ನಿಲ್ಲಿ ಅದರೋಳಗೆ ಹೋಗಬೇಕು ಅಂದರೆ ಇಲ್ಲಿಂದಾನೆ ಟಿಕೆಟ್ ಬುಕ್ ಮಾಡಬೇಕು
ಅ ಟಿಕೆಟ್ ಸಿಗೋದು ಒಂದು ಕೌಂಟರ್ ನಲ್ಲಿ ಅದರ ಹೆಸರು -"ರೋಹಿತ"(spectrum)
ಕಾಮನ ಬಿಲ್ಲಿನಲ್ಲಿ ಏಳು ಬಣ್ಣ ಇರುತ್ತೆ, ಬೆಳಕು ಪಟ್ಟಕದಲ್ಲಿ ಹರಿದಾಗಲೂ ಏಳುಬಣ್ಣ ಬರುತ್ತೆ
ಆ ಬಣ್ಣಗಳ ಪಟ್ಟಿಯನ್ನು ರೋಹಿತ ಎನ್ನುತ್ತೇವೆ ಅಂತ ಎಲ್ಲರಿಗೂ ಗೊತ್ತು
ಪ್ರಶ್ನೆ:=ಹಾಗದರೆ ಕಾಮನಬಿಲ್ಲು ಬಿಲ್ಲಿನ ಆಕಾರದಲ್ಲೇ ಯಾಕಿರುತ್ತದೆ ಹೇಳಿ ನೋಡೋಣ
ಆ ವಿಷಯ ಹಾಗಿರಲಿ ನ್ಯೂಟನ್ ಬೆಳಕಿನಲ್ಲಿ ಏಳು ಬಣ್ಣ ಅಂದಿದ್ದಕ್ಕೆ ವಿಷಯ ಮುಗಿದುಹೋಗಿಲ್ಲ
ಅ ರೋಹಿತ ಇನ್ನೂ ಹಲವು ರಹಸ್ಯಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ
ಬೆಳಕು ನೇರವಾಗಿ ಆಶ್ರಗದಲ್ಲಿ ಹರಿದಾಗ ಬರೊದು ಮಿಶ್ರಣಗೋಂಡ ರೋಹಿತ(impure spectrum)
ಆದರೆ ಆ ಅಶ್ರಗವನ್ನು ಮಸೂರಗಳ ಸಂಯೋಜನೆಯಲ್ಲಿ ಜೋಡಿಸಿ ಬೇಳಕು ಹಾಯಿಸಿದಾಗ ಬರೋದು ನಿಯಮಿತವಾಗಿರೋ ರೋಹಿತ(pure spectrum) (ಚಿತ್ರ ನೋಡಿ)
ಆ ರೋಹಿತದಲ್ಲಿ ಬಣ್ಣಗಳು ನಿಯಮಿತವಾಗಿ ವಿಂಗಡಣೆಯಾಗಿರುತ್ತವೆ
ಅದು ತಾರೆಗಳ ಅಧ್ಯಯನದಲ್ಲಿ ಹೇಗೆ ಸಹಕಾರಿ ಅಂತ ಹೇಳುತ್ತೇನೆ ಕೇಳಿ
ರೋಹಿತದಲ್ಲಿ ಬೆಳಕಿನ ಮೂಲದ ವರ್ತನೆಗೆ ಅನುಗುಣವಾಗಿ ಗೆರೆಗಳು ಬದಲಾಗುತ್ತವೆ ಅನ್ನೋದನ್ನ ಬುನ್ಸೆನ್ ಹಾಗು ಕಿರ್ಚಾಫ಼್ ತಮ್ಮ ಪ್ರಯೊಗದಿಂದ ತೋರಿಸಿದ್ದಾರೆ
ಹೀಗೆ ತಾರೆಗಳ ಬೆಳಕಿನ ರೋಹಿತ ಪಡೆದರೆ ಅದರ ವಿವರ ತಿಳಿದುಕೊಳ್ಳಬಹುದು
ಯಾವ ರೀತಿ ಒಬ್ಬರ ಕೈಬೆರಳಿನ ಗುರುತು (fingerprint) ಮತ್ತೊಬ್ಬರ ಕೈಬೆರಳಿನ ಗುರುತಿಗಿಂತ ಭಿನ್ನವೋ ಹಾಗೆ ಪ್ರತೀ ತಾರೆಯ ರೋಹಿತವೂ ಭಿನ್ನವಾಗಿದೆ ಇದರ ಸಹಾಯದಿಂದ ನಾವು ತಾರೆಗಳ ಬಗ್ಗೆ ಹಲವು ವಿಷಯ ತಿಳಿದುಕೊಂಡಿದ್ದೇವೆ
ರೋಹಿತಗಳ ಕೆಲವು ಲಕ್ಷಣಗಳು ಹೀಗಿವೆ
ಅವರ್ತ ಕೋಷ್ಟಕ ದಲ್ಲಿರುವ ಎಲ್ಲಾ ಸುಮಾರು ೧೦೩ ಮೂಲವಸ್ತುಗಳ ರೋಹಿತಗಳು ಭಿನ್ನವಾಗಿವೆ
ಬೆಳಕು ಯಾವುದೇ ಉತ್ಸರ್ಜನೆಯಿಂದ ಬಂದಿದ್ದರೆ ರೋಹಿತದಲ್ಲಿ ಒಂದು ಹೆಚ್ಚು ಹೋಳಪಿನ ಭಾಗವಿರುತ್ತದೆ ಅದು ಬೆಳಕಿನ ಮೂಲದ ತಾಪಕ್ಕೆಅನುಗುಣವಾಗಿ ತನ್ನ ಸ್ಥಾನವನ್ನು ಹೊಂದಿರುತ್ತದೆ
ಬೆಳಕು ಯಾವುದೇ ವಸ್ತುವಿನಿಂದ ಹೀರಲ್ಪಟ್ಟಿದ್ದರೆ ಅದರಲ್ಲಿ ಕಪ್ಪು ಗೆರೆಗಳು ಗೋಚರಿಸುತ್ತವೆ
ವಸ್ತುವಿನ ಹಾಗು ವೀಕ್ಷಕನ ಚಲನೆಗನುಗುಣವಾಗಿಯೂ ಅದು ಬದಲಾಗುವುದನ್ನು ಕೆಲಕಾಲಾನಂತರ ಕಂಡುಹಿಡಿಯಲಾಯಿತು
ತಾರೆಗಳ ರೋಹಿತವನ್ನು ಅದ್ಯಯನ ಮಾಡುವಾಗ ಮತ್ತೆ ಒಂದು ಗೊಂದಲ ಎದುರಾಯಿತು ಆ ರೋಹಿತಗಳು ಭೂಮಿಯಲ್ಲಿನ ಯಾವ ಮೂಲವಸ್ತುಗಳ ರೋಹಿತಗಳಿಗೂ ಸರಿಯಾಗಿ ಹೋದಾಣಿಕೆಯಾಗುತ್ತಿರಲಿಲ್ಲ ಹಾಗಾದರೆ
ಒಂದೋ ತಾರೆಗಳಲ್ಲಿ ಭೂಮಿಯಲ್ಲಿರದ ಮೂಲವಸ್ತುಗಳಿರಬೇಕೆಂದು ಎಣಿಸಿದರು ಆದರೆ ಅವರ ಎಣಿಕೆ ಸುಳ್ಳಾಗಿತ್ತು
ತಾರೆಗಳಲ್ಲಿ ಪರಮಾಣುಗಳು ಅಯಾನು ಸ್ಥಿತಿಯಲ್ಲಿ(ಎಲೆಕ್ಟ್ರಾನುಗಳನ್ನು ಕಳೆದುಕೋಂಡ ಸ್ಥಿತಿ) ಇರುತ್ತವೆ ಆದ್ದರಿಂದ ರೋಹಿತದಲ್ಲಿ ಕಪ್ಪು ಗೆರೆಗಳಿವೆ ಎಂದು ಭಾರತೀಯ ವಿಜ್ಞಾನಿ "ಮೇಘನಾದ ಸಹಾ" ಪ್ರತಿಪಾದಿಸಿದರು
ಅವರ ಸಂಶೋಧನೆಯ ಸಹಾಯದಿಂದ ತಾರೆಗಳಲ್ಲಿರುವ ವಸ್ತು,ಸ್ವಭಾವಗಳ ಬಗ್ಗೆ ಹಲವು ಮಾಹಿತಿಗಳು ಲಭಿಸಿವೆ
ಈ ಮೂಲಕ ರೋಹಿತದ ಗೆರೆಗಳನ್ನು ನೋಡಿದರೆ ತಾರೆಗಳ ಭವಿಷ್ಯ ಹೇಳಬಹುದು ಅಂತಾ ಸ್ಪಷ್ಟವಾಯಿತು
(ನಮ್ಮ ಕೈ ರೇಖೆ ನೋಡಿ ನಮ್ಮ ಭವಿಷ್ಯ ಹೇಳಬಹೊದೋ ಇಲ್ಲವೋ ನನಗೆ ಗೊತ್ತಿಲ್ಲ)
ಈಗ ರೇಡಿಯೋ ಅಲೆಗಳು, ಅವಗೆಂಪು,ಅತಿನೇರಳೆ,ಎಕ್ಸ್-ರೆ, ಅದಲ್ಲದೆ ಎಲ್ಲಾ ವಿದ್ಯುತ್ಕಾಂತೀಯ ವಿಕಿರಣಗಳ ಅಧ್ಯಯನದಿಂದ ತಾರೆಗಳ ಬಗ್ಗೆ ಈಗ ಹೆಚ್ಚು ತಿಳಿದುಕೋಡಿದ್ದೇವೆ ಅದರ ಬಗ್ಗೆ ಮುಂದೆ ಹೇಳುತ್ತೇನೆ
ಕಬ್ಬಿಣ ಸ್ವಲ್ಪ ಕಾದಾಗ ಕೆಂಪಾಗುತ್ತದೆ ನಂತರ ಹಳದಿ ಇನ್ನೂ ಹೆಚ್ಚು ಕಾದಾಗ ಬಿಳಿಯಾಗುತ್ತದೆ ಈ ರೀತಿ ಅದರ ಬಣ್ಣ ತಾಪಮಾನ ಸೂಚಿಸುವ ಹಾಗೆ ತಾರೆಗಳೂ ತಾಪಮಾನಕ್ಕೆ ಅನುಗುಣವಾಗಿ ಬಣ್ಣವನ್ನು ಹೊಂದಿರುತ್ತವೆ
ಸರಿ ತಾಪಮಾನ ಹಾಗು ತಾರೆಗಳ ರೋಹಿತದ ವರ್ಗ ಹಾಗು ಅವುಗಳ ನಿರಪೇಕ್ಷ ಕಾಂತಿಮಾನವನ್ನು ಗ್ರಾಫ್ ಗೆ ಹಾಕಿ ಅಧ್ಯಯನ ಮಾಡುವ ಸಾಹಸವನ್ನು ಹರ್ಸ್ಟ್ರಂಗ್ ಹಾಗು ರೆಸೆಲ್ ಎಂಬ ವಿಜ್ಞಾನಿಗಳು ಮಾಡಿದರು
(ಎಜ್ನಾರ್ ಹರ್ಸ್ಟ್ರ್ಂಗ್-ಡಚ್ ,ಹೆನ್ರಿ ನಾರಿಸ್ ರೆಸಲ್-ಅಮೇರಿಕ-೧೯೧೪) ಅದನ್ನು H-R diagram ಅಂತಲೇ ಕರೆಯುತ್ತಾರೆ
