ಹೊಸವರ್ಷದ ,2011ನೇ ಇಸವಿಯ ಶುಭಾಷಯಗಳು
6 ಅಗಸ್ಟ್ 1967,Jocelyn Bell ಎಂಬ ಪದವಿ ವಿದ್ಯಾರ್ಥಿ ಕೇಂಬ್ರಿದ್ಜ್ ವಿಶ್ವವಿದ್ಯಾಲಯಕ್ಕೆ ಸೇರಿದ Mullard Radio Astronomy Observatory ರಲ್ಲಿ ರೇಡಿಯೋ ಅಂಟೆನಾಗಳನ್ನು ಬಾನಿನತ್ತ ತಿರುಗಿಸಿ ಬಾನಿನಿಂದ ಬರುವ Scintillation ಸಂಕೇತಗಳನ್ನು ಅಭ್ಯಸಿಸುತ್ತಿದ್ದ , Scintillation ಅಂದರೆ ಒಂದು ವಿದ್ಯುತ್ಕಾಂತೀಯ ವಿಕಿರಣ ,ಪ್ಲಾಸ್ಮಾ ಸ್ಥಿತಿಯಲ್ಲಿರುವ ಮೋಡದ ಮೂಲಕ ಹಾದು ಹೋದಾಗ ಅದು ಕೆಲವು ಅರ್ಕ್-ಸೆಕೆಂಡ್ ಕೋನದಲ್ಲಿ(ಒಂದು ಸೆಕೆಂಡಿನ ೩೬೦೦ ನೇ ಒಂದು ಭಾಗ) ಅಂತರದಲ್ಲಿ ಮಿಣುಕುವಂತೆ ಭಾಸವಾಗುತ್ತದೆ
ಹಾಗೆ ಬಾನಿನಿಂದ ಬರುವ ರೇಡಿಯೋ ಅಲೆಗಳನ್ನು ಅಭ್ಯಸಿಸುವಾಗ ಆಗಸದ ಒಂದು ಕಡೆಯಿಂದ ವಿಚಿತ್ರವಾದ ಸಂಕೇತಗಳು ಬರತೋಡಗಿದವು
ಅವು ಹೇಗಿದ್ದವೆಂದು ಕೇಳಿ
ನಾವು ಬೆಳ್ಳಂಬೆಳಿಗ್ಗೆ ರೇಡಿಯೋ ಆಲಿಸಿದರೆ ರೇಡಿಯೋ ಕೇಂದ್ರ ಪ್ರಾರಂಭಿಸುವಾಗ ಅದರ ತರಂಗಾಂತರ,ಅವರ್ತ ಸಂಖ್ಯೆ ತಿಳಿಸುತ್ತಾರೆ ಅದು ಕೆಲವು ಮೆಗಾ-ಹರ್ಟ್ಸ್ ಗಳಲ್ಲಿರುತ್ತದೆ ಅಂದರೆ ಒಂದು ಸೆಕೆಂಡಿಗೆ ಸುಮಾರು ಕೆಲವು ದಶಲಕ್ಶ ಬಾರಿ ಅದು ಕಂಪಿಸುತ್ತದೆ ಎಂಬರ್ಥ
ಆದರೆ ನಾನು ತಿಳಿಸುತ್ತಿರುವ ವಿಷಯದಲ್ಲಿರುವ ಬಾನಿನಿಂದ ಬರುವ ಸಂಕೇತಗಳಲ್ಲಿನ ಎರಡ್ ಅಲೆಗಳ ನಡುವಿನ ಆಂತರ ನಿಖರವಾಗಿ 1.3373011512 ಸೆಕೆಂಡ್ ಗಳಷ್ಟಿತ್ತು ಇಷ್ಟು ನಿಖರವಾದ ರೆಡಿಯೋ ಅಲೆಗಳನ್ನು ಭೂಮಿಯ ಮೇಲೆ ನಮಗೆ ಲಭ್ಯವಿರುವ ಯಾವುದೇ Electronic Instrument ಗಳಿಂದ ಉತ್ಪಾದಿಸಲು ಸಾಧ್ಯವಿಲ್ಲ (ಇದು ೧೯೬೭ನೇ ಇಸವಿಯಲ್ಲಿ ಪತ್ತೆಯಾಗಿದ್ದರೂ ಇಂದಿಗೂ ಅಷ್ಟು ನಿಖರವಾದ ಅಲೆಗಳನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ)
ಹಾಗಾದರೆ ಆ ರೇಡಿಯೋ ಅಲೆಗಳು ಎಲ್ಲಿಂದ ಬಂದವು ?
ಅನ್ಯಗ್ರಹ ಜೀವಿಗಳೇನಾಅದರುನ ನಮ್ಮನ್ನು ಸಂಪರ್ಕಿಸಲು ಅ ರೀತಿಯ ಸಂಕೇತಗಳನ್ನು ಕಳುಹಿಸುತ್ತಿದ್ದವೋ ? ಎನು? ಹೇಗಿರಬಹುದು?
ಮುಂದಿನ ಸಂಚಿಕಯಲ್ಲಿ ನಿರೀಕ್ಷಿಸಿ!!
ಬೈ
ಗುರುವಾರ 26 ಡಿಸೆಂಬರ್ 2019 ರ ಸೂರ್ಯಗ್ರಹಣ ನನಗೆ ನಮ್ಮ ಮನೆಯಲ್ಲಿ , ಶಾಲೆಯಲ್ಲಿ ಕಂಡಂತೆ
-
ಗುರುವಾರ 26 ಡಿಸೆಂಬರ್ 2019 ರ ಸೂರ್ಯಗ್ರಹಣ ನನಗೆ ನಮ್ಮ ಮನೆಯಲ್ಲಿ , ಶಾಲೆಯಲ್ಲಿ
ಕಂಡಂತೆ
ಇದು ಮತ್ತೆ ಭಾರತದಲ್ಲಿ ಕಾಣಲು ಇನ್ನು ಅರ್ಧ ದಶಕದ ನಂತರ ಹಲವು ವರ್ಷ ಕಾಯಬೇಕು
...
4 years ago