Tuesday, November 10, 2009

ಬನ್ನಿ ತಾರೆಗಳ ಒಳಗೆ ಹೋಗೋಣ
ನಿಲ್ಲಿ ಅದರೋಳಗೆ ಹೋಗಬೇಕು ಅಂದರೆ ಇಲ್ಲಿಂದಾನೆ ಟಿಕೆಟ್ ಬುಕ್ ಮಾಡಬೇಕು
ಅ ಟಿಕೆಟ್ ಸಿಗೋದು ಒಂದು ಕೌಂಟರ್ ನಲ್ಲಿ ಅದರ ಹೆಸರು -"ರೋಹಿತ"(spectrum)
ಕಾಮನ ಬಿಲ್ಲಿನಲ್ಲಿ ಏಳು ಬಣ್ಣ ಇರುತ್ತೆ, ಬೆಳಕು ಪಟ್ಟಕದಲ್ಲಿ ಹರಿದಾಗಲೂ ಏಳುಬಣ್ಣ ಬರುತ್ತೆ
ಆ ಬಣ್ಣಗಳ ಪಟ್ಟಿಯನ್ನು ರ‍ೋಹಿತ ಎನ್ನುತ್ತೇವೆ ಅಂತ ಎಲ್ಲರಿಗೂ ಗೊತ್ತು

ಪ್ರಶ್ನೆ:=ಹಾಗದರೆ ಕಾಮನಬಿಲ್ಲು ಬಿಲ್ಲಿನ ಆಕಾರದಲ್ಲೇ ಯಾಕಿರುತ್ತದೆ ಹೇಳಿ ನೋಡೋಣ


ಆ ವಿಷಯ ಹಾಗಿರಲಿ ನ್ಯೂಟನ್ ಬೆಳಕಿನಲ್ಲಿ ಏಳು ಬಣ್ಣ ಅಂದಿದ್ದಕ್ಕೆ ವಿಷಯ ಮುಗಿದುಹೋಗಿಲ್ಲ
ಅ ರೋಹಿತ ಇನ್ನೂ ಹಲವು ರಹಸ್ಯಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ
ಬೆಳಕು ನೇರವಾಗಿ ಆಶ್ರಗದಲ್ಲಿ ಹರಿದಾಗ ಬರ‍ೊದು ಮಿಶ್ರಣಗೋಂಡ ರೋಹಿತ(impure spectrum)



ಆದರೆ ಆ ಅಶ್ರಗವನ್ನು ಮಸೂರಗಳ ಸಂಯೋಜನೆಯಲ್ಲಿ ಜೋಡಿಸಿ ಬೇಳಕು ಹಾಯಿಸಿದಾಗ ಬರೋದು ನಿಯಮಿತವಾಗಿರೋ ರೋಹಿತ(pure spectrum) (ಚಿತ್ರ ನೋಡಿ)



ಆ ರೋಹಿತದಲ್ಲಿ ಬಣ್ಣಗಳು ನಿಯಮಿತವಾಗಿ ವಿಂಗಡಣೆಯಾಗಿರುತ್ತವೆ
ಅದು ತಾರೆಗಳ ಅಧ್ಯಯನದಲ್ಲಿ ಹೇಗೆ ಸಹಕಾರಿ ಅಂತ ಹೇಳುತ್ತೇನೆ ಕೇಳಿ
ರೋಹಿತದಲ್ಲಿ ಬೆಳಕಿನ ಮೂಲದ ವರ್ತನೆಗೆ ಅನುಗುಣವಾಗಿ ಗೆರೆಗಳು ಬದಲಾಗುತ್ತವೆ ಅನ್ನೋದನ್ನ ಬುನ್ಸೆನ್ ಹಾಗು ಕಿರ್ಚಾಫ಼್ ತಮ್ಮ ಪ್ರಯೊಗದಿಂದ ತೋರಿಸಿದ್ದಾರೆ

ಸೂರ್ಯನ ಬೆಳಕನ್ನು ಸೀಳುಗಂಡಿಯ ಮೂಲಕ ಆಶ್ರಗದಲ್ಲಿ ಹಾಯಿಸಿದಾಗ ಸುಮಾರು ೭೦೦ ಗೆರೆಗಳನ್ನು ಪ್ರಾನ್ ಹೋಫ಼ರ್ ಕಂಡುಕೊಂಡ






ಹೀಗೆ ತಾರೆಗಳ ಬೆಳಕಿನ ರೋಹಿತ ಪಡೆದರೆ ಅದರ ವಿವರ ತಿಳಿದುಕೊಳ್ಳಬಹುದು

ಯಾವ ರೀತಿ ಒಬ್ಬರ ಕೈಬೆರಳಿನ ಗುರುತು (fingerprint) ಮತ್ತೊಬ್ಬರ ಕೈಬೆರಳಿನ ಗುರುತಿಗಿಂತ ಭಿನ್ನವೋ ಹಾಗೆ ಪ್ರತೀ ತಾರೆಯ ರೋಹಿತವೂ ಭಿನ್ನವಾಗಿದೆ ಇದರ ಸಹಾಯದಿಂದ ನಾವು ತಾರೆಗಳ ಬಗ್ಗೆ ಹಲವು ವಿಷಯ ತಿಳಿದುಕೊಂಡಿದ್ದೇವೆ

ರೋಹಿತಗಳ ಕೆಲವು ಲಕ್ಷಣಗಳು ಹೀಗಿವೆ
ಅವರ್ತ ಕೋಷ್ಟಕ ದಲ್ಲಿರುವ ಎಲ್ಲಾ ಸುಮಾರು ೧೦೩ ಮೂಲವಸ್ತುಗಳ ರೋಹಿತಗಳು ಭಿನ್ನವಾಗಿವೆ
ಬೆಳಕು ಯಾವುದೇ ಉತ್ಸರ್ಜನೆಯಿಂದ ಬಂದಿದ್ದರೆ ರೋಹಿತದಲ್ಲಿ ಒಂದು ಹೆಚ್ಚು ಹೋಳಪಿನ ಭಾಗವಿರುತ್ತದೆ ಅದು ಬೆಳಕಿನ ಮೂಲದ ತಾಪಕ್ಕೆಅನುಗುಣವಾಗಿ ತನ್ನ ಸ್ಥಾನವನ್ನು ಹೊಂದಿರುತ್ತದೆ
ಬೆಳಕು ಯಾವುದೇ ವಸ್ತುವಿನಿಂದ ಹೀರಲ್ಪಟ್ಟಿದ್ದರೆ ಅದರಲ್ಲಿ ಕಪ್ಪು ಗೆರೆಗಳು ಗೋಚರಿಸುತ್ತವೆ
ವಸ್ತುವಿನ ಹಾಗು ವೀಕ್ಷಕನ ಚಲನೆಗನುಗುಣವಾಗಿಯೂ ಅದು ಬದಲಾಗುವುದನ್ನು ಕೆಲಕಾಲಾನಂತರ ಕಂಡುಹಿಡಿಯಲಾಯಿತು

ತಾರೆಗಳ ರೋಹಿತವನ್ನು ಅದ್ಯಯನ ಮಾಡುವಾಗ ಮತ್ತೆ ಒಂದು ಗೊಂದಲ ಎದುರಾಯಿತು ಆ ರೋಹಿತಗಳು ಭೂಮಿಯಲ್ಲಿನ ಯಾವ ಮೂಲವಸ್ತುಗಳ ರೋಹಿತಗಳಿಗೂ ಸರಿಯಾಗಿ ಹೋದಾಣಿಕೆಯಾಗುತ್ತಿರಲಿಲ್ಲ ಹಾಗಾದರೆ
ಒಂದೋ ತಾರೆಗಳಲ್ಲಿ ಭೂಮಿಯಲ್ಲಿರದ ಮೂಲವಸ್ತುಗಳಿರಬೇಕೆಂದು ಎಣಿಸಿದರು ಆದರೆ ಅವರ ಎಣಿಕೆ ಸುಳ್ಳಾಗಿತ್ತು

ತಾರೆಗಳಲ್ಲಿ ಪರಮಾಣುಗಳು ಅಯಾನು ಸ್ಥಿತಿಯಲ್ಲಿ(ಎಲೆಕ್ಟ್ರಾನುಗಳನ್ನು ಕಳೆದುಕೋಂಡ ಸ್ಥಿತಿ) ಇರುತ್ತವೆ ಆದ್ದರಿಂದ ರೋಹಿತದಲ್ಲಿ ಕಪ್ಪು ಗೆರೆಗಳಿವೆ ಎಂದು ಭಾರತೀಯ ವಿಜ್ಞಾನಿ "ಮೇಘನಾದ ಸಹಾ" ಪ್ರತಿಪಾದಿಸಿದರು
ಅವರ ಸಂಶೋಧನೆಯ ಸಹಾಯದಿಂದ ತಾರೆಗಳಲ್ಲಿರುವ ವಸ್ತು,ಸ್ವಭಾವಗಳ ಬಗ್ಗೆ ಹಲವು ಮಾಹಿತಿಗಳು ಲಭಿಸಿವೆ
ಈ ಮೂಲಕ ರೋಹಿತದ ಗೆರೆಗಳನ್ನು ನೋಡಿದರೆ ತಾರೆಗಳ ಭವಿಷ್ಯ ಹೇಳಬಹುದು ಅಂತಾ ಸ್ಪಷ್ಟವಾಯಿತು
(ನಮ್ಮ ಕೈ ರೇಖೆ ನೋಡಿ ನಮ್ಮ ಭವಿಷ್ಯ ಹೇಳಬಹೊದೋ ಇಲ್ಲವೋ ನನಗೆ ಗೊತ್ತಿಲ್ಲ)
ಈಗ ರೇಡಿಯೋ ಅಲೆಗಳು, ಅವಗೆಂಪು,ಅತಿನೇರಳೆ,ಎಕ್ಸ್-ರೆ, ಅದಲ್ಲದೆ ಎಲ್ಲಾ ವಿದ್ಯುತ್ಕಾಂತೀಯ ವಿಕಿರಣಗಳ ಅಧ್ಯಯನದಿಂದ ತಾರೆಗಳ ಬಗ್ಗೆ ಈಗ ಹೆಚ್ಚು ತಿಳಿದುಕೋಡಿದ್ದೇವೆ ಅದರ ಬಗ್ಗೆ ಮುಂದೆ ಹೇಳುತ್ತೇನೆ

ಕಬ್ಬಿಣ ಸ್ವಲ್ಪ ಕಾದಾಗ ಕೆಂಪಾಗುತ್ತದೆ ನಂತರ ಹಳದಿ ಇನ್ನೂ ಹೆಚ್ಚು ಕಾದಾಗ ಬಿಳಿಯಾಗುತ್ತದೆ ಈ ರೀತಿ ಅದರ ಬಣ್ಣ ತಾಪಮಾನ ಸೂಚಿಸುವ ಹಾಗೆ ತಾರೆಗಳೂ ತಾಪಮಾನಕ್ಕೆ ಅನುಗುಣವಾಗಿ ಬಣ್ಣವನ್ನು ಹೊಂದಿರುತ್ತವೆ

ಸರಿ ತಾಪಮಾನ ಹಾಗು ತಾರೆಗಳ ರೋಹಿತದ ವರ್ಗ ಹಾಗು ಅವುಗಳ ನಿರಪೇಕ್ಷ ಕಾಂತಿಮಾನವನ್ನು ಗ್ರಾಫ್ ಗೆ ಹಾಕಿ ಅಧ್ಯಯನ ಮಾಡುವ ಸಾಹಸವನ್ನು ಹರ್ಸ್ಟ್ರಂಗ್ ಹಾಗು ರೆಸೆಲ್ ಎಂಬ ವಿಜ್ಞಾನಿಗಳು ಮಾಡಿದರು
(ಎಜ್ನಾರ್ ಹರ್ಸ್ಟ್ರ್ಂಗ್-ಡಚ್ ,ಹೆನ್ರಿ ನಾರಿಸ್ ರೆಸಲ್-ಅಮೇರಿಕ-೧೯೧೪) ಅದನ್ನು H-R diagram ಅಂತಲೇ ಕರೆಯುತ್ತಾರೆ
ಹರ್ಸ್ಟ್ರಂಗ್ ಹಾಗು ರೆಸಲ್ ರಚಿಸಿದ ಗ್ರಾಫ಼್ ನಲ್ಲಿ ಬಹುಪಾಲು ತಾರೆಗಳು S ಆಕಾರದಲ್ಲಿನ ಚಿತ್ರಣದಲ್ಲಿ ನೆಲೆಗೋಂಡವು-ಅವನ್ನು ಪ್ರಧಾನ ಸರಣಿ ಎನ್ನುತ್ತೇವೆ ಅದರಲ್ಲಿ ತಾರೆಗಳ ತಾಪಮಾನವು ನಿರಪೇಕ್ಷ ಕಾಂತಿಯೊಂದಿಗೆ ಬದಲಾಗುವುದನ್ನು ಕಾಣಬಹುದು(O- ವರ್ಗದಿಂದ M-ವರ್ಗದವರೆಗೆ)