ಹರ್ಸ್ಟ್ರಂಗ್ ಹಾಗು ರೆಸಲ್ ರಚಿಸಿದ ಗ್ರಾಫ಼್ ನಲ್ಲಿ ಬಹುಪಾಲು ತಾರೆಗಳು S ಆಕಾರದಲ್ಲಿನ ಚಿತ್ರಣದಲ್ಲಿ ನೆಲೆಗೋಂಡವು-ಅವನ್ನು ಪ್ರಧಾನ ಸರಣಿ ಎನ್ನುತ್ತೇವೆ ಅದರಲ್ಲಿ ತಾರೆಗಳ ತಾಪಮಾನವು ನಿರಪೇಕ್ಷ ಕಾಂತಿಯೊಂದಿಗೆ ಬದಲಾಗುವುದನ್ನು ಕಾಣಬಹುದು(O- ವರ್ಗದಿಂದ M-ವರ್ಗದವರೆಗೆ)
ನಮ್ಮ ದಿನಕರ,ಸೂರ್ಯ ಇದೇ ಸರಣಿಯ ಮಧ್ಯಭಾಗದಲ್ಲಿ ಇದಾನೆ (ಪಾಪ ಸೂರ್ಯ ಅಷ್ಟೋಂದುತಾರೆಗಳ ನಡುವೆ ಲೆಕ್ಕಕ್ಕೇ ಸಿಗಲ್ಲಾ ಅಲ್ವಾ ಆದರೂ ನಮಗೆ ಅವನು ಸರ್ವಶಕ್ತಿದಾತ)
ಈಗ ಮೇಲಿನ ಚಿತ್ರ ನೋಡಿ ಅದರಲ್ಲಿ ಇನ್ನೂ ಕೆಲವು ತಾರೆಗಳ ಗುಂಪು ಬಲಗಡೆ ಮೇಲಿನ ಮೂಲೆಯಲ್ಲೂ
ಎಡಗಡೆ ಕೆಳ ಮೂಲೆಯಲ್ಲೂ ಇವೆ ಅವು ತಮ್ಮ ಬಹುಪಾಲು ಜೀವಿತಾವಧಿ ಕಳೆದಿರುವ ತಾರೆಗಳು
ಬಲಗಡೆ ಮೆಲೀನ ಮೂಲೆಯಲ್ಲಿರೋ ತಾರೆಗಳ ಸ್ವಭಾವ ಏನು ಅಂತಾ ಸ್ವಲ್ಪ ಯೋಚಿಸಿದ್ರೆ ಅಂದಾಜು ಮಾಡಬಹುದು --ಅವುಗಳ ಗಾತ್ರ ಹೆಚ್ಚು ಮೇಲ್ಮೈ ತಾಪಮಾನ ಕಡಿಮೆ-ಅವು ಕೆಂಪು ದೈತ್ಯಗಳು
ಹಾಗೆ ಕೆಳಗಡೆಯ ಎಡಗಡೆ ಮೂಲೆಯಲ್ಲಿರೋದು ಶ್ವೇತ ಕುಬ್ಜಗಳು ಹೆಸರೇ ಹೇಳುವಂತೆ ಅವುಗಳ ಗಾತ್ರ ಚಿಕ್ಕದು ಮೇಲ್ಮೈ ತಾಪಮಾನ ಮಾತ್ರ ಹೆಚ್ಚು
ರೋಹಿತಗಳು , H-R ನಕ್ಷೆ ಇವೆರಡು ತಾರೆಗಳ ಅಧ್ಯಯನದಲ್ಲಿ ಬಲುದೊಡ್ದ ಕ್ರಾಂತಿಯನ್ನು ಉಂಟುಮಾಡಿದವು ಅನ್ನೋಣವೇ ಇನ್ನು ತಾರೆಗಳಲ್ಲಿ ಏನೇನು ಇವೆ ಅವುಗಳ ರಚನೆ ಹೇಗಾಗುತ್ತವೆ ಅವುಗಳ ಜೀವನ-ಚಕ್ರದ ಬಗ್ಗೆ ತಿಳಿದುಕೋಳ್ಳೋಣ
No comments:
Post a Comment