Sunday, July 17, 2016

ಪ್ಲುಟೊ ಹುಡುಕಾಟ

ಪ್ಲುಟೋ
ಇವ ಸೌರಮಂಡಲದ ಲಾಸ್ಟ್ ಬಟ್ ನಾಟ್ ಲೀಸ್ಟ್ ಎನ್ನುತ್ತಾನೆ ಇವನಿಗೆ ಇದ್ದಾರೆ ಇಬ್ಬರು ಮಿತ್ರರು ಅದಿರಲಿ ಇವ ಪತ್ತೆಯಾಗಿದ್ದು ಮಾತ್ರ ಬಹಳ ಕುತೂಹಲಕಾರಿ ಆಸಕ್ತಿದಾಯಕ ಇವ ಸಿಕ್ಕಿದ್ದು ಹೀಗೆ

ನಮ್ಮ ಸೌರವ್ಯೂಹದ ಐದು ಗ್ರಹಗಳಾದ ಬುಧ ,ಶುಕ್ರ ಭೂಮಿ ಮಂಗಳ, ಗುರು,ಶನಿ ಇವಿಷ್ಟೂ ಬರಿಗಣ್ಣಿಗೆ ಕಾಣಬಲ್ಲವು ಹಾಗೆ ಪ್ರಾಚೀನ ಕಾಲದಿಂದ ಚಿರಪರಿಚಿತ ಯುರನೆಸ್ ಕೆಲವೊಮ್ಮೆ ಬರಿಗಣ್ಣಿಗೆ ಕಾಣಬಲ್ಲದು ಅದರೂ ದೂರದರ್ಶಕ ಅವಶ್ಯ

ನೆಪ್ಚೂನ್ ದೂರದರ್ಶ್ಕದ ಸಹಾಯದಿಂದ ಆವಿಷ್ಕರಿಸಿದ ಮೊದಲ ಗ್ರಹ

ಆದರೆ
ನೆಪ್ಚೂನ್ ಕಕ್ಷೆಯನ್ನು ಅಧ್ಯಯನ ಮಾಡುವಾಗ ಅದರ ಪಥದ ಮೇಲೆ ಇನ್ಯಾವುದೋ ಗ್ರಹ ಪ್ರಭಾವ ಬೀರಿದಂತೆ ಇತ್ತು
ಹಾಗೆ ಆ ಒಂಭತ್ತನೆಯ ಗ್ರಹದ ಬಗ್ಗೆ ಹಲವು ವಿಜ್ಞಾನಿಗಳು ತಲೆಕೆಡಿಸಿಕೊಂಡಿದ್ದರು ಆದರೆ ಅದು ಪತ್ತೆಯಾಗಲೇ ಇಲ್ಲ

ಆಗ ಪರ್ಸಿವಲ್ ಲೋವೆಲ್ ಎಂಬ ಶ್ರೀಮಂತ ಹಾಗು ಪ್ರಖ್ಯಾತ ವಿಜ್ಞಾನಿಯೊಬ್ಬ ಅಮೇರಿಕದಲ್ಲಿದ್ದ ಅವ ಒಂಬತ್ತನೆಯ ಗ್ರಹದ ಹುಡುಕಾಟದಲ್ಲಿ ಬಹು ಸಮಯ ವ್ಯಯಿಸಿದ

ದಿಜಿಟಲ್ ಉಪಕರಣಗಳು  ಇಲ್ಲದ ಆಗ ದೂರದ ಗ್ರಹಗಳನ್ನು ಹೀಗೆ ನೋಡುತ್ತಿದ್ದರು

ದೂರದ ಗ್ರಹಗಳನ್ನು ನೋಡಲು ವೀಕ್ಷಣಾಲಯದೊಳಗಿರುವ ಭಾರೀ ಬಸ್ ಗಾತ್ರದ ದೂರದರ್ಶಕ ಮಾತ್ರ ಸಾಲುವುದಿಲ್ಲ

ನಮ್ಮ ದೂರದರ್ಶಕದ ವ್ಯಾಸ ಅದೆಷ್ಟೇ ದೊಡ್ಡದಗಿದ್ದ್ರೂ ಅವು ಕಾಣುತ್ತಿರಲಿಲ್ಲ ಕಾರಣ ಅವು ಸೂರ್ಯನಿಂದ ಬಹುದೂರದಲ್ಲಿವೆ ಅಲ್ಲಿಂದ ಸೂರ್ಯ ಒಬ್ಬ ಪ್ರಕಾಶಮಾನವಾದ ನಕ್ಷತ್ರದಂತೆ ಗೋಚರಿಸುತ್ತಾನಷ್ಟೆ ಅಷ್ಟಲ್ಲದೆ ಆ ಕಾಯಗಳ ಗಾತ್ರವೂ ಬಹು ಚಿಕ್ಕವು ಹೀಗಿರುವಾಗ ಅವನ್ನು ನೋಡಲು  ಈ ಸಾಹಸಗಳನ್ನು ಮಾಡುತ್ತಿದ್ದರು

ದೂರದರ್ಶಕಕ್ಕೆ ಕ್ಯಾಮೆರಾ ಜೋಡಿಸುವುದು
ಹಾಗೆ ದೂರ ಕಾಯಗಳೆಡೆಗೆ ಗುರಿಯಿಟ್ಟು ಹತ್ತು ಸೆಕೆಂಡಿಗೂ ಮೀರಿದ ಎಕ್ಸ್ ಪೋಶರ್ ಬಳಸಿ ಚಿತ್ರ ತೆಗೆಯುವುದು
ನಂತರ ಫೊಟೊ ಡೆವೆಲಪ್ ಪ್ರಿಂಟ್ ಮಾಡಲೇ ಬೇಕಲ್ಲ(ನೆನಪು ಮಾಡಿಕೊಳ್ಳಿ ಇದನ್ನು ನಾವು ಫೊಟೊ ತೊಳೆಯುವುದು ಎನ್ನುತ್ತಿದ್ದೆವು ಈಗೆಲ್ಲಿ ಫಿಲ್ಮ್ ರೀಲಿನ ಜಮಾನ)  ನಂತರ ಅದರಲ್ಲಿ ಯಾವುದಾದರೂ ಹೊಸ ಕಾಯ ಇದೆಯೇ ಎಂದು ಹುಡುಕುವುದು

ಈ ಪ್ರಕ್ರಿಯೆ ವಾರಗಟ್ಟಲೇ ತೆಗೆದುಕೊಳ್ಳುತ್ತಿತ್ತು ಫಲಿತಾಂಶವೂ ದೊರಕುವ ಆಸೆ ಕಠಿಣವಾಗಿತ್ತು

ಹೀಗಿರುವಾಗ ಪರ್ಸಿವಲ್ ಲೋವೆಲ್ ಛಾಯಚಿತ್ರ ತೆಗೆಯುತ್ತಲೇ ಇದ್ದ ಹುಡುಕುತ್ತಲೇ ಇದ್ದ

ಅದನ್ನು planet-X ,planet-O ಎನ್ನಲಾಗಿತ್ತು 42 ಇಂಚಿನ ಹಾಗು19 ಇಂಚಿನ ದೊರದರ್ಶಕಗಳನ್ನು ಐದು ಇಂಚಿನ ಕ್ಯಾಮೆರಾದೊಂದಿಗೆ ಹುಡುಕಾಡುತ್ತಿದ್ದ
ಆದರೆ ಮಾರ್ಚ್-ಎಪ್ರಿಲ್ ೧೯೧೫ ರಲ್ಲಿ ಆತ ಪ್ಲುಟೊ ಚಿತ್ರ ಅಕಸ್ಮಾತ್ ಅಗಿ  ತೆಗೆದಿದ್ದರೂ ಇದೇ ಪ್ಲುಟೊ ಎಂದು ಗುರುತಿಸಲಾಗಲಿಲ್ಲ
ಈ planet-X ಹುಡುಕಾಟ್ದಲ್ಲಿ ತನ್ನ ಜೀವನ ಕಳೆದ ಲೋವೆಲ್ ೧೯೧೬ ರಲ್ಲಿ  ಮೃತಪಟ್ಟ

ಅದರ ನಂತರ ಲೋವೆಲ್ ನ ಪತ್ನಿ ಲೋವೆಲ್ ಅಬ್ಸರ್ವೇಟರಿ ಮಾಲಿಕತ್ವಕ್ಕಾಗಿ ಕೋರ್ಟಿನಲ್ಲಿ ದಾವೆ ಹೋಡಿದಳು
ಅದು1927ರಲ್ಲಿ ತೀರ್ಮಾನವಾಗಿ  ಅಬ್ಸರ್ವೇಟರಿ ಯಲ್ಲಿ ಪ್ಲುಟೋ ಹುಡುಕಾಟ ಪುನರಾರಂಭವಾಯಿತು

ಆಗ ಆ ಅಬ್ಸರ್ವೇಟರಿಯ ನಿರ್ದೇಶಕ ರಾಗಿದ್ದವರು ವೆಸ್ಟೋ ಸ್ಲಿಫರ್
ಆಗ ಅಬ್ಸರ್ವೇಟರಿ ಹೊಸ ದೂರದರ್ಶಕವನ್ನು ಖರೀದಿಸಿತ್ತು ಆದರೂ ಪ್ಲುಟೊ ಹುಡುಕಾಟದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಯಾರೂ ತೋರಲಿಲ್ಲ
ಆಗ ಈ ಪ್ಲುಟೋ ಹುಡುಕಾಟದ ಕಾರ್ಯವನ್ನು ಸ್ಲಿಫೆರ್ ವಹಿಸಿದ್ದು 22ರ ತರುಣ ಕ್ಲೆಯ್ಡ್ ವಿಲಿಯಮ್ ಟೊಂಬಾ ರವರಿಗೆ

ಟೊಂಬಾ ಹೊಸಬರು ಆದರೆ ಅವರು ಚಿಂತಿಸಿದ್ದು ಹಳೆಯ ರೀತಿಯಲ್ಲಿ ಅಲ್ಲ

ಟೊಂಬಾ ಏನು ಮಾಡಿದರು ಮುಂದೆ ತಿಳಿಸುತ್ತೇನೆ
ಬೈ

Thursday, July 30, 2015

ಇವನಾರವ ಇವನಾರವ

ಪ್ಲುಟೋ
ಇವ ಸೌರಮಂಡಲದ ಲಾಸ್ಟ್ ಬಟ್ ನಾಟ್ ಲೀಸ್ಟ್ ಎನ್ನುತ್ತಾನೆ  ಇವನಿಗೆ ಇದ್ದಾರೆ ಇಬ್ಬರು ಮಿತ್ರರು ಅದಿರಲಿ
ಇವ ಪತ್ತೆಯಾಗಿದ್ದು ಮಾತ್ರ ಬಹಳ ಕುತೂಹಲಕಾರಿ ಆಸಕ್ತಿದಾಯಕ ಇವ ಸಿಕ್ಕಿದ್ದು ಹೀಗೆ
ನಮ್ಮ ಸೌರವ್ಯೂಹದ ಐದು ಗ್ರಹಗಳಾದ ಬುಧ ,ಶುಕ್ರ ಭೂಮಿ ಮಂಗಳ, ಗುರು,ಶನಿ
ಇವಿಷ್ಟೂ ಬರಿಗಣ್ಣಿಗೆ ಕಾಣಬಲ್ಲವು ಹಾಗೆ ಪ್ರಾಚೀನ ಕಾಲದಿಂದ ಚಿರಪರಿಚಿತ

ಯುರನೆಸ್ ಕೆಲವೊಮ್ಮೆ ಬರಿಗಣ್ಣಿಗೆ ಕಾಣಬಲ್ಲದು ಅದರೂ ದೂರದರ್ಶಕ ಅವಶ್ಯ
ನೆಪ್ಚೂನ್ ದೂರದರ್ಶ್ಕದ ಸಹಾಯದಿಂದ ಆವಿಷ್ಕರಿಸಿದ ಮೊದಲ ಗ್ರಹ

ಆದರೆ
ನೆಪ್ಚೂನ್ ಕಕ್ಷೆಯನ್ನು ಅಧ್ಯಯನ ಮಾಡುವಾಗ ಅದರ ಪಥದ ಮೇಲೆ ಇನ್ಯಾವುದೋ ಗ್ರಹ ಪ್ರಭಾವ ಬೀರಿದಂತೆ ಇತ್ತು
ಹಾಗೆ ಆ ಒಂಭತ್ತನೆಯ ಗ್ರಹದ ಬಗ್ಗೆ ಹಲವು ವಿಜ್ಞಾನಿಗಳು ತಲೆಕೆಡಿಸಿಕೊಂಡಿದ್ದರು ಆದರೆ ಅದು ಪತ್ತೆಯಾಗಲೇ ಇಲ್ಲ

ಆಗ ಪರ್ಸಿವಲ್ ಲೋವೆಲ್ ಎಂಬ ಶ್ರೀಮಂತ ಹಾಗು ಪ್ರಖ್ಯಾತ ವಿಜ್ಞಾನಿಯೊಬ್ಬ ಅಮೇರಿಕದಲ್ಲಿದ್ದ ಅವ ಒಂಬತ್ತನೆಯ ಗ್ರಹದ ಹುದುಕಾಟದಲ್ಲಿ ಬಹು ಸಮಯ ವ್ಯಯಿಸಿದ

ದಿಜಿಟಲ್ ಉಪಕರಣಗಳು  ಇಲ್ಲದ ಆಗ ದೂರದ ಗ್ರಹಗಳನ್ನು ಹೀಗೆ ನೋಡುತ್ತಿದ್ದರು :
ದೂರದ ಗ್ರಹಗಳನ್ನು ನೋಡಲು ವೀಕ್ಷಣಾಲಯದೊಳಗಿರುವ ಭಾರೀ ಬಸ್ ಗಾತ್ರದ ದೂರದರ್ಶಕ ಮಾತ್ರ ಸಾಲುವುದಿಲ್ಲ
ನಮ್ಮ ದೂರದರ್ಶಕದ ವ್ಯಾಸ ಅದೆಷ್ಟೇ ದೊಡ್ಡದಗಿದ್ದ್ರೂ ಅವು ಕಾಣುತ್ತಿರಲಿಲ್ಲ ಕಾರಣ ಅವು ಸೂರ್ಯನಿಂದ ಬಹುದೂರದಲ್ಲಿವೆ ಅಲ್ಲಿಂದ ಸೂರ್ಯ ಒಬ್ಬ ಪ್ರಕಾಶಮಾನವಾದ ನಕ್ಷತ್ರದಂತೆ ಗೋಚರಿಸುತ್ತಾನಷ್ಟೆ ಅಷ್ಟಲ್ಲದೆ ಆ ಕಾಯಗಳ ಗಾತ್ರವೂ ಬಹು ಚಿಕ್ಕವು ಹೀಗಿರುವಾಗ ಅವನ್ನು ನೋಡಲು  ಈ ಸಾಹಸಗಳನ್ನು ಮಾಡುತ್ತಿದ್ದರು

ದೂರದರ್ಶಕಕ್ಕೆ ಕ್ಯಾಮೆರಾ ಜೋಡಿಸುವುದು
ಹಾಗೆ ದೂರ ಕಾಯಗಳೆಡೆಗೆ ಗುರಿಯಿಟ್ಟು ಹತ್ತು ಸೆಕೆಂಡಿಗೂ ಮೀರಿದ ಎಕ್ಸ್ ಪೋಶರ್ ಬಳಸಿ ಚಿತ್ರ ತೆಗೆಯುವುದು
ನಂತರ ಫೊಟೊ ಡೆವೆಲಪ್ ಪ್ರಿಂಟ್ ಮಾಡಲೇ ಬೇಕಲ್ಲ(ನೆನಪು ಮಾಡಿಕೊಳ್ಳಿ ಇದನ್ನು ನಾವು ಫೊಟೊ ತೊಳೆಯುವುದು ಎನ್ನುತ್ತಿದ್ದೆವು ಈಗೆಲ್ಲಿ ಫ಼ಿಲ್ಮ್ ರೀಲಿನ ಜಮಾನ)
ನಂತರ ಅದರಲ್ಲಿ ಯಾವುದಾದರೂ ಹೊಸ ಕಾಯ ಇದೆಯೇ ಎಂದು ಹುಡುಕುವುದು

ಈ ಪ್ರಕ್ರಿಯೆ ವಾರಗಟ್ಟಲೇ ತೆಗೆದುಕೊಳ್ಳುತ್ತಿತ್ತು ಫಲಿತಾಂಶವೂ ದೊರಕುವ ಆಸೆ ಕಠಿಣವಾಗಿತ್ತು
ಹೀಗಿರುವಾಗ ಪರ್ಸಿವಲ್ ಲೋವೆಲ್ ಛಾಯಚಿತ್ರ ತೆಗೆಯುತ್ತಲೇ ಇದ್ದ ಹುಡುಕುತ್ತಲೇ ಇದ್ದ

ಅದನ್ನು planet-X ಎನ್ನಲಾಗಿತ್ತು
42  ಇಂಚಿನ ಹಾಗು   19- ಇಂಚಿನ  ದೊರದರ್ಶಕಗಳನ್ನು ಐದು ಇಂಚಿನ ಕ್ಯಾಮೆರಾದೊಂದಿಗೆ ಹುಡುಕಾಡುತ್ತಿದ್ದ
ಆದರೆ ಮಾರ್ಚ್-ಎಪ್ರಿಲ್ ೧೯೧೫ ರಲ್ಲಿ ಆತ ಪ್ಲುಟೊ ಚಿತ್ರ ಅಕಸ್ಮಾತ್ ಅಗಿ  ತೆಗೆದಿದ್ದರೂ ಇದೇ ಪ್ಲುಟೊ ಎಂದು ಗುರುತಿಸಲಗಲಿಲ್ಲ
ಈ planet-X ಹುಡುಕಾಟ್ದಲ್ಲಿ ತನ್ನ ಜೀವನ ಕಳೆದ ಲೋವೆಲ್ ೧೯೧೬ ರಲ್ಲಿ  ಮೃತಪಟ್ಟ

ಅದರ ನಂತರ ಲೋವೆಲ್ ನ ಪತ್ನಿ ಲೋವೆಲ್ ಅಬ್ಸರ್ವೇಟರಿ ಮಾಲಿಕತ್ವಕ್ಕಾಗಿ ಕೋರ್ಟಿನಲ್ಲಿ ದಾವೆ ಹೋಡಿದಳು
ಅದು 1927 ರಲ್ಲಿ ತೀರ್ಮಾನವಾಗಿ  ಅಬ್ಸರ್ವೇಟರಿ ಯಲ್ಲಿ ಪ್ಲುಟೋ ಹುಡುಕಾಟ ಪುನರಾರಂಭವಾಯಿತು

ಆಗ ಆ ಅಬ್ಸರ್ವೇಟರಿಯ ನಿರ್ದೇಶಕ ರಾಗಿದ್ದವರು ವೆಸ್ಟೋ ಸ್ಲಿಫರ್
ಆಗ ಅಬ್ಸರ್ವೇಟರಿ ಹೊಸ ದೂರದರ್ಶಕವನ್ನು ಖರೀದಿಸಿತ್ತು ಆದರೂ ಪ್ಲುಟೊ ಹುಡುಕಾಟದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಯಾರೂ ತೋರಲಿಲ್ಲ

ಆಗ ಈ ಪ್ಲುಟೋ ಹುಡುಕಾಟದ ಕಾರ್ಯವನ್ನು ಸ್ಲಿಫೆರ್ ವಹಿಸಿದ್ದು 22 ತರುಣ ಕ್ಲೆಯ್ಡ್ ವಿಲಿಯಮ್ ಟೊಂಬಾ ರವರಿಗೆ
ಟೊಂಬಾ ಹೊಸಬರು ಆದರೆ ಅವರು ಚಿಂತಿಸಿದ್ದು ಹಳೆಯ ರೀತಿಯಲ್ಲಿ ಅಲ್ಲ

