Monday, August 29, 2011

ನಿಮಗೆ ವಸ್ತುವಿನ  ವಿವಿಧ ಸ್ಥಿತಿಗಳು ಯಾವುವು ಎಂದು ಯಾರಾದರೂ ಕೇಳಿದರೆ ನೀವೆಲ್ಲರೂ ಬಲ್ಲಿರಿ
ಘನ ,ದ್ರವ ,ಅನಿಲ ಎಂದು  ಅದಲ್ಲದೆ ತಾರೆಗಳಲ್ಲಿ ಪ್ಲಾಸ್ಮಾ  ಸ್ಥಿತಿ ಸಹ ಇರುತ್ತದೆ ಎಂದು ನಿಮಗೆ ಗೊತ್ತು

ನಾನಿಲ್ಲಿ ನಿಮಗೆ ಮತ್ತೊಂದು ದೃಷ್ಟಾಂತವನ್ನು ವಿವರಿಸುತ್ತೇನೆ ಬನ್ನಿ
ಅತೀವ ಗುರುತ್ವದಿಂದ ಕುಗ್ಗುವ ನ್ಯೂಟ್ರಾನ್ ತಾರೆ ತನ್ನ ಸಾಂದ್ರತೆಯನ್ನು ವಿಪರೀತ ಹೆಚ್ಚಿಸಿಕೊಳ್ಳುತ್ತದೆ 
ಅದರೊಟ್ಟಿಗೆ ಅದರಲ್ಲಿ ಮತ್ತೋಂದು ಪ್ರಕ್ರಿಯೆ ಜರಗುತ್ತದೆ 

ತಾರೆಯಲ್ಲಿರುವ ದ್ರವ್ಯದಲ್ಲಿನ ಎಲ್ಲಾ ಎಲೆಕ್ರಾನ್ ಹಾಗು ಪ್ರೋಟಾನ್ ಗಳು ತಮ್ಮ ಆವೇಶಗಳನ್ನು ಕಳೆದುಕೋಳ್ಳುತ್ತವೆ 
ಈ ಮೂಲಕ ಆ ನ್ಯೂಟ್ರಾನ್ ತಾರೆಯಲ್ಲಿ ಕೇವಲ ನ್ಯೂಟ್ರಾನ್ ಗಳು ಮಾತ್ರ  ಇರುತ್ತವೆ ಅದ್ದರಿಂದಲೇ  ಇರಬೇಕು ಈ ಕಾಯವನ್ನು ನ್ಯೂಟ್ರಾನ್ ತಾರೆ ಎನ್ನುವುದು
ಕೇವಲ ನ್ಯೂಟ್ರಾನ್ ಗಳಿಂದಾದ ಗೋಳವೊಂದು ಹೇಗಿರಬಹುದು? ಕಲ್ಪಿಸಿಕೊಳ್ಳುವುದು ಕಠಿಣವಾಗಬಹುದು
ಪ್ರಕೃತಿಯಲ್ಲೂ ಅಷ್ಟೆ ಪ್ರಬಲರೇ ಗೆಲ್ಲಬೇಕೆಂದಿಲ್ಲ
ನೋಡಿ ಹೇಗಿದೆ
Nuclear Force ಎನ್ನುವುದು ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ಬಲವಾಗಿದೆ Gravitational Force ಎನ್ನುವುದು ವಿಶ್ವದಲ್ಲೇ ಅತ್ಯಂತ ದುರ್ಬಲವಾದ ಬಲವಾಗಿದೆ ಆದರೂ ನೋಡಿ ಹೇಗೆ ಈ ಗುರುತ್ವ ವಿಶ್ವವನ್ನೆ ನಿಯಂತ್ರಿಸಬಲ್ಲದು ಪರಮಾಣು ಸಂರಚನೆ ಎಂಬ ಮೂಲಭೂತ ತತ್ವವನ್ನೇ ಬದಲಿಸಬಲ್ಲದು ಈ ಗುರುತ್ವ 

ಆದರೆ ಇದರಲ್ಲಿ ಇನ್ನೂ ಹಲವು ಸ್ವಾರಸ್ಯಗಳಿವೆ, ಹಲವು ಬಿಡಿಸಲಾಗದ ರಹಸ್ಯಗಳಿವೆ ಅದನ್ನು ಮುಂದಿನ ಸಂಚಿಕೆಯಲ್ಲಿತಿಳಿಸುವೆ

Saturday, May 14, 2011

ನಿಮಗೆ ಪಿರಮಿಡ್ ಗೊತ್ತಾ?

ನಿಮಗೆ ಪಿರಮಿಡ್ ಗೊತ್ತಾ? ಅದೇನು ಮಹಾ ಪುಟಾಣಿ ಮಕ್ಕಳಿಗೂ ಗೊತ್ತು ಬಿಡಿ ಅನ್ನಬಹುದು. ಹಾಗಾದರೆ ಅದು ಎಷ್ಟು ದೊಡ್ಡದು ಅಂತಾ ಗೊತ್ತಾ? ಯಾವ ಪಿರಮಿಡ್ ಹೇಳಿ? ಅದೇ ಈಜಿಪ್ಟಿನ ಗೀಜಾ ಪಿರಮಿಡ್. ಅದರಲ್ಲಿ ಒಂದಾದ ಖಪೂ ಅಥವಾ ಖೆಫ್ರನ್ ನ ಪಿರಮಿಡ್ ನಿರ್ಮಿಸಲು ಸುಮಾರು ಮುನ್ನೂರು ವರ್ಷ ತಗುಲಿತಂತೆ ಅದರ ಬಗ್ಗೆಯೂ ಹಲವು ರಹಸ್ಯಗಳಿವೆ ಬಿಡಿ. 
ಹಾಗಾದರೆ ಈ ಪಿರಮಿಡ್ ಎಷ್ಟು ದೊಡ್ಡದಾಗಿರಬಹುದು ,ಈ ಪಿರಮಿಡ್ ನ ಪೂರ್ಣ ಪ್ರಮಾಣದ ಚಿತ್ರ ತೆಗೆಯಬೇಕೆಂದರೆ ಪಿರಮಿಡ್ ತಳದಿಂದ ಸುಮಾರು ಒಂದು ಕಿಲೋಮೀಟರ್ ದೂರ ನಿಂತು ಕ್ಯಾಮರಾ ಕ್ಲಿಕ್ಕಿಸಬೇಕಂತೆ ಅದರ ಕೆಲವು ಕಲ್ಲುಗಳೂ ಹದಿನೈದು ಟನ್ ಭಾರವಿದೆಯಂತೆ 

ಈ ಪಿರಮಿಡ್ ಬಗ್ಗೆ ಇವನ್ಯಾಕೆ ಇಲ್ಲಿ ಪ್ರಸ್ತಾಪಿಸುತ್ತಿದ್ದಾನೆ ಅಂತ ನಿಮಗೆ ಅನ್ನಿಸಬಹುದು 
ಅದು ಕಳೆದ ಬಾರಿ ನಾ ಕೇಳಿದ ಪ್ರಶ್ನೆಗೆ ಉತ್ತರಿಸಲು?

ನ್ಯೂಟ್ರನ್-ತಾರೆಯಲ್ಲಿ ಒಂದು ಕ್ಯೊಬಿಕ್ ಸೆಂಟಿಮೀಟರ್ ನಷ್ಟು ಅಂದರೆ ಒಂದು ಚಮಚೆಯಷ್ಟು ದ್ರವ್ಯ ಎಷ್ಟು ತೂಗಬಹುದು ಎಂದಿದ್ದೆ .

ಒಂದು ಚಮಚೆ ನ್ಯೂಟ್ರಾನ್ ತಾರೆಯ ದ್ರವ್ಯವನ್ನು ತಕ್ಕಡಿಯ ಒಂದೆಡೆ ಇಟ್ಟರೆ ಅದನ್ನು ಎತ್ತಲು ತಕ್ಕಡಿಯ ಇನ್ನೋಂದೆಡೆ 
ಕೇವಲ
ಕೇವಲ!
ಕೇವಲ!!
ಕೇವಲ!!!
ಕೇವಲ!!!!!!!!

ಒಂಭೈನೂರು ಪಿರಮಿಡ್ ಗಳನ್ನು ಇರಿಸಬೇಕಾಗುತ್ತೆ
ಅಷ್ಟೆ!

ಮುಂದಿನ ಸಂಚಿಕೆಯಲ್ಲಿ ಮತ್ತೆ ಬರುವೆ !
ಬೈ!
 

Thursday, April 14, 2011

ಏಡಿ ನಿಹಾರಿಕೆಯಲ್ಲೂ ಈ ತರಹದ ಒಂದು ಕಾಯವಿದೆ


ಕಳೆದ ಬಾರಿ ಪ್ರಸ್ತಾಪಿಸಿದ ಕಾಯಗಳನ್ನು ಪಲ್ಸರ್ ಎನ್ನುವರು ಅಂತಾ ನಿಮಗೆಲ್ಲ ತಿಳಿದಿದೆ (Pulsating Radio Stars)
ಏಡಿ ನಿಹಾರಿಕೆಯಲ್ಲೂ ಈ ತರಹದ ಒಂದು ಕಾಯವಿದೆ
ಏಡಿ ನಿಹಾರಿಕೆ ಸೂಪರ್ ನೋವಾ ದಿಂದ ಉಳಿದಿರುವ ಅವಶೇಷ ಅಂತ ನಿಮಗೆ ಗೊತ್ತಿದೆ
ಹಾಗೆ ಅದು ಈಗಲೂ ಸೆಕೆಂಡಿಗೆ ಸುಮಾರು ೧೫ ರಿಂದ ೧೭ ಸಾವಿರ ಕಿಲೋಮೀಟರ್ ವೇಗದಲ್ಲಿ ಹಿಗ್ಗುತ್ತಿದೆಯಂತೆ
ಸೂಪರ್ ನೋವಾ ಸ್ಫೋಟದಿಂದ ಉಳಿದ ಕೇಂದ್ರ ನ್ಯೂಟ್ರಾನ್ ತಾರೆ ಅಂದರೆ ಪಲ್ಸಾರ್ ಆಗಿ ಹೋಗಿದೆ ಇದು ಕೇವಲ ೧೦೫೪ ನೇ ಇಸವಿಯಲ್ಲಿ ಸಂಭವಿಸಿದ ಸೂಪರ್ ನೋವಾದ ಅವಶೇಷ
ಏಡಿ ನಿಹಾರಿಕೆಯ ಕೇಂದ್ರದಲ್ಲಿರುವ ಪಲ್ಸಾರ್ ಅನ್ನು ರೇಡಿಯೋ ದೂರದರ್ಶಕ ಅಥವಾ ಎಕ್ಸ್-ರೆ ದೂರದರ್ಶ್ಕ ದಿಂದ
ಕಾಣಬಹುದು


(Photo-downloaded from net )
ತಾರೆಗಳ ಲೋಕದ ಮತ್ತೋಂದು ತರಲೆ ಪ್ರಶ್ನೆ
ಶ್ವೇತಕುಬ್ಜಗಳು ಅಂದರೆ  White Dwarfs  ಅತೀ ಸಾಂದ್ರಕಾಯಗಳು ಅಂತ ಗೊತ್ತು ಹಾಗೆ ಅವುಗಳಲ್ಲಿನ ಒಂದು ಕ್ಯೂಬಿಕ್-ಸೆಂಟೀಮೀಟರ್ ಗಾತ್ರದ ವಸ್ತು ಭೂಮಿಯ ಮೇಲೆ ಸುಮಾರು 15 ರಿಂದ 40 ಟನ್ ಭಾರವಿರುತ್ತದೆ ಅಂತಲೂ ನಿಮಗೆ ತಿಳಿದಿದೆ
ಈಗ ನಾನು ತಿಳಿಸುತ್ತಿರುವ ನ್ಯೋಟ್ರಾನ್ ತಾರೆಗಳು  White Dwarfs ಗಿಂತಲೂ ಖಂಡಿತಾ ಸಾಂದ್ರ ಕಾಯಗಳಾಗಿರಲೇಬೇಕು
ಹಾಗಾದರೆ ಊಹಿಸಿ ನೋಡೋಣ ನ್ಯೂಟ್ರಾನ್ ತಾರೆಯಲ್ಲಿನ ಒಂದು ಕ್ಯೂಬಿಕ್-ಸೆಂಟೀಮೀಟರ್ ಅಂದರೆ ಒಂದು ಚಮಚೆಯಷ್ಟು ವಸ್ತು ಭೂಮಿಯಲ್ಲಿ ಎಷ್ಟು ಭಾರವಿರಬಹುದು ಅಂತ
ಮುಂದಿನ ಸಂಚಿಕೆಯಲ್ಲಿ ಮತ್ತೆ ಬರುವೆ !
ಬೈ!

Wednesday, April 13, 2011

ಮತ್ತೆ ಬಂದಿರುವೆ ತಾರಲೋಕದ ತರಲೆಗಳನ್ನು ನಿಮ್ಮ ಮುಂದಿಡಲು


ಮತ್ತೆ ಬಂದಿರುವೆ ತಾರಲೋಕದ ತರಲೆಗಳನ್ನು ನಿಮ್ಮ ಮುಂದಿಡಲು(ಅವುಗಳ ಚಿತ್ರವನ್ನು ಹಾಗೆಂದುಕೊಳ್ಳೋಣ)
ಖಗೋಲ ವಿಸ್ಮಯವೋಂದರ ಚಿತ್ರ ನನಗೇಕೋ ಲಭ್ಯವಾಗಲಿಲ್ಲ ದೂರದ ಕಾಯಗಳ ಫೊಟೋ ತೆಗೆಯುವುದು ಸ್ವಲ್ಪ ತ್ರಾಸದಾಯಕ ಅದರೂ ಮತ್ತೆ ಪ್ರಯತ್ನಿಸುವೆ ಚಿತ್ರ ತೆಗೆಯಲು ಸಾದ್ಯವಾದರೆ ನೋಡುವ.
ಆ  ಬಾನಾಗಸದ ವಿಸ್ಮಯ ಏನೆಂದು ದೂರದರ್ಶನ ,ಪತ್ರಿಕೆಯಲ್ಲಿ ನೋಡಿದ್ದೀರ ಎಂದುಕೊಂಡಿರುವೆ
ಕಳೆದ ಬಾರಿ ತಿಳಿಸುತ್ತಿದ್ದೆ ಬಾನಿನಿಂದ ಬರುತ್ತಿದ್ದ ರೇಡಿಯೋ ತರಂಗಗಳ ಬಗ್ಗೆ
ಎಲ್ಲಾ ತಾರೆಗಳೂ ರೇಡಿಯೋ ಅಲೆಗಳನ್ನು ಬಿಡುಗಡೆ ಮಾಡುತ್ತವೆ ನಮ್ಮ ಸೂರ್ಯನೂ ಸಹ. ಅದರ ಪ್ರಸ್ತಾಪವಿರಲಿ,
ನಾನು ತಿಳಿಸಿದ ರೇಡಿಯೋಅಲೆಗಳು ಎಲ್ಲಿನವು ?
ಕೆಲಕಾಲನಂತರ ಪತ್ತೆಯಾದ್ದದ್ದು ಇಷ್ಟು
ಅವು ಯಾವುದೋ ತಿರುಗುವ ಕಾಯಗಳಿಂದ ಬರುತ್ತಿರಬೇಕು ಹಾಗೆ ಅವು ಎಲೆಕ್ಟ್ರಾನುಗಳನ್ನು ನಮ್ಮ Particle Accelerators ಗಳಂತೆ ವಿಪರೀತ ವೇಗದಲ್ಲಿ ಆಗಸದಲ್ಲಿ ಚಿಮ್ಮಿಸುತ್ತಿರಬೇಕು
ಅವು ಏನು?
ಅಧ್ಯಯನದಿಂದ ತಿಳಿದು ಬಂದದ್ದಿಷ್ಟು
ಸೂಪರ್ ನೋವಾ ಆಸ್ಫೋಟನೆಯ ನಂತರವೂ ಕೆಲವೊಮ್ಮೆ ಸ್ಫೋಟಿಸಿದ ತಾರೆಯ ಕೇಂದ್ರ ಉಳಿದಿರುತ್ತದೆ
ಅದು ಸಹ ಮತ್ತೆ ಗುರುತ್ವದಿಂದ ಕುಗ್ಗಲಾರಂಭಿಸುತ್ತದೆ ಆಗ ಅ ತಿರುಳು ಪ್ರಚಂಡ ಸಾಂದ್ರತೆಯ ಕಾಯಗಳಾಗುವುದುಂಟು
ಆ ಕಾಯದ ಹೊರಭಾಗದಲ್ಲಿ ಅಯಾನುಗಳಿದ್ದು ಅವು ಎಲೆಕ್ಟ್ರಾನುಗಳನ್ನು ಚಿಮ್ಮಿಸುತ್ತವೆ ಪ್ರಚಂಡ ಗುರುತ್ವದ ಕಾರಣ ಆ ಕಾಯದ ಕಾಂತಕ್ಷೇತ್ರವೂ ಬಹು ಪ್ರಬಲ. ಈ ರೀತಿಯ ಕಾಯವೊಂದು ಅತೀ ವೇಗವಾಗಿ ನಿಖರ ಆವರ್ತನೆಯಲ್ಲಿ ತಿರುಗುವುದರಿಂದ ರೇಡಿಯೋ ಅಲೆಗಳು ಉಂಟಾಗುತ್ತವೆ
ಈ ರೀತಿಯ ಕಾಯಗಳನ್ನು ಏನೆನ್ನುತ್ತಾರೆ ಅಂತ ನಿಮಗೆ ಗೊತ್ತೆ ಇದೆ
ಆದರೂ ಹೊಸ ವಿಚಾರಗಳು ಗೊತ್ತಿದ್ದರೆ ತಿಳಿಸಿ?
ಇದರ ಬಗ್ಗೆ ಮುಂದಿನ ಸಂಚಿಕೆಯಲ್ಲಿ ತಿಳಿಸುವೆ 
ಬೈ!
(next   post  tomorrow    14 April 2011Thursday  06:00 AM-scheduled )

 

Saturday, March 19, 2011

ಇಂದಿನ ಚಂದಿರನನ್ನು ನೋಡಿದಿರಾ


ಎಲ್ಲರಿಗೂ ಮತ್ತೊಮ್ಮೆ ನಮಸ್ಕಾರಗಳು
ಇಂದಿನ ಚಂದಿರನನ್ನು ನೋಡಿದಿರಾ
ಅಪರೂಪಕ್ಕೋಮ್ಮೆ ಹೀಗೆ ಭುವಿಗೆ ಚಂದಿರ ಸಮೀಪಿಸುವುದುಂಟು
ಅದೇನೋ ಸೂಪರ್ ಮೂನ್ ಭಯವಂತೆ! ಹಾಗೇನೂ ಇಲ್ಲ
ಇಂದು ಅಂದರೆ ೧೯-ಮಾರ್ಚ್ ೨೦೧೧ ರ ಸುಮಾರು ೦೭:೨೦ pm  ನಿಂದ ಚಂದಿರ ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತಾನಂತೆ
ಹಾಗೆ ನಾಳೆ ಬೆಳಿಗ್ಗೆ ಸುಮಾರು ೦೩:೩೦ ಕ್ಕೆ ಚಂದಿರ ಅತೀ ಹೆಚ್ಚು ಪ್ರಕಾಶಮಾನವಾಗುತ್ತಾನಂತೆ
ನಾಳೆ ಚಂದಿರನ  ಫೋಟೋ  ಸಮೇತ  ಬರುವೆ. 
ಜಪಾನ್ ಅಣುಸ್ಥಾವರದ ಸಮಸ್ಯೆ ಬಲು ಶೀಘ್ರವಾಗಿ ಬಗೆಹರಿಯಲಿ ಎಂದು ಬಯಸೋಣ
ಹೋಳಿ ಹಬ್ಬದ ಶುಭಾಷಯಗಳು, ರಾಸಾಯನಿಕಯುಕ್ತ ಬಣ್ಣಗಳ ಬಗ್ಗೆ ಎಚ್ಚರವಿರಲಿ. ಸಾಧ್ಯವಾದರೆ ಅರೋಗ್ಯ-ಪರಿಸರಕ್ಕೆ ಅಪಾಯವಿಲ್ಲದ ನೈಸರ್ಗಿಕ ಬಣ್ಣಗಳನ್ನು ಬಳಸೋಣ

ಹಿಂದಿನ ಸಂಚಿಕೆಯಲ್ಲಿ ತಿಳಿಸಿದ ಬಾನಿನಿಂದ ಬರುತ್ತಿದ್ದ ರೇಡೀಯೋ ತರಂಗಗಳ ಬಗ್ಗೆ ಸದ್ಯದಲ್ಲೆ ತಿಳಿಸುವೆ,ಲೇಖನಳು  ಮುಂದುವರೆಯುತ್ತವೆ ನನಗೂ ಬೇಸರವಾಗುತ್ತೆ ಕಾಯಿಸಲು
ಸದ್ಯದಲ್ಲೆ ಮುಂದುವರೆಸುವೆ
ಮತ್ತೊಮ್ಮೆ ಹೋಳಿ ಹಬ್ಬದ ಶುಭಾಷಯಗಳು

Thursday, January 13, 2011

ಏನಿವು ಅರ್ಥವಾಗದ ಸಂಕೇತಗಳು?

ಹೊಸವರ್ಷದ ,2011ನೇ ಇಸವಿಯ ಶುಭಾಷಯಗಳು
6 ಅಗಸ್ಟ್ 1967,Jocelyn Bell ಎಂಬ ಪದವಿ ವಿದ್ಯಾರ್ಥಿ ಕೇಂಬ್ರಿದ್ಜ್ ವಿಶ್ವವಿದ್ಯಾಲಯಕ್ಕೆ ಸೇರಿದ Mullard Radio Astronomy Observatory ರಲ್ಲಿ ರೇಡಿಯೋ ಅಂಟೆನಾಗಳನ್ನು ಬಾನಿನತ್ತ ತಿರುಗಿಸಿ ಬಾನಿನಿಂದ ಬರುವ Scintillation  ಸಂಕೇತಗಳನ್ನು ಅಭ್ಯಸಿಸುತ್ತಿದ್ದ , Scintillation ಅಂದರೆ ಒಂದು ವಿದ್ಯುತ್ಕಾಂತೀಯ ವಿಕಿರಣ ,ಪ್ಲಾಸ್ಮಾ ಸ್ಥಿತಿಯಲ್ಲಿರುವ ಮೋಡದ ಮೂಲಕ ಹಾದು ಹೋದಾಗ ಅದು ಕೆಲವು ಅರ್ಕ್-ಸೆಕೆಂಡ್ ಕೋನದಲ್ಲಿ(ಒಂದು ಸೆಕೆಂಡಿನ ೩೬೦೦ ನೇ ಒಂದು ಭಾಗ) ಅಂತರದಲ್ಲಿ ಮಿಣುಕುವಂತೆ ಭಾಸವಾಗುತ್ತದೆ
ಹಾಗೆ ಬಾನಿನಿಂದ ಬರುವ ರೇಡಿಯೋ ಅಲೆಗಳನ್ನು ಅಭ್ಯಸಿಸುವಾಗ ಆಗಸದ ಒಂದು  ಕಡೆಯಿಂದ ವಿಚಿತ್ರವಾದ  ಸಂಕೇತಗಳು ಬರತೋಡಗಿದವು
ಅವು ಹೇಗಿದ್ದವೆಂದು ಕೇಳಿ 
ನಾವು ಬೆಳ್ಳಂಬೆಳಿಗ್ಗೆ ರೇಡಿಯೋ ಆಲಿಸಿದರೆ ರೇಡಿಯೋ ಕೇಂದ್ರ ಪ್ರಾರಂಭಿಸುವಾಗ ಅದರ ತರಂಗಾಂತರ,ಅವರ್ತ ಸಂಖ್ಯೆ ತಿಳಿಸುತ್ತಾರೆ  ಅದು ಕೆಲವು ಮೆಗಾ-ಹರ್ಟ್ಸ್ ಗಳಲ್ಲಿರುತ್ತದೆ ಅಂದರೆ ಒಂದು ಸೆಕೆಂಡಿಗೆ ಸುಮಾರು ಕೆಲವು ದಶಲಕ್ಶ ಬಾರಿ ಅದು ಕಂಪಿಸುತ್ತದೆ ಎಂಬರ್ಥ

ಆದರೆ ನಾನು ತಿಳಿಸುತ್ತಿರುವ ವಿಷಯದಲ್ಲಿರುವ ಬಾನಿನಿಂದ ಬರುವ ಸಂಕೇತಗಳಲ್ಲಿನ ಎರಡ್ ಅಲೆಗಳ ನಡುವಿನ ಆಂತರ ನಿಖರವಾಗಿ 1.3373011512 ಸೆಕೆಂಡ್ ಗಳಷ್ಟಿತ್ತು ಇಷ್ಟು ನಿಖರವಾದ ರೆಡಿಯೋ ಅಲೆಗಳನ್ನು ಭೂಮಿಯ ಮೇಲೆ ನಮಗೆ ಲಭ್ಯವಿರುವ ಯಾವುದೇ Electronic Instrument ಗಳಿಂದ ಉತ್ಪಾದಿಸಲು ಸಾಧ್ಯವಿಲ್ಲ (ಇದು ೧೯೬೭ನೇ ಇಸವಿಯಲ್ಲಿ ಪತ್ತೆಯಾಗಿದ್ದರೂ ಇಂದಿಗೂ ಅಷ್ಟು ನಿಖರವಾದ ಅಲೆಗಳನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ)
ಹಾಗಾದರೆ ಆ ರೇಡಿಯೋ ಅಲೆಗಳು ಎಲ್ಲಿಂದ ಬಂದವು ?
ಅನ್ಯಗ್ರಹ ಜೀವಿಗಳೇನಾಅದರುನ ನಮ್ಮನ್ನು ಸಂಪರ್ಕಿಸಲು ಅ ರೀತಿಯ ಸಂಕೇತಗಳನ್ನು ಕಳುಹಿಸುತ್ತಿದ್ದವೋ ? ಎನು? ಹೇಗಿರಬಹುದು?

ಮುಂದಿನ ಸಂಚಿಕಯಲ್ಲಿ ನಿರೀಕ್ಷಿಸಿ!!
ಬೈ