Friday, October 9, 2009

ನಕ್ಷತ್ರಕಡ್ಡಿ ಹಾಗು ದೂರದ ನಕ್ಷತ್ರ,

ಹಲೊ ನಮ್ಮ ಕಡೆಗೂ ಸ್ವಲ್ಪ ನೊಡ್ರಿ! ಪಟಾಕಿ ಜೊತೆಗೆ ನಮ್ಮ ಕಡೆಗೂ ಸ್ವಲ್ಪ ಗಮನ ಕೊಡ್ರಿ

ಎಲ್ಲರಿಗೂ ದಸರಾ-ದೀಪಾವಳಿ ಶುಭಾಶಯಗಳು

ಯಾರದು? ಅಂದ್ರಾ

ನಾವೆ ಕಣ್ರೀ ನಿಮ್ಮ ತಲೆಮೇಲೆ, ಭೂಮಿಮೆಲೆ ,ನಿಮ್ಮಿಂದ ಅತೀ ದೂರದಲ್ಲಿರೊ ಅಸಂಖ್ಯ ನಕ್ಷತ್ರಗಳು

scientific ಆಗಿ ಹೇಳೊದಾದ್ರೆ remotest objects

ಇನ್ನು ಮುಂದೆ ದೀಪಾವಳಿಗೆ ಮುಂಚೆ ಪಟಾಕಿ ಬಣ್ಣ,ಚಿತ್ತಾರ ನೊಡಿ ಆನಂದಿಸೋ ಮುನ್ನಾ

ಪ್ರಕೃತಿ ಈ ಸೃಷ್ಟಿ ವೈಭವ ತಿಳಿಯೊ ಪ್ರಯತ್ನ ಮಾಡಿ

ದೀಪಾವಳಿ-ನಕ್ಷತ್ರಕಡ್ಡಿ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ ಆದರೆ ನಕ್ಷತ್ರಗಳ ಬಗ್ಗೆ ಸಹಾ ಎಲ್ಲರಿಗೂ ತಿಳಿದಿರಬೇಕು


--ನಕ್ಷತ್ರ ಗಳು ಅನಾದಿ ಕಾಲದಿಂದಾನೂ ಮಾನವನ ಕೊತೂಹಲಕ್ಕೆ ಸರಕಾಗಿವೆ

ಪ್ರಕೃತಿಯ ನಿಗೂಢ-ವಿಸ್ಮಯಗಳಾಗಿವೆ ,ಆದ್ರೂ ಈ ಮಾನವನಿಗೆ ಎನಾದ್ರೂ ತಿಳಿದುಕೊಳ್ಳಬೇಕು ಅನ್ನೊ ಹಂಬಲ ಇದೆಯಲ್ಲಾ ಅದು ,ಈ ರಹಸ್ಯಮಯ ಲೊಕದ ಹಲವು ವಿಷಯಗಳನ್ನು ಪತ್ತೆ ಮಾಡಿದೆಹಾಗಾದ್ರೆ ಇನ್ನು ಮುಂದೆ ನಮ್ಮ ಅಂದ್ರೆ ನಕ್ಷತ್ರಗಳ ಬಗ್ಗೆ ಹಲವು ವಿಷಯ ತಿಳಿಸ್ತೀನಿ