 ಏನು ಮಾಡಿದರು ಮುಂದೆ ತಿಳಿಸುತ್ತೇನೆ
ಬೈ

ಇವನಾರವ ಇವನಾರವ

ಪ್ಲುಟೋ

ಇವ ಸೌರಮಂಡಲದ ಲಾಸ್ಟ್ ಬಟ್ ನಾಟ್ ಲೀಸ್ಟ್ ಎನ್ನುತ್ತಾನೆ

ಇವನಿಗೆ ಇದ್ದಾರೆ ಇಬ್ಬರು ಮಿತ್ರರು

ಅದಿರಲಿ
ಇವ ಪತ್ತೆಯಾಗಿದ್ದು ಮಾತ್ರ ಬಹಳ ಕುತೂಹಲಕಾರಿ ಆಸಕ್ತಿದಾಯಕ

ಇವ ಸಿಕ್ಕಿದ್ದು ಹೀಗೆ

ನಮ್ಮ ಸೌರವ್ಯೂಹದ ಐದು ಗ್ರಹಗಳಾದ
ಬುಧ ,ಶುಕ್ರ ಭೂಮಿ ಮಂಗಳ, ಗುರು,ಶನಿ
ಇವಿಷ್ಟೂ ಬರಿಗಣ್ಣಿಗೆ ಕಾಣಬಲ್ಲವು ಹಾಗೆ ಪ್ರಾಚೀನ ಕಾಲದಿಂದ ಚಿರಪರಿಚಿತ

ಯುರನೆಸ್ ಕೆಲವೊಮ್ಮೆ ಬರಿಗಣ್ಣಿಗೆ ಕಾಣಬಲ್ಲದು ಅದರೂ ದೂರದರ್ಶಕ ಅವಶ್ಯ

ನೆಪ್ಚೂನ್ ದೂರದರ್ಶ್ಕದ ಸಹಾಯದಿಂದ ಆವಿಷ್ಕರಿಸಿದ ಮೊದಲ ಗ್ರಹ

ಆದರೆ
ನೆಪ್ಚೂನ್ ಕಕ್ಷೆಯನ್ನು ಅಧ್ಯಯನ ಮಾಡುವಾಗ ಅದರ ಪಥದ ಮೇಲೆ ಇನ್ಯಾವುದೋ ಗ್ರಹ ಪ್ರಭಾವ ಬೀರಿದಂತೆ ಇತ್ತು
ಹಾಗೆ ಆ ಒಂಭತ್ತನೆಯ ಗ್ರಹದ ಬಗ್ಗೆ ಹಲವು ವಿಜ್ಞಾನಿಗಳು ತಲೆಕೆಡಿಸಿಕೊಂಡಿದ್ದರು ಆದರೆ ಅದು ಪತ್ತೆಯಾಗಲೇ ಇಲ್ಲ

ಆಗ ಪರ್ಸಿವಲ್ ಲೋವೆಲ್ ಎಂಬ ಶ್ರೀಮಂತ ಹಾಗು ಪ್ರಖ್ಯಾತ ವಿಜ್ಞಾನಿಯೊಬ್ಬ ಅಮೇರಿಕದಲ್ಲಿದ್ದ ಅವ ಒಂಬತ್ತನೆಯ ಗ್ರಹದ ಹುದುಕಾಟದಲ್ಲಿ ಬಹು ಸಮಯ ವ್ಯಯಿಸಿದ

ದಿಜಿಟಲ್ ಉಪಕರಣಗಳು  ಇಲ್ಲದ ಆಗ ದೂರದ
ಗ್ರಹಗಳನ್ನು ಹೀಗೆ ನೋದುತ್ತಿದ್ದರು

ದೂರದ ಗ್ರಹಗಳನ್ನು ನೋಡಲು ವೀಕ್ಷಣಾಲಯದೊಳಗಿರುವ ಭಾರೀ ಬಸ್ ಗಾತ್ರದ ದೂರದರ್ಶಕ ಮಾತ್ರ ಸಾಲುವುದಿಲ್ಲ

ನಮ್ಮ ದೂರದರ್ಶಕದ ವ್ಯಾಸ ಅದೆಷ್ಟೇ ದೊಡ್ಡದಗಿದ್ದ್ರೂ ಅವು ಕಾಣುತ್ತಿರಲಿಲ್ಲ ಕಾರಣ ಅವು ಸೂರ್ಯನಿಂದ ಬಹುದೂರದಲ್ಲಿವೆ ಅಲ್ಲಿಂದ ಸೂರ್ಯ ಒಬ್ಬ ಪ್ರಕಾಶಮಾನವಾದ ನಕ್ಷತ್ರದಂತೆ ಗೋಚರಿಸುತ್ತಾನಷ್ಟೆ ಅಷ್ಟಲ್ಲದೆ ಆ ಕಾಯಗಳ ಗಾತ್ರವೂ ಬಹು ಚಿಕ್ಕವು ಹೀಗಿರುವಾಗ ಅವನ್ನು ನೋಡಲು  ಈ ಸಾಹಸಗಳನ್ನು ಮಾಡುತ್ತಿದ್ದರು

ದೂರದರ್ಶಕಕ್ಕೆ ಕ್ಯಾಮೆರಾ ಜೋಡಿಸುವುದು
ಹಾಗೆ ದೂರ ಕಾಯಗಳೆಡೆಗೆ ಗುರಿಯಿಟ್ಟು ಹತ್ತು ಸೆಕೆಂಡಿಗೂ ಮೀರಿದ ಎಕ್ಸ್ ಪೋಶರ್ ಬಳಸಿ ಚಿತ್ರ ತೆಗೆಯುವುದು
ನಂತರ ಫೊಟೊ ಡೆವೆಲಪ್ ಪ್ರಿಂಟ್ ಮಾಡಲೇ ಬೇಕಲ್ಲ(ನೆನಪು ಮಾಡಿಕೊಳ್ಳಿ ಇದನ್ನು ನಾವು ಫೊಟೊ ತೊಳೆಯುವುದು ಎನ್ನುತ್ತಿದ್ದೆವು ಈಗೆಲ್ಲಿ ಫ಼ಿಲ್ಮ್ ರೀಲಿನ ಜಮಾನ)
ನಂತರ ಅದರಲ್ಲಿ ಯಾವುದಾದರೂ ಹೊಸ ಕಾಯ ಇದೆಯೇ ಎಂದು ಹುಡುಕುವುದು

Monday, July 27, 2015

ಬೇಗನೆ ಬಂದವರಿಗೆಲ್ಲಾ ಬ್ಲಾಗ್ ಲೋಕದಲ್ಲಿ ಹೊಸ ಹೊಸ ವಿಜ್ಞಾನದ ಕಥೆಗಳು

ವರ್ಷಗಳ ಬಿಡುವಿನ ನಂತರ ಮರಳಿರುವೆ ಬ್ಲಾಗ್ ಲೋಕಕ್ಕೆ
ಬ್ಲಾಗ್ ಮಿತ್ರರಿಗೆಲ್ಲಾ ಕಾರ್ಗಿಲ್ ವಿಜಯ ದಿವಸದ ಶುಭಾಷಯಗಳು
ನನಗೆ ಅನ್ನಿಸಿತು
ಬ್ಲಾಗ್ ಎನ್ನುವುದು  ಈ ಫೇಸ್ ಬುಕ್ ಟ್ವೀಟರ್ ವ್ಯಾಟ್ಸ್ ಆಪ್ ನಡುವೆ ಮರೆಯಗಿದೆಯೇ
ಎಂದು
ಹಾಗೆನಿಲ್ಲ  ಕೇಬಲ್ ಟಿ ವಿ ಬಂದ ಅಗಿನ ಕಾಲದ   ರೇಡಿಯೋ ಸೆಟ್ಟಿನಂತೆ
ಮನಸಿಗೆ ಬಂದಿದ್ದನ್ನೆಲ್ಲಾ ಅಪ್ ಲೋಡ್ ಮಾಡುವ ಹೊಸ ತಂತ್ರಜ್ಞಾನದ ಮುಂದೆ ಕ್ರೋಢೀ ಕರಿಸಿ- ವಿವೇಚಿಸಿ ಪ್ರಕಟಿಸುವ ಈ ಪರಿ ಏಕೋ ಚನ್ನ

ಸದ್ಯದಲ್ಲೇ ವಿಸ್ಮಯಕರ ಲೇಖನವೊಂದು ಪ್ರಕಟವಾಗಲಿದೆ

Monday, August 29, 2011

ನಿಮಗೆ ವಸ್ತುವಿನ  ವಿವಿಧ ಸ್ಥಿತಿಗಳು ಯಾವುವು ಎಂದು ಯಾರಾದರೂ ಕೇಳಿದರೆ ನೀವೆಲ್ಲರೂ ಬಲ್ಲಿರಿ
ಘನ ,ದ್ರವ ,ಅನಿಲ ಎಂದು  ಅದಲ್ಲದೆ ತಾರೆಗಳಲ್ಲಿ ಪ್ಲಾಸ್ಮಾ  ಸ್ಥಿತಿ ಸಹ ಇರುತ್ತದೆ ಎಂದು ನಿಮಗೆ ಗೊತ್ತು

ನಾನಿಲ್ಲಿ ನಿಮಗೆ ಮತ್ತೊಂದು ದೃಷ್ಟಾಂತವನ್ನು ವಿವರಿಸುತ್ತೇನೆ ಬನ್ನಿ
ಅತೀವ ಗುರುತ್ವದಿಂದ ಕುಗ್ಗುವ ನ್ಯೂಟ್ರಾನ್ ತಾರೆ ತನ್ನ ಸಾಂದ್ರತೆಯನ್ನು ವಿಪರೀತ ಹೆಚ್ಚಿಸಿಕೊಳ್ಳುತ್ತದೆ 
ಅದರೊಟ್ಟಿಗೆ ಅದರಲ್ಲಿ ಮತ್ತೋಂದು ಪ್ರಕ್ರಿಯೆ ಜರಗುತ್ತದೆ 

