ ಕಾರ್ಲ್ ಸಗನ್ ಅಬಿಪ್ರಾಯದಂತೆ ನಾವೆಲ್ಲಾ ಸೂಪರ್ನೋವಾದ ತುಣುಕುಗಳಷ್ಟೆ!

ಎಷ್ಟು ವಿಸ್ಮಯ ಅಲ್ಲವೆ!!
ಮುಂದಿನ ಸಂಚಿಕೆ ಯಲ್ಲಿ ತಾರೆಗಳಲ್ಲಿ ಸೂಪರ್ ನೋವಾದ ನಂತರದ ಹಂತಗಳನ್ನು ತಿಳಿಸುವೆ
ಬೈ !!

Saturday, December 18, 2010

ಎಲ್ಲಿಂದ ಬಂದವು ಈ ELEMENTS

ಈ ಸೂಪರ್ನೋವಾಗಳಲ್ಲಿ NUCLEIOSYNTHESIS ಕ್ರಿಯೆಗಳು ನಡೆದು ಹಲವು ರೀತಿಯ ELEMENTS ಸೃಷ್ಟಿಯಾಗುತ್ತೆ ಅಂತ ನಾ ತಿಳಿಸಿದೆನಲ್ಲ ಹಾಗಾದರೆ ಆ ELEMENTS ಗಳೆಲ್ಲಾ ಎಲ್ಲಿ ಹೋದವು ವಿಶ್ವದಲ್ಲಿಡೆ ಇರುವ ಅವಕಾಶದಲ್ಲಿ ಚದುರಿ ಹೋಗಿರಬಹುದು ಅಲ್ಲವೆ ಇರಬಹುದು ಆದರೆ ಒಂದು ಘಟನೆ ವಿಜ್ಞಾನಿಗಳು ಬೇರೆ ರೀತಿಯಲ್ಲೂ ಯೋಚಿಸುವಂತೆ ಮಾಡಿತು

ಉಲ್ಕೆ-ಉಲ್ಕಾಪಾತ  ನಿಮಗೆ ಗೊತ್ತೇ ಇದೆ(ಈ ವಾರ ಉಲ್ಕಾಪಾತ ಕಾಣಿಸಬೇಕಿತ್ತು ಕಾಣಲಿಲ್ಲ ನಿಮಗೇನಾದ್ರೂ ಗೊತ್ತಿದ್ರೆ ತಿಳಿಸಿ)
ನಮ್ಮ ಸೌರವ್ಯೂಹದಲ್ಲಿರುವ ಅನಿಯತ-ಕಾಯಗಳು ಚಿಕ್ಕವು ನಮ್ಮ ಭೂ-ವಾತಾವರಣವನ್ನು ಪ್ರವೇಶಿಸಿ ಉರಿದು ಹೋಗುತ್ತವೆ ಅವೇ ಉಲ್ಕೆಗಳು ಕೆಲವು ಭಾರಿಗಾತ್ರದವು ಭೂಮಿಯ ವಾತಾವರಣದ ಒಳಗೆ ಪ್ರವೇಶಿಸಿ ನೆಲಕ್ಕೆ ಢಿಕ್ಕಿ ಹೋಡೆಯುವುದೂ  ಇದೆ

ಹೀಗೆ ಒಂದು ಉಲ್ಕೆ ೧೯೬೯ ನೇ ಇಸವಿಯಲ್ಲಿ ಮೆಕ್ಸಿಕೋದ ಗ್ರಾಮ ಒಂದರಲ್ಲಿ ಬಂದು ಬಿದ್ದಿತು ಅದರ ಅಳಿದುಳಿದ ತುಣುಕುಗಳೇ ಸುಮಾರು ೨೦೦೦ಕಿಲೋ ಇತ್ತು

ಈಗ ಅದರಲ್ಲಿನ ಐಸೋಟೋಪ್ ಗಳ ಲೆಕ್ಕಕ್ಕೆ ಬರೋಣ (ಒಂದು ಮೂಲವಸ್ತುವಿನ ಪ್ರೋಟಾನ್ ಸಂಖ್ಯೆ ಒಂದೇ ಆಗಿದ್ದು ನ್ಯೂಟ್ರಾನ್ ಸಂಖ್ಯೆ ಬೇರಾಗಿದ್ದರೆ ಅವು ಐಸೋಟೋಪ್) ಉದಾಹರಣೆಗೆ ಕಾರ್ಬನ್ ೧೨ ಹಾಗು ೧೪
ಹಾಗೆ ವಿಕಿರಣಶೀಲ ಐಸೋಟೋಪ್ ಗಳು ಕಾಲಾನಂತರ ಬೇರೇ ಮೂಲವಸ್ತುವಾಗಿ ಬದಲಾಗುವುದರಿಂದ ಅವುಗಳ ತೂಕ ಕೆಲಕಾಲಾನಂತರ ಅರ್ಧಕ್ಕೆ ಕುಸಿಯುತ್ತೆ ಇದನ್ನೆ Half Life Period ಎನ್ನುವುದು ಇದರ ಆಧಾರದಿಂದ ಒಂದು ವಸ್ತು ಎಷ್ಟು ಹಳೆಯದು ಎಂದು ತಿಳಿಯಬಹುದು

ಈಗ ನೋಡಿ ಇಂತಹ ಒಂದು ವೃತ್ತಾಂತ
ಅಲ್ಯುಮಿನಿಯಮ್ ಪರಮಾಣು ತೂಕ೨೬ ಇರುವ ಐಸೋಟೋಪ್   ಈ ರೀತಿ-Nuclear Dacy--ಯಿಂದ  ಮೆಗ್ನೀಷಿಯಮ ಅಗಿಬಿಡುತ್ತದೆ

ಈ ವ್ಯತ್ಯಾಸದ ಆಧಾರದಿಂದ ಮೆಕ್ಸಿಕೋ ಬಳಿ ದೊರಕಿದ ಉಲ್ಕೆ ೫೦೦ ಕೋಟಿ ವರ್ಷಕ್ಕೂ ಹಳೆಯದು ಎಂದು ತೀರ್ಮಾನಿಸಲಾಯಿತು

ಇದು ಮೇಲ್ನೋಟಕ್ಕೆ ಸಾಧ್ಯವಿರಲಿಲ್ಲ ಹೇಗೆ ಎನ್ನುತ್ತೀರ
ಮುಂದೆ ಓದಿ
(ಕನ್ನಡದಲ್ಲಿ ವಿಜ್ಞಾನದ ವಿಷ್ಯಗಳನ್ನು ವಿವರಿಸುವಾಗ ಉಪಕಥೆಗಳು ಬಂದರಂತೂ ಓದುಗರಾದ ನಿಮಗೇ ತಲೆ ತಿನ್ನಬಹುದು ಇವ ಏನನ್ನು ತಿಳಿಸ ಹೋರಟಿದ್ದಾನೆ  ಎಂದೆನಿಸಬಹುದು ಹಾಗಿದ್ದ ಮೇಲೆ ರಚಿಸುವ ನನ್ನ ಗತಿ ಕಲ್ಪಿಸಿಕೋಳ್ಳಿ ನೋಡೋಣ ನನಗೇಕೋ Net ನಿಂದ -Copy-ಮಾಡಿ ಭಟ್ಟಿ ಇಳಿಸಲು ಇಷ್ಟವಿಲ್ಲ ಸಾಕಷ್ಟು ಅಧ್ಯಯನ ಮಾಡಿಯೇ ತಿಳಿಸು ಎಂದು ನನ್ನ ಧ್ಯೇಯ)

ನಾವೆಲ್ಲಾ ನಮ್ಮ ಹೈಸ್ಕೂಲಿನ ಖಗೋಳವಿಜ್ಞಾನದ ಪಾಠಗಳಲ್ಲಿ ಓದಿರುತ್ತೇವೆ ಸೂರ್ಯನಸುತ್ತ ಮೋಡದ ರೀತಿಯ ವಸ್ತುಗಳಿದ್ದವು ಅವು ಸುತ್ತುತ್ತಾ ಸಾಂದ್ರವಾಗಿ ಗ್ರಹಗಳಾದವು ಉಳಿದವು ಉಲ್ಕೆ ಕ್ಷುದ್ರಗ್ರಹ ಇತ್ಯಾದಿಗಳಾದವು ಅಂತ  ಸೂರ್ಯ-ಸೌರವ್ಯೂಹದ ಕಥೆ ಇಲ್ಲಿಂದ ಪ್ರಾರಂಭವಾಗುತ್ತಿತ್ತು
ಆಂದರೆ ನಮ್ಮ ಸೌರವ್ಯೂಹದಲ್ಲಿನ ಎಲ್ಲಾ ವಸ್ತುಗಳು ಸೂರ್ಯನ ಜೊತೆಯಲ್ಲೇ ಜನ್ಮ ತಾಳಿದವು ಎಂದು

ಆದರೆ ಮೆಕ್ಸಿಕೋ ಬಳಿ ದೋರಕಿದ ಉಲ್ಕೆಯನ್ನು ಐಸೋಟೋಪ್ ಗಳ ಆಧಾರದ ಮೇಲೆ ಅದರ ಜನ್ಮ ದಿನಾಂಕ ಜಾಲಾಡಿದಾಗ ದೋರೆತ ಉತ್ತರ ೫೧೦ ಕೋಟಿ ವರ್ಷಗಳಿಗೂ ಮೊದಲಿನದಾಗಿತ್ತು ಆದರೆ  ಸೂರ್ಯನ ಹುಟ್ಟಿಗೂ ಮೊದಲು ಎಂದಾಯಿತು ಎಲ್ಲಿಂದ ಬಂದಿತು ಈ ELEMENTS
ನಿಮಗೇನದರೂ ಗೊತ್ತಿದ್ದರೆ ತಿಳಿಸಿ
ನನಗೆ ಗೊತ್ತಿದ್ದರೆ ಮುಂದಿನ ಸಂಚಿಕೆಯಲ್ಲಿ ತಿಳಿಸುವೆ