ಈ ಬಾರಿ ತಿಳಿದುಕೊಳ್ಳೊಣ ನಕ್ಷತ್ರಗಳ ದೂರಗಳನ್ನು ಹೇಗೆ ಪತ್ತೆ ಮಾಡಿದ್ರೂ ಅಂತ

ನಿಮ್ಮ ಹತ್ರಾ ಇರೂ ಪುಸ್ತಕದ ಉದ್ದವನ್ನೇನೊ ಸ್ಕೆಲಲ್ಲಿ ಅಳೀಬಹುದು , ಸೈಟಿನ ಉದ್ದವನ್ನ ಟೇಪಲ್ಲಿ

ಅಳೀಬಹುದು ,ಶಿವಮೊಗ್ಗದಿಂದ ಬೆಂಗಳೂರಿಗಿರೂ ದೂರವನ್ನೂ ಅಳೀಬಹುದು

ಇಡೀ ಭೂಮಿ ವಿಸ್ತಾರವನ್ನೂ ಹೇಗೋ ತಿಳಿದುಕೊಳ್ಳಬಹುದು ,ಆದ್ರೆ


ನಕ್ಷತ್ರಗಳು ಎಷ್ಟು ದೂರದಲ್ಲಿದಾವೆ ಅಂತ ಹೇಳೊದು ಹೆಗಪ್ಪಾ? ನಮ್ಮ ಸೂರ್ಯನಿಂದಾನೆ ಬೆಳಕು ಭೊಮಿ ತಲಪುವುದಿಕ್ಕೆ 8.3 ನಿಮಿಷ ಬೇಕು ನಮ್ಮ ಹತ್ತಿರದ ನಕ್ಷತ್ರ ಪ್ರಾಕ್ಸಿಮಾ-ಸೆಂಟಾರಿಯಿಂದ ಬೆಳಕು ನಮ್ಮನ್ನು ತಲಪುವುದಿಕ್ಕೆ ಬರೋಬ್ಬರಿ ನಾಲ್ಕೂವರೆ ವರ್ಷಗಳು ಬೇಕು ಅದರ ಬಗ್ಗೆ ಅಮೇಲೆ ಹೇಳುತ್ತೇನೆ ಆದ್ರೂ ಅಂದಿನವರು ಇದನ್ನೆಲ್ಲಾ ಹೇಗೆ ಪತ್ತೆ ಮಾಡಿದರು ಅಂತ ಹೇಳ್ತೀನಿ ಕೇಳಿ

ಅದೂ ಕೂಡ ಹಲವು ನೂರು ವರ್ಷಗಳ ಹಿಂದೆ

ಯಾವುದೇ ,MODERN INSTRUMENTS, ಕಂಪ್ಯೂಟರ್ ಇಲ್ಲದ ದಿನಗಳಲ್ಲಿ

ಆದ್ರೂ ಅಂದಿನ ಜನ ಇದನ್ನು ಕಂಡು ಹಿಡಿದರು,ಕೇವಲ ತಮ್ಮ ಬುದ್ದಿ, ಹಾಗು ಗಣಿತದ ಚಾತುರ್ಯದಿಂದ

ಹೇಗೆ ಅಂತ ಹೇಳ್ತೀನಿ ಕೇಳಿ---


ಗಣಿತದಲ್ಲಿ ಒಂದು ವೃತ್ತದಲ್ಲಿನ ಕಂಸದ ಉದ್ದ(length of arc) ಹಾಗು ಮತ್ತೋಂದು ಕೋನ(angle) ಗೊತ್ತಿದ್ದರೆ ಆ ವೃತ್ತದ ತ್ರೀಜ್ಯವನ್ನು(radius)

(ಕೇಂದ್ರದಿಂದ ಕಂಸಕ್ಕಿರುವ ದೂರ) ಕಂಡುಹಿಡಿಯಬಹುದು ,ವಿವರಿಸುತ್ತೇನೆ ಕೇಳಿ

l = ಕಂಸದ ಉದ್ದ r = ತ್ರೀಜ್ಯ,

ಹಾಗು A , B ಎರಡು ಬಿಂದುಗಳಿಂದ ದಿಂದ ಉಂಟಾಗಿರುವ ಕೋನ ’೦’ ಎಂದಿಟ್ಟುಕೊಳ್ಳಿಈಗ ಸಮಿಕರಣ l=r0 ದಿಂದ 'r' ತ್ರೀಜ್ಯದ ಉದ್ದವನ್ನು ಕಂಡುಹಿಡೀಬಹುದು

ಈಗ ನಕ್ಷತ್ರಗಳಿಗೆ ಇದನ್ನು ಅನ್ವಯಿಸೋದು ಹೇಗೆಒಂದು ನಕ್ಷತ್ರ ಒಮ್ಮೆ ಒಂದು ಸ್ಥಳದಿಂದ ಉಂಟು ಮಾಡಿರೋ ಕೋನವನ್ನು ಅಳೆಯೂದು ಅದೇ ನಕ್ಷತ್ರದ ಕೋನವನ್ನು ಇನ್ನೊಂದು ಸ್ಥಳದಿಂದ ಅಳೆಯೋದು, ಆ ಎರೆಡು ಸ್ಥಳಗಳ ನಡುವಿನ ದೂರ ಗೊತ್ತಿದ್ರೆ, ಬಂದಿರೋ ಕೊನದ ಸಹಾಯದಿಂದ ಲೆಕ್ಕಚಾರ ಮಾಡಿ ಕಂಡುಹಿಡೀಬಹುದು ಅಂತ ಹಿಂದಿನ ಕಾಲದ ವಿಜ್ಞಾನಿಗಳು ಭಾವಿಸಿದ್ರು , ಆದ್ರೆ ನಕ್ಷತ್ರಗಳು ಅವರ ಊಹೆಗೂ ನಿಲುಕದಷ್ಟು ದೂರದಲ್ಲಿವೆ ಅಂತ ಅವರಿಗೆ ಗೊತ್ತೆ ಇರಲಿಲ್ಲ ---ಆಗ ಏನಾಯ್ತು ಗೊತ್ತಾ

--- ದೂರವನ್ನು ಅಂದರೆ ಕೋನ ಅಳೆದ ಎರೆಡು ಸ್ಥಳಗಳ ದೂರ ಎಷ್ಟೇ ವಿಸ್ತರಿಸಿದರೂ ಬರುತ್ತಿದ್ದ ಕೋನ ಮಾತ್ರ ತುಂಬಾ ಚಿಕ್ಕದಾಗಿತ್ತು, ,ಆದ್ರೂ ಅಂದಿನ ವಿಜ್ಞಾನಿಗಳು ಬಿಡಲಿಲ್ಲ ಸೆಕ್ಸಡಂಟ್ ಅನ್ನೋ ಉಪಕರಣ ಬಳಸಿ ಚಿಕ್ಕ ಕೊನವನ್ನೋ ಅಳೆಯೋ ಪ್ರಯತ್ನ ಮಾಡಿದರು ಆದ್ರೂ ಅದು ಒಂದು ಡಿಗ್ರೀ ಕೋನದ ಮಿಲಿಯನ್ ಗಟ್ಟಲೇ ಚಿಕ್ಕದಾಗಿತ್ತು ಆದ್ರೂ ,ಇಷ್ತು ಚಿಕ್ಕ ಕೋನದ ಸಹಾಯದಿಂದ ಯಾವ ನಕ್ಷತ್ರದ ದೂರಾನೂ ಅಂದಾಜು ಮಾಡೂಕು ಅಗ್ಲಿಲ್ಲ, ಸರಿ ಈಗ ಏನು ಮಾಡೋದು ಕೋನ ಅಳೆಯೂಕೆ ಆಯ್ಕೆ ಮಾಡಿದ ಜಾಗಗಳ ದೂರ ಜಾಸ್ತಿ ಮಾಡ್ತಾ ಹೋಗೊದು, ಸರಿ ದೂರ ಜಾಸ್ತೀ ಮಾಡ್ತಾ ಹೋದ್ರು, ದೂರ ದೂರಕ್ಕೆ ಹೋಗಿ ಕೋನ ಅಳೆದರು ಬೇರೆ ಬೇರೆ ಊರಿಗೆ ಹೊಗಿ ಕೊನ ಅಳೆದರು, ದೇಶ ಖಂಡಗಳ ದೂರದಿಂದ ಕೊನ ಅಳೆದರೂ ಬರುತ್ತಿದ್ದ ಉತ್ತರ ತುಂಬಾ ಚಿಕ್ಕದಾಗಿತ್ತು

ಕೊನೇಗೆ ಭೂಮಿಯ ಎರೆಡು ಬದಿಗೆ ಹೊದ್ರೂ , ನಮಗೆ ಲೆಕ್ಕಕ್ಕೆ ಸಿಗೊವಷ್ಟು ದೊಡ್ಡ ಕೋನ ಬರೋದಿಲ್ಲಾ ಅಂತ ಅವರಿಗೆ ಗೊತ್ತಾಯ್ತು, ಹಾಗಾದ್ರೆ ಏನು ಮಾಡೊದು ಭೂಮಿ ಇಂದ ಹೊರಗೆ ಹೋಗೊ ಮಾತಿನ ಬಗ್ಗೆ ಯೋಚಿಸೋದಾದ್ರೆ ಅಂದಿನ ಕಾಲದಲ್ಲಿ ರಾಕೆಟ್ , ಮ್ಯಾನ್-ಮೇಡ್-ಸೆಟಲೈಟ್ ಇರಲಿ ವಿಮಾನಗಳನ್ನೂ ಆಗ ಕಂಡುಹಿಡಿದಿರಲಿಲ್ಲವಲ್ಲಾ

ಏನು ಮಾಡೊದು ಈಗ ?