ತಾರೆಯಲ್ಲಿರುವ ದ್ರವ್ಯದಲ್ಲಿನ ಎಲ್ಲಾ ಎಲೆಕ್ರಾನ್ ಹಾಗು ಪ್ರೋಟಾನ್ ಗಳು ತಮ್ಮ ಆವೇಶಗಳನ್ನು ಕಳೆದುಕೋಳ್ಳುತ್ತವೆ 
ಈ ಮೂಲಕ ಆ ನ್ಯೂಟ್ರಾನ್ ತಾರೆಯಲ್ಲಿ ಕೇವಲ ನ್ಯೂಟ್ರಾನ್ ಗಳು ಮಾತ್ರ  ಇರುತ್ತವೆ ಅದ್ದರಿಂದಲೇ  ಇರಬೇಕು ಈ ಕಾಯವನ್ನು ನ್ಯೂಟ್ರಾನ್ ತಾರೆ ಎನ್ನುವುದು
ಕೇವಲ ನ್ಯೂಟ್ರಾನ್ ಗಳಿಂದಾದ ಗೋಳವೊಂದು ಹೇಗಿರಬಹುದು? ಕಲ್ಪಿಸಿಕೊಳ್ಳುವುದು ಕಠಿಣವಾಗಬಹುದು
ಪ್ರಕೃತಿಯಲ್ಲೂ ಅಷ್ಟೆ ಪ್ರಬಲರೇ ಗೆಲ್ಲಬೇಕೆಂದಿಲ್ಲ
ನೋಡಿ ಹೇಗಿದೆ
Nuclear Force ಎನ್ನುವುದು ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ಬಲವಾಗಿದೆ Gravitational Force ಎನ್ನುವುದು ವಿಶ್ವದಲ್ಲೇ ಅತ್ಯಂತ ದುರ್ಬಲವಾದ ಬಲವಾಗಿದೆ ಆದರೂ ನೋಡಿ ಹೇಗೆ ಈ ಗುರುತ್ವ ವಿಶ್ವವನ್ನೆ ನಿಯಂತ್ರಿಸಬಲ್ಲದು ಪರಮಾಣು ಸಂರಚನೆ ಎಂಬ ಮೂಲಭೂತ ತತ್ವವನ್ನೇ ಬದಲಿಸಬಲ್ಲದು ಈ ಗುರುತ್ವ 

ಆದರೆ ಇದರಲ್ಲಿ ಇನ್ನೂ ಹಲವು ಸ್ವಾರಸ್ಯಗಳಿವೆ, ಹಲವು ಬಿಡಿಸಲಾಗದ ರಹಸ್ಯಗಳಿವೆ ಅದನ್ನು ಮುಂದಿನ ಸಂಚಿಕೆಯಲ್ಲಿತಿಳಿಸುವೆ

Saturday, May 14, 2011

ನಿಮಗೆ ಪಿರಮಿಡ್ ಗೊತ್ತಾ?

ನಿಮಗೆ ಪಿರಮಿಡ್ ಗೊತ್ತಾ? ಅದೇನು ಮಹಾ ಪುಟಾಣಿ ಮಕ್ಕಳಿಗೂ ಗೊತ್ತು ಬಿಡಿ ಅನ್ನಬಹುದು. ಹಾಗಾದರೆ ಅದು ಎಷ್ಟು ದೊಡ್ಡದು ಅಂತಾ ಗೊತ್ತಾ? ಯಾವ ಪಿರಮಿಡ್ ಹೇಳಿ? ಅದೇ ಈಜಿಪ್ಟಿನ ಗೀಜಾ ಪಿರಮಿಡ್. ಅದರಲ್ಲಿ ಒಂದಾದ ಖಪೂ ಅಥವಾ ಖೆಫ್ರನ್ ನ ಪಿರಮಿಡ್ ನಿರ್ಮಿಸಲು ಸುಮಾರು ಮುನ್ನೂರು ವರ್ಷ ತಗುಲಿತಂತೆ ಅದರ ಬಗ್ಗೆಯೂ ಹಲವು ರಹಸ್ಯಗಳಿವೆ ಬಿಡಿ. 
ಹಾಗಾದರೆ ಈ ಪಿರಮಿಡ್ ಎಷ್ಟು ದೊಡ್ಡದಾಗಿರಬಹುದು ,ಈ ಪಿರಮಿಡ್ ನ ಪೂರ್ಣ ಪ್ರಮಾಣದ ಚಿತ್ರ ತೆಗೆಯಬೇಕೆಂದರೆ ಪಿರಮಿಡ್ ತಳದಿಂದ ಸುಮಾರು ಒಂದು ಕಿಲೋಮೀಟರ್ ದೂರ ನಿಂತು ಕ್ಯಾಮರಾ ಕ್ಲಿಕ್ಕಿಸಬೇಕಂತೆ ಅದರ ಕೆಲವು ಕಲ್ಲುಗಳೂ ಹದಿನೈದು ಟನ್ ಭಾರವಿದೆಯಂತೆ 

ಈ ಪಿರಮಿಡ್ ಬಗ್ಗೆ ಇವನ್ಯಾಕೆ ಇಲ್ಲಿ ಪ್ರಸ್ತಾಪಿಸುತ್ತಿದ್ದಾನೆ ಅಂತ ನಿಮಗೆ ಅನ್ನಿಸಬಹುದು 
ಅದು ಕಳೆದ ಬಾರಿ ನಾ ಕೇಳಿದ ಪ್ರಶ್ನೆಗೆ ಉತ್ತರಿಸಲು?

ನ್ಯೂಟ್ರನ್-ತಾರೆಯಲ್ಲಿ ಒಂದು ಕ್ಯೊಬಿಕ್ ಸೆಂಟಿಮೀಟರ್ ನಷ್ಟು ಅಂದರೆ ಒಂದು ಚಮಚೆಯಷ್ಟು ದ್ರವ್ಯ ಎಷ್ಟು ತೂಗಬಹುದು ಎಂದಿದ್ದೆ .

