ದೀಪಾವಳಿ ಹಬ್ಬದ ಶುಭಾಷಯಗಳು
ಹಾಂ! ನನ್ನ ಬ್ಲಾಗಿಗೂ ಒಂದು ವರ್ಷ ತುಂಬಿತು
ಕಳೆದ ವರ್ಷ ದೀಪಾವಳಿಯಲ್ಲೇ ಪ್ರಾರಂಭಿಸಿದ್ದು.
ನನ್ನ ಹಾಗೆಯೇ ವರ್ಷಾಚರಣೆಯಲ್ಲಿರುವ ಬ್ಲಾಗ್ ಮಿತ್ರರಿಗೆಲ್ಲಾ ಅಭಿನಂದನೆಗಳು, ಧನ್ಯವಾದಗಳು
ಕೆಲಕಾಲ ನನ್ನ ಬ್ಲಾಗ್ ಗಳಲ್ಲಿ ಲೇಖನಗಳನ್ನು ಪ್ರಕಟಿಸದೇ ಇದ್ದುದ್ದಕ್ಕೆ ಕ್ಷಮೆ ಇರಲಿ
ಹಾಗೆ ಬೆಳಕಿನ ಬಗ್ಗೆ ನನಗೆ ನೆನಪಿಗೆ ಬಂದಷ್ಟು:-
ನ್ಯೂಟನ್ ಹೇಳಿದರು-ಬೆಳಕು ಎಂದರೆ ಸರಳರೇಖೆಯಲ್ಲಿ ಚಿಮ್ಮುವ ಕಣಗಳು
ಹೈಗನ್ಸ್-ಅವು ಕುಣಿಯುವ ಅಲೆಗಳು
ಮ್ಯಾಕ್ಸ್-ವೆಲ್:-ಅವು ತಿರುಗುತ್ತಾ ನರ್ತಿಸುವ ವಿದ್ಯುತ್ ಕಾಂತೀಯ ಅಲೆಗಳು
ಪ್ಲಾಂಕ್-ಅವು ಶಕ್ತಿಯ ಚೀಲ ಹೊತ್ತು ನರ್ತಿಸುವ ಕ್ವಾಂಟಮ್ ಕಣಗಳು
ಈಶಾವ್ಯಾಸ ಉಪನಿಷತ್ತು:-
ಅದು ಚಲಿಸುತ್ತದೆ ಅದರೂ ಅದು ಚಲಿಸುವುದಿಲ್ಲ
ಅದು ದೂರದಲ್ಲಿದೆ ಅದು ಹತ್ತಿರದಲ್ಲೂ ಇದೆ
ಅದು ಎಲ್ಲದರ ಒಳಗೆ ಇದೆ ಎಲ್ಲದೂ ಅದರೊಳಗಿದೆ
(ಒಗಟಿನಂತಿರುವ ಇದರ ಗೂಢಾರ್ಥವೇನು?ನನಗೆ ಗೊತ್ತಿರುವುದಿಷ್ಟೇ, ನಿಮಗೇನಾದರೂ ಗೊತ್ತಿದ್ದರೆ ತಿಳಿಸಿ)
ಇಂದಿಗೂ ಪೂರ್ಣವಾಗಿ ಬೆಳಕು ಎಂದರೆ ಏನು ಅಂತಾ ಅರಿಯಲು ಸಾದ್ಯವಾಗಿಲ್ಲ
ಹಾಗಿದ್ದರೂ ನಾನು ಹೀಗಂದುಕೋಳ್ಳಬಲ್ಲೆ
"ಪುಟಾಣಿ ದೀಪದ ಸುಂದರ ನಗುವೇ ಬೆಳಕು"
ನಾವು ಆಗಸದಲ್ಲಿರುವ ತಾರೆಗಳಾಗದಿದ್ದರೂ ಪರವಾಯಿಲ್ಲ
ಜಗವ ಬೆಳಗುವ ಸೂರ್ಯನಾಗದಿದ್ದರೂ ಪರವಾಯಿಲ್ಲ
ಕತ್ತಲೆಯನ್ನೋಡಿಸುವ ಪುಟ್ಟ ಹಣತೆಯಾದರೂ ಆಗೋಣ
ದೀಪಾವಳಿ ಶುಭಾಷಯಗಳು
ಸದ್ಯದಲ್ಲಿಯೇ ಲೇಖನಗಳು ಮುಂದುವರೆಯಲಿವೆ
ನಿರೀಕ್ಷಿಸಿ
ಬುಧ ಸಂಕ್ರಮಣ ನನಗೆ ಶಿವಮೊಗ್ಗದಲ್ಲಿ ಕಂಡಂತೆ-Mercury Transit As seen by me
-
ಸೂರ್ಯನ ಮುಖದ ಮೇಲೆ ಬುಧನನ್ನು ಗುರುತಿಸುವುದು ಸ್ವಲ್ಪ ಕಠಿಣ ಎಂದೆನಿಸುತ್ತೆ ಆದರೂ ಅಲ್ಪ
ಸ್ವಲ್ಪ ಕಂಡಿದೆ
ಅದೃಷ್ಟವಶಾತ್ ಈ ಅವಕಾಶ ನನಗೆ ದೊರಕಿರುವುದು ಎರಡನೆಯ ಬಾರಿ ೧೦-ಮೇ ೨೦೧೬ ಹಾಗು ೦...
1 year ago