Saturday, April 17, 2010

ಬಲಶಾಲಿ ಈ ಪುಟಾಣಿ!!

ನೀವು ಉತ್ತರ ಸುಲಭವಾಗಿ ಊಹಿಸಿರಬಹುದು ಅಂತ ಭಾವಿಸಿದ್ದೇನೆ 
Sirius ಅಥವಾ ಲುಬ್ದಕ ಇದು ನಮಗೆ ಆಗಸಲ್ಲಿ ಕಾಣುವ ತಾರೆಗಳಲ್ಲೇ  ಅತ್ಯಂತ ಪ್ರಕಾಶಮಾನವಾದುದು(ಅದಕ್ಕಿಂತಲೂ ಉಜ್ವಲವಾದ್ದು ಯಾವುದಾದ್ರೂ ಇದ್ದ್ರೆ ಅದು ಗ್ರಹ ಅಥವಾ ಬೇರೆ ಯಾವುದೋ ಕಾಯವಾಗಿರಬೇಕು)
.Sirius ತಾರೆ ಮಹಾವ್ಯಾಧ ಅಥವಾ ಓರಿಯನ್ ನಿಹಾರಿಕೆಯ  ಕೆಳಗಿರುವ ಮಹಾಶ್ವಾನ ಅಥವಾ ಕ್ಯಾನಿಸ್-ಮೇಜರ್ ನಕ್ಷತ್ರಪುಂಜದಲ್ಲಿದೆಲ್ಲಿದೆ ಇವತ್ತು ಆಗಸವನ್ನು ನೀವು ದಿಟ್ಟಿಸಿ ನೋಡಿದರೆ ಅದು ಈ ಸಿರೀಸ್ ತಾರೆ ಸುಮಾರು ನಮ್ಮ ತಲೆಯ ಮೇಲೇ ಸ್ವಲ್ಪವಷ್ಟೇ ದಕ್ಷಿಣದ ಕಡೆಗಿದೆ ಅದರ ಅತ್ಯಂತ ಉಜ್ವಲ ಕಾಂತಿ ನಮ್ಮನ್ನು ಸೆಳೆಯದಿರದು
ಈ ತಾರೆ ಬೆಳಗಿನ ಹೊತ್ತು ಉದಯಿಸಿದರೆ ಈಜಿಪ್ಟಿಯನ್ನರು ನೈಲ್ ನದಿಯಲ್ಲಿ ವಾರ್ಷಿಕ-ಪ್ರವಾಹ ಬರುವುದು ಅಂತ ಅರಿಯುತ್ತಿದ್ದರು

(photo  downloaded from net)

ಇದ್ರ ಕಾಂತಿಮಾನ -೧.೪೬(- 1.46) ಇದು ೮.೭(8.7) Light Year  ದೂರವಿದೆ ಹಲವು ತಾರೆಗಳಿಗೆ ಹೋಲಿಸಿದರೆ ಇದು ಸೂರ್ಯನಿಗೆ ಹತ್ತಿರ ಅನ್ನಿಸಬಹುದು ಇದು ಸೂರ್ಯನಿಗಿಂತ ೨೬(26) ಪಟ್ಟು ಉಜ್ವಲವಾಗಿದೆ

ಈ ತಾರೆಯ ಪ್ರಸ್ತಾಪ ಇಲ್ಲೇಕೆ ಅನ್ನಬಹುದು, ಇದೆ ಅದು ಶ್ವೇತ-ಕುಬ್ಜಗಳಿಗೆ ?
ಅದು ಇರುವುದು ಈ ತಾರೆಯಲ್ಲಿ ಅಲ್ಲ ಈ ತಾರೆಯ ಪುಟಾಣಿ ಮಿತ್ರನಲ್ಲಿ
ನಿಮಗೆ ಗೊತ್ತಿರುವಂತೆ ವಿಶ್ವದಲ್ಲಿ ಬಹುಪಾಲು ಜೋಡಿ ತಾರೆಗಳಿವೆ  ಹೀಗೆ ಇದೂ ಕೂಡ ಒಂದು
ಈ   ಸಿರೀಸ್ ತಾರೆಯ ಜೊತೆಗೊಬ್ಬ ಪುಟಾಣಿ ತಾರೆ ಇದೆ ಅದು ಸಿರಿಸ್ ಅನ್ನು ಸುತ್ತುತ್ತಿರಬೇಕಲ್ಲ ಆದರೆ ಹಾಗಾಗಿಲ್ಲ ಬದಲಾಗಿ ಅವೆರಡೂ ಒಟ್ಟಿಗೆ ಅಪ್ಪಾಲೆ-ತಿಪ್ಪಾಲೆ  ಆಡುವಂತೆ ಸುತ್ತುತ್ತಿವೆ ಅಷ್ಟು ಬಲಶಾಲಿ ಆ ಪುಟಾಣಿ!! ಅದರ ಹೆಸರು  PUP

(photo  downloaded from net)
ಅದು  ಸಿರೀಸ್  ಗಿಂತ ೧/೧೦೦೦೦(1/10000) ಪಟ್ಟು ಚಿಕ್ಕದಾಗಿದೆ ಕ್ಷೀಣವಾಗಿದೆ
ಸಿರೀಸ್  ತಾರೆಯ ರೋಹಿತವನ್ನು ಒಮ್ಮೆ ಪರೀಕ್ಷಿಸಿದಾಗ ಅದರಲ್ಲಿ ಎರ‍ಡು ಗುಣಲಕ್ಷಣಗಳು ಕಂಡು ಬಂದಾಗ ಈ ಪುಟಾಣಿ ತಾರೆ ಪತ್ತೆಯಾಯಿತು
ಇದನ್ನು ವಿಶೇಷ ಸೌಲಭ್ಯ ಉಳ್ಳ ಅತೀ ಶಕ್ತಿಶಾಲಿ ದೂರದರ್ಶಕದಿಂದ ಮಾತ್ರ ವೀಕ್ಷಿಸಲು ಸಾಧ್ಯ
ಇದು ಕೇವಲ ೪೨೦೦೦(42000) K.M ವ್ಯಾಸವಿದೆ 
ಆದರೆ ಇದು ಸೂರ್ಯನಿಗಿಂತ ಸ್ವಲ್ಪ ಭಾರವಾಗಿದೆ ಅಂದರೆ ಇದು  ಎಷ್ಟು ಸಾಂದ್ರವಾಗಿರಬಹುದು ಯೋಚಿಸಿ

ನಮ್ಮ ಸೂರ್ಯನೂ ಮುಂದೆ ಓಂದು ದಿನ ನಮ್ಮ ಭೂಮಿಯಷ್ಟು ಗಾತ್ರದ ಶ್ವೇತ-ಕುಬ್ಜವಾಗುತ್ತಾನೆ
ಶ್ವೇತ-ಕುಬ್ಜಗಳಲ್ಲಿ ಏನು ಕ್ರಿಯೆಗಳು ನಡೆಯತ್ತವೆ ಅಂತ ಮುಂದಿನ ಸಂಚಿಕೆಯಲ್ಲಿ ತಿಳಿಸುತ್ತೇನೆ