ಒಂದು ಚಮಚೆ ನ್ಯೂಟ್ರಾನ್ ತಾರೆಯ ದ್ರವ್ಯವನ್ನು ತಕ್ಕಡಿಯ ಒಂದೆಡೆ ಇಟ್ಟರೆ ಅದನ್ನು ಎತ್ತಲು ತಕ್ಕಡಿಯ ಇನ್ನೋಂದೆಡೆ 
ಕೇವಲ
ಕೇವಲ!
ಕೇವಲ!!
ಕೇವಲ!!!
ಕೇವಲ!!!!!!!!

ಒಂಭೈನೂರು ಪಿರಮಿಡ್ ಗಳನ್ನು ಇರಿಸಬೇಕಾಗುತ್ತೆ
ಅಷ್ಟೆ!

ಮುಂದಿನ ಸಂಚಿಕೆಯಲ್ಲಿ ಮತ್ತೆ ಬರುವೆ !
ಬೈ!
 
Thursday, April 14, 2011

ಏಡಿ ನಿಹಾರಿಕೆಯಲ್ಲೂ ಈ ತರಹದ ಒಂದು ಕಾಯವಿದೆ

ಕಳೆದ ಬಾರಿ ಪ್ರಸ್ತಾಪಿಸಿದ ಕಾಯಗಳನ್ನು ಪಲ್ಸರ್ ಎನ್ನುವರು ಅಂತಾ ನಿಮಗೆಲ್ಲ ತಿಳಿದಿದೆ (Pulsating Radio Stars)
ಏಡಿ ನಿಹಾರಿಕೆಯಲ್ಲೂ ಈ ತರಹದ ಒಂದು ಕಾಯವಿದೆ
ಏಡಿ ನಿಹಾರಿಕೆ ಸೂಪರ್ ನೋವಾ ದಿಂದ ಉಳಿದಿರುವ ಅವಶೇಷ ಅಂತ ನಿಮಗೆ ಗೊತ್ತಿದೆ
ಹಾಗೆ ಅದು ಈಗಲೂ ಸೆಕೆಂಡಿಗೆ ಸುಮಾರು ೧೫ ರಿಂದ ೧೭ ಸಾವಿರ ಕಿಲೋಮೀಟರ್ ವೇಗದಲ್ಲಿ ಹಿಗ್ಗುತ್ತಿದೆಯಂತೆ
ಸೂಪರ್ ನೋವಾ ಸ್ಫೋಟದಿಂದ ಉಳಿದ ಕೇಂದ್ರ ನ್ಯೂಟ್ರಾನ್ ತಾರೆ ಅಂದರೆ ಪಲ್ಸಾರ್ ಆಗಿ ಹೋಗಿದೆ ಇದು ಕೇವಲ ೧೦೫೪ ನೇ ಇಸವಿಯಲ್ಲಿ ಸಂಭವಿಸಿದ ಸೂಪರ್ ನೋವಾದ ಅವಶೇಷ
ಏಡಿ ನಿಹಾರಿಕೆಯ ಕೇಂದ್ರದಲ್ಲಿರುವ ಪಲ್ಸಾರ್ ಅನ್ನು ರೇಡಿಯೋ ದೂರದರ್ಶಕ ಅಥವಾ ಎಕ್ಸ್-ರೆ ದೂರದರ್ಶ್ಕ ದಿಂದ
ಕಾಣಬಹುದು

(Photo-downloaded from net )
ತಾರೆಗಳ ಲೋಕದ ಮತ್ತೋಂದು ತರಲೆ ಪ್ರಶ್ನೆ
ಶ್ವೇತಕುಬ್ಜಗಳು ಅಂದರೆ  White Dwarfs  ಅತೀ ಸಾಂದ್ರಕಾಯಗಳು ಅಂತ ಗೊತ್ತು ಹಾಗೆ ಅವುಗಳಲ್ಲಿನ ಒಂದು ಕ್ಯೂಬಿಕ್-ಸೆಂಟೀಮೀಟರ್ ಗಾತ್ರದ ವಸ್ತು ಭೂಮಿಯ ಮೇಲೆ ಸುಮಾರು 15 ರಿಂದ 40 ಟನ್ ಭಾರವಿರುತ್ತದೆ ಅಂತಲೂ ನಿಮಗೆ ತಿಳಿದಿದೆ
ಈಗ ನಾನು ತಿಳಿಸುತ್ತಿರುವ ನ್ಯೋಟ್ರಾನ್ ತಾರೆಗಳು  White Dwarfs ಗಿಂತಲೂ ಖಂಡಿತಾ ಸಾಂದ್ರ ಕಾಯಗಳಾಗಿರಲೇಬೇಕು
ಹಾಗಾದರೆ ಊಹಿಸಿ ನೋಡೋಣ ನ್ಯೂಟ್ರಾನ್ ತಾರೆಯಲ್ಲಿನ ಒಂದು ಕ್ಯೂಬಿಕ್-ಸೆಂಟೀಮೀಟರ್ ಅಂದರೆ ಒಂದು ಚಮಚೆಯಷ್ಟು ವಸ್ತು ಭೂಮಿಯಲ್ಲಿ ಎಷ್ಟು ಭಾರವಿರಬಹುದು ಅಂತ
ಮುಂದಿನ ಸಂಚಿಕೆಯಲ್ಲಿ ಮತ್ತೆ ಬರುವೆ !
ಬೈ!