Saturday, February 20, 2010

ಪರಮಾಣುಗಳ ನಡುವಿನ ಘರ್ಷಣೆ

ಸೂರ್ಯನಲ್ಲಿ ಹೀಲಿಯಮ್  ಪತ್ತೆಯಾಗಿದ್ದು ತಾರೆಗಳ ಜನ್ಮ ವೃತ್ತಾಂತ ಅರಿಯುವುದರಲ್ಲಿ ಪ್ರಮುಖ ಹೆಜ್ಜೆಯಾಯಿತು ಅಂತ ಕಳೆದ ಬಾರಿ ತಿಳಿಸಿದ್ದೆ

ತಾರೆಗಳ ಜನ್ಮ ಹೀಗೆ ಆಗಬಹುದು ಅಂತ ಬಹುಪಾಲು ಒಪ್ಪಿಕೊಂಡಿರುವ ಸಿದ್ದಾಂತ ಹೀಗಿದೆ
ಆದರೂ ಇದು ವಿವಾದ-ಭಿನ್ನಾಭಿಪ್ರಯಗಳಿಂದ ಮುಕ್ತವಾಗಿಲ್ಲ

--ಅಖಂಡ ವಿಶ್ವದಲ್ಲಿರುವ ಬಹುಪಾಲು ವಿಶ್ವಧೂಳಿ (Cosmic dust)ಹೈಡ್ರೋಜನ್ ಪರಮಾಣುಗಳಿಂದಾಗಿದೆ
ಅದು ಎಲ್ಲಿಂದ ಬಂತು ಅಂತ ಮಾತ್ರ ಕೇಳಬೇಡಿ 
ಬೀಜ ಮೊದಲೋ-ವೃಕ್ಷ ಮೋದಲೋ ಅನ್ನೊ ಪ್ರಶ್ನೆಯಿಂದ ಕೊನೆಯಾಗುವ ಅಂತ್ಯವಿಲ್ಲದ ವಿಷಯಕ್ಕೆ ಹೋಗಿಬಿಡುತ್ತೀರಿ
ಈ ವಿಚಾರದ ಬಗ್ಗೆ ನಂತರ ತಿಳಿಸುತ್ತೇನೆ
ಈ ಹೈಡ್ರೋಜನ್ ಪರಮಾಣುಗಳು ಒಂದನ್ನೋಂದು ಆಕರ್ಷಿಸುತ್ತಾ ಮೋಡಗಳ ಸ್ಥಿತಿಗೆ ಬರುತ್ತವೆ ಹಾಗು ಕುಗ್ಗಲಾರಂಭಿಸುತ್ತವೆ ಇದು ಏಕೆ ಹೀಗೆ ಎಂದು ಇಂದಿಗೂ  ಸ್ಪಷ್ಟವಾಗಿ ಹೇಳಲಾಗಿಲ್ಲ ಸಾವಿರಾರು ಕೋಟಿ ವರ್ಷ ತೆಗೆದುಕೊಳ್ಳುವ ವಿದ್ಯಮಾನವಿದು

ಹೀಗೆ ಸಂಕೋಚಿಸುವ ಹೈಡ್ರೋಜನ್ ಮೋಡಗಳಲ್ಲಿ ನಡೆವ ಮೋದಲ ಪ್ರಕ್ರಿಯೆ ಅಂದರೆ ಘರ್ಷಣೆ  (Friction)
ಈ ಪರಮಾಣುಗಳ ನಡುವಿನ ಘರ್ಷಣೆಯಿಂದ ರಕ್ತಾತೀತ(Infra Red) ಕಿರಣಗಳು ಹೊಮ್ಮಲಾರಂಭಿಸುತ್ತವೆ 
ಇದನ್ನು ಡಾರ್ಕ್ ನೆಬ್ಯುಲಾಗಳಲ್ಲಿ ಕಾಣಬಹುದು ಉದಾಹರಣೆಗೆ ಹಾರ್ಸ್ ಹೆಡ್ ನೆಬ್ಯುಲಾ ಇದು ಸಹಾ ಓರಿಯನ್ ನಕ್ಷತ್ರಪುಂಜದಲ್ಲಿದೆ


ಹಬಲ್ ದೂರದರ್ಶಕದ ಸಹಾಯದಿಂದ ಅಧ್ಯಯನ ನಡೆಸಿದ ಪ್ರಮುಖ ಆಕಾಶಕಾಯಗಳಲ್ಲಿ ಇದು ಒಂದು
ಇದು ತಾರೆಗಳ ಅತ್ಯಂತ ಪ್ರಾರಂಬಿಕ ಸ್ಥಿತಿ

ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ
೧)ತಾರೆಗಳಲ್ಲಿ ಗುರುತ್ವದ ಪಾತ್ರ
೨)ಪರಮಾಣುಗಳು ಅಯಾನ್ ಗಳಾಗುವ ಬಗೆ

No comments: