Saturday, December 18, 2010

ಎಲ್ಲಿಂದ ಬಂದವು ಈ ELEMENTS

ಈ ಸೂಪರ್ನೋವಾಗಳಲ್ಲಿ NUCLEIOSYNTHESIS ಕ್ರಿಯೆಗಳು ನಡೆದು ಹಲವು ರೀತಿಯ ELEMENTS ಸೃಷ್ಟಿಯಾಗುತ್ತೆ ಅಂತ ನಾ ತಿಳಿಸಿದೆನಲ್ಲ ಹಾಗಾದರೆ ಆ ELEMENTS ಗಳೆಲ್ಲಾ ಎಲ್ಲಿ ಹೋದವು ವಿಶ್ವದಲ್ಲಿಡೆ ಇರುವ ಅವಕಾಶದಲ್ಲಿ ಚದುರಿ ಹೋಗಿರಬಹುದು ಅಲ್ಲವೆ ಇರಬಹುದು ಆದರೆ ಒಂದು ಘಟನೆ ವಿಜ್ಞಾನಿಗಳು ಬೇರೆ ರೀತಿಯಲ್ಲೂ ಯೋಚಿಸುವಂತೆ ಮಾಡಿತು

ಉಲ್ಕೆ-ಉಲ್ಕಾಪಾತ  ನಿಮಗೆ ಗೊತ್ತೇ ಇದೆ(ಈ ವಾರ ಉಲ್ಕಾಪಾತ ಕಾಣಿಸಬೇಕಿತ್ತು ಕಾಣಲಿಲ್ಲ ನಿಮಗೇನಾದ್ರೂ ಗೊತ್ತಿದ್ರೆ ತಿಳಿಸಿ)
ನಮ್ಮ ಸೌರವ್ಯೂಹದಲ್ಲಿರುವ ಅನಿಯತ-ಕಾಯಗಳು ಚಿಕ್ಕವು ನಮ್ಮ ಭೂ-ವಾತಾವರಣವನ್ನು ಪ್ರವೇಶಿಸಿ ಉರಿದು ಹೋಗುತ್ತವೆ ಅವೇ ಉಲ್ಕೆಗಳು ಕೆಲವು ಭಾರಿಗಾತ್ರದವು ಭೂಮಿಯ ವಾತಾವರಣದ ಒಳಗೆ ಪ್ರವೇಶಿಸಿ ನೆಲಕ್ಕೆ ಢಿಕ್ಕಿ ಹೋಡೆಯುವುದೂ  ಇದೆ

ಹೀಗೆ ಒಂದು ಉಲ್ಕೆ ೧೯೬೯ ನೇ ಇಸವಿಯಲ್ಲಿ ಮೆಕ್ಸಿಕೋದ ಗ್ರಾಮ ಒಂದರಲ್ಲಿ ಬಂದು ಬಿದ್ದಿತು ಅದರ ಅಳಿದುಳಿದ ತುಣುಕುಗಳೇ ಸುಮಾರು ೨೦೦೦ಕಿಲೋ ಇತ್ತು

ಈಗ ಅದರಲ್ಲಿನ ಐಸೋಟೋಪ್ ಗಳ ಲೆಕ್ಕಕ್ಕೆ ಬರೋಣ (ಒಂದು ಮೂಲವಸ್ತುವಿನ ಪ್ರೋಟಾನ್ ಸಂಖ್ಯೆ ಒಂದೇ ಆಗಿದ್ದು ನ್ಯೂಟ್ರಾನ್ ಸಂಖ್ಯೆ ಬೇರಾಗಿದ್ದರೆ ಅವು ಐಸೋಟೋಪ್) ಉದಾಹರಣೆಗೆ ಕಾರ್ಬನ್ ೧೨ ಹಾಗು ೧೪
ಹಾಗೆ ವಿಕಿರಣಶೀಲ ಐಸೋಟೋಪ್ ಗಳು ಕಾಲಾನಂತರ ಬೇರೇ ಮೂಲವಸ್ತುವಾಗಿ ಬದಲಾಗುವುದರಿಂದ ಅವುಗಳ ತೂಕ ಕೆಲಕಾಲಾನಂತರ ಅರ್ಧಕ್ಕೆ ಕುಸಿಯುತ್ತೆ ಇದನ್ನೆ Half Life Period ಎನ್ನುವುದು ಇದರ ಆಧಾರದಿಂದ ಒಂದು ವಸ್ತು ಎಷ್ಟು ಹಳೆಯದು ಎಂದು ತಿಳಿಯಬಹುದು

ಈಗ ನೋಡಿ ಇಂತಹ ಒಂದು ವೃತ್ತಾಂತ
ಅಲ್ಯುಮಿನಿಯಮ್ ಪರಮಾಣು ತೂಕ೨೬ ಇರುವ ಐಸೋಟೋಪ್   ಈ ರೀತಿ-Nuclear Dacy--ಯಿಂದ  ಮೆಗ್ನೀಷಿಯಮ ಅಗಿಬಿಡುತ್ತದೆ

ಈ ವ್ಯತ್ಯಾಸದ ಆಧಾರದಿಂದ ಮೆಕ್ಸಿಕೋ ಬಳಿ ದೊರಕಿದ ಉಲ್ಕೆ ೫೦೦ ಕೋಟಿ ವರ್ಷಕ್ಕೂ ಹಳೆಯದು ಎಂದು ತೀರ್ಮಾನಿಸಲಾಯಿತು

ಇದು ಮೇಲ್ನೋಟಕ್ಕೆ ಸಾಧ್ಯವಿರಲಿಲ್ಲ ಹೇಗೆ ಎನ್ನುತ್ತೀರ
ಮುಂದೆ ಓದಿ
(ಕನ್ನಡದಲ್ಲಿ ವಿಜ್ಞಾನದ ವಿಷ್ಯಗಳನ್ನು ವಿವರಿಸುವಾಗ ಉಪಕಥೆಗಳು ಬಂದರಂತೂ ಓದುಗರಾದ ನಿಮಗೇ ತಲೆ ತಿನ್ನಬಹುದು ಇವ ಏನನ್ನು ತಿಳಿಸ ಹೋರಟಿದ್ದಾನೆ  ಎಂದೆನಿಸಬಹುದು ಹಾಗಿದ್ದ ಮೇಲೆ ರಚಿಸುವ ನನ್ನ ಗತಿ ಕಲ್ಪಿಸಿಕೋಳ್ಳಿ ನೋಡೋಣ ನನಗೇಕೋ Net ನಿಂದ -Copy-ಮಾಡಿ ಭಟ್ಟಿ ಇಳಿಸಲು ಇಷ್ಟವಿಲ್ಲ ಸಾಕಷ್ಟು ಅಧ್ಯಯನ ಮಾಡಿಯೇ ತಿಳಿಸು ಎಂದು ನನ್ನ ಧ್ಯೇಯ)

ನಾವೆಲ್ಲಾ ನಮ್ಮ ಹೈಸ್ಕೂಲಿನ ಖಗೋಳವಿಜ್ಞಾನದ ಪಾಠಗಳಲ್ಲಿ ಓದಿರುತ್ತೇವೆ ಸೂರ್ಯನಸುತ್ತ ಮೋಡದ ರೀತಿಯ ವಸ್ತುಗಳಿದ್ದವು ಅವು ಸುತ್ತುತ್ತಾ ಸಾಂದ್ರವಾಗಿ ಗ್ರಹಗಳಾದವು ಉಳಿದವು ಉಲ್ಕೆ ಕ್ಷುದ್ರಗ್ರಹ ಇತ್ಯಾದಿಗಳಾದವು ಅಂತ  ಸೂರ್ಯ-ಸೌರವ್ಯೂಹದ ಕಥೆ ಇಲ್ಲಿಂದ ಪ್ರಾರಂಭವಾಗುತ್ತಿತ್ತು
ಆಂದರೆ ನಮ್ಮ ಸೌರವ್ಯೂಹದಲ್ಲಿನ ಎಲ್ಲಾ ವಸ್ತುಗಳು ಸೂರ್ಯನ ಜೊತೆಯಲ್ಲೇ ಜನ್ಮ ತಾಳಿದವು ಎಂದು

ಆದರೆ ಮೆಕ್ಸಿಕೋ ಬಳಿ ದೋರಕಿದ ಉಲ್ಕೆಯನ್ನು ಐಸೋಟೋಪ್ ಗಳ ಆಧಾರದ ಮೇಲೆ ಅದರ ಜನ್ಮ ದಿನಾಂಕ ಜಾಲಾಡಿದಾಗ ದೋರೆತ ಉತ್ತರ ೫೧೦ ಕೋಟಿ ವರ್ಷಗಳಿಗೂ ಮೊದಲಿನದಾಗಿತ್ತು ಆದರೆ  ಸೂರ್ಯನ ಹುಟ್ಟಿಗೂ ಮೊದಲು ಎಂದಾಯಿತು ಎಲ್ಲಿಂದ ಬಂದಿತು ಈ ELEMENTS
ನಿಮಗೇನದರೂ ಗೊತ್ತಿದ್ದರೆ ತಿಳಿಸಿ
ನನಗೆ ಗೊತ್ತಿದ್ದರೆ ಮುಂದಿನ ಸಂಚಿಕೆಯಲ್ಲಿ ತಿಳಿಸುವೆ

2 comments:

ಮಹೇಶ ಭಟ್ಟ said...

ಕುತೂಹಲದಿಂದ್ದೇನೆ. ವಸ್ತುಗಳ ಆಯುಷ್ಯ ನಿರ್ಧರಿಸುವ ವಿಧಾನ ತುಂಬಾ ಆಸಕ್ತಿಕರವಾಗಿದೆ. ಈ ವಿಧಾನವನ್ನು ಎಲ್ಲಾ ವಸ್ತುಗಳಿಗೂ ಅನ್ವಯಿಸಬಹುದೇ? ಈ ವಿಧಾನ ಎಷ್ಟರ ಮಟ್ಟಿಗೆ ನಿಖರವಾಗಿದೆ?

ದರ್ಶನ said...

@ಮಹೇಶ ಭಟ್ಟ
-ನಿಮ್ಮ ಅಸಕ್ತಿಗೆ ಧನ್ಯವಾದಗಳು ಖಂಡಿತಾ ಅನ್ವಯಿಸಬಹುದು ಕಾರ್ಬನ್ ೧೨ ಹಾಗು ೧೪ ರ ಸಹಾಯದಿಂದ ಪ್ರಾಚ್ಯವಸ್ತುಗಳ ಕಾಲವನ್ನು ನಿರ್ಧರಿಸುತ್ತಾರೆ
ಆದರೆ ನನಗೆ ತಿಳಿದಿರುವ ಮಿತಿಯಲ್ಲಿ ಇದು ಹೆಚ್ಚು ನಿಖರವಾಗಿರದು ಇದರಲ್ಲಿ ವರ್ಷಗಳ ವ್ಯತ್ಯಾಸವನ್ನು ಮಾತ್ರ ಕಂಡುಹಿಡಿಯಲು ಸಾಧ್ಯ ಏಂದುಕೋಂಡಿದ್ದೇನೆ