ತಾರೆಗಳಿಂದ ಅಷ್ಟೆಲ್ಲಾ ಬೆಳಕು-ಶಕ್ತಿ ಹೊರಸೂಸುತ್ತದೆ ಅಂದರೆ ಅದರೊಳಗೇನಿರಬಹುದು
ಯಾವ ಇಂಧನದಿಂದ ಅದು ಉರಿಯುತ್ತದೆ ? ಈ ವಿಚಾರಗಳಿಗೆ ಉತ್ತರ ಹುಡುಕಲು ದೂರದ ತಾರೆಗಳೇಕೆ ಬೇಕು ನಮ್ಮ ಸೂರ್ಯನನ್ನೇ ಅಧ್ಯಯನ ಮಾಡಿದರೆ ಸಾಕಲ್ವಾ ?
ಶಿಲಾಯುಗದ ಜನರಿಂದ ಇಂದಿನ ಕಂಪ್ಯೂಟರ್ ಜಗತ್ತಿನ ಜನರೂ ಇದನ್ನೇ ಯೋಚಿಸುತ್ತಿದ್ದರು ಇಗಲೂ ಹಾಗೇ ಯೋಚಿಸುತ್ತಾರೆ ಕೂಡ
ಸೂರ್ಯನಲ್ಲೇನಿರಬಹುದು?
ಅವರಿಗೆ ತಿಳಿದಿದ್ದ ವಸ್ತುಗಳ ಬಗ್ಗೆ ಎಲ್ಲಾ ಅನ್ವಯಿಸಿದರು
ಕಲ್ಲಿದ್ದಲಿನಿಂದ ಸೂರ್ಯ ಉರಿಯುತ್ತಿರ ಬಹುದಾ --ಊ..ಹೂಂ
ಸೀಮೆ ಎಣ್ಣೆ, ಪೆಟ್ರೋಲ್ ,ಡೀಸೆಲ್ ,--- ಸಾಧ್ಯವಿಲ್ಲ
ಹೈಡ್ರೋಜನ್? ಇರಬಹುದಾ
ಸೂರ್ಯನ ರೋಹಿತದಿಂದ ಇದಂತೂ ಸ್ಪಷ್ಟವಾಯಿತು ಸೂರ್ಯನಲ್ಲಿ ಹೈಡ್ರೋಜನ್? ಇದೆ ಅಂತಾ
ಹಾಗಾದರೆ ಅಲ್ಲಿ ಯಾರೋ ಆ ಜಲಜನಕಕ್ಕೆ ಬೆಂಕಿ ಹಚ್ಚಿರಬಹುದು ಅಲ್ವಾ, ಹಾಗಾದರೆ ದಹನ ಕ್ರಿಯೆಗೆ ಆಮ್ಲಜನಕ ಬೇಕಲ್ವಾ ಅದೆಲ್ಲಿದೆ ಸೂರ್ಯನಲ್ಲಿ? ಇದರ ಅರ್ಥ ಸೂರ್ಯನಲ್ಲಿ ಹೈಡ್ರೋಜನ್ ಬೇರೇ ಯಾವುದೋ ಕಾರಣದಿಂದ ದಹಿಸುತ್ತಿರಬೇಕು ಹಾಗಾದರೆ ಅದು ಏನು?
ಇದಕ್ಕೆ ಉತ್ತರ ಸಿಕ್ಕಿದ್ದು ಐನ್ ಸ್ತೈನ್ ರ ಸಾಪೇಕ್ಷತಾ ಸಿದ್ಧಾಂತದಿಂದ
ಅವರ ಸಿದ್ಧಾಂತದಂತೆ ವಸ್ತುವನ್ನು ಶಕ್ತಿಯಾಗಿ ಪರಿವರ್ತಿಸಬಹುದು ,ಹಾಗೇನೇ ವಸ್ತುವು ಶಕ್ತಿಯ ಸಾಂದ್ರೀಕ್ರತ ರೂಪ ಅಷ್ಟೇ ಇವೆರಡೂ ಪರಿವರ್ತಿಸಬಹುದಾದವುಗಳು ಎಂದು ತಿಳಿಸಿದರು
ಹಾಗೇ ಅಂದಿನ ಕಾಲಕ್ಕೆ ಪರಮಾಣು ಶಕ್ತಿಯ ಅರಿವು ಆಗತೋಡಗಿತ್ತು
ಸೂರ್ಯನಲ್ಲೂ ಸಹ ಪರಮಾಣು ಕ್ರಿಯೆಗಳು ನಡೆಯುತ್ತಿರಬಹುದು ಎಂದು ತರ್ಕಿಸಿದರು
ಈ ಪ್ರಶ್ನೆಗೆ ಉತ್ತರ ನೀಡಿದ್ದು ಒಂದು ಪ್ರಯೋಗ ಅದೂ ಸೂರ್ಯಗ್ರಹಣದ ಸಮಯದಲ್ಲಿ ನಡೆಸಿದ ಒಂದು ಪ್ರಯೋಗ ಅದು ಎನು ಅಂತಾ ಮುಂದಿನ ಸಂಚಿಕೆಯಲ್ಲಿ ತಿಳಿಸುತ್ತೇನೆ
ಹೊಸ ವರ್ಷದ ಶುಭಾಶಯಗಳು (ಗ್ರೆಗೋರಿಯನ್ ಕ್ಯಾಲೆಂಡರಿನಂತೆ)
ಹೊಸ ವರುಷ ನಿಮಗೆಲ್ಲಾ ಹರುಷ ತರುವಂತಾಗಲಿ
ಬೈ!
ಬೈ!
ಗುರುವಾರ 26 ಡಿಸೆಂಬರ್ 2019 ರ ಸೂರ್ಯಗ್ರಹಣ ನನಗೆ ನಮ್ಮ ಮನೆಯಲ್ಲಿ , ಶಾಲೆಯಲ್ಲಿ ಕಂಡಂತೆ
-
ಗುರುವಾರ 26 ಡಿಸೆಂಬರ್ 2019 ರ ಸೂರ್ಯಗ್ರಹಣ ನನಗೆ ನಮ್ಮ ಮನೆಯಲ್ಲಿ , ಶಾಲೆಯಲ್ಲಿ
ಕಂಡಂತೆ
ಇದು ಮತ್ತೆ ಭಾರತದಲ್ಲಿ ಕಾಣಲು ಇನ್ನು ಅರ್ಧ ದಶಕದ ನಂತರ ಹಲವು ವರ್ಷ ಕಾಯಬೇಕು
...
4 years ago
No comments:
Post a Comment