ನಮ್ಮ ದಿನಕರ,ಸೂರ್ಯ ಇದೇ ಸರಣಿಯ ಮಧ್ಯಭಾಗದಲ್ಲಿ ಇದಾನೆ (ಪಾಪ ಸೂರ್ಯ ಅಷ್ಟೋಂದುತಾರೆಗಳ ನಡುವೆ ಲೆಕ್ಕಕ್ಕೇ ಸಿಗಲ್ಲಾ ಅಲ್ವಾ ಆದರೂ ನಮಗೆ ಅವನು ಸರ್ವಶಕ್ತಿದಾತ)

ಈಗ ಮೇಲಿನ ಚಿತ್ರ ನೋಡಿ ಅದರಲ್ಲಿ ಇನ್ನೂ ಕೆಲವು ತಾರೆಗಳ ಗುಂಪು ಬಲಗಡೆ ಮೇಲಿನ ಮೂಲೆಯಲ್ಲೂ
ಎಡಗಡೆ ಕೆಳ ಮೂಲೆಯಲ್ಲೂ ಇವೆ ಅವು ತಮ್ಮ ಬಹುಪಾಲು ಜೀವಿತಾವಧಿ ಕಳೆದಿರುವ ತಾರೆಗಳು
ಬಲಗಡೆ ಮೆಲೀನ ಮೂಲೆಯಲ್ಲಿರೋ ತಾರೆಗಳ ಸ್ವಭಾವ ಏನು ಅಂತಾ ಸ್ವಲ್ಪ ಯೋಚಿಸಿದ್ರೆ ಅಂದಾಜು ಮಾಡಬಹುದು --ಅವುಗಳ ಗಾತ್ರ ಹೆಚ್ಚು ಮೇಲ್ಮೈ ತಾಪಮಾನ ಕಡಿಮೆ-ಅವು ಕೆಂಪು ದೈತ್ಯಗಳು
ಹಾಗೆ ಕೆಳಗಡೆಯ ಎಡಗಡೆ ಮೂಲೆಯಲ್ಲಿರ‍ೋದು ಶ್ವೇತ ಕುಬ್ಜಗಳು ಹೆಸರೇ ಹೇಳುವಂತೆ ಅವುಗಳ ಗಾತ್ರ ಚಿಕ್ಕದು ಮೇಲ್ಮೈ ತಾಪಮಾನ ಮಾತ್ರ ಹೆಚ್ಚು

ರೋಹಿತಗಳು , H-R ನಕ್ಷೆ ಇವೆರಡು ತಾರೆಗಳ ಅಧ್ಯಯನದಲ್ಲಿ ಬಲುದೊಡ್ದ ಕ್ರಾಂತಿಯನ್ನು ಉಂಟುಮಾಡಿದವು ಅನ್ನೋಣವೇ ಇನ್ನು ತಾರೆಗಳಲ್ಲಿ ಏನೇನು ಇವೆ ಅವುಗಳ ರಚನೆ ಹೇಗಾಗುತ್ತವೆ ಅವುಗಳ ಜೀವನ-ಚಕ್ರದ ಬಗ್ಗೆ ತಿಳಿದುಕೋಳ್ಳೋಣ

Saturday, November 7, 2009

ಕಳೆದ ಬಾರಿ ತಾರೆಗಳ ದೂರದ ಬಗ್ಗೆ ಪ್ರಸ್ತಾಪಿಸುತ್ತಿದ್ದೆ
ಬೆಸಲ್ ನ ವಿಧಾನದಂತೆ ತಾರೆಗಳ ದೂರ ಕಂಡುಹಿಡೀಬೇಕಾದ್ರೆ ಆರು ತಿಂಗಳು ಕಾಯಬೇಕೆಂದೇನಿಲ್ಲ
"ಪಾರ್ಸೆಕ್" ಮಾನವನ್ನು ಬಳಸಿದರಾಯಿತು
ಅಂದರೆ ಒಂದು ತಾರೆಯಿಂದ ಒಂದು ಸೆಕೆಂಡ್-ಕಂಸದಷ್ಟು ಕೋನ ಸೂರ್ಯನಿಗೆ ಆಧಾರವಾಗಿ ಬಂದಿದ್ದರೆ ಅದು ಒಂದು ಪಾರ್ಸೆಕ್ ಅದು ಸರಿಯಾಗಿ ೩.೨೫೬ ಜ್ಯೊತಿರ್ವರ್ಷಗಳಿಗೆ ಸಮ

ಬೆಸಲ್ ನ ವಿಧಾನದಿಂದ ಸುಮಾರು ೩೦೦-೪೦೦ ಜ್ಯೋತಿರ್ವರ್ಶಗಳ ದೂರದಲ್ಲಿರುವ ತಾರೆಗಳ ದೂರ ಏನೋ ಕಂಡುಹಿಡೀಬಹುದು ಆದ್ರೆ ಅದಕ್ಕೂ ಹೆಚ್ಚು ದೂರದಲ್ಲಿರೋ ತಾರೆಗಳು ಹಾಗು ನಮ್ಮ ಗೆಲಾಕ್ಸಿಯಿಂದಲೂ ದೂರದಲ್ಲಿರೋ ತಾರೆಗಳ ದೂರ ಕಂಡುಹಿಡಿಯೋದು ಹೇಗೆ? ಏಕೆಂದರೆ ಆ ದೂರ ಆ ಗಾತ್ರಕ್ಕೆ ಹೋಲಿಸಿದರೆ ನಮ್ಮ ಸೌರವ್ಯೂಹವೂ ಸಹ ತುಂಬಾ ಚಿಕ್ಕದ್ದಾಗಿಬಿಡುತ್ತದೆ, ಸ್ವತ: ಬೆಸಲ್ ಸಹ ಮೊದಲ ಪ್ರಯತ್ನದಲ್ಲಿ ದೂರದ ತಾರೆಗಳ ವಿಚಾರದಲ್ಲಿ ಸೊತಿದ್ದನ್ನು ನೆನಪಿಸಬಹುದು ,ಅದರೆ ಈ ಅನಂತದೂರವನ್ನೂ ಕಂಡುಹಿಡಿಯೋಕೆ ಸಹ ನಮ್ಮ ವಿಜ್ಞಾನಿಗಳ ಬತ್ತಳಿಕೆಯಲ್ಲಿ ಅಸ್ತ್ರವಿದೆ, ಅದು ಹೇಗೆ ಅಂತ ತಿಳಿಸುತ್ತೇನೆ ಕೇಳಿ

ಇಲ್ಲ!ಇಲ್ಲ! ಮುಂದೆ ಓದಿ

ಬೆಳಕನ್ನು ಅಳೆಯುವಾಗ ಅಲ್ಲೂ ಸಹ ವಿಲೋಮ ವರ್ಗ ನಿಯಮ ಎಂಬುದೋಂದಿದೆ
(inverse squre law of photometry)
ಅದರಂತೆ ಒಂದು ಬೆಳಕಿನ ಮೂಲದ ಕಾಂತಿ ಅದು ಇರುವ ದೂರದ ವರ್ಗಕ್ಕೆ ವಿಲೋಮಾನುಪಾತದಲ್ಲಿರುತ್ತದೆ
(the illumination at a point on a surface is inversly propotional to squre of the distance from the source)
ಅಂದರೆ ದೂರ ಎರಡು ಪಟ್ಟು ಹೆಚ್ಚಿದರೆ ಕಾಂತಿಯು ೧/೪ ಭಾಗದಷ್ಟು ಕಡಿಮೆಯಾಗುತ್ತದೆಯೆಂದು ತಿಳಿಯಬಹುದು
ಈ ಕೆಲಸವನ್ನು ಸುಲಭವಾಗಿಸಿದ್ದು ಕೆಲವು ವಿಶೇಷ ತಾರೆಗಳು

ಇನ್ನೋಂದು ವಿಷಯ ಕೇಳಿ-- ನಕ್ಷತ್ರಗಳೇನೋ ಮಿನುಗುತ್ತವೆ ಏಕೆಂದರೆ ಭೂ ವಾತಾವರಣ, ಅವುಗಳ ದೀಪ್ತಿಯ ಕಾರಣದಿಂದ ಡಿಪ್-ಡಿಮ್ ಎನ್ನುವಂತೆ ಭಾಸವಾಗುತ್ತವೆ ಅಂತ ನಿಮಗೆಲ್ಲಾ ಗೊತ್ತು ಆದರೆ ಕೆಲವು ತಾರೆಗಳು ನಿಜವಾಗಿಯೂ ತಮ್ಮ ಕಾಂತಿಯಲ್ಲಿ ಬದಲಾವಣೆ ತೋರುತ್ತವೆ ನೆನಪಿರಲಿ ಡಿಪ್-ಡಿಮ್ ಎನ್ನುವಷ್ಟು ವೇಗವಾಗಿ ಅಲ್ಲ, ಕೆಲವು ದಿನಗಳ ಅಥವಾ ತಿಂಗಳುಗಳ ಕಾಲದ ಬದಲಾವಣೆ ಇರಬಹುದು ಈ ತಾರೆಗಳನ್ನ variable stars ಅಂತೀವಿ

ಈ ಕಥೆ ಯಾಕಪ್ಪಾ ಅಂತ ಕೇಳಬಹುದು -ಇದಕ್ಕೂ ತಾರೆಗಳ ದೂರ ಕಂಡುಹಿಡಿಯೋದಿಕ್ಕೊ ಸಂಭಂಧವಿದೆ
CEPHEUS ನಕ್ಷತ್ರ ಪುಂಜದಲ್ಲಿ delta CEPHY ಅನ್ನೋ ತಾರೆಯಿದೆ ಅದು ತನ್ನ ಕಾಂತಿಯಲ್ಲಿ ಸರಿಯಾಗಿ ೬೦ ದಿನಗಳಿಗೊಮ್ಮೆ ಬದಲಾವಣೆ ತೋರುತ್ತದೆ ಹೇಗಂದ್ರೂ delta CEPHY ದೂರ ನಮಗೆ ತಿಳಿದಿದೆ ಅದರ ಬದಲಾಗೋ ಕಾಂತಿಯನ್ನು ಬೇರೆ ತಾರೆಗಳ ಕಾಂತಿಗೆ ಹೋಲಿಸಿ ನೋಡಿದರಾಯಿತು

ಈ ರೀತಿ ತಾರೆಗಳ ದೂರ ಕಂಡುಹಿಡಿಯೋ ಸಮಸ್ಯೆ ನಿವಾರಣೆ ಆಯ್ತು ,, ಇನ್ನು ಮುಂದೆ ತಾರೆಗಳ ದೂರದ ಬಗ್ಗೇನೆ ಕೊರಿಯಲ್ಲ ,, ನಕ್ಷತ್ರಗಳ ಒಳಗೆ ಏನಿದೆ ಅದು ಹೇಗೆ ಗೊತ್ತಾಯ್ತು ಅನ್ನೊ ಆಸಕ್ತಿದಾಯಕ ವಿಷಯಗಳನ್ನ ತಿಳಿಸುತ್ತೇನೆ ಅವು ತುಂಬಾ ಕುತೂಹಲಭರಿತ ವಾಗಿದ್ದು ರಂಜನೀಯವಾಗಿವೆ ಈ ಸಂಚಿಕೆ ಬೊರ‍್ ಆಯ್ತಾ, ಮುಂದಿನ ಬಾರಿಯ ವಿಷಯದ ಪ್ರತಿ ವಾಕ್ಯವೂ ಅಸಕ್ತಿ ಕೆರಳಿಸಬಹುದು ಅಂತ ನಂಬಿದ್ದೇನೆ



ಇನ್ನೊಂದು ವಿಚಾರ ವಸ್ತು-ವಿಷಯದಿಂದ ಹೊರಗಿನ ವಿಚಾರ ಪ್ರಸ್ತಾಪಿಸುತ್ತಿದ್ದೇನೆ ಎಂದುಕೊಳ್ಳಬೇಡಿ
ಪ್ರಳಯದ ಫ್ಯಾಂಟಸಿ ಬಗ್ಗೆ ಯೋಚನೆ ಮಾಡಬೇಡಿ,ವರ್ಷಗಟ್ಟಲೆ ವಿಜ್ಞಾನ ಓದಿದರೂ ಅದರ ತತ್ವಗಳನ್ನ ಎಂದೂ ಜೀವನದಲ್ಲಿ ಅಳವಡಿಸಿಕೊಳ್ಳದ ಜನರಿಗೆ
"ಪ್ರಳಯ" "ಗ್ರಹಗಳು ಸಾಲಾಗಿ ಬಂದರೆ ಭೂಮಿ ನಾಶವಾಗುತ್ತೆ" ಅನ್ನೊ ವಿಷಯ ಬಂದಾಗಲೆಲ್ಲಾ ವಿಜ್ಞಾನದ ನೆನಪಾಗಿಬಿಡುತ್ತೆ

ವಿಜ್ಞಾನದ ಬಗ್ಗೆ ತಿಳುವಳಿಕೆ ಇಲ್ಲದೆ ಇದ್ರೆ ಎಷ್ಟು ನಷ್ಟವೂ ಅದಕ್ಕಿಂತ ಸಾವಿರ ಪಾಲು ನಷ್ಟ ವಿಜ್ಞಾನವನ್ನು - ಅವೈಜ್ಞಾನಿಕವಾಗಿ ಅರ್ಥೈಸುವುದರಿಂದಾಗುತ್ತದೆ ನೆನಪಿರಲಿ
ಆಧುನಿಕ ವಿಜ್ಞಾನವೂ ಮೂಢನಂಬಿಕೆಗಳಿಂದ ಮುಕ್ತವಾಗಿಲ್ಲ
"ಈ ಮೆಸ್ಸೆಜ್ ಹತ್ತು ಜನರಿಗೆ ಫ಼ಾರ್ವರ್ಡ್ ಮಾಡಿ ಶುಭವಾಗುತ್ತದೆ","ಗ್ರಹಗಳು ಸಾಲಾಗಿ ಬಂದರೆ ಭೂಮಿ ನಾಶ" ಇವೆಲ್ಲಾ ಸ್ಯಾಂಪಲ್ ಗಳು ಅಷ್ಟೆ",ಪ್ರಳಯ ಆಗಲಿ ಬಿಡಲಿ ನಾವು ನಮ್ಮ ಒಳ್ಳೆಯ ಕೆಲಸ ಮಾಡೋದನ್ನ ನಿಲ್ಲಿಸೋದು ಬೇಡ ಅಷ್ಟೆ, "ಪ್ರಳಯಕ್ಕಿಂತ ಅದರ ಭಯವೇ ಹೆಚ್ಚು ಅಪಾಯಕಾರಿ"


ಮಾಯನ್ನರ ಭವಿಷ್ಯ ನಿಜವಾಗುತ್ತೋ ಇಲ್ಲವೂ ಆದರೆ
ಈ ಪ್ರಳಯದ ಫ್ಯಾಂಟಸಿಯಿಂದ ಕೆಲವು ವಿಷಯಗಳ ಬಗ್ಗೆ ಅಂತೂ ಭವಿಷ್ಯ ಹೇಳಬಹುದು

ಟಿವೀ ಹಾಗು ಮಾಧ್ಯಮಗಳಿಗೆ ೨೦೧೨ ಸುಗ್ಗಿಯ ವರ್ಷ, ಹಲವು ಚಾನಲ್ ಗಳ ಟಿ.ಅರ್.ಪಿ ರೇಟ್ ಖಂಡಿತಾ ಏರುತ್ತದೆ ಪತ್ರಿಕೆಗಳ ಮಾರಾಟ ಹೆಚ್ಚುತ್ತದೆ
ಜನ ಹೆದರಿ ಸ್ಥಿಮಿತ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಬಹುದು
ಅದೇ ಭಯದಲ್ಲಿ ಅಪಘಾತ-ಟ್ರಾಫಿಕ್ ಜಾಮ್ ಹೆಚ್ಚಬಹುದು,ಒಟ್ಟಾರೆ ಸಂಚಾರ ವ್ಯವಸ್ತೆ ಸರಿಯಾಗಿರುವುದು ಅನುಮಾನ
ಫೊನ್,ನೆಟ್ ಜಾಲಗಳ ಒತ್ತಡ ಹೆಚ್ಚಾಗಿ ವ್ಯವಸ್ಥೆ ಕೆಟ್ಟುಹೋಗಬಹುದು
ಢೋಂಗಿ ಬಾಬಾಗಳು-ಸನ್ಯಾಸಿಗಳು ಜನರನ್ನು ತರಹೇವಾರಿ ರೀತಿಯಲ್ಲಿ ವಂಚಿಸಬಹುದು
ಜನ ತಮ್ಮ ಗಮನ ಪ್ರಳಯದ ಕಡೆಗೆ ಇಡುವುದರಿಂದ ಅಪರಾಧ ಪ್ರಮಾಣ ಹೆಚ್ಚಬಹುದು
ಹಾಗೆ ಪ್ರಳಯದ ಪರಿಹಾರ ಮಾಡಿಕೊಡುತ್ತೇವೆ ಎನ್ನುವರಿಗೆ ಎನ್ನುವವರಿಗೂ ಬಂಪರ್ ಲಾಭ
ಇದೆಲ್ಲದರಿಂದ ಸ್ಟಾಕ್ ಮಾರ್ಕೆಟ್ ಕುಸಿದು ಅರ್ಥವ್ಯವಸ್ಥೆ ಹಾಳಾಗಬಹುದು
ಪ್ರಳಯದ ಪರ-ವಿರೋಧ ಬೆಟ್ಟಿಂಗ್-ಬಾಜಿಯಲ್ಲಿ ಜನ ಅತಂತ್ರರಾಗಬಹುದು
ಕೊನೆಗೆ ಹೇಗೂ ಪ್ರಳಯವಾಗುತ್ತದೆ ಎಂದು ಎಲ್ಲಾ ಸುಖಗಳನ್ನೂ ಅನುಭವಿಸಿಯೇ ತೀರುತ್ತೇನೆ ಎಂದು ಹಲವರು ತಮ್ಮ ಮಾನ-ಪ್ರಾಣ ಕಳೆದುಕೊಳ್ಲಬಹುದು

ದಯವಿಟ್ಟು ಮೇಲಿನ ಪಟ್ಟಿಯಲ್ಲಿ ನಾವು ಸೇರದಂತೆ ಎಚ್ಚರವಾಗಿರಬೇಕು

ಈಗ ಹೇಳಿ ಪ್ರಳಯ ಅಪಾಯಕಾರಿಯೋ ಅದರ ಭಯ ಹೆಚ್ಚು ಅಪಾಯಕಾರಿಯೋ

ದಯವಿಟ್ಟು ಇಂತಹ ವಿಷಯಗಳಲ್ಲಿ ಬೇರೆಯವರಿಗೆ ಸರಿಯಾದ ಮಾಹಿತಿ ನೀಡಿ
ಇಲ್ಲದಿದ್ದರೂ ಪರವಾಗಿಲ್ಲ ಊಹಾಪೂಹಗಳನ್ನು ಹಬ್ಬಿಸದಿದ್ದರೆ ಅದೇ ನಾವು ಈ ಪ್ರಳಯವನ್ನು ತಡೆದಷ್ಟು ಉಪಕಾರವಾಗುತ್ತದೆ

ಮುಂದಿನ ಸಂಚಿಕೆಯಲ್ಲಿ ಭೇಟಿಯಾಗೋಣ ,ನೇರವಾಗಿ ತಾರೆಗಳ ಓಳಗೆ ಹೋಗೋಣ

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

Friday, October 9, 2009

ನಕ್ಷತ್ರಕಡ್ಡಿ ಹಾಗು ದೂರದ ನಕ್ಷತ್ರ,

ಹಲೊ ನಮ್ಮ ಕಡೆಗೂ ಸ್ವಲ್ಪ ನೊಡ್ರಿ! ಪಟಾಕಿ ಜೊತೆಗೆ ನಮ್ಮ ಕಡೆಗೂ ಸ್ವಲ್ಪ ಗಮನ ಕೊಡ್ರಿ

ಎಲ್ಲರಿಗೂ ದಸರಾ-ದೀಪಾವಳಿ ಶುಭಾಶಯಗಳು

ಯಾರದು? ಅಂದ್ರಾ

ನಾವೆ ಕಣ್ರೀ ನಿಮ್ಮ ತಲೆಮೇಲೆ, ಭೂಮಿಮೆಲೆ ,ನಿಮ್ಮಿಂದ ಅತೀ ದೂರದಲ್ಲಿರೊ ಅಸಂಖ್ಯ ನಕ್ಷತ್ರಗಳು

scientific ಆಗಿ ಹೇಳೊದಾದ್ರೆ remotest objects

ಇನ್ನು ಮುಂದೆ ದೀಪಾವಳಿಗೆ ಮುಂಚೆ ಪಟಾಕಿ ಬಣ್ಣ,ಚಿತ್ತಾರ ನೊಡಿ ಆನಂದಿಸೋ ಮುನ್ನಾ

ಪ್ರಕೃತಿ ಈ ಸೃಷ್ಟಿ ವೈಭವ ತಿಳಿಯೊ ಪ್ರಯತ್ನ ಮಾಡಿ

ದೀಪಾವಳಿ-ನಕ್ಷತ್ರಕಡ್ಡಿ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ ಆದರೆ ನಕ್ಷತ್ರಗಳ ಬಗ್ಗೆ ಸಹಾ ಎಲ್ಲರಿಗೂ ತಿಳಿದಿರಬೇಕು


--ನಕ್ಷತ್ರ ಗಳು ಅನಾದಿ ಕಾಲದಿಂದಾನೂ ಮಾನವನ ಕೊತೂಹಲಕ್ಕೆ ಸರಕಾಗಿವೆ

ಪ್ರಕೃತಿಯ ನಿಗೂಢ-ವಿಸ್ಮಯಗಳಾಗಿವೆ ,ಆದ್ರೂ ಈ ಮಾನವನಿಗೆ ಎನಾದ್ರೂ ತಿಳಿದುಕೊಳ್ಳಬೇಕು ಅನ್ನೊ ಹಂಬಲ ಇದೆಯಲ್ಲಾ ಅದು ,ಈ ರಹಸ್ಯಮಯ ಲೊಕದ ಹಲವು ವಿಷಯಗಳನ್ನು ಪತ್ತೆ ಮಾಡಿದೆ



ಹಾಗಾದ್ರೆ ಇನ್ನು ಮುಂದೆ ನಮ್ಮ ಅಂದ್ರೆ ನಕ್ಷತ್ರಗಳ ಬಗ್ಗೆ ಹಲವು ವಿಷಯ ತಿಳಿಸ್ತೀನಿ


ಈ ಬಾರಿ ತಿಳಿದುಕೊಳ್ಳೊಣ ನಕ್ಷತ್ರಗಳ ದೂರಗಳನ್ನು ಹೇಗೆ ಪತ್ತೆ ಮಾಡಿದ್ರೂ ಅಂತ

ನಿಮ್ಮ ಹತ್ರಾ ಇರೂ ಪುಸ್ತಕದ ಉದ್ದವನ್ನೇನೊ ಸ್ಕೆಲಲ್ಲಿ ಅಳೀಬಹುದು , ಸೈಟಿನ ಉದ್ದವನ್ನ ಟೇಪಲ್ಲಿ

ಅಳೀಬಹುದು ,ಶಿವಮೊಗ್ಗದಿಂದ ಬೆಂಗಳೂರಿಗಿರೂ ದೂರವನ್ನೂ ಅಳೀಬಹುದು

ಇಡೀ ಭೂಮಿ ವಿಸ್ತಾರವನ್ನೂ ಹೇಗೋ ತಿಳಿದುಕೊಳ್ಳಬಹುದು ,ಆದ್ರೆ


ನಕ್ಷತ್ರಗಳು ಎಷ್ಟು ದೂರದಲ್ಲಿದಾವೆ ಅಂತ ಹೇಳೊದು ಹೆಗಪ್ಪಾ? ನಮ್ಮ ಸೂರ್ಯನಿಂದಾನೆ ಬೆಳಕು ಭೊಮಿ ತಲಪುವುದಿಕ್ಕೆ 8.3 ನಿಮಿಷ ಬೇಕು ನಮ್ಮ ಹತ್ತಿರದ ನಕ್ಷತ್ರ ಪ್ರಾಕ್ಸಿಮಾ-ಸೆಂಟಾರಿಯಿಂದ ಬೆಳಕು ನಮ್ಮನ್ನು ತಲಪುವುದಿಕ್ಕೆ ಬರೋಬ್ಬರಿ ನಾಲ್ಕೂವರೆ ವರ್ಷಗಳು ಬೇಕು ಅದರ ಬಗ್ಗೆ ಅಮೇಲೆ ಹೇಳುತ್ತೇನೆ ಆದ್ರೂ ಅಂದಿನವರು ಇದನ್ನೆಲ್ಲಾ ಹೇಗೆ ಪತ್ತೆ ಮಾಡಿದರು ಅಂತ ಹೇಳ್ತೀನಿ ಕೇಳಿ

ಅದೂ ಕೂಡ ಹಲವು ನೂರು ವರ್ಷಗಳ ಹಿಂದೆ

ಯಾವುದೇ ,MODERN INSTRUMENTS, ಕಂಪ್ಯೂಟರ್ ಇಲ್ಲದ ದಿನಗಳಲ್ಲಿ

ಆದ್ರೂ ಅಂದಿನ ಜನ ಇದನ್ನು ಕಂಡು ಹಿಡಿದರು,ಕೇವಲ ತಮ್ಮ ಬುದ್ದಿ, ಹಾಗು ಗಣಿತದ ಚಾತುರ್ಯದಿಂದ

ಹೇಗೆ ಅಂತ ಹೇಳ್ತೀನಿ ಕೇಳಿ---


ಗಣಿತದಲ್ಲಿ ಒಂದು ವೃತ್ತದಲ್ಲಿನ ಕಂಸದ ಉದ್ದ(length of arc) ಹಾಗು ಮತ್ತೋಂದು ಕೋನ(angle) ಗೊತ್ತಿದ್ದರೆ ಆ ವೃತ್ತದ ತ್ರೀಜ್ಯವನ್ನು(radius)

(ಕೇಂದ್ರದಿಂದ ಕಂಸಕ್ಕಿರುವ ದೂರ) ಕಂಡುಹಿಡಿಯಬಹುದು ,ವಿವರಿಸುತ್ತೇನೆ ಕೇಳಿ

l = ಕಂಸದ ಉದ್ದ r = ತ್ರೀಜ್ಯ,

ಹಾಗು A , B ಎರಡು ಬಿಂದುಗಳಿಂದ ದಿಂದ ಉಂಟಾಗಿರುವ ಕೋನ ’೦’ ಎಂದಿಟ್ಟುಕೊಳ್ಳಿ



ಈಗ ಸಮಿಕರಣ l=r0 ದಿಂದ 'r' ತ್ರೀಜ್ಯದ ಉದ್ದವನ್ನು ಕಂಡುಹಿಡೀಬಹುದು





ಈಗ ನಕ್ಷತ್ರಗಳಿಗೆ ಇದನ್ನು ಅನ್ವಯಿಸೋದು ಹೇಗೆ



ಒಂದು ನಕ್ಷತ್ರ ಒಮ್ಮೆ ಒಂದು ಸ್ಥಳದಿಂದ ಉಂಟು ಮಾಡಿರೋ ಕೋನವನ್ನು ಅಳೆಯೂದು ಅದೇ ನಕ್ಷತ್ರದ ಕೋನವನ್ನು ಇನ್ನೊಂದು ಸ್ಥಳದಿಂದ ಅಳೆಯೋದು, ಆ ಎರೆಡು ಸ್ಥಳಗಳ ನಡುವಿನ ದೂರ ಗೊತ್ತಿದ್ರೆ, ಬಂದಿರೋ ಕೊನದ ಸಹಾಯದಿಂದ ಲೆಕ್ಕಚಾರ ಮಾಡಿ ಕಂಡುಹಿಡೀಬಹುದು ಅಂತ ಹಿಂದಿನ ಕಾಲದ ವಿಜ್ಞಾನಿಗಳು ಭಾವಿಸಿದ್ರು , ಆದ್ರೆ ನಕ್ಷತ್ರಗಳು ಅವರ ಊಹೆಗೂ ನಿಲುಕದಷ್ಟು ದೂರದಲ್ಲಿವೆ ಅಂತ ಅವರಿಗೆ ಗೊತ್ತೆ ಇರಲಿಲ್ಲ ---ಆಗ ಏನಾಯ್ತು ಗೊತ್ತಾ

--- ದೂರವನ್ನು ಅಂದರೆ ಕೋನ ಅಳೆದ ಎರೆಡು ಸ್ಥಳಗಳ ದೂರ ಎಷ್ಟೇ ವಿಸ್ತರಿಸಿದರೂ ಬರುತ್ತಿದ್ದ ಕೋನ ಮಾತ್ರ ತುಂಬಾ ಚಿಕ್ಕದಾಗಿತ್ತು, ,ಆದ್ರೂ ಅಂದಿನ ವಿಜ್ಞಾನಿಗಳು ಬಿಡಲಿಲ್ಲ ಸೆಕ್ಸಡಂಟ್ ಅನ್ನೋ ಉಪಕರಣ ಬಳಸಿ ಚಿಕ್ಕ ಕೊನವನ್ನೋ ಅಳೆಯೋ ಪ್ರಯತ್ನ ಮಾಡಿದರು ಆದ್ರೂ ಅದು ಒಂದು ಡಿಗ್ರೀ ಕೋನದ ಮಿಲಿಯನ್ ಗಟ್ಟಲೇ ಚಿಕ್ಕದಾಗಿತ್ತು ಆದ್ರೂ ,ಇಷ್ತು ಚಿಕ್ಕ ಕೋನದ ಸಹಾಯದಿಂದ ಯಾವ ನಕ್ಷತ್ರದ ದೂರಾನೂ ಅಂದಾಜು ಮಾಡೂಕು ಅಗ್ಲಿಲ್ಲ, ಸರಿ ಈಗ ಏನು ಮಾಡೋದು ಕೋನ ಅಳೆಯೂಕೆ ಆಯ್ಕೆ ಮಾಡಿದ ಜಾಗಗಳ ದೂರ ಜಾಸ್ತಿ ಮಾಡ್ತಾ ಹೋಗೊದು, ಸರಿ ದೂರ ಜಾಸ್ತೀ ಮಾಡ್ತಾ ಹೋದ್ರು, ದೂರ ದೂರಕ್ಕೆ ಹೋಗಿ ಕೋನ ಅಳೆದರು ಬೇರೆ ಬೇರೆ ಊರಿಗೆ ಹೊಗಿ ಕೊನ ಅಳೆದರು, ದೇಶ ಖಂಡಗಳ ದೂರದಿಂದ ಕೊನ ಅಳೆದರೂ ಬರುತ್ತಿದ್ದ ಉತ್ತರ ತುಂಬಾ ಚಿಕ್ಕದಾಗಿತ್ತು

ಕೊನೇಗೆ ಭೂಮಿಯ ಎರೆಡು ಬದಿಗೆ ಹೊದ್ರೂ , ನಮಗೆ ಲೆಕ್ಕಕ್ಕೆ ಸಿಗೊವಷ್ಟು ದೊಡ್ಡ ಕೋನ ಬರೋದಿಲ್ಲಾ ಅಂತ ಅವರಿಗೆ ಗೊತ್ತಾಯ್ತು, ಹಾಗಾದ್ರೆ ಏನು ಮಾಡೊದು ಭೂಮಿ ಇಂದ ಹೊರಗೆ ಹೋಗೊ ಮಾತಿನ ಬಗ್ಗೆ ಯೋಚಿಸೋದಾದ್ರೆ ಅಂದಿನ ಕಾಲದಲ್ಲಿ ರಾಕೆಟ್ , ಮ್ಯಾನ್-ಮೇಡ್-ಸೆಟಲೈಟ್ ಇರಲಿ ವಿಮಾನಗಳನ್ನೂ ಆಗ ಕಂಡುಹಿಡಿದಿರಲಿಲ್ಲವಲ್ಲಾ

ಏನು ಮಾಡೊದು ಈಗ ?

ನೀವೇ ಅಗಿದ್ರೆ ಏನು ಮಾಡ್ತಾ ಇದ್ರೀ ಯೋಚಿಸಿ ನೊಡೋಣ?



ಹಾಗಿರುವಾಗ 1938 ರಲ್ಲಿ "ಫ಼್ರೆಡ್ರ್ರಿಕ್ ವಿಲ್ಹೆಲ್ಮ್ ಬೆಸಲ್" ಎನ್ನುವ ಜರ್ಮನ್ ಖಗೋಳಶಾಸ್ತ್ರಜ್ಞ ಬೇರೆ ತರಹ ಯೋಚಿಸಿದ

ವರ್ಷದಲ್ಲಿ ಎರೆಡು ಬಾರಿಗೆ ಒಂದು ನಕ್ಷತ್ರದ ಸ್ಥಾನಾಂತರದ ಲೆಕ್ಕ ಹಾಕಿದ -ಉದಾಹರಣೆಗೆ ಮಾರ್ಚ್ ಗೆ ಒಮ್ಮೆ ಸೆಪ್ಟೆಂಬರ್’ಗೆ ಒಮ್ಮೆ ಎಂದಿಟ್ಟುಕೋಳ್ಳೋಣ,

-ಭೂಮಿ ಏನಂದ್ರೂ ಸೂರ್ಯನನ್ನು ಸುತ್ತುತ್ತೆ ಅಲ್ವಾ, ಭೂಮಿಗೂ ಸೂರ್ಯನಿಗೂ ಇರೊ ದೂರ ಸುಮಾರು 15 ಕೋಟಿ ಕಿಲೋಮೀಟರ್ ಅಂತಾ ಏನಂದ್ರೂ ಆಗ ಗೊತ್ತಿತ್ತು ,ಹಾಗಾದ್ರೆ 15+15=30 ಕೋಟಿ ಕಿಲೋಮೀಟರ್ ಗಳ ,ದೂರದಿಂದ ಸ್ಥಾನಾಂತರ ಅಭ್ಯಾಸ ಮಾಡಿದ ಹಾಗೆ ಆಯ್ತು ನೋಡಿ , ಈ ಮೂಲಕ ಅವನು ಭೂಮಿಯ ಕಕ್ಷೆಯ ಎರಡು ತುದಿಗಳಿಂದ ನಕ್ಷತ್ರಗಳನ್ನು ನೊಡಿದ ಹಾಗೆ ಆಯ್ತು, ಅವನಿಗೂ ಒಮ್ಮೇಗೆ ಯಶಸ್ಸು ಸಿಗಲಿಲ್ಲ ಪ್ರಾರಂಭದಲ್ಲಿ ಅವನು ನೋಡಿದ ಕೆಲವು ತಾರೆಗಳು ಭೂಮಿಯ ಕಕ್ಷೆಯಿಂದಲೂ ಸ್ಥಾನಾಭಾಸ ಸಿಗದಷ್ಟು ದೂರದಲ್ಲಿದ್ದವು, ಆದರೆ 61- ಸಿಗ್ನಿ ಎನ್ನುವ ತಾರೆ ಸುಮಾರು 0.3 ಸೆಕೆಂಡ್ ನಷ್ಟು ಸ್ಥಾನಾಭಾಸ ತೋರಿತು ,ಅಂದರೆ

ಒಂದು ಡಿಗ್ರೀಯ 3600 ನೇ ಒಂದು ಭಾಗ X 0.3 ಮಾತ್ರ ಆದ್ರೂ ಇದು ಉತ್ತಮ ಎನ್ನಿಸಿತು



ಈ ಮೂಲಕ 61- ಸಿಗ್ನಿ ತಾರೆ ಹಾಗು ಸೂರ್ಯನ ನಡುವೆ ದೂರ

ಸುಮಾರು=1.3 X10^14 ಕಿಲೊಮೀಟರ್ ಎಂದು ಅಂದಾಜುಮಾಡಿದರು




ಹೀಗೆ ನಕ್ಷತ್ರಗಳ ದೂರವನ್ನು ಪತ್ತೆ ಮಾಡಿದ್ರು,

ಹಾಗದರೆ ಈ ದೂರವನ್ನು ಕಿಲೋಮೀಟರ್ ಗಳಲ್ಲಿ ಅಳೆಯೊಕೆ ಆಗಲ್ಲ

ಬಿಲಿಯನ್,ಟ್ರಿಲಿಯನ್,ಕಿಲೋಮೀಟರ್ ಗಳನ್ನು ಮೀರಿಸಿಬಿಡುತ್ತೆ ಅಲ್ವಾ, ಅದಕ್ಕೆ ತಾರೆಗಳ ದೂರವನ್ನು ಅಳೆಯಲು ಜ್ಯೋತಿರ್ವರ್ಷ ಅನ್ನೋ ಮಾನವನ್ನು ಬಳಸುತ್ತಾರೆ,ಒಂದು ಜ್ಯೊತಿರ್ವರ್ಷ ಅಂದರೆ ಬೆಳಕು ಒಂದು ವರ್ಷದಲ್ಲಿ ಕ್ರಮಿಸುವ ದೂರ. ಅಂದರೆ-ಸೆಕೆಂಡಿಗೆ 3 ಲಕ್ಷ ಕಿಲೋಮೀಟರ್ ಕ್ರಮಿಸುವ ಬೆಳಕು ಒಂದು ವರ್ಷದಲ್ಲಿ ಸುಮಾರು 9.4 ಟ್ರಿಲಿಯನ್ ಕಿಲೋಮೀಟರ್ ಕ್ರಮಿಸುತ್ತದೆ, ಈ ದೂರವೆ Light Year ,

-- ತಾರೆಗಳ ದೂರ ಅಳೆಯೋಕೆ ಇನ್ನೂ ಹಲವು ವಿಧಾನಗಳಿವೆ,ಇನ್ನೂ ಹಲವು ಮಾನದಂಡಗಳಿವೆ ಅದರ ಬಗ್ಗೆ ಇನ್ನೊಮ್ಮೆ ಹೇಳುತ್ತೇನೆ,ತಾರೆಗಳ ಬಗ್ಗೆ ಇನ್ನೂ ಹಲವು ವಿಸ್ಮಯಕರ ವಿಚಾರಗಳನ್ನು ತಿಳಿಸುತ್ತೇನೆ ಅಲ್ಲಿಯವರೆಗೂ ಎಲ್ಲರಿಗೂ ಮತ್ತೋಮ್ಮೆ ದಸರಾ-ದೀಪಾವಳಿ ಶುಭಾಶಯಗಳು

ಪಟಾಕಿ ಕಡಿಮೆ ಬಳಸಿ,ಪ್ರವಾಹ ಸಂತ್ರಸ್ತರಿಗೆ ಸ್ಪಂದಿಸಿ, ದೀಪ ಉರಿಸಿ, ಬೆಳಕು ನೀಡಿ,

ಹಾಗೆ ನಮ್ಮನ್ನೂ ನೋಡಿ ಆನಂದಿಸಿ

ಬೈ,ಬೈ,,,