Thursday, July 30, 2015

ಇವನಾರವ ಇವನಾರವ

ಪ್ಲುಟೋ

ಇವ ಸೌರಮಂಡಲದ ಲಾಸ್ಟ್ ಬಟ್ ನಾಟ್ ಲೀಸ್ಟ್ ಎನ್ನುತ್ತಾನೆ

ಇವನಿಗೆ ಇದ್ದಾರೆ ಇಬ್ಬರು ಮಿತ್ರರು

ಅದಿರಲಿ
ಇವ ಪತ್ತೆಯಾಗಿದ್ದು ಮಾತ್ರ ಬಹಳ ಕುತೂಹಲಕಾರಿ ಆಸಕ್ತಿದಾಯಕ

ಇವ ಸಿಕ್ಕಿದ್ದು ಹೀಗೆ

ನಮ್ಮ ಸೌರವ್ಯೂಹದ ಐದು ಗ್ರಹಗಳಾದ
ಬುಧ ,ಶುಕ್ರ ಭೂಮಿ ಮಂಗಳ, ಗುರು,ಶನಿ
ಇವಿಷ್ಟೂ ಬರಿಗಣ್ಣಿಗೆ ಕಾಣಬಲ್ಲವು ಹಾಗೆ ಪ್ರಾಚೀನ ಕಾಲದಿಂದ ಚಿರಪರಿಚಿತ

ಯುರನೆಸ್ ಕೆಲವೊಮ್ಮೆ ಬರಿಗಣ್ಣಿಗೆ ಕಾಣಬಲ್ಲದು ಅದರೂ ದೂರದರ್ಶಕ ಅವಶ್ಯ

ನೆಪ್ಚೂನ್ ದೂರದರ್ಶ್ಕದ ಸಹಾಯದಿಂದ ಆವಿಷ್ಕರಿಸಿದ ಮೊದಲ ಗ್ರಹ

ಆದರೆ
ನೆಪ್ಚೂನ್ ಕಕ್ಷೆಯನ್ನು ಅಧ್ಯಯನ ಮಾಡುವಾಗ ಅದರ ಪಥದ ಮೇಲೆ ಇನ್ಯಾವುದೋ ಗ್ರಹ ಪ್ರಭಾವ ಬೀರಿದಂತೆ ಇತ್ತು
ಹಾಗೆ ಆ ಒಂಭತ್ತನೆಯ ಗ್ರಹದ ಬಗ್ಗೆ ಹಲವು ವಿಜ್ಞಾನಿಗಳು ತಲೆಕೆಡಿಸಿಕೊಂಡಿದ್ದರು ಆದರೆ ಅದು ಪತ್ತೆಯಾಗಲೇ ಇಲ್ಲ

ಆಗ ಪರ್ಸಿವಲ್ ಲೋವೆಲ್ ಎಂಬ ಶ್ರೀಮಂತ ಹಾಗು ಪ್ರಖ್ಯಾತ ವಿಜ್ಞಾನಿಯೊಬ್ಬ ಅಮೇರಿಕದಲ್ಲಿದ್ದ ಅವ ಒಂಬತ್ತನೆಯ ಗ್ರಹದ ಹುದುಕಾಟದಲ್ಲಿ ಬಹು ಸಮಯ ವ್ಯಯಿಸಿದ

ದಿಜಿಟಲ್ ಉಪಕರಣಗಳು  ಇಲ್ಲದ ಆಗ ದೂರದ
ಗ್ರಹಗಳನ್ನು ಹೀಗೆ ನೋದುತ್ತಿದ್ದರು

ದೂರದ ಗ್ರಹಗಳನ್ನು ನೋಡಲು ವೀಕ್ಷಣಾಲಯದೊಳಗಿರುವ ಭಾರೀ ಬಸ್ ಗಾತ್ರದ ದೂರದರ್ಶಕ ಮಾತ್ರ ಸಾಲುವುದಿಲ್ಲ

ನಮ್ಮ ದೂರದರ್ಶಕದ ವ್ಯಾಸ ಅದೆಷ್ಟೇ ದೊಡ್ಡದಗಿದ್ದ್ರೂ ಅವು ಕಾಣುತ್ತಿರಲಿಲ್ಲ ಕಾರಣ ಅವು ಸೂರ್ಯನಿಂದ ಬಹುದೂರದಲ್ಲಿವೆ ಅಲ್ಲಿಂದ ಸೂರ್ಯ ಒಬ್ಬ ಪ್ರಕಾಶಮಾನವಾದ ನಕ್ಷತ್ರದಂತೆ ಗೋಚರಿಸುತ್ತಾನಷ್ಟೆ ಅಷ್ಟಲ್ಲದೆ ಆ ಕಾಯಗಳ ಗಾತ್ರವೂ ಬಹು ಚಿಕ್ಕವು ಹೀಗಿರುವಾಗ ಅವನ್ನು ನೋಡಲು  ಈ ಸಾಹಸಗಳನ್ನು ಮಾಡುತ್ತಿದ್ದರು

ದೂರದರ್ಶಕಕ್ಕೆ ಕ್ಯಾಮೆರಾ ಜೋಡಿಸುವುದು
ಹಾಗೆ ದೂರ ಕಾಯಗಳೆಡೆಗೆ ಗುರಿಯಿಟ್ಟು ಹತ್ತು ಸೆಕೆಂಡಿಗೂ ಮೀರಿದ ಎಕ್ಸ್ ಪೋಶರ್ ಬಳಸಿ ಚಿತ್ರ ತೆಗೆಯುವುದು
ನಂತರ ಫೊಟೊ ಡೆವೆಲಪ್ ಪ್ರಿಂಟ್ ಮಾಡಲೇ ಬೇಕಲ್ಲ(ನೆನಪು ಮಾಡಿಕೊಳ್ಳಿ ಇದನ್ನು ನಾವು ಫೊಟೊ ತೊಳೆಯುವುದು ಎನ್ನುತ್ತಿದ್ದೆವು ಈಗೆಲ್ಲಿ ಫ಼ಿಲ್ಮ್ ರೀಲಿನ ಜಮಾನ)
ನಂತರ ಅದರಲ್ಲಿ ಯಾವುದಾದರೂ ಹೊಸ ಕಾಯ ಇದೆಯೇ ಎಂದು ಹುಡುಕುವುದು

No comments: