Monday, November 8, 2010

ಬಾನಾಗಸದಲ್ಲೂ ಇದೆ ದೀಪಾವಳಿ-ಪಟಾಕಿ-ಆಸ್ಫೋಟ

(ಈ ಪೋಸ್ಟ್ ನಲ್ಲಿನ ಎಲ್ಲಾ ಚಿತ್ರಗಳನ್ನು ಜಾಲತಾಣದಿಂದ ಪಡೆಯಲಾಗಿದೆ)

(All the Pictures used in this Post were downloaded from net)

ಕಳೆದ ಬಾರಿ ತಿಳಿಸುತ್ತಿದ್ದೆ ಸೂರ್ಯನಿಗಿಂತ ೧.೪ ಪಟ್ಟು ಹೆಚ್ಚುInitial mass ಇರುವ ತಾರೆಗಳು White Dwarf ಸ್ಥಿತಿಯಲ್ಲೇ ನಿರಂತರವಾಗಿರಲಾರವು ಅಂತ ಅವುಗಳಲ್ಲಿ ಇನ್ನೂ ಹೆಚ್ಚಿನ ತಾಪಮಾನ ಸೃಷ್ಠಿಯಾಗುತ್ತದೆ ಆ ತಾಪದಲ್ಲಿ ಇನ್ನೂ ಕೆಲವು ಭಾರದ Elements ಸೃಷ್ಠಿಯಾಗುತ್ತವೆ ಅದು ಹೀಗೆ

(Above  Picture downloaded from net)

ಮೂರು ಹೀಲಿಯಮ್ ಸೇರಿ ಒಂದು ಕಾರ್ಬನ್ ಉಂಟಾಗುತ್ತದೆ(ಈ ಎಲ್ಲಾ ಕ್ರಿಯೆಗಳ Formula ನಂತರ ರಚಿಸಿ ಪ್ರಕಟಿಸುತ್ತೇನೆ)
ಈ ತಾರೆಗಳ ಕೇಂದ್ರದ ತಾಪ ೧೯೦ ಕೋಟಿ ಡಿಗ್ರೀ ವರೆಗೂ ಸಂಭವವಿದೆ
ಹೀಗೆ ಬಹು ಹಂತದ ಕ್ರಿಯೆಗಳು ನಡೆದು ಭಾರದ Elements ಕೇಂದ್ರದೆಡೆಗೂ ಹಗುರದ Elements ಹೊರಪದರಕ್ಕೂ ಸಾಗುತ್ತವೆ ಹೀಗೆ ಕೇಂದ್ರದಲ್ಲಿ ಕಬ್ಬಿಣ ಅದರ ನಂತರ ಸಿಲಿಕಾನ್ ,ಅದರ ಸುತ್ತ ಆಕ್ಸಿಜನ್ ಹಾಗೆ ನಿಯಾನ್, ಕಾರ್ಬನ್ ಹಾಗು ಹೀಲಿಯಮ್ ಇದ್ದು ಅತ್ಯಧಿಕ ತಾಪಮಾನ ಹಾಗು ಗುರುತ್ವವಿರುತ್ತದೆ

(Above Picture downloaded from net)
ಮೇಲ್ಕಂಡ  ಎಲ್ಲಾNuclear Fission ನಡೆದಾಗ ಶಕ್ತಿ ಸೂಸುತ್ತದೆ ,ಆದರೆ ಕಬ್ಬಿಣ(Fe ) Nuclear fision ಆದಾಗ ಶಕ್ತಿಯನ್ನು ಹೀರುತ್ತದೆ ಇದರಿಂದ ತಾರೆಯ ಸ್ಥಿರತೆಗೆ ಧಕ್ಕೆ ಬರುತ್ತದೆ

ನೀವು ಗಮನಿಸಿರಬಹುದ್ ಹಗ್ಗ ಜಗ್ಗಾಟ (Tug-Of-War) ಆಡುವಾಗ ಯಾರದರೂ ಒಂದು ಪಕ್ಷದವರು ಹಗ್ಗವನ್ನು ಹಟಾತ್ತಗಿ ಬಿಟ್ಟರೆ ಇನ್ನೊಂದು ತಂಡದವರು ಒಬ್ಬರ ಮೇಲೆ ಒಬ್ಬರು ಬೀಳುವುದಿಲ್ಲವೇ ಹಾಗೆ ಈ ಎಲ್ಲೆ ಪದರು-ಪದರಾಗಿರುವ Elements ಒಂದ ಮೇಲೊಂದು ಬೀಳುತ್ತವೆ ಈ ಮೂಲಕ ಆಸ್ಫೋಟಕ್ಕೆ ಕಾರಣವಾಗುತ್ತದೆ ಆಗ ಎಲ್ಲಾ ತಾರೆಯೊಳಗಿನ ಶಕ್ತಿ ಸುಮಾರು 18000 K.Mಪ್ರತೀ ಸೆಕೆಂಡ್ ವೇಗದಲ್ಲಿ ಧಾವಿಸಿ ತಾರೆಯ ಹೊರಕ್ಕೆ ಬರುತ್ತದೆ ಇದು ದೊಡ್ಡ ಆಸ್ಫೋಟಕ್ಕೆ ಕಾರಣವಾಗುತ್ತದೆ

(Above  Picture downloaded from net)
 ಇಷ್ಟು ಸಾಲದೆಂಬಂತೆ ತಾರೆಯ ಹೊರಪದರದಲ್ಲೂ ಈ ಶಕ್ತಿ ಹಲವು ಕ್ರಿಯೆ ನಡೆಸಿ Hydrogen, Helium ವಿವಿಧ ರೀತಿಯಲ್ಲಿ ಸಮ್ಮಿಲನಗೋಂಡು Calcium, Urenium,Laed ನಂತಹ Elements ಗಳಾಗುತ್ತವೆ ಹಾಗು ಅವೆಲ್ಲಾ ಬ್ರಹ್ಮಾಂಡದಲ್ಲಿ ಹರಡಿ ಹೋಗುತ್ತದೆ ಆ ಅಸ್ಫೋಟದ ತೀವ್ರತೆ ಎಷ್ಟಿರುತ್ತದೆಂದರೆ ಹಲ ಕೋಟಿ ಸೂರ್ಯರ ತೇಜಸ್ಸಿಗೆ ಸಮನಾದ ಶಕ್ತಿ ಕೆಲವೇ ದಿನಗಳಲ್ಲಿ ಬಿಡುಗಡೆಯಾಗುತ್ತದೆ


(Above Picture downloaded from net)


ಭೂಮಿಯಲ್ಲಿ ನಿಂತು ನಾವೇನಾದರೂ ನಮ್ಮ Galaxy ಯ Super Nova ನೋಡುವುದು ಸಾಧ್ಯವಾದರೆ ಆ ತಾರೆಯನ್ನು ನಾವು ಮಧ್ಯಾಹ್ನದ ಬಿರುಬಿಸಿಲಲ್ಲೂ ಕಾಣಬಹುದು (1054 ನೇ ಇಸವಿಯಲ್ಲಿ ಸಂಭವಿಸಿದ Super Nova ವನ್ನು ಹೀಗೆ ನಡು ಹಗಲಲ್ಲೂ ಕಾಣಬಹುದಾಗಿತ್ತು ಅಂತ ಇತಿಹಾಸದಲ್ಲಿ ಕಂಡುಬರುತ್ತದೆ ನೆನಪಿರಲಿ ಅದರ ಪಳೆಯುಳಿಕೆಯೀ ಇಂದಿನ ಏಡಿ-ನಿಹಾರಿಕೆ ಅಥವಾCrab -Nebula ಅದು ಈಗಲೂ 16ರಿಂದ17 ಸಾವಿರ K.M ಪ್ರತೀ ಸೆಕೆಂಡಿಗೆ ಹಿಗ್ಗುತ್ತಿದೆ)



ಇದೆಲ್ಲದರ ಬಗ್ಗೆ ಇನ್ನೂ ಎಷ್ಟು ತಿಳಿದರೂ ಇನ್ನೊ ಇದೆ

ನನ್ಗೆ ತಿಳಿದಿರುವುದರಲ್ಲಿ ಸಮಯ-ಇರುವಷ್ಟರಲ್ಲಿ ತಿಳಿಸುತ್ತೇನೆ
ಇದು ಸೂಪರ್ ನೋವ Type II
ಇದರ ಕಥೆ ಇಲ್ಲಿಗೆ ಮುಗಿದಿಲ್ಲ ಇನ್ನೊ ಇದೆ

ಮುಂದಿನ ಸಂಚಿಕೆಯಲ್ಲಿ ತಿಳಿಸುವೆ

8 comments:

ಮಹೇಶ ಭಟ್ಟ said...

ಇಲ್ಲಿ ಹಗ್ಗ ಜಗ್ಗಾಟ ನಡೆಯುವದು ಯಾರ ನಡುವೆ? ಕಬ್ಬಿಣದ ಫಿಶನ್ ಮತ್ತು ಉಳಿದ ಮೂಲವಸ್ತುಗಳ ನಡುವೆಯೇ? ಒಮ್ಮೆಲೇ ಕುಸಿಯಲು ಕಾರಣವೇನು?

ದರ್ಶನ said...

In all Stars there will be a tug-Of war betwen Garavity and Radition pressure

which can be found in older post
(ಗುರುತ್ವ - ವಿಕಿರಣ ಹಗ್ಗ ಜಗ್ಗಾಟ-march 18-2010)

ಚುಕ್ಕಿಚಿತ್ತಾರ said...

ododu tumbaa ide.. nidhaanakke odabekide

thanks...

ಮನಮುಕ್ತಾ said...

good info..thanks.

ದರ್ಶನ said...

ಸಂಪೂರ್ಣ ಮಾಹಿತಿ ನೀಡಲಾಗಲಿಲ್ಲ
ತಪ್ಪಿದ್ದರೆ ತಿಳಿಸಿ
-ಜ್ಞಾನಕೋಶ,ಚುಕ್ಕಿಚಿತ್ತಾರ,ಮನಮುಕ್ತಾ
ಹಾಗು ಎಲ್ಲಾ ಓದುಗರಿಗೆ ಧನ್ಯವಾದಗಳು

ಮುಂದಿನ ಸಂಚಿಕೆಗಳು ಮತ್ತೆ ತಡವಾಗಬಹುದು
ದಯವಿಟ್ಟು ಹೀಗೆ ಮುಂದುವರೆಸಿಕೋಂಡು ಹೋಗುವಿರೆಂದುಕೊಂಡಿದ್ದೇನೆ

ವಂದನೆಗಳು

ಜಲನಯನ said...

ದರ್ಶನ್ ನಿಮ್ಮ ಬ್ಲಾಗ್ ಬಹಳ ಖುಷಿ ಕೊಡ್ತು..ಬಹುಶಃ ಸುಮಾವ್ರು ನಿಮ್ಮ ಬ್ಲಾಗ್ ಗೆ ಭೇಟಿ ಕೊಟ್ಟಿರ್ಲಿಕ್ಕಿಲ್ಲ..ಅವರೂ ವಿಜ್ಞಾನ ಬ್ಲಾಗ್ ನಲ್ಲಿ ಬಹಳ ಆಸಕ್ತಿ ಇರುವವರು...ನನ್ನ ಸೈನ್ಸ್ ಅಂಡ್ ಶೇರ್ ಸಹಾ (ನನ್ನ ಜಲನಯನ ಬ್ಲಾಗ್ ಮೂಲಕ ಲಿಂಕ್ ಸಿಗುತ್ತೆ) ನಾನು ವಿಜ್ಞಾನವನ್ನು ಜನಪ್ರಿಯ ಮಾಡುವ ಕಿಶೋರ ಪ್ರಯತ್ನದ ಬ್ಲಾಗ್...ನಿಮ್ಮ ಭೌತಶಾಸ್ತ್ರದ ಈ ಅಂಶಗಳು ಚನ್ನಾಗಿ ಮೂಡಿವೆ...ನಿಯಮಿತ ಬರ್ತೇನೆ..ಬರೆಯುತ್ತಿರಿ..

ವಿ.ರಾ.ಹೆ. said...

ಚೆನ್ನಾಗಿದೆ ಬ್ಲಾಗ್.

ಥ್ಯಾಂಕ್ಸ್

ದರ್ಶನ said...

@ಜಲನಯನ
ಧನ್ಯವಾದಗಳು ನಿಮ್ಮ ಬ್ಲಾಗ್ ಹೊಸ ವಿಜ್ಞಾನದ ವಿಚಾರಗಳ ಬಗ್ಗೆ ಉತ್ತಮ ಮಾಹಿತಿ ನೀಡಿದೆ

@ವಿ.ರಾ.ಹೆ
ಧನ್ಯವಾದಗಳು


ಪ್ರಿಯ ಬ್ಲಾಗ್ ಮಿತ್ರರೇ
ನಿಮ್ಮ ಅನಿಸಿಕೆಗಳೊಂದಿಗೆ ತಪ್ಪುಗಳಿದ್ದರೆ,ಹಾಗು ಅನುಮಾನವಿದ್ದರೆ
ದಯವಿಟ್ಟು ತಿಳಿಸಿ

ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ಧನ್ಯವಾದಗಳು