ನೀವೇ ಅಗಿದ್ರೆ ಏನು ಮಾಡ್ತಾ ಇದ್ರೀ ಯೋಚಿಸಿ ನೊಡೋಣ?ಹಾಗಿರುವಾಗ 1938 ರಲ್ಲಿ "ಫ಼್ರೆಡ್ರ್ರಿಕ್ ವಿಲ್ಹೆಲ್ಮ್ ಬೆಸಲ್" ಎನ್ನುವ ಜರ್ಮನ್ ಖಗೋಳಶಾಸ್ತ್ರಜ್ಞ ಬೇರೆ ತರಹ ಯೋಚಿಸಿದ

ವರ್ಷದಲ್ಲಿ ಎರೆಡು ಬಾರಿಗೆ ಒಂದು ನಕ್ಷತ್ರದ ಸ್ಥಾನಾಂತರದ ಲೆಕ್ಕ ಹಾಕಿದ -ಉದಾಹರಣೆಗೆ ಮಾರ್ಚ್ ಗೆ ಒಮ್ಮೆ ಸೆಪ್ಟೆಂಬರ್’ಗೆ ಒಮ್ಮೆ ಎಂದಿಟ್ಟುಕೋಳ್ಳೋಣ,

-ಭೂಮಿ ಏನಂದ್ರೂ ಸೂರ್ಯನನ್ನು ಸುತ್ತುತ್ತೆ ಅಲ್ವಾ, ಭೂಮಿಗೂ ಸೂರ್ಯನಿಗೂ ಇರೊ ದೂರ ಸುಮಾರು 15 ಕೋಟಿ ಕಿಲೋಮೀಟರ್ ಅಂತಾ ಏನಂದ್ರೂ ಆಗ ಗೊತ್ತಿತ್ತು ,ಹಾಗಾದ್ರೆ 15+15=30 ಕೋಟಿ ಕಿಲೋಮೀಟರ್ ಗಳ ,ದೂರದಿಂದ ಸ್ಥಾನಾಂತರ ಅಭ್ಯಾಸ ಮಾಡಿದ ಹಾಗೆ ಆಯ್ತು ನೋಡಿ , ಈ ಮೂಲಕ ಅವನು ಭೂಮಿಯ ಕಕ್ಷೆಯ ಎರಡು ತುದಿಗಳಿಂದ ನಕ್ಷತ್ರಗಳನ್ನು ನೊಡಿದ ಹಾಗೆ ಆಯ್ತು, ಅವನಿಗೂ ಒಮ್ಮೇಗೆ ಯಶಸ್ಸು ಸಿಗಲಿಲ್ಲ ಪ್ರಾರಂಭದಲ್ಲಿ ಅವನು ನೋಡಿದ ಕೆಲವು ತಾರೆಗಳು ಭೂಮಿಯ ಕಕ್ಷೆಯಿಂದಲೂ ಸ್ಥಾನಾಭಾಸ ಸಿಗದಷ್ಟು ದೂರದಲ್ಲಿದ್ದವು, ಆದರೆ 61- ಸಿಗ್ನಿ ಎನ್ನುವ ತಾರೆ ಸುಮಾರು 0.3 ಸೆಕೆಂಡ್ ನಷ್ಟು ಸ್ಥಾನಾಭಾಸ ತೋರಿತು ,ಅಂದರೆ

ಒಂದು ಡಿಗ್ರೀಯ 3600 ನೇ ಒಂದು ಭಾಗ X 0.3 ಮಾತ್ರ ಆದ್ರೂ ಇದು ಉತ್ತಮ ಎನ್ನಿಸಿತುಈ ಮೂಲಕ 61- ಸಿಗ್ನಿ ತಾರೆ ಹಾಗು ಸೂರ್ಯನ ನಡುವೆ ದೂರ

ಸುಮಾರು=1.3 X10^14 ಕಿಲೊಮೀಟರ್ ಎಂದು ಅಂದಾಜುಮಾಡಿದರು
ಹೀಗೆ ನಕ್ಷತ್ರಗಳ ದೂರವನ್ನು ಪತ್ತೆ ಮಾಡಿದ್ರು,

ಹಾಗದರೆ ಈ ದೂರವನ್ನು ಕಿಲೋಮೀಟರ್ ಗಳಲ್ಲಿ ಅಳೆಯೊಕೆ ಆಗಲ್ಲ

ಬಿಲಿಯನ್,ಟ್ರಿಲಿಯನ್,ಕಿಲೋಮೀಟರ್ ಗಳನ್ನು ಮೀರಿಸಿಬಿಡುತ್ತೆ ಅಲ್ವಾ, ಅದಕ್ಕೆ ತಾರೆಗಳ ದೂರವನ್ನು ಅಳೆಯಲು ಜ್ಯೋತಿರ್ವರ್ಷ ಅನ್ನೋ ಮಾನವನ್ನು ಬಳಸುತ್ತಾರೆ,ಒಂದು ಜ್ಯೊತಿರ್ವರ್ಷ ಅಂದರೆ ಬೆಳಕು ಒಂದು ವರ್ಷದಲ್ಲಿ ಕ್ರಮಿಸುವ ದೂರ. ಅಂದರೆ-ಸೆಕೆಂಡಿಗೆ 3 ಲಕ್ಷ ಕಿಲೋಮೀಟರ್ ಕ್ರಮಿಸುವ ಬೆಳಕು ಒಂದು ವರ್ಷದಲ್ಲಿ ಸುಮಾರು 9.4 ಟ್ರಿಲಿಯನ್ ಕಿಲೋಮೀಟರ್ ಕ್ರಮಿಸುತ್ತದೆ, ಈ ದೂರವೆ Light Year ,

-- ತಾರೆಗಳ ದೂರ ಅಳೆಯೋಕೆ ಇನ್ನೂ ಹಲವು ವಿಧಾನಗಳಿವೆ,ಇನ್ನೂ ಹಲವು ಮಾನದಂಡಗಳಿವೆ ಅದರ ಬಗ್ಗೆ ಇನ್ನೊಮ್ಮೆ ಹೇಳುತ್ತೇನೆ,ತಾರೆಗಳ ಬಗ್ಗೆ ಇನ್ನೂ ಹಲವು ವಿಸ್ಮಯಕರ ವಿಚಾರಗಳನ್ನು ತಿಳಿಸುತ್ತೇನೆ ಅಲ್ಲಿಯವರೆಗೂ ಎಲ್ಲರಿಗೂ ಮತ್ತೋಮ್ಮೆ ದಸರಾ-ದೀಪಾವಳಿ ಶುಭಾಶಯಗಳು

ಪಟಾಕಿ ಕಡಿಮೆ ಬಳಸಿ,ಪ್ರವಾಹ ಸಂತ್ರಸ್ತರಿಗೆ ಸ್ಪಂದಿಸಿ, ದೀಪ ಉರಿಸಿ, ಬೆಳಕು ನೀಡಿ,

ಹಾಗೆ ನಮ್ಮನ್ನೂ ನೋಡಿ ಆನಂದಿಸಿ

ಬೈ,ಬೈ,,,
1 comment:

pratiphalana said...

ಮುನ್ನುಡಿ

---ನಮಸ್ಕಾರ

ಪ್ರಶ್ನಿಸುವ ಮನೊಬಾವ ಇದೆಯಲ್ಲಾ ಅದು ಹಲವು ವಿಷಯಗಳ ಅಳವನ್ನೂ ಅರಿಯದೇ ಬಿಡೊದಿಲ್ಲ
ಅಬಿರುಚಿ ಹಾಗು ಆಸಕ್ತಿ ಇದ್ದರೆ ಎಂಥಾ ಸವಾಲುಗಳಿಗೂ ಉತ್ತರ ಹುಡುಕಬಹುದು ಎಂದು ನಮ್ಮ ವಿಜ್ಞಾನಿಗಳು,ಸಂಶೋಧಕರು ತೊರಿಸಿಕೊಟ್ಟಿದ್ದಾರೆ


ನಾನು ಬ್ಲಾಗ್ ಪ್ರಪಂಚಕ್ಕೇ ಅಕಸ್ಮಿಕವಾಗಿ ಪ್ರವೇಶಿಸಿದೆ(ಕನ್ನಡಪ್ರಭದ ಬ್ಲಾಗಾಯಣದಿಂದ)

ಬ್ಲಾಗ್ ಅಂದರೆ ಏನು ಅಂತಾ ಅರ್ಥವಾದ ಮರುದಿವಸದಿಂದಲೇ ನನ್ನದೊಂದು ಬ್ಲಾಗ್ ಪ್ರಾರಂಭಿಸಬೇಕು ಅಂತಾ ನಿರ್ಧರಿಸಿದೆ

ಅದರ ಮೊದಲ ಹೆಜ್ಜೆ ಇದು

ದಾರಿ ತೋರಿಸಿದರೆ ಸಾಕು

ಓಡುತ್ತಿರುವ ವಿಜ್ಞಾನದ ಬೆಳಕನ್ನು ಹೀಂಬಾಲಿಸಬಹುದುಕನ್ನಡದ ಬ್ಲಾಗುಗಳು ಕಡಿಮೆ ಸಂಖ್ಯೆಯಲ್ಲಿದ್ದರೂ ಅಚ್ಚುಕಟ್ಟಾಗಿವೆ

ಉತ್ತಮ ಅಭಿರುಚಿಯಿಂದ ಕೂಡಿವೆ

ಖಭೌತವಿಜ್ಞಾನವೆಂದರೆ ನನಗೆ ಅಚ್ಚುಮೆಚ್ಚು

ಹಾಗದರೆ ನಾನು ಬಾಲ್ಯದಿಂದ ಇಂದಿನವರೆಗೂ ಆಸಕ್ತಿಯಿಂದ ಕೇಳಿ,ಪ್ರಶ್ನಿಸಿ,ತಿಳಿದು ಅರಿತಿರೊ

ಹಲವು ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆಪ್ರತಿ ದಿನದ ಎಷ್ಟೊಂದು ಘಟನೆಗಳಲ್ಲಿ ನಾವು ವಿಜ್ಞಾನದ ತತ್ವಗಳಿರೋದನ್ನ ಗಮನಿಸಬಹುದು

ಆದರೆ ಅದನ್ನ ಯಾಕೆ ತಲೆಕೆಡಿಸಿಕೊಳ್ಲಬೇಕು ಅಂತಾ ನಿರ್ಲಕ್ಷಿಸದೆ ಸರಿಯಾಗಿ ಅಧ್ಯಯನ ಮಾಡಿದರೆ

ಅವುಗಳ ಉತ್ತರಗಳೂ ಸಹ ಅಲ್ಲಿರುತ್ತವಂತೆ ಅದನ್ನು ಅರಿಯುವ ತಾಳ್ಮೆ, ವಿವೇಚನೆ ನಮಗಿರಬೇಕಷ್ಟೇ

ನಮ್ಮ ಜಗತ್ತು ಇಷ್ಟು ಸುಂದರವಾಗಿದೆ ಎಂದು ತಿಳಿಯಲು ಇದು ಸಾಕು

ಪ್ರ್ರಾರಂಭದಲ್ಲಿ ಬಾಲಿಶವಾದ ಭಾಷೆಯನ್ನು ಬಳಸಿದ್ದೇನೆ

ನಿಮ್ಮ ಸಲಹೆ-ಸೂಚನೆಗಳೇನೇ ಇರಲಿ ಕಮೇಂಟ್ ವಿಭಾಗದಲ್ಲಿ ತಿಳಿಸಲು ಮರೀಬೇಡಿ

ಅದೇ ವಿಜ್ಞಾನವನ್ನು ಪ್ರತಿಫಲಿಸುವ ನನ್ನ ಬ್ಲಾಗ್ ಗೆ ನೀವು ನೀಡುವ ಪ್ರತಿಫಲಇಂತಿ

----ಪ್ರತಿಫಲನ