Saturday, November 6, 2010

ಬೆಳಕಿನ ಬಗ್ಗೆ ನನಗೆ ನೆನಪಿಗೆ ಬಂದಷ್ಟು

ದೀಪಾವಳಿ ಹಬ್ಬದ ಶುಭಾಷಯಗಳು


ಹಾಂ! ನನ್ನ ಬ್ಲಾಗಿಗೂ ಒಂದು ವರ್ಷ ತುಂಬಿತು
ಕಳೆದ ವರ್ಷ ದೀಪಾವಳಿಯಲ್ಲೇ ಪ್ರಾರಂಭಿಸಿದ್ದು.
ನನ್ನ ಹಾಗೆಯೇ ವರ್ಷಾಚರಣೆಯಲ್ಲಿರುವ ಬ್ಲಾಗ್ ಮಿತ್ರರಿಗೆಲ್ಲಾ ಅಭಿನಂದನೆಗಳು, ಧನ್ಯವಾದಗಳು

ಕೆಲಕಾಲ ನನ್ನ ಬ್ಲಾಗ್ ಗಳಲ್ಲಿ ಲೇಖನಗಳನ್ನು ಪ್ರಕಟಿಸದೇ ಇದ್ದುದ್ದಕ್ಕೆ ಕ್ಷಮೆ ಇರಲಿ

ಹಾಗೆ ಬೆಳಕಿನ ಬಗ್ಗೆ ನನಗೆ ನೆನಪಿಗೆ ಬಂದಷ್ಟು:-
ನ್ಯೂಟನ್ ಹೇಳಿದರು-ಬೆಳಕು ಎಂದರೆ ಸರಳರೇಖೆಯಲ್ಲಿ ಚಿಮ್ಮುವ ಕಣಗಳು
ಹೈಗನ್ಸ್-ಅವು ಕುಣಿಯುವ ಅಲೆಗಳು
ಮ್ಯಾಕ್ಸ್-ವೆಲ್:-ಅವು ತಿರುಗುತ್ತಾ ನರ್ತಿಸುವ ವಿದ್ಯುತ್ ಕಾಂತೀಯ ಅಲೆಗಳು
ಪ್ಲಾಂಕ್-ಅವು ಶಕ್ತಿಯ ಚೀಲ ಹೊತ್ತು ನರ್ತಿಸುವ ಕ್ವಾಂಟಮ್ ಕಣಗಳು


ಈಶಾವ್ಯಾಸ ಉಪನಿಷತ್ತು:-
ಅದು ಚಲಿಸುತ್ತದೆ ಅದರೂ ಅದು ಚಲಿಸುವುದಿಲ್ಲ
ಅದು ದೂರದಲ್ಲಿದೆ ಅದು ಹತ್ತಿರದಲ್ಲೂ ಇದೆ
ಅದು ಎಲ್ಲದರ ಒಳಗೆ ಇದೆ ಎಲ್ಲದೂ ಅದರೊಳಗಿದೆ
(ಒಗಟಿನಂತಿರುವ ಇದರ ಗೂಢಾರ್ಥವೇನು?ನನಗೆ ಗೊತ್ತಿರುವುದಿಷ್ಟೇ, ನಿಮಗೇನಾದರೂ ಗೊತ್ತಿದ್ದರೆ ತಿಳಿಸಿ)



ಇಂದಿಗೂ ಪೂರ್ಣವಾಗಿ ಬೆಳಕು ಎಂದರೆ ಏನು ಅಂತಾ ಅರಿಯಲು ಸಾದ್ಯವಾಗಿಲ್ಲ
ಹಾಗಿದ್ದರೂ ನಾನು ಹೀಗಂದುಕೋಳ್ಳಬಲ್ಲೆ

"ಪುಟಾಣಿ ದೀಪದ ಸುಂದರ ನಗುವೇ ಬೆಳಕು"

ನಾವು ಆಗಸದಲ್ಲಿರುವ ತಾರೆಗಳಾಗದಿದ್ದರೂ ಪರವಾಯಿಲ್ಲ
ಜಗವ ಬೆಳಗುವ ಸೂರ್ಯನಾಗದಿದ್ದರೂ ಪರವಾಯಿಲ್ಲ
ಕತ್ತಲೆಯನ್ನೋಡಿಸುವ ಪುಟ್ಟ ಹಣತೆಯಾದರೂ ಆಗೋಣ


ದೀಪಾವಳಿ ಶುಭಾಷಯಗಳು
ಸದ್ಯದಲ್ಲಿಯೇ ಲೇಖನಗಳು ಮುಂದುವರೆಯಲಿವೆ

ನಿರೀಕ್ಷಿಸಿ

3 comments:

ಮಹೇಶ ಭಟ್ಟ said...

ಬೆಳಕಿನ ಬಗ್ಗೆ ಸುಂದರವಾಗಿ ಬರೆದಿದ್ದೀರಿ. ನ್ಯೂಟನ್ ಹಾಗೂ ಇತರರ ಬೆಳಕಿನ ಬಗ್ಗೆ ಇರುವ ಸಿದ್ಧಾಂತಗಳನ್ನು ಇನ್ನೂ ವಿವರವಾಗಿ ಬರೆಯುವಿರಾ. ನನಗೆ ಅವುಗಳನ್ನು ತಿಳಿಯುವ ಕುತೂಹಲ ಇದೆ. ದೀಪಾವಳಿಯ ಶುಭಾಶಯಗಳು

ಮಹೇಶ ಭಟ್ಟ said...

ತುಂಬಾ ಚೆನ್ನಾಗಿದೆ. ಇನ್ನೂ ಇಂತಹ ಹಲವಾರು ವಿಜ್ಞಾನ ವಿಷಯಗಳನ್ನು ಬರೆಯುತ್ತೀರೆಂದು ಆಶಿಸುತ್ತೇವೆ. ದೀಪಾವಳಿಯ ಶುಭಾಶಯಗಳು.

ದರ್ಶನ said...

@ ದರ್ಶನ
-ಮಹೇಶ್ ಭಟ್ ರವರಿಗೆ ಧನ್ಯವಾದಗಳು
ಬೆಳಕಿನ್ ವೇಗವನ್ನು ಮೀರಲು ಏಕೆ ಸಾದ್ಯವಿಲ್ಲ ಎನ್ನುವ ತಮ್ಮ ಪ್ರಶ್ನೆಗೆ ನನಗೆ ಗೊತ್ತಿರುವ ಉತ್ತರ
ನನ್ನ ಇನ್ನೋಂದು ಬ್ಲಾಗ್"ಗ್ರಹಣ"ದಲ್ಲಿ

ನನಗೆ ತಿಳಿದಿರುವಷ್ಟನ್ನು ಪ್ರಕಟಿಸಿದ್ದೇನೆ
thank you
Happy DEEPAVALI