Sunday, December 19, 2010

ನಾವೆಲ್ಲಾ ಸೂಪರ್ನೋವಾದ ತುಣುಕುಗಳಷ್ಟೆ!

ಆ ಉಲ್ಕೆಯಲ್ಲಿನ ಆ ಉಲ್ಕೆಯಲ್ಲಿನ Elementsಸೂರ್ಯನ ಹುಟ್ಟಿಗೂ ಮೊದಲಿನದಾಗಿರಬೇಕಲ್ಲ
ಅದರ ರಹಸ್ಯವಿಷ್ಟೆ

ಸೂರ್ಯ-ಸೌರವ್ಯೂಹ ಜನ್ಮ ತಾಳುವ ಮೊದಲು ಸೂರ್ಯನಗಿಂತ ಭಾರಿ ಗಾತ್ರದ ತಾರೆಯೋಂದು ಸೂರ್ಯ-ಸೌರವ್ಯೂಹ ಈಗಿರುವ ಸ್ಥಳದಲ್ಲಿ ಇದ್ದಿರಬೇಕು ಅದು ಸೂಪರ್ನೋವಾ ಅಸ್ಫೋಟನೆಗೋಂಡು ಅದರ್ ಚೂರುಗಳು ಎಲ್ಲೆಡೆಗೆ ಚದುರಿರಬೇಕು ಹಾಗೆ ಅವು ಸೂರ್ಯನಿಂದ ಕಾಲಕ್ರಮೇಣ ಅಕರ್ಷಿತಗೋಂಡು ಸೂರ್ಯನ ಸುತ್ತ ಸುತ್ತುತ್ತಿರಬೇಕು ಈ ಕಾರಣದಿಂದ ಈ ಎಲ್ಲಾ -Elements ಭೂಮಿ ಸೌರವ್ಯೂಹದಲ್ಲಿ ಕಂಡುಬರುತ್ತಿವೆ
ಅಂದರೆ ನಮ್ಮ ದೇಹದಲ್ಲಿರುವುದೂ ಈ -Elements ಗಳೇ ಅಲ್ಲವೇ

ವಿಜ್ಞಾನಿ ಕಾರ್ಲ್ ಸಗನ್ ಅಬಿಪ್ರಾಯದಂತೆ ನಾವೆಲ್ಲಾ ಸೂಪರ್ನೋವಾದ ತುಣುಕುಗಳಷ್ಟೆ!

ಎಷ್ಟು ವಿಸ್ಮಯ ಅಲ್ಲವೆ!!
ಮುಂದಿನ ಸಂಚಿಕೆ ಯಲ್ಲಿ ತಾರೆಗಳಲ್ಲಿ ಸೂಪರ್ ನೋವಾದ ನಂತರದ ಹಂತಗಳನ್ನು ತಿಳಿಸುವೆ
ಬೈ !!

Saturday, December 18, 2010

ಎಲ್ಲಿಂದ ಬಂದವು ಈ ELEMENTS

ಈ ಸೂಪರ್ನೋವಾಗಳಲ್ಲಿ NUCLEIOSYNTHESIS ಕ್ರಿಯೆಗಳು ನಡೆದು ಹಲವು ರೀತಿಯ ELEMENTS ಸೃಷ್ಟಿಯಾಗುತ್ತೆ ಅಂತ ನಾ ತಿಳಿಸಿದೆನಲ್ಲ ಹಾಗಾದರೆ ಆ ELEMENTS ಗಳೆಲ್ಲಾ ಎಲ್ಲಿ ಹೋದವು ವಿಶ್ವದಲ್ಲಿಡೆ ಇರುವ ಅವಕಾಶದಲ್ಲಿ ಚದುರಿ ಹೋಗಿರಬಹುದು ಅಲ್ಲವೆ ಇರಬಹುದು ಆದರೆ ಒಂದು ಘಟನೆ ವಿಜ್ಞಾನಿಗಳು ಬೇರೆ ರೀತಿಯಲ್ಲೂ ಯೋಚಿಸುವಂತೆ ಮಾಡಿತು

ಉಲ್ಕೆ-ಉಲ್ಕಾಪಾತ  ನಿಮಗೆ ಗೊತ್ತೇ ಇದೆ(ಈ ವಾರ ಉಲ್ಕಾಪಾತ ಕಾಣಿಸಬೇಕಿತ್ತು ಕಾಣಲಿಲ್ಲ ನಿಮಗೇನಾದ್ರೂ ಗೊತ್ತಿದ್ರೆ ತಿಳಿಸಿ)
ನಮ್ಮ ಸೌರವ್ಯೂಹದಲ್ಲಿರುವ ಅನಿಯತ-ಕಾಯಗಳು ಚಿಕ್ಕವು ನಮ್ಮ ಭೂ-ವಾತಾವರಣವನ್ನು ಪ್ರವೇಶಿಸಿ ಉರಿದು ಹೋಗುತ್ತವೆ ಅವೇ ಉಲ್ಕೆಗಳು ಕೆಲವು ಭಾರಿಗಾತ್ರದವು ಭೂಮಿಯ ವಾತಾವರಣದ ಒಳಗೆ ಪ್ರವೇಶಿಸಿ ನೆಲಕ್ಕೆ ಢಿಕ್ಕಿ ಹೋಡೆಯುವುದೂ  ಇದೆ

ಹೀಗೆ ಒಂದು ಉಲ್ಕೆ ೧೯೬೯ ನೇ ಇಸವಿಯಲ್ಲಿ ಮೆಕ್ಸಿಕೋದ ಗ್ರಾಮ ಒಂದರಲ್ಲಿ ಬಂದು ಬಿದ್ದಿತು ಅದರ ಅಳಿದುಳಿದ ತುಣುಕುಗಳೇ ಸುಮಾರು ೨೦೦೦ಕಿಲೋ ಇತ್ತು

ಈಗ ಅದರಲ್ಲಿನ ಐಸೋಟೋಪ್ ಗಳ ಲೆಕ್ಕಕ್ಕೆ ಬರೋಣ (ಒಂದು ಮೂಲವಸ್ತುವಿನ ಪ್ರೋಟಾನ್ ಸಂಖ್ಯೆ ಒಂದೇ ಆಗಿದ್ದು ನ್ಯೂಟ್ರಾನ್ ಸಂಖ್ಯೆ ಬೇರಾಗಿದ್ದರೆ ಅವು ಐಸೋಟೋಪ್) ಉದಾಹರಣೆಗೆ ಕಾರ್ಬನ್ ೧೨ ಹಾಗು ೧೪
ಹಾಗೆ ವಿಕಿರಣಶೀಲ ಐಸೋಟೋಪ್ ಗಳು ಕಾಲಾನಂತರ ಬೇರೇ ಮೂಲವಸ್ತುವಾಗಿ ಬದಲಾಗುವುದರಿಂದ ಅವುಗಳ ತೂಕ ಕೆಲಕಾಲಾನಂತರ ಅರ್ಧಕ್ಕೆ ಕುಸಿಯುತ್ತೆ ಇದನ್ನೆ Half Life Period ಎನ್ನುವುದು ಇದರ ಆಧಾರದಿಂದ ಒಂದು ವಸ್ತು ಎಷ್ಟು ಹಳೆಯದು ಎಂದು ತಿಳಿಯಬಹುದು

ಈಗ ನೋಡಿ ಇಂತಹ ಒಂದು ವೃತ್ತಾಂತ
ಅಲ್ಯುಮಿನಿಯಮ್ ಪರಮಾಣು ತೂಕ೨೬ ಇರುವ ಐಸೋಟೋಪ್   ಈ ರೀತಿ-Nuclear Dacy--ಯಿಂದ  ಮೆಗ್ನೀಷಿಯಮ ಅಗಿಬಿಡುತ್ತದೆ

ಈ ವ್ಯತ್ಯಾಸದ ಆಧಾರದಿಂದ ಮೆಕ್ಸಿಕೋ ಬಳಿ ದೊರಕಿದ ಉಲ್ಕೆ ೫೦೦ ಕೋಟಿ ವರ್ಷಕ್ಕೂ ಹಳೆಯದು ಎಂದು ತೀರ್ಮಾನಿಸಲಾಯಿತು

ಇದು ಮೇಲ್ನೋಟಕ್ಕೆ ಸಾಧ್ಯವಿರಲಿಲ್ಲ ಹೇಗೆ ಎನ್ನುತ್ತೀರ
ಮುಂದೆ ಓದಿ
(ಕನ್ನಡದಲ್ಲಿ ವಿಜ್ಞಾನದ ವಿಷ್ಯಗಳನ್ನು ವಿವರಿಸುವಾಗ ಉಪಕಥೆಗಳು ಬಂದರಂತೂ ಓದುಗರಾದ ನಿಮಗೇ ತಲೆ ತಿನ್ನಬಹುದು ಇವ ಏನನ್ನು ತಿಳಿಸ ಹೋರಟಿದ್ದಾನೆ  ಎಂದೆನಿಸಬಹುದು ಹಾಗಿದ್ದ ಮೇಲೆ ರಚಿಸುವ ನನ್ನ ಗತಿ ಕಲ್ಪಿಸಿಕೋಳ್ಳಿ ನೋಡೋಣ ನನಗೇಕೋ Net ನಿಂದ -Copy-ಮಾಡಿ ಭಟ್ಟಿ ಇಳಿಸಲು ಇಷ್ಟವಿಲ್ಲ ಸಾಕಷ್ಟು ಅಧ್ಯಯನ ಮಾಡಿಯೇ ತಿಳಿಸು ಎಂದು ನನ್ನ ಧ್ಯೇಯ)

ನಾವೆಲ್ಲಾ ನಮ್ಮ ಹೈಸ್ಕೂಲಿನ ಖಗೋಳವಿಜ್ಞಾನದ ಪಾಠಗಳಲ್ಲಿ ಓದಿರುತ್ತೇವೆ ಸೂರ್ಯನಸುತ್ತ ಮೋಡದ ರೀತಿಯ ವಸ್ತುಗಳಿದ್ದವು ಅವು ಸುತ್ತುತ್ತಾ ಸಾಂದ್ರವಾಗಿ ಗ್ರಹಗಳಾದವು ಉಳಿದವು ಉಲ್ಕೆ ಕ್ಷುದ್ರಗ್ರಹ ಇತ್ಯಾದಿಗಳಾದವು ಅಂತ  ಸೂರ್ಯ-ಸೌರವ್ಯೂಹದ ಕಥೆ ಇಲ್ಲಿಂದ ಪ್ರಾರಂಭವಾಗುತ್ತಿತ್ತು
ಆಂದರೆ ನಮ್ಮ ಸೌರವ್ಯೂಹದಲ್ಲಿನ ಎಲ್ಲಾ ವಸ್ತುಗಳು ಸೂರ್ಯನ ಜೊತೆಯಲ್ಲೇ ಜನ್ಮ ತಾಳಿದವು ಎಂದು

ಆದರೆ ಮೆಕ್ಸಿಕೋ ಬಳಿ ದೋರಕಿದ ಉಲ್ಕೆಯನ್ನು ಐಸೋಟೋಪ್ ಗಳ ಆಧಾರದ ಮೇಲೆ ಅದರ ಜನ್ಮ ದಿನಾಂಕ ಜಾಲಾಡಿದಾಗ ದೋರೆತ ಉತ್ತರ ೫೧೦ ಕೋಟಿ ವರ್ಷಗಳಿಗೂ ಮೊದಲಿನದಾಗಿತ್ತು ಆದರೆ  ಸೂರ್ಯನ ಹುಟ್ಟಿಗೂ ಮೊದಲು ಎಂದಾಯಿತು ಎಲ್ಲಿಂದ ಬಂದಿತು ಈ ELEMENTS
ನಿಮಗೇನದರೂ ಗೊತ್ತಿದ್ದರೆ ತಿಳಿಸಿ
ನನಗೆ ಗೊತ್ತಿದ್ದರೆ ಮುಂದಿನ ಸಂಚಿಕೆಯಲ್ಲಿ ತಿಳಿಸುವೆ

Monday, December 13, 2010

ಸೂಪರ್ ನೋವಕ್ಕೂ ಸೌರವ್ಯೂಹದ ಜನ್ಮ ವೃತ್ತಾಂತಕ್ಕೂ ಸಂಬಂಧವಿದೆಯೇ?

ಸೂಪರ್ ನೋವಕ್ಕೂ ಸೌರವ್ಯೂಹದ ಜನ್ಮ ವೃತ್ತಾಂತಕ್ಕೂ ಸಂಬಂಧವಿದೆ ಎನ್ನುತ್ತದೆ ಒಂದು ಸಿದ್ಧಾಂತ
ಅದು ಹೀಗೆ ಸೂಪರ್ ನೋವ ಆಸ್ಫೋಟವಾದಾಗ ಪದರು ಪದರಾಗಿ ಇರುವ ಮೂಲವಸ್ತುಗಳು ಒಂದರ ಮೇಲೋಂದು  ಬಿದ್ದು ಹಲವು ವಿಧವಾದ Nuclear Reaction ನಡೆಯುತ್ತವೆ ಎಂದು ಮೊದಲೇ ತಿಳಿಸಿರುವೆ

ಆ ರೀತಿಯ ನ್ಯೂಕ್ಲಿಯರ್ ಕ್ರಿಯೆಗಳಲ್ಲಿ ನಮಗೆ ಗೊತ್ತಿರುವ ಎಲ್ಲಾ ಮೂಲವಸ್ತುಗಳು ಜನ್ಮ ತಾಳಬಹುದು ಎಂದು ಗ್ರಹಿಸುತ್ತಾರೆ

ಆದ್ರೆ ಇದಕ್ಕೋ ಸೌರವ್ಯೂಹದ ಜನ್ಮಕ್ಕೂ ಏನು ಸಂಬಂದವಿರಬಹುದು?
ಉತ್ತರ ಹುಡುಕಿ ನೋಡೋಣ?
ಮುಂದಿನ ಸಂಚಿಕೆಗೆ-----
ಬೈ!!!!

Sunday, December 12, 2010

ತಾರೆಗಳ ಮುಂದಿನ ಹಂತಗಳನ್ನು ಅರಿಯುವ ಮುನ್ನ ಒಂದಷ್ಟು ಪ್ರಶ್ನೆಗಳು

ತಾರೆಗಳ ಮುಂದಿನ  ಹಂತಗಳನ್ನು ಅರಿಯುವ ಮುನ್ನ ಒಂದಷ್ಟು ಪ್ರಶ್ನೆಗಳು
ನಿಮಗೆಲ್ಲಾ ನನಗಿಂತ ಉತ್ತಮವಾದ ಉತ್ತರಗಳು ಗೊತ್ತಿರಬಹುದು.

ತರಲೆ ಮಾಡುತ್ತಿಲ್ಲ ನಿಮಗೆ ಗೊತ್ತಿರೋ ಸರಳ ವಿಚಾರಗಳು ಮಾತ್ರ
ಹಾಗಾದರೆ ಕೇಳಿ

೧-ನಮ್ಮ ಸೂರ್ಯ ಹಾಗು ಸೌರವ್ಯೂಹ ಜನ್ಮ ತಳೆದದ್ದು ಹೇಗೆ?
೨-ನಮ್ಮ ಆವರ್ತ ಕೋಷ್ಟಕದಲ್ಲಿ ಭೂಮಿಯಲ್ಲಿನ ಸುಮಾರು ೧೦೯ ಕ್ಕೂ ಹೆಚ್ಚು ಮೂಲವಸ್ತುಗಳಿವೆಯಲ್ಲ ಅವು ಎಲ್ಲಿಂದ ಬಂದವು?
೩-ಮೂಲವಸ್ತುಗಳನ್ನು ನಾವು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲವೇ?
೪-ಇದೆಲ್ಲಾ ಸರಿ ಸುಮ್ಮನೇ ಒಂದು ತಲೆಕೆಡಿಸಿಕೋಳ್ಳೋ ಪ್ರಶ್ನೆ
ನಮ್ಮ ಸೂರ್ಯ ಹಾಗು ಸೌರವ್ಯೂಹ ಹುಟ್ಟುವ ಮೊದಲು ನಮ್ಮ ಸೌರವ್ಯೂಹವಿರುವ ಸ್ಥಳದಲ್ಲಿ ಏನಿದ್ದಿರಬಹುದು

ನಿಮಗೆಲ್ಲಾ ಗೊತ್ತು ಅಂದುಕೊಂಡಿದ್ದೇನೆ ಅಥವಾ ಊಹಿಸಿ  ತಿಳಿಸಿ
Imagination is greater then Science
ನನ್ನ ಉತ್ತರಗಳು  ಸುಮಾರು ಇಂದು ೦೮:೦೦ ಗಂಟೆಗೆ ಅಥವಾ ನಾಳೆ ಸೋಮವಾರ ೦೮:೦೦ ಗಂಟೆಗೆ ನೀಡುತ್ತೇನೆ

ನಾನು ಅಲ್ಲಿಯವರೆಗೆ ಮುಂದಿನ ಲೇಖನ ಸಿದ್ಧಪಡಿಸುವೆ
ಬೈ!!

ಪಟಾಕಿ ಸರದಂತೆ

ನೀವೆಲ್ಲಾ ಸರಿಯಾಗಿ ಊಹಿಸಿರಬಹುದು ಅಂದುಕೊಂಡಿದ್ದೇನೆ
Red Giant ನಲ್ಲಿರುವ ದ್ರವ್ಯವನ್ನೆಲ್ಲಾ ಪಕ್ಕದಲ್ಲಿರೋ ಪುಟಾಣಿ ಅಲ್ಪ ಸಮಯದಲ್ಲೇ ಸ್ವಾಹಾ! ಮಾಡಿಬಿಡುತ್ತದೆ ಆಗ ಸ್ಫೋಟ ಸಂಭವಿಸುತ್ತದೆ ಇದು ಹಲವು ಬಾರಿ ಪುನರಾವರ್ತನೆಯಾಗಬಹುದು
(Above  Picture downloaded from net)

ಹೇಗೆಂದರೆ
Red Giant ತನ್ನ ಗಾತ್ರ ಹಿಗ್ಗಿಸಿದಂತೆ ಆ ಪುಟಾಣಿ ತನ್ನ ತಕ್ಕೆಗೆ ಬಂದಷ್ಟು ದ್ರವ್ಯವನ್ನು ಆಕರ್ಷಿಸಿ ಸ್ಫೋಟಿಸುತ್ತದೆ ಆಗ Red Giant ಗಾತ್ರ ಚಿಕ್ಕದಾಯಿತೆನ್ನಿ ಪುನ:  Red Giant ಹಿಗ್ಗುವವರೆಗೂ ಯಾವುದೇ ಸ್ಫೋಟ ಸಂಭವಿಸುವುದಿಲ್ಲ
Red Giant ನಲ್ಲಿ ಯಥಾಪ್ರಕಾರ ಹೊರಪದರ ಹಿಗ್ಗುವ ಪ್ರಕ್ರಿಯೆ ಮುಂದುವರೆಯುತ್ತದೆ Red Giant ತಾರೆ White Dwarf ಗುರುತ್ವದ ಪರಿಧಿಯೋಳಗೆ ಬಂದತೆಲ್ಲಾ ಪುನ: ಸ್ಫೋಟ ಸಂಭವಿಸುತ್ತದೆ

ಹಾಗಾದರೆ ಸ್ಫೋಟದ ನಂತರ ಉಳಿಯುವ ಕೇಂದ್ರ ಏನಾಗುತ್ತದೆ ಎಂದು ಮುಂದಿನ ಬಾರಿ ನೋಡೋಣ

Saturday, December 11, 2010

ಸೂಪರ್ ನೊವಾ ಇದು ಮೊದಲ ರೀತಿಯದು

ಈ ವರೆಗೆ ನೀವು ಕೇಳುತ್ತಿದ್ದುದು SuperNova Type2
ಹಾಗೆಯೇ  SuperNova Type1  ಎಂಬ ರೀತಿಯ  ತಾರೆಗಳ ಆಸ್ಫೋಟವೊ ಇದೆ
ಅದು ಸಂಭವಿಸುವುದು ಹೀಗೆ
ಈ ವಿಶ್ವದಲ್ಲಿರುವ ಬಹುಪಾಲು ತಾರೆಗಳು ಜೋಡಿ ತಾರೆಗಳು ಹಾಗು ಅವು ಒಂದನ್ನೋಂದು ಸುತ್ತುತ್ತಿರುತ್ತವೆ ಎಂದು ಮೋದಲೇ ತಿಳಿಸಿದ್ದೆ ಹಾಗೆ ಜೋದಿ ತಾರೆಗಳಲ್ಲಿ ಎರಡೂ ತಾರೆಗಳ ಆಯಸ್ಸು ಒಂದೇ ಆಗಿರಬೇಕೆಂದೇನಿಲ್ಲ

ಒಂದು ತಾರೆ ತನ್ನಲ್ಲಿನ  Hydrogen ಅನ್ನು ಬೇಗ ಮುಗಿಸಿ ಕಡಿಮೆ ಕಾಲಾವಧಿಯಲ್ಲಿ  Red Giant ಸ್ಥಿತಿಗೆ ತಲುಪುತ್ತದೆ ಅದರೆ ಅದರ ಮಿತ್ರ ತಾರೆಯ  Initial Mass  ಕಡಿಮೆಯಿದ್ದು ತಡವಾಗಿ Red Giant  ಸ್ಥಿತಿಗೆ ತಲುಪುತ್ತದೆ
ಆ  ಹೊತ್ತಿಗಾಗಲೇ ಅದರ ಮಿತ್ರ  White Dwarf  ಸ್ಥಿತಿಗೆ ಬಂದಿರುತ್ತಾನೆ

ಈಗ ನೋಡೋಣ ಈ ಇಬ್ಬರಲ್ಲಿ ಈಗ ಏನೇನು ಇದೆ ಅಂತ
 Red Giant ಅಂದರೆ ಹೊರಪದರದಲ್ಲಿ  Nuclear Fission ಆಗದೇ ಉಳಿದ  ಬಹುಪಾಲು Hydrogen ಇದೆ ಆದರೆ ಅದರಲ್ಲಿ  Nulclear Reaction ನಡೆಸಲು ಬೇಕಾದ ಗುರುತ್ವ ಹಾಗು ತಾಪಮಾನ ಇಲ್ಲ
ಆದರೆ ಪಕ್ಕದಲ್ಲಿರುವ ಮಿತ್ರನಲ್ಲಿ ಇವೆರಡೂ ಇದೆ
 White Dwarf  ಎಂದರೆ ಗುರುತ್ವ ಹಾಗು ತಾಪಮಾನ ಹೆಚ್ಚು ಆದರೆ ಗಾತ್ರ ಕಡಿಮೆ ಎಂದು ವಜ್ರದ ಉದಾಹರಣೆಯೊಂದಿಗೆ ಹಿಂದಿನ ಸಂಚಿಕೆಯಲ್ಲಿ ವಿವರಿಸಿದ್ದೇನೆ

ಈಗ  Red Giant ಆಗಿರುವ ತಾರೆ ತನ್ನ ಗಾತ್ರವನ್ನು ಹಿಗ್ಗಿಸುತ್ತಾ,ಹಿಗ್ಗಿಸುತ್ತಾ ತನ್ನ ಮಿತ್ರನ ಗುರುತ್ವ ಪರಿಧಿಯೊಳಗೆ ಬಂದರೆ ಏನಾಗಬಹುದು ಎಂದು ನೀವೇ ಊಹಿಸುತ್ತಿರಿ

ಸದ್ಯದಲ್ಲೇ ಮುಂದಿನ ಸಂಚಿಕೆಯಲ್ಲಿ ಮತ್ತೆ ಬರುತ್ತೇನೆ
 ಮುಂದಿನ ಸಂಚಿಕೆ ನಾಳೆ ಬೆಳಿಗ್ಗೆ  ೦6:೦೦am  ಗೆ Schedule  ಮಾಡಿ ಪ್ರಕಟಿಸಲಾಗಿದೆ

Monday, November 8, 2010

ಬಾನಾಗಸದಲ್ಲೂ ಇದೆ ದೀಪಾವಳಿ-ಪಟಾಕಿ-ಆಸ್ಫೋಟ

(ಈ ಪೋಸ್ಟ್ ನಲ್ಲಿನ ಎಲ್ಲಾ ಚಿತ್ರಗಳನ್ನು ಜಾಲತಾಣದಿಂದ ಪಡೆಯಲಾಗಿದೆ)

(All the Pictures used in this Post were downloaded from net)

ಕಳೆದ ಬಾರಿ ತಿಳಿಸುತ್ತಿದ್ದೆ ಸೂರ್ಯನಿಗಿಂತ ೧.೪ ಪಟ್ಟು ಹೆಚ್ಚುInitial mass ಇರುವ ತಾರೆಗಳು White Dwarf ಸ್ಥಿತಿಯಲ್ಲೇ ನಿರಂತರವಾಗಿರಲಾರವು ಅಂತ ಅವುಗಳಲ್ಲಿ ಇನ್ನೂ ಹೆಚ್ಚಿನ ತಾಪಮಾನ ಸೃಷ್ಠಿಯಾಗುತ್ತದೆ ಆ ತಾಪದಲ್ಲಿ ಇನ್ನೂ ಕೆಲವು ಭಾರದ Elements ಸೃಷ್ಠಿಯಾಗುತ್ತವೆ ಅದು ಹೀಗೆ

(Above  Picture downloaded from net)

ಮೂರು ಹೀಲಿಯಮ್ ಸೇರಿ ಒಂದು ಕಾರ್ಬನ್ ಉಂಟಾಗುತ್ತದೆ(ಈ ಎಲ್ಲಾ ಕ್ರಿಯೆಗಳ Formula ನಂತರ ರಚಿಸಿ ಪ್ರಕಟಿಸುತ್ತೇನೆ)
ಈ ತಾರೆಗಳ ಕೇಂದ್ರದ ತಾಪ ೧೯೦ ಕೋಟಿ ಡಿಗ್ರೀ ವರೆಗೂ ಸಂಭವವಿದೆ
ಹೀಗೆ ಬಹು ಹಂತದ ಕ್ರಿಯೆಗಳು ನಡೆದು ಭಾರದ Elements ಕೇಂದ್ರದೆಡೆಗೂ ಹಗುರದ Elements ಹೊರಪದರಕ್ಕೂ ಸಾಗುತ್ತವೆ ಹೀಗೆ ಕೇಂದ್ರದಲ್ಲಿ ಕಬ್ಬಿಣ ಅದರ ನಂತರ ಸಿಲಿಕಾನ್ ,ಅದರ ಸುತ್ತ ಆಕ್ಸಿಜನ್ ಹಾಗೆ ನಿಯಾನ್, ಕಾರ್ಬನ್ ಹಾಗು ಹೀಲಿಯಮ್ ಇದ್ದು ಅತ್ಯಧಿಕ ತಾಪಮಾನ ಹಾಗು ಗುರುತ್ವವಿರುತ್ತದೆ

(Above Picture downloaded from net)
ಮೇಲ್ಕಂಡ  ಎಲ್ಲಾNuclear Fission ನಡೆದಾಗ ಶಕ್ತಿ ಸೂಸುತ್ತದೆ ,ಆದರೆ ಕಬ್ಬಿಣ(Fe ) Nuclear fision ಆದಾಗ ಶಕ್ತಿಯನ್ನು ಹೀರುತ್ತದೆ ಇದರಿಂದ ತಾರೆಯ ಸ್ಥಿರತೆಗೆ ಧಕ್ಕೆ ಬರುತ್ತದೆ

ನೀವು ಗಮನಿಸಿರಬಹುದ್ ಹಗ್ಗ ಜಗ್ಗಾಟ (Tug-Of-War) ಆಡುವಾಗ ಯಾರದರೂ ಒಂದು ಪಕ್ಷದವರು ಹಗ್ಗವನ್ನು ಹಟಾತ್ತಗಿ ಬಿಟ್ಟರೆ ಇನ್ನೊಂದು ತಂಡದವರು ಒಬ್ಬರ ಮೇಲೆ ಒಬ್ಬರು ಬೀಳುವುದಿಲ್ಲವೇ ಹಾಗೆ ಈ ಎಲ್ಲೆ ಪದರು-ಪದರಾಗಿರುವ Elements ಒಂದ ಮೇಲೊಂದು ಬೀಳುತ್ತವೆ ಈ ಮೂಲಕ ಆಸ್ಫೋಟಕ್ಕೆ ಕಾರಣವಾಗುತ್ತದೆ ಆಗ ಎಲ್ಲಾ ತಾರೆಯೊಳಗಿನ ಶಕ್ತಿ ಸುಮಾರು 18000 K.Mಪ್ರತೀ ಸೆಕೆಂಡ್ ವೇಗದಲ್ಲಿ ಧಾವಿಸಿ ತಾರೆಯ ಹೊರಕ್ಕೆ ಬರುತ್ತದೆ ಇದು ದೊಡ್ಡ ಆಸ್ಫೋಟಕ್ಕೆ ಕಾರಣವಾಗುತ್ತದೆ

(Above  Picture downloaded from net)
 ಇಷ್ಟು ಸಾಲದೆಂಬಂತೆ ತಾರೆಯ ಹೊರಪದರದಲ್ಲೂ ಈ ಶಕ್ತಿ ಹಲವು ಕ್ರಿಯೆ ನಡೆಸಿ Hydrogen, Helium ವಿವಿಧ ರೀತಿಯಲ್ಲಿ ಸಮ್ಮಿಲನಗೋಂಡು Calcium, Urenium,Laed ನಂತಹ Elements ಗಳಾಗುತ್ತವೆ ಹಾಗು ಅವೆಲ್ಲಾ ಬ್ರಹ್ಮಾಂಡದಲ್ಲಿ ಹರಡಿ ಹೋಗುತ್ತದೆ ಆ ಅಸ್ಫೋಟದ ತೀವ್ರತೆ ಎಷ್ಟಿರುತ್ತದೆಂದರೆ ಹಲ ಕೋಟಿ ಸೂರ್ಯರ ತೇಜಸ್ಸಿಗೆ ಸಮನಾದ ಶಕ್ತಿ ಕೆಲವೇ ದಿನಗಳಲ್ಲಿ ಬಿಡುಗಡೆಯಾಗುತ್ತದೆ


(Above Picture downloaded from net)


ಭೂಮಿಯಲ್ಲಿ ನಿಂತು ನಾವೇನಾದರೂ ನಮ್ಮ Galaxy ಯ Super Nova ನೋಡುವುದು ಸಾಧ್ಯವಾದರೆ ಆ ತಾರೆಯನ್ನು ನಾವು ಮಧ್ಯಾಹ್ನದ ಬಿರುಬಿಸಿಲಲ್ಲೂ ಕಾಣಬಹುದು (1054 ನೇ ಇಸವಿಯಲ್ಲಿ ಸಂಭವಿಸಿದ Super Nova ವನ್ನು ಹೀಗೆ ನಡು ಹಗಲಲ್ಲೂ ಕಾಣಬಹುದಾಗಿತ್ತು ಅಂತ ಇತಿಹಾಸದಲ್ಲಿ ಕಂಡುಬರುತ್ತದೆ ನೆನಪಿರಲಿ ಅದರ ಪಳೆಯುಳಿಕೆಯೀ ಇಂದಿನ ಏಡಿ-ನಿಹಾರಿಕೆ ಅಥವಾCrab -Nebula ಅದು ಈಗಲೂ 16ರಿಂದ17 ಸಾವಿರ K.M ಪ್ರತೀ ಸೆಕೆಂಡಿಗೆ ಹಿಗ್ಗುತ್ತಿದೆ)



ಇದೆಲ್ಲದರ ಬಗ್ಗೆ ಇನ್ನೂ ಎಷ್ಟು ತಿಳಿದರೂ ಇನ್ನೊ ಇದೆ

ನನ್ಗೆ ತಿಳಿದಿರುವುದರಲ್ಲಿ ಸಮಯ-ಇರುವಷ್ಟರಲ್ಲಿ ತಿಳಿಸುತ್ತೇನೆ
ಇದು ಸೂಪರ್ ನೋವ Type II
ಇದರ ಕಥೆ ಇಲ್ಲಿಗೆ ಮುಗಿದಿಲ್ಲ ಇನ್ನೊ ಇದೆ

ಮುಂದಿನ ಸಂಚಿಕೆಯಲ್ಲಿ ತಿಳಿಸುವೆ

Sunday, November 7, 2010

ಇನ್ನು ಮುಂದೆ ನೋಡುವುದು ತಾರಾ ಲೋಕದ ದೈತ್ಯಾತಿ-ದೈತ್ಯರ ಕಥೆಗಳನ್ನು

ಇನ್ನು ಮುಂದೆ ನೋಡುವುದು ತಾರಾ ಲೋಕದ ದೈತ್ಯಾತಿ-ದೈತ್ಯರ ಕಥೆಗಳನ್ನು

ಇವುಗಳನ್ನು ನಾನೂ ಮೊದಮೊದಲು ಓದಿದಾಗ ಇವೆಲ್ಲಾ ಸಾಧ್ಯವೋ ಎಂದುಕೋಳುತ್ತಿದ್ದೆ

ಅಥವಾ ಪುಸ್ತಕದಲ್ಲಿ Priniting Mistake ಇರಬಹುದು ಎಂದುಕೋಂದಿದ್ದೆ
ಅದರೆ ಇದು ಸತ್ಯ ಎಂದು ನನಗೂ ತಡವಾಗಿ ಅರಿವಾಯಿತು

ನಾವು ಅಮ್ಮ ಹೇಳುತ್ತಿದ್ದ ಕಥೆಗಳಲ್ಲಿ ಕೇಳಿರಬಹುದು
"ಒಬ್ಬ ರಾಕ್ಷಸನಿದ್ದ ಅವನು ಮನೆಯ ಎರಡರಷ್ಟು ಎತ್ತರವಾಗಿದ್ದ ಅವನ ಕಿವಿಗಳು ಅಕ್ಕಿ ಕೇರುವ ಮೋರದಷ್ಟು ದೋಡ್ದದಾಗಿದ್ದವು ಅವನ ಬೆರಳುಗಳು ಒನಕೆಯಂತಿದ್ದವು ಅವನು ಉಸಿರಾಡಿದರೆ ಬಿರುಗಾಳಿ ಬೀಸಿ ಜನರೆಲ್ಲಾ ಹಾರಿಹೋಗುತ್ತಿದ್ದರು " ಹಾಗೆಲ್ಲಾ ಈ ತಾರೆಗಳು ಕೂಡ ಹಾಗೆಯೇ

ಕೆಲವು ತಾರೆಗಳು ಎಷ್ಟು ದೋಡ್ಡವೆಂದರೆ ಅವುಗಳನ್ನು ಸೂರ್ಯನ ಜಾಗದಲ್ಲಿಟ್ಟರೆ ಆ ತಾರೆ ಭೂಕಕ್ಷೆ ಯವರೆಗೂ ವ್ಯಾಪಿಸಬಲ್ಲವು
ಸೂರ್ಯನಿಗಿಂತ ೩೦ ಪಟ್ಟು ದೋಡ್ಡ ತಾರೆಗಳಿವೆ ನಮ್ಮ ವಿಶ್ವದಲ್ಲಿ?
ಅವುಗಳ ಕಥೆ ಹೇಳಲು ಹೆಚ್ಚು ಅವಕಾಶ ಬೇಕು ಮತ್ತೆ ಮುಂದಿನ ಸಂಚಿಕೆಗೆ ಮುಂದೂಡುತ್ತಿದ್ದೇನೆ
"ಪೀಠಿಕೆಯೇ ದೊಡ್ಡದಾಯಿತಾ? ಮುಂದಿನ ಸಂಚಿಕೆಯಲ್ಲಿ ನೋವಾ,ಸೂಪರ್ನೋವಾಗಳ ಬಗ್ಗೆ ತಿಳಿಸುತ್ತೇನೆ

ಚಂದ್ರಶೇಖರ ಲಿಮಿಟ್

ತಾರೆಗಳ Initial mass ಸೂರ್ಯನಷ್ಟೇ ಇದ್ದರೆ ಅಥವಾ ಕಡಿಮೆ ಇದ್ದರೆ ಅವು White Dwarfs ಆಗಿ ತಣ್ಣಗಾಗುತ್ತವೆ ನಿಜ ಆದರೆ ಸೂರ್ಯನಿಗಿಂತಾ ಅಧಿಕ Initial Mass ಇರುವ ತಾರೆಗಳು White Dwarfs ಸ್ಥಿತಿಯನ್ನು ಮೀರಿ ಬರುತ್ತವೆ
ಸೂರ್ಯನಿಗಿಂತಾ ೧.೪ ಪಟ್ಟು ಅಧಿಕ Initial Mass ಇರುವ ತಾರೆಗಳು White Dwarfs ಅಗಿಯೇ ಸ್ಥಿರವಾಗಿರಲಾರವು ಇದನ್ನೇ ನಾವು ಚಂದ್ರಶೇಖರ ಲಿಮಿಟ್ ಎನ್ನುತ್ತೇವೆ

ಇದನ್ನು ಭಾರತೀಯ ವಿಜ್ಞಾನಿ ಸುಭ್ರಮಣೀಯನ್ ಚಂದ್ರಶೇಖರ್ ೧೯೩೦ ರಲ್ಲಿ ಪ್ರಸ್ತುತಪಡಿಸಿದರು
ಈ ಸಿದ್ದಾಂತದಂತೆ ತಾರೆಗಳು White Dwarfs ಸ್ಥಿತಿಯ ನಂತರವೂ ತಮ್ಮಲ್ಲಿ Nuclear Reaction ಗಳನ್ನು
ಮುಂದುವರೆಸುತ್ತವೆ

ಅದರೋಳಗೇನಾಗುತ್ತವೆ ಅಂತ ತಿಳಿಯೋಣ ಬನ್ನಿ ಮುಂದಿನ ಸಂಚಿಕೆ ನಿರೀಕ್ಷಿಸಿ

 ಮುಂದಿನ ಸಂಚಿಕೆ 07-November 2010
07:00pm

White Dwarfs ನಂತರ ತಾರೆಗಳೇನಾಗುತ್ತವೆ

ತಡವಾಗಿ ಬಂದು ತಾರೆಗಳ ಕಥೆಯನ್ನು ಮತ್ತೆ ಮುಂದುವರೆಸಿರುವೆ
White Dwarfs ನಂತರ ತಾರೆಗಳೇನಾಗುತ್ತವೆ ಅಂತ ನೋಡೋಣ

ಅದಕ್ಕೂ ಮೋದಲು ತಿಳಿಸುತ್ತೇನೆ ಕೇಳಿ ನಮ್ಮ ಸೂರ್ಯ White Dwarfs ಆಗಿಯೇ ಕೊನೆಯವರೆಗೂ ಉಳಿಯುತ್ತಾನೆ White Dwarfs ಸ್ಥಿತಿಯೇ ಹಂತವೇ ಅವನಿಗೆ ಅಂತಿಮ ಸೂರ್ಯ ಹಾಗು ಸೂರ್ಯನಿಗಿಂತ ಕಡಿಮೆ ದ್ರವ್ಯರಾಶಿಯ White Dwarfs ಗಳು ಕೊನೆಗೆ ತನ್ನಲ್ಲಿರುವ ದ್ರವ್ಯವೆಲ್ಲಾ ವಿವಿಧ ರೀತಿಯ,ವಿವಿಧ ಹಂತದ Nuclear Reaction ನಡೆಯುವವರೆಗೂ ಮುಂದುವರೆದು ಕೊನೆಗೆ ಕೇಂದ್ರದಲ್ಲಿ ಕಬ್ಬಿಣದಂತಹ Elements ಬರುವವರೆಗೆ ಮುಂದುವರೆದು ನಂತರ ಕಾಲಾನಂತರ ತಣ್ಣಗಾಗುತ್ತವೆ ಅಮೇಲೆ ಈ ತಣ್ಣಗಾದ White Dwarfs ಏನಾಗುತ್ತವೋ ನನಗೆ ಸರಿಯಾಗಿ ಗೊತ್ತಿಲ್ಲ ಹಲವು ಮೂಲಗಳಲ್ಲಿ ಹುಡುಕಿದರೂ ನನಗೆ ಸರಿಯಾದ ಮಾಹಿತಿ ಸಿಗಲಿಲ್ಲ ನಿಮಗೇನಾದ್ರೂ ಗೊತ್ತಿದರೆ ತಿಳಿಸಿ

ಹಾಗಾದರೆ White Dwarfs ನಂತರ ತಾರೆಗಳೇನಾಗುತ್ತವೆ?
ಅದನ್ನು ತಿಳಿಸುವ ಮೊದಲು ನೆನಪಿಡಿ ಅದರ ಮುಂದಿನ ಭವಿಷ್ಯ ಆ ತಾರೆಯ Initial Massಅಂದರೆ ಆ ತಾರೆ ಹುಟ್ಟುವಾಗ ಎಷ್ಟು ದ್ರವ್ಯರಾಶಿ ಇತ್ತೋ ಅದರ ಮೇಲೆ ಅವಲಂಬಿಸಿರುತ್ತೆ ಇದನ್ನು ನಾನು ಹಿಂದಿನ ಸಂಚಿಕೆಗಳಲ್ಲಿ ಮಗುವಿನ ಉದಾಹರಣೆಯೋಂದಿಗೆ ಸ್ವಲ್ಪ ವಿವರಿಸಿದ್ದೇನೆ

ಹಾಗಾದರೆ ಮುಂದಿನ ಕಥೆ ಕೇಳಿ ಮುಂದಿನ ಸಂಚಿಕೆಯಲ್ಲಿ

Saturday, November 6, 2010

ಬೆಳಕಿನ ಬಗ್ಗೆ ನನಗೆ ನೆನಪಿಗೆ ಬಂದಷ್ಟು

ದೀಪಾವಳಿ ಹಬ್ಬದ ಶುಭಾಷಯಗಳು


ಹಾಂ! ನನ್ನ ಬ್ಲಾಗಿಗೂ ಒಂದು ವರ್ಷ ತುಂಬಿತು
ಕಳೆದ ವರ್ಷ ದೀಪಾವಳಿಯಲ್ಲೇ ಪ್ರಾರಂಭಿಸಿದ್ದು.
ನನ್ನ ಹಾಗೆಯೇ ವರ್ಷಾಚರಣೆಯಲ್ಲಿರುವ ಬ್ಲಾಗ್ ಮಿತ್ರರಿಗೆಲ್ಲಾ ಅಭಿನಂದನೆಗಳು, ಧನ್ಯವಾದಗಳು

ಕೆಲಕಾಲ ನನ್ನ ಬ್ಲಾಗ್ ಗಳಲ್ಲಿ ಲೇಖನಗಳನ್ನು ಪ್ರಕಟಿಸದೇ ಇದ್ದುದ್ದಕ್ಕೆ ಕ್ಷಮೆ ಇರಲಿ

ಹಾಗೆ ಬೆಳಕಿನ ಬಗ್ಗೆ ನನಗೆ ನೆನಪಿಗೆ ಬಂದಷ್ಟು:-
ನ್ಯೂಟನ್ ಹೇಳಿದರು-ಬೆಳಕು ಎಂದರೆ ಸರಳರೇಖೆಯಲ್ಲಿ ಚಿಮ್ಮುವ ಕಣಗಳು
ಹೈಗನ್ಸ್-ಅವು ಕುಣಿಯುವ ಅಲೆಗಳು
ಮ್ಯಾಕ್ಸ್-ವೆಲ್:-ಅವು ತಿರುಗುತ್ತಾ ನರ್ತಿಸುವ ವಿದ್ಯುತ್ ಕಾಂತೀಯ ಅಲೆಗಳು
ಪ್ಲಾಂಕ್-ಅವು ಶಕ್ತಿಯ ಚೀಲ ಹೊತ್ತು ನರ್ತಿಸುವ ಕ್ವಾಂಟಮ್ ಕಣಗಳು


ಈಶಾವ್ಯಾಸ ಉಪನಿಷತ್ತು:-
ಅದು ಚಲಿಸುತ್ತದೆ ಅದರೂ ಅದು ಚಲಿಸುವುದಿಲ್ಲ
ಅದು ದೂರದಲ್ಲಿದೆ ಅದು ಹತ್ತಿರದಲ್ಲೂ ಇದೆ
ಅದು ಎಲ್ಲದರ ಒಳಗೆ ಇದೆ ಎಲ್ಲದೂ ಅದರೊಳಗಿದೆ
(ಒಗಟಿನಂತಿರುವ ಇದರ ಗೂಢಾರ್ಥವೇನು?ನನಗೆ ಗೊತ್ತಿರುವುದಿಷ್ಟೇ, ನಿಮಗೇನಾದರೂ ಗೊತ್ತಿದ್ದರೆ ತಿಳಿಸಿ)



ಇಂದಿಗೂ ಪೂರ್ಣವಾಗಿ ಬೆಳಕು ಎಂದರೆ ಏನು ಅಂತಾ ಅರಿಯಲು ಸಾದ್ಯವಾಗಿಲ್ಲ
ಹಾಗಿದ್ದರೂ ನಾನು ಹೀಗಂದುಕೋಳ್ಳಬಲ್ಲೆ

"ಪುಟಾಣಿ ದೀಪದ ಸುಂದರ ನಗುವೇ ಬೆಳಕು"

ನಾವು ಆಗಸದಲ್ಲಿರುವ ತಾರೆಗಳಾಗದಿದ್ದರೂ ಪರವಾಯಿಲ್ಲ
ಜಗವ ಬೆಳಗುವ ಸೂರ್ಯನಾಗದಿದ್ದರೂ ಪರವಾಯಿಲ್ಲ
ಕತ್ತಲೆಯನ್ನೋಡಿಸುವ ಪುಟ್ಟ ಹಣತೆಯಾದರೂ ಆಗೋಣ


ದೀಪಾವಳಿ ಶುಭಾಷಯಗಳು
ಸದ್ಯದಲ್ಲಿಯೇ ಲೇಖನಗಳು ಮುಂದುವರೆಯಲಿವೆ

ನಿರೀಕ್ಷಿಸಿ

Monday, May 17, 2010

ಬ್ಲಾಗ್ ಗಳಿಗೆ ಕೆಲಕಾಲ ವಿರಾಮ

ಈಗ ನನ್ನ ಬ್ಲಾಗ್ ಗಳಿಗೆ ಕೆಲಕಾಲ ವಿರಾಮ ನೀಡಲು ನಿರ್ಧರಿಸಿದ್ದೇನೆ
ಅದು ಸುಮಾರು ಒಂದೆರಡು ತಿಂಗಳು
ಮತ್ತೆ ತಾರೆಗಳ ತರಲೆಗಳ ಬಗ್ಗೆ ತಿಳೀಸಲು ಬರುತ್ತೇನೆ ನಿರೀಕ್ಷಿಸಿ

ಮಳೆಗಾಲದಲ್ಲಿ ತಾರೆಗಳು ಆಗಸದಲ್ಲಿ ಕಾಣದೆ ಒಳ್ಳೆಯ ಮಳೆ ಬರಲಿ ಎಂದು ನಾವೆಲ್ಲಾ ಹಾರೈಸೋಣ
ಎಲ್ಲ  ಬ್ಲಾಗ್ ಮಿತ್ರರಿಗೆ,ಓದುಗರಿಗೆ   ಧನ್ಯವಾದಗಳು

Saturday, April 17, 2010

ಬಲಶಾಲಿ ಈ ಪುಟಾಣಿ!!

ನೀವು ಉತ್ತರ ಸುಲಭವಾಗಿ ಊಹಿಸಿರಬಹುದು ಅಂತ ಭಾವಿಸಿದ್ದೇನೆ 
Sirius ಅಥವಾ ಲುಬ್ದಕ ಇದು ನಮಗೆ ಆಗಸಲ್ಲಿ ಕಾಣುವ ತಾರೆಗಳಲ್ಲೇ  ಅತ್ಯಂತ ಪ್ರಕಾಶಮಾನವಾದುದು(ಅದಕ್ಕಿಂತಲೂ ಉಜ್ವಲವಾದ್ದು ಯಾವುದಾದ್ರೂ ಇದ್ದ್ರೆ ಅದು ಗ್ರಹ ಅಥವಾ ಬೇರೆ ಯಾವುದೋ ಕಾಯವಾಗಿರಬೇಕು)
.Sirius ತಾರೆ ಮಹಾವ್ಯಾಧ ಅಥವಾ ಓರಿಯನ್ ನಿಹಾರಿಕೆಯ  ಕೆಳಗಿರುವ ಮಹಾಶ್ವಾನ ಅಥವಾ ಕ್ಯಾನಿಸ್-ಮೇಜರ್ ನಕ್ಷತ್ರಪುಂಜದಲ್ಲಿದೆಲ್ಲಿದೆ ಇವತ್ತು ಆಗಸವನ್ನು ನೀವು ದಿಟ್ಟಿಸಿ ನೋಡಿದರೆ ಅದು ಈ ಸಿರೀಸ್ ತಾರೆ ಸುಮಾರು ನಮ್ಮ ತಲೆಯ ಮೇಲೇ ಸ್ವಲ್ಪವಷ್ಟೇ ದಕ್ಷಿಣದ ಕಡೆಗಿದೆ ಅದರ ಅತ್ಯಂತ ಉಜ್ವಲ ಕಾಂತಿ ನಮ್ಮನ್ನು ಸೆಳೆಯದಿರದು
ಈ ತಾರೆ ಬೆಳಗಿನ ಹೊತ್ತು ಉದಯಿಸಿದರೆ ಈಜಿಪ್ಟಿಯನ್ನರು ನೈಲ್ ನದಿಯಲ್ಲಿ ವಾರ್ಷಿಕ-ಪ್ರವಾಹ ಬರುವುದು ಅಂತ ಅರಿಯುತ್ತಿದ್ದರು

(photo  downloaded from net)

ಇದ್ರ ಕಾಂತಿಮಾನ -೧.೪೬(- 1.46) ಇದು ೮.೭(8.7) Light Year  ದೂರವಿದೆ ಹಲವು ತಾರೆಗಳಿಗೆ ಹೋಲಿಸಿದರೆ ಇದು ಸೂರ್ಯನಿಗೆ ಹತ್ತಿರ ಅನ್ನಿಸಬಹುದು ಇದು ಸೂರ್ಯನಿಗಿಂತ ೨೬(26) ಪಟ್ಟು ಉಜ್ವಲವಾಗಿದೆ

ಈ ತಾರೆಯ ಪ್ರಸ್ತಾಪ ಇಲ್ಲೇಕೆ ಅನ್ನಬಹುದು, ಇದೆ ಅದು ಶ್ವೇತ-ಕುಬ್ಜಗಳಿಗೆ ?
ಅದು ಇರುವುದು ಈ ತಾರೆಯಲ್ಲಿ ಅಲ್ಲ ಈ ತಾರೆಯ ಪುಟಾಣಿ ಮಿತ್ರನಲ್ಲಿ
ನಿಮಗೆ ಗೊತ್ತಿರುವಂತೆ ವಿಶ್ವದಲ್ಲಿ ಬಹುಪಾಲು ಜೋಡಿ ತಾರೆಗಳಿವೆ  ಹೀಗೆ ಇದೂ ಕೂಡ ಒಂದು
ಈ   ಸಿರೀಸ್ ತಾರೆಯ ಜೊತೆಗೊಬ್ಬ ಪುಟಾಣಿ ತಾರೆ ಇದೆ ಅದು ಸಿರಿಸ್ ಅನ್ನು ಸುತ್ತುತ್ತಿರಬೇಕಲ್ಲ ಆದರೆ ಹಾಗಾಗಿಲ್ಲ ಬದಲಾಗಿ ಅವೆರಡೂ ಒಟ್ಟಿಗೆ ಅಪ್ಪಾಲೆ-ತಿಪ್ಪಾಲೆ  ಆಡುವಂತೆ ಸುತ್ತುತ್ತಿವೆ ಅಷ್ಟು ಬಲಶಾಲಿ ಆ ಪುಟಾಣಿ!! ಅದರ ಹೆಸರು  PUP

(photo  downloaded from net)
ಅದು  ಸಿರೀಸ್  ಗಿಂತ ೧/೧೦೦೦೦(1/10000) ಪಟ್ಟು ಚಿಕ್ಕದಾಗಿದೆ ಕ್ಷೀಣವಾಗಿದೆ
ಸಿರೀಸ್  ತಾರೆಯ ರೋಹಿತವನ್ನು ಒಮ್ಮೆ ಪರೀಕ್ಷಿಸಿದಾಗ ಅದರಲ್ಲಿ ಎರ‍ಡು ಗುಣಲಕ್ಷಣಗಳು ಕಂಡು ಬಂದಾಗ ಈ ಪುಟಾಣಿ ತಾರೆ ಪತ್ತೆಯಾಯಿತು
ಇದನ್ನು ವಿಶೇಷ ಸೌಲಭ್ಯ ಉಳ್ಳ ಅತೀ ಶಕ್ತಿಶಾಲಿ ದೂರದರ್ಶಕದಿಂದ ಮಾತ್ರ ವೀಕ್ಷಿಸಲು ಸಾಧ್ಯ
ಇದು ಕೇವಲ ೪೨೦೦೦(42000) K.M ವ್ಯಾಸವಿದೆ 
ಆದರೆ ಇದು ಸೂರ್ಯನಿಗಿಂತ ಸ್ವಲ್ಪ ಭಾರವಾಗಿದೆ ಅಂದರೆ ಇದು  ಎಷ್ಟು ಸಾಂದ್ರವಾಗಿರಬಹುದು ಯೋಚಿಸಿ

ನಮ್ಮ ಸೂರ್ಯನೂ ಮುಂದೆ ಓಂದು ದಿನ ನಮ್ಮ ಭೂಮಿಯಷ್ಟು ಗಾತ್ರದ ಶ್ವೇತ-ಕುಬ್ಜವಾಗುತ್ತಾನೆ
ಶ್ವೇತ-ಕುಬ್ಜಗಳಲ್ಲಿ ಏನು ಕ್ರಿಯೆಗಳು ನಡೆಯತ್ತವೆ ಅಂತ ಮುಂದಿನ ಸಂಚಿಕೆಯಲ್ಲಿ ತಿಳಿಸುತ್ತೇನೆ

Thursday, April 15, 2010

White Dwarfs ಲಕ್ಷಣಗಳು

ಆಟದ ದಾಳವನ್ನು ತೋಟ್ಟಿಲಲ್ಲಿನ ಮಗು ಸಹ ಎತ್ತಬಲ್ಲದು ,ಅದು ಕಬ್ಬಿಣದಿಂದ ಆಗಿದ್ದರೆ ದೊಡ್ಡದಾಗಿದ್ದರೆ  ನೀವು ಎತ್ತಬಹುದು ಆದರೆ-White Dwarf- ತಂದ ಅಷ್ಟು ಗಾತ್ರದ ವಸ್ತು ಸುಮಾರು ೧೬ ರಿಂದ ೪೦ ಟನ್ ಭಾರವಿರುತ್ತದೆ
ಆದ್ದರಿಂದ -White Dwarfs ಗಳದ್ದು ಅತೀ ಚಿಕ್ಕ ಗಾತ್ರ ಅತೀವ ತಾಪ ,ಅವುಗಳು H-R Diagram ನಲ್ಲಿ  ಕೆಳಗಿನ-ಎಡ ಮೂಲೆಯಲ್ಲಿರುತ್ತವೆ(view H-R Diagram in older posts)
ಇದೆಲ್ಲಾ ಲಕ್ಷಣಗಳು ಅವಕ್ಕೆ ಇರುವುದರಿಂದ -White Dwarfs- ಅತೀವ ಗುರುತ್ವ ಬಲ 

ಈಗ ಒಂದು ಸರಳ ಪ್ರಶ್ನೆ ನಮ್ಮ ಆಗಸದಲ್ಲೇ  ಅತ್ಯಂತ  ಉಜ್ವಲ -ತಾರೆ ಯಾವುದು ಗೊತ್ತೇ? ಅದರ ವಿಶೇಷತೆ ಏನು ಗೊತ್ತಾ? 
ಮುಂದಿನ ಸಂಚಿಕೆ ದಿನಾಂಕ   -April-17-2010-ರಂದು  ಸಮಯ -08:30pm ಕ್ಕೆ  ಪ್ರಕಟವಾಗಲಿದೆ

Tuