ಒಂದು ಮಗು ಹುಟ್ಟಿದಾಗ ಹೆಚ್ಚು ತೂಕವಿದ್ದರೆ ಅದು ಹೆಚ್ಚು ಆರೋಗ್ಯವಾಗಿರುತ್ತದೆ ಎನ್ನಬಹುದು ಆದ್ರೆ ತಾರೆಗಳಲ್ಲಿ ಈ ಲೆಕ್ಕಚಾರ ತಳೆಕೆಳಗಾಗುತ್ತದೆ
ತಾರೆ ಹುಟ್ಟುವಾಗ ಹೆಚ್ಚು ದ್ರವ್ಯರಾಶಿ ಹೊಂದಿದಂತೇ ಅದರ ಆಯುಷ್ಯ ಕಡಿಮೆ .ಆರಂಭಿಕ ದ್ರವ್ಯರಾಶಿ ಕಡಿಮೆ ಇದ್ದ ಹಾಗೆ ಅದರ ಆಯಸ್ಸು ಹೆಚ್ಚು ಏಕೆ ಅಂತ ನೀವು ಊಹಿಸಿರಬಹುದಲ್ಲವೇ ?
ಸರಳ ದ್ರವ್ಯರಾಶಿ ಹೆಚ್ಚು ಇದ್ದಂತೆ ಗುರುತ್ವದ ಸೆಳೆತವೂ ಹೆಚ್ಚು ಆಗ ಹೆಚ್ಚು ಹೆಚ್ಚು ಹೈಡ್ರೂಜನ್ ಅನ್ನು ತಾರೆ ದಹಿಸುತ್ತದೆ ಹಾಗೆ ಬೇಗ ಹೈಡ್ರೋಜನ್ ಮುಗಿಯಲೂ ಬಹುದು
ಸರಿ ಹಾಗೆ ಹೈಡ್ರೋಜನ್ ಕಡಿಮೆಯಾದ ತಾರೆಗಳಲ್ಲಿ ಏನಾಗುತ್ತದೆ ಅಂತ ನೋಡೋಣ
ನಿಮಗೆ ಗೊತ್ತಿರುವಂತೆ ಹೈಡ್ರೋಜನ್ ಪರಮಾಣು ದ್ರವ್ಯರಾಶಿ ಕಡಿಮೆ ಹಾಗೆಯೇ ಹೀಲಿಯಮ್ ದ್ರವ್ಯರಾಶಿ ಹೆಚ್ಚು
ನಿಮಗೆ ಗೊತ್ತಿರುವಂತೆ ಹೈಡ್ರೋಜನ್ ಪರಮಾಣುಗಳು ಸೇರಿ ಹೀಲಿಯಮ್ ಆಗುತ್ತೇ ಅಂತ ಅ ಹೀಲಿಯಮ್ ಪರಮಾಣುಗಳು ದ್ರವ್ಯರಾಶಿ ಹೆಚ್ಚಿರುವಂತೆ ತಾರೆಯ ಕೇಂದ್ರದತ್ತ ಸಾಗುತ್ತವೆ ಕೋನೆಗೋಂದು ಕಾಲಕ್ಕೆ ಕೇಂದ್ರದಲ್ಲಿ ಕೇವಲ ಹೀಲಿಯಮ್ ತುಂಬಿ ಹೋಗುತ್ತದೆ ಆದರೂ ತಾರೆಯ ಹೊರ ಪದರದಲ್ಲಿ ನ್ಯೂಕ್ಲಿಯರ್ ಕ್ರಿಯೆಗಳು ಮುಂದುವರೆಯುತ್ತವೆ ಆಗ ಹೊರಪದರ ತಾನಾಗಿಯೇ ಹಿಗ್ಗಲಾರಂಭಿಸುತ್ತವೆ ಅಗ ತಾರೆಯ ಬಾಹ್ಯ ತಾಪಮಾನ ಕುಸಿಯುತ್ತದೆ ಸುಮಾರು ೩೦೦೦(3000degree) ಡಿಗ್ರಿಗೆ ಇದು " ತಾರೆಯ ಕೆಂಪು ದೈತ್ಯ ಸ್ಥಿತಿ" ನಮ್ಮ ಸೂರ್ಯನೂ ಹಲವು ಬಿಲಿಯನ್ ವರ್ಷಗಳ ನಂತರ ಹೀಗೆ ಆಗುತ್ತಾನೆ ಸೂರ್ಯ ಸುಮಾರು ಭೂಮಿಯ ಕಕ್ಷೆಯವರೆಗೂ ಹಿಗ್ಗಬಹುದು (ಇಗೇನೂ ಹಾಗಾಗುವುದಿಲ್ಲ ಬಿಡಿ ನಾವೇನೂ ಸುಟ್ಟು ಹೋಗುವ ಭಯವಿಲ್ಲ ಆದರೆ ಅದಕೂ ಮೋದಲೇ ಈ ಸ್ವಾರ್ಥಿ ಮಾನವ ಭೂಮಿಯನ್ನು ನಾಶ ಮಾಡಲೂ ಬಹುದು ಇದಾಗುವುದು ಸುಮಾರು----ಬಿಲಿಯನ್ ವರ್ಷಗಳ ನಂತರ ) ಆಗ ಅ ತಾರೆಯನ್ನು H-R Diagram ನಲ್ಲಿ ಅನ್ವಯಿಸಿದರೆ ಒಂದು ಮೂಲೆಗೆ ಬರುತ್ತವೆ ಅಂದರೆ ತಾಪಮಾನ ಕಡಿಮೆ ಗಾತ್ರ ಹೆಚ್ಚು H-R Diagram ಮತ್ತೋಮ್ಮೆ ಹಳೆಯ ಪೋಸ್ಟ ನಲ್ಲಿ ನೋಡಿ
ಈ ತರಹದ ತಾರೆಗಳು ಆಗಸದಲ್ಲಿ ಗಲವು ಇವೆ ಅದರಲ್ಲಿ ಪ್ರಮುಖವಾದದ್ದು ಓರಿಯನ್ ನಕ್ಷತ್ರ ಪುಂಜದಲ್ಲಿರುವ "ಬಿಟಲ್ ಗೀಸ್ " ಹೀಗೆ ಕೆಂಪು ದೈತ್ಯಗಳು ಉಂಟಾಗುತ್ತವೆ
ಕೆಲಕಾಲಾನಂತರ ಆ ಕೆಂಪು ದೈತ್ಯದ ಹೊರಪದರ ಸಂಪೂರ್ಣ ಹೊರಕ್ಕೆ ಆಕಾಶದಲ್ಲಿ ಹರಡಿಹೋಗುತ್ತದೆ ಅದನ್ನು ಪ್ಲಾನೆಟರಿ-ನೆಬ್ಯುಲಾ ಎನ್ನುತ್ತಾರೆ ಏಕೆಂದರೆ ಇದೇ ಮುಂದೆ ಗ್ರಹಗಳ ಉಗಮಕ್ಕೂ ಕಾರಣವಾಗಬಹುದು ಇದಕ್ಕೆ ಉದಾಹರಣೆ ಹೆಲಿಕ್ಸ್-ನೆಬ್ಯುಲಾ
ಆ ಕೆಂಪು ದೈತ್ಯಗಳ ಹೊರಪದರ ಎನೋ ಹೋರಟುಹೋಯಿತು ಆದ್ರೆ ಕೇದ್ರದಲ್ಲಿರುವ ಹೀಲಿಯಮ್ ಪದರ ಹಾಗೆ ಇದೆಯಲ್ಲ ಅದರಲ್ಲಿ ಏನಾಗಬಹುದು ಅಂತ ಕಾತರವಿದ್ದರೆ ನಿರೀಕ್ಷಿಸಿ
ಸರಿ ಈ ಪ್ರಶ್ನೆಗೆ ಉತ್ತರ ಕೊಡಿ ನೋಡೋಣ
ವಿಶ್ವದಲ್ಲಿ ಅತೀ ದೋಡ್ಡ ವಜ್ರಗಳು ಎಲ್ಲಿವೆ ಅಂತ
ತಮ್ಮ ಕಮೆಂಟ್ ಗಳಲ್ಲಿ ನನಗೆ ಪ್ರಶ್ನೆಗಳನ್ನು, ಅನುಮಾನಗಳನ್ನು ತಿಳಿಸಿದರೆ ಹೆಚ್ಚು ಅನುಕೂಲವಾಗುತ್ತದೆ
ಹಾಗೆ ತಪ್ಪುಗಳಿದ್ದರೆ ತಿಳಿಸಿ ನಿಮಗೆ ಇನ್ನೂ ಹೆಚ್ಚು ಗೋತ್ತಿದ್ದರೆ ಖಂಡಿತಾ ತಿಳಿಸಿ
ಬೈ!!!
ಗುರುವಾರ 26 ಡಿಸೆಂಬರ್ 2019 ರ ಸೂರ್ಯಗ್ರಹಣ ನನಗೆ ನಮ್ಮ ಮನೆಯಲ್ಲಿ , ಶಾಲೆಯಲ್ಲಿ ಕಂಡಂತೆ
-
ಗುರುವಾರ 26 ಡಿಸೆಂಬರ್ 2019 ರ ಸೂರ್ಯಗ್ರಹಣ ನನಗೆ ನಮ್ಮ ಮನೆಯಲ್ಲಿ , ಶಾಲೆಯಲ್ಲಿ
ಕಂಡಂತೆ
ಇದು ಮತ್ತೆ ಭಾರತದಲ್ಲಿ ಕಾಣಲು ಇನ್ನು ಅರ್ಧ ದಶಕದ ನಂತರ ಹಲವು ವರ್ಷ ಕಾಯಬೇಕು
...
4 years ago