Saturday, November 7, 2009

ಕಳೆದ ಬಾರಿ ತಾರೆಗಳ ದೂರದ ಬಗ್ಗೆ ಪ್ರಸ್ತಾಪಿಸುತ್ತಿದ್ದೆ
ಬೆಸಲ್ ನ ವಿಧಾನದಂತೆ ತಾರೆಗಳ ದೂರ ಕಂಡುಹಿಡೀಬೇಕಾದ್ರೆ ಆರು ತಿಂಗಳು ಕಾಯಬೇಕೆಂದೇನಿಲ್ಲ
"ಪಾರ್ಸೆಕ್" ಮಾನವನ್ನು ಬಳಸಿದರಾಯಿತು
ಅಂದರೆ ಒಂದು ತಾರೆಯಿಂದ ಒಂದು ಸೆಕೆಂಡ್-ಕಂಸದಷ್ಟು ಕೋನ ಸೂರ್ಯನಿಗೆ ಆಧಾರವಾಗಿ ಬಂದಿದ್ದರೆ ಅದು ಒಂದು ಪಾರ್ಸೆಕ್ ಅದು ಸರಿಯಾಗಿ ೩.೨೫೬ ಜ್ಯೊತಿರ್ವರ್ಷಗಳಿಗೆ ಸಮ

ಬೆಸಲ್ ನ ವಿಧಾನದಿಂದ ಸುಮಾರು ೩೦೦-೪೦೦ ಜ್ಯೋತಿರ್ವರ್ಶಗಳ ದೂರದಲ್ಲಿರುವ ತಾರೆಗಳ ದೂರ ಏನೋ ಕಂಡುಹಿಡೀಬಹುದು ಆದ್ರೆ ಅದಕ್ಕೂ ಹೆಚ್ಚು ದೂರದಲ್ಲಿರೋ ತಾರೆಗಳು ಹಾಗು ನಮ್ಮ ಗೆಲಾಕ್ಸಿಯಿಂದಲೂ ದೂರದಲ್ಲಿರೋ ತಾರೆಗಳ ದೂರ ಕಂಡುಹಿಡಿಯೋದು ಹೇಗೆ? ಏಕೆಂದರೆ ಆ ದೂರ ಆ ಗಾತ್ರಕ್ಕೆ ಹೋಲಿಸಿದರೆ ನಮ್ಮ ಸೌರವ್ಯೂಹವೂ ಸಹ ತುಂಬಾ ಚಿಕ್ಕದ್ದಾಗಿಬಿಡುತ್ತದೆ, ಸ್ವತ: ಬೆಸಲ್ ಸಹ ಮೊದಲ ಪ್ರಯತ್ನದಲ್ಲಿ ದೂರದ ತಾರೆಗಳ ವಿಚಾರದಲ್ಲಿ ಸೊತಿದ್ದನ್ನು ನೆನಪಿಸಬಹುದು ,ಅದರೆ ಈ ಅನಂತದೂರವನ್ನೂ ಕಂಡುಹಿಡಿಯೋಕೆ ಸಹ ನಮ್ಮ ವಿಜ್ಞಾನಿಗಳ ಬತ್ತಳಿಕೆಯಲ್ಲಿ ಅಸ್ತ್ರವಿದೆ, ಅದು ಹೇಗೆ ಅಂತ ತಿಳಿಸುತ್ತೇನೆ ಕೇಳಿ

ಇಲ್ಲ!ಇಲ್ಲ! ಮುಂದೆ ಓದಿ

ಬೆಳಕನ್ನು ಅಳೆಯುವಾಗ ಅಲ್ಲೂ ಸಹ ವಿಲೋಮ ವರ್ಗ ನಿಯಮ ಎಂಬುದೋಂದಿದೆ
(inverse squre law of photometry)
ಅದರಂತೆ ಒಂದು ಬೆಳಕಿನ ಮೂಲದ ಕಾಂತಿ ಅದು ಇರುವ ದೂರದ ವರ್ಗಕ್ಕೆ ವಿಲೋಮಾನುಪಾತದಲ್ಲಿರುತ್ತದೆ
(the illumination at a point on a surface is inversly propotional to squre of the distance from the source)
ಅಂದರೆ ದೂರ ಎರಡು ಪಟ್ಟು ಹೆಚ್ಚಿದರೆ ಕಾಂತಿಯು ೧/೪ ಭಾಗದಷ್ಟು ಕಡಿಮೆಯಾಗುತ್ತದೆಯೆಂದು ತಿಳಿಯಬಹುದು
ಈ ಕೆಲಸವನ್ನು ಸುಲಭವಾಗಿಸಿದ್ದು ಕೆಲವು ವಿಶೇಷ ತಾರೆಗಳು

ಇನ್ನೋಂದು ವಿಷಯ ಕೇಳಿ-- ನಕ್ಷತ್ರಗಳೇನೋ ಮಿನುಗುತ್ತವೆ ಏಕೆಂದರೆ ಭೂ ವಾತಾವರಣ, ಅವುಗಳ ದೀಪ್ತಿಯ ಕಾರಣದಿಂದ ಡಿಪ್-ಡಿಮ್ ಎನ್ನುವಂತೆ ಭಾಸವಾಗುತ್ತವೆ ಅಂತ ನಿಮಗೆಲ್ಲಾ ಗೊತ್ತು ಆದರೆ ಕೆಲವು ತಾರೆಗಳು ನಿಜವಾಗಿಯೂ ತಮ್ಮ ಕಾಂತಿಯಲ್ಲಿ ಬದಲಾವಣೆ ತೋರುತ್ತವೆ ನೆನಪಿರಲಿ ಡಿಪ್-ಡಿಮ್ ಎನ್ನುವಷ್ಟು ವೇಗವಾಗಿ ಅಲ್ಲ, ಕೆಲವು ದಿನಗಳ ಅಥವಾ ತಿಂಗಳುಗಳ ಕಾಲದ ಬದಲಾವಣೆ ಇರಬಹುದು ಈ ತಾರೆಗಳನ್ನ variable stars ಅಂತೀವಿ

ಈ ಕಥೆ ಯಾಕಪ್ಪಾ ಅಂತ ಕೇಳಬಹುದು -ಇದಕ್ಕೂ ತಾರೆಗಳ ದೂರ ಕಂಡುಹಿಡಿಯೋದಿಕ್ಕೊ ಸಂಭಂಧವಿದೆ
CEPHEUS ನಕ್ಷತ್ರ ಪುಂಜದಲ್ಲಿ delta CEPHY ಅನ್ನೋ ತಾರೆಯಿದೆ ಅದು ತನ್ನ ಕಾಂತಿಯಲ್ಲಿ ಸರಿಯಾಗಿ ೬೦ ದಿನಗಳಿಗೊಮ್ಮೆ ಬದಲಾವಣೆ ತೋರುತ್ತದೆ ಹೇಗಂದ್ರೂ delta CEPHY ದೂರ ನಮಗೆ ತಿಳಿದಿದೆ ಅದರ ಬದಲಾಗೋ ಕಾಂತಿಯನ್ನು ಬೇರೆ ತಾರೆಗಳ ಕಾಂತಿಗೆ ಹೋಲಿಸಿ ನೋಡಿದರಾಯಿತು

ಈ ರೀತಿ ತಾರೆಗಳ ದೂರ ಕಂಡುಹಿಡಿಯೋ ಸಮಸ್ಯೆ ನಿವಾರಣೆ ಆಯ್ತು ,, ಇನ್ನು ಮುಂದೆ ತಾರೆಗಳ ದೂರದ ಬಗ್ಗೇನೆ ಕೊರಿಯಲ್ಲ ,, ನಕ್ಷತ್ರಗಳ ಒಳಗೆ ಏನಿದೆ ಅದು ಹೇಗೆ ಗೊತ್ತಾಯ್ತು ಅನ್ನೊ ಆಸಕ್ತಿದಾಯಕ ವಿಷಯಗಳನ್ನ ತಿಳಿಸುತ್ತೇನೆ ಅವು ತುಂಬಾ ಕುತೂಹಲಭರಿತ ವಾಗಿದ್ದು ರಂಜನೀಯವಾಗಿವೆ ಈ ಸಂಚಿಕೆ ಬೊರ‍್ ಆಯ್ತಾ, ಮುಂದಿನ ಬಾರಿಯ ವಿಷಯದ ಪ್ರತಿ ವಾಕ್ಯವೂ ಅಸಕ್ತಿ ಕೆರಳಿಸಬಹುದು ಅಂತ ನಂಬಿದ್ದೇನೆ



ಇನ್ನೊಂದು ವಿಚಾರ ವಸ್ತು-ವಿಷಯದಿಂದ ಹೊರಗಿನ ವಿಚಾರ ಪ್ರಸ್ತಾಪಿಸುತ್ತಿದ್ದೇನೆ ಎಂದುಕೊಳ್ಳಬೇಡಿ
ಪ್ರಳಯದ ಫ್ಯಾಂಟಸಿ ಬಗ್ಗೆ ಯೋಚನೆ ಮಾಡಬೇಡಿ,ವರ್ಷಗಟ್ಟಲೆ ವಿಜ್ಞಾನ ಓದಿದರೂ ಅದರ ತತ್ವಗಳನ್ನ ಎಂದೂ ಜೀವನದಲ್ಲಿ ಅಳವಡಿಸಿಕೊಳ್ಳದ ಜನರಿಗೆ
"ಪ್ರಳಯ" "ಗ್ರಹಗಳು ಸಾಲಾಗಿ ಬಂದರೆ ಭೂಮಿ ನಾಶವಾಗುತ್ತೆ" ಅನ್ನೊ ವಿಷಯ ಬಂದಾಗಲೆಲ್ಲಾ ವಿಜ್ಞಾನದ ನೆನಪಾಗಿಬಿಡುತ್ತೆ

ವಿಜ್ಞಾನದ ಬಗ್ಗೆ ತಿಳುವಳಿಕೆ ಇಲ್ಲದೆ ಇದ್ರೆ ಎಷ್ಟು ನಷ್ಟವೂ ಅದಕ್ಕಿಂತ ಸಾವಿರ ಪಾಲು ನಷ್ಟ ವಿಜ್ಞಾನವನ್ನು - ಅವೈಜ್ಞಾನಿಕವಾಗಿ ಅರ್ಥೈಸುವುದರಿಂದಾಗುತ್ತದೆ ನೆನಪಿರಲಿ
ಆಧುನಿಕ ವಿಜ್ಞಾನವೂ ಮೂಢನಂಬಿಕೆಗಳಿಂದ ಮುಕ್ತವಾಗಿಲ್ಲ
"ಈ ಮೆಸ್ಸೆಜ್ ಹತ್ತು ಜನರಿಗೆ ಫ಼ಾರ್ವರ್ಡ್ ಮಾಡಿ ಶುಭವಾಗುತ್ತದೆ","ಗ್ರಹಗಳು ಸಾಲಾಗಿ ಬಂದರೆ ಭೂಮಿ ನಾಶ" ಇವೆಲ್ಲಾ ಸ್ಯಾಂಪಲ್ ಗಳು ಅಷ್ಟೆ",ಪ್ರಳಯ ಆಗಲಿ ಬಿಡಲಿ ನಾವು ನಮ್ಮ ಒಳ್ಳೆಯ ಕೆಲಸ ಮಾಡೋದನ್ನ ನಿಲ್ಲಿಸೋದು ಬೇಡ ಅಷ್ಟೆ, "ಪ್ರಳಯಕ್ಕಿಂತ ಅದರ ಭಯವೇ ಹೆಚ್ಚು ಅಪಾಯಕಾರಿ"


ಮಾಯನ್ನರ ಭವಿಷ್ಯ ನಿಜವಾಗುತ್ತೋ ಇಲ್ಲವೂ ಆದರೆ
ಈ ಪ್ರಳಯದ ಫ್ಯಾಂಟಸಿಯಿಂದ ಕೆಲವು ವಿಷಯಗಳ ಬಗ್ಗೆ ಅಂತೂ ಭವಿಷ್ಯ ಹೇಳಬಹುದು

ಟಿವೀ ಹಾಗು ಮಾಧ್ಯಮಗಳಿಗೆ ೨೦೧೨ ಸುಗ್ಗಿಯ ವರ್ಷ, ಹಲವು ಚಾನಲ್ ಗಳ ಟಿ.ಅರ್.ಪಿ ರೇಟ್ ಖಂಡಿತಾ ಏರುತ್ತದೆ ಪತ್ರಿಕೆಗಳ ಮಾರಾಟ ಹೆಚ್ಚುತ್ತದೆ
ಜನ ಹೆದರಿ ಸ್ಥಿಮಿತ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಬಹುದು
ಅದೇ ಭಯದಲ್ಲಿ ಅಪಘಾತ-ಟ್ರಾಫಿಕ್ ಜಾಮ್ ಹೆಚ್ಚಬಹುದು,ಒಟ್ಟಾರೆ ಸಂಚಾರ ವ್ಯವಸ್ತೆ ಸರಿಯಾಗಿರುವುದು ಅನುಮಾನ
ಫೊನ್,ನೆಟ್ ಜಾಲಗಳ ಒತ್ತಡ ಹೆಚ್ಚಾಗಿ ವ್ಯವಸ್ಥೆ ಕೆಟ್ಟುಹೋಗಬಹುದು
ಢೋಂಗಿ ಬಾಬಾಗಳು-ಸನ್ಯಾಸಿಗಳು ಜನರನ್ನು ತರಹೇವಾರಿ ರೀತಿಯಲ್ಲಿ ವಂಚಿಸಬಹುದು
ಜನ ತಮ್ಮ ಗಮನ ಪ್ರಳಯದ ಕಡೆಗೆ ಇಡುವುದರಿಂದ ಅಪರಾಧ ಪ್ರಮಾಣ ಹೆಚ್ಚಬಹುದು
ಹಾಗೆ ಪ್ರಳಯದ ಪರಿಹಾರ ಮಾಡಿಕೊಡುತ್ತೇವೆ ಎನ್ನುವರಿಗೆ ಎನ್ನುವವರಿಗೂ ಬಂಪರ್ ಲಾಭ
ಇದೆಲ್ಲದರಿಂದ ಸ್ಟಾಕ್ ಮಾರ್ಕೆಟ್ ಕುಸಿದು ಅರ್ಥವ್ಯವಸ್ಥೆ ಹಾಳಾಗಬಹುದು
ಪ್ರಳಯದ ಪರ-ವಿರೋಧ ಬೆಟ್ಟಿಂಗ್-ಬಾಜಿಯಲ್ಲಿ ಜನ ಅತಂತ್ರರಾಗಬಹುದು
ಕೊನೆಗೆ ಹೇಗೂ ಪ್ರಳಯವಾಗುತ್ತದೆ ಎಂದು ಎಲ್ಲಾ ಸುಖಗಳನ್ನೂ ಅನುಭವಿಸಿಯೇ ತೀರುತ್ತೇನೆ ಎಂದು ಹಲವರು ತಮ್ಮ ಮಾನ-ಪ್ರಾಣ ಕಳೆದುಕೊಳ್ಲಬಹುದು

ದಯವಿಟ್ಟು ಮೇಲಿನ ಪಟ್ಟಿಯಲ್ಲಿ ನಾವು ಸೇರದಂತೆ ಎಚ್ಚರವಾಗಿರಬೇಕು

ಈಗ ಹೇಳಿ ಪ್ರಳಯ ಅಪಾಯಕಾರಿಯೋ ಅದರ ಭಯ ಹೆಚ್ಚು ಅಪಾಯಕಾರಿಯೋ

ದಯವಿಟ್ಟು ಇಂತಹ ವಿಷಯಗಳಲ್ಲಿ ಬೇರೆಯವರಿಗೆ ಸರಿಯಾದ ಮಾಹಿತಿ ನೀಡಿ
ಇಲ್ಲದಿದ್ದರೂ ಪರವಾಗಿಲ್ಲ ಊಹಾಪೂಹಗಳನ್ನು ಹಬ್ಬಿಸದಿದ್ದರೆ ಅದೇ ನಾವು ಈ ಪ್ರಳಯವನ್ನು ತಡೆದಷ್ಟು ಉಪಕಾರವಾಗುತ್ತದೆ

ಮುಂದಿನ ಸಂಚಿಕೆಯಲ್ಲಿ ಭೇಟಿಯಾಗೋಣ ,ನೇರವಾಗಿ ತಾರೆಗಳ ಓಳಗೆ ಹೋಗೋಣ

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

2 comments:

Hari Prasad said...

ಒಳ್ಳೆಯದಾಗಿ ಬರೆದಿದ್ದೀರಿ.

ತಮ್ಮ ಖಗೋಳದ ಮೇಲಿನ ಆಸಕ್ತಿ ಹೀಗೆ ಮುಂದುವರೆಯಲಿ..

ತಮಗೆ "ಖಗೋಳದ" ಜೊತೆಗೆ ಕೈ ಜೋಡಿಸಿ ಕನ್ನಡಕ್ಕೆ ಖಗೋಳ ಲೋಕವನ್ನು ಪರಿಚಯಿಸುವ ಆಸಕ್ತಿ ಇದ್ದರೆ..

ನನ್ನನ್ನು hari.prasad4@wipro.com ನಲ್ಲಿ ಸಂಪರ್ಕಿಸಿ..

ಇಬ್ಬರೂ ಒಂದಾಗಿ "khagola" ಕೈ ಜೋಡಿಸಿ ಕೆಲಸ ಮಾಡೋಣ..

ತಮ್ಮ ಲೇಖನಗಳಿಗೆ "ಖಗೋಳ"ದ ಬಾಗಿಲು ಸದಾ ತೆರೆದಿದೆ..

Hari Prasad said...

One Small suggestion from my experience:)
Shorter the article.. Grater the number of readers..
If you want to write a long article which you can't avoid..
Devide it into half and make it interesting so that readers will wait for next half.. :)
A friendly suggestion. You can delete the comment after reading this, If you wan't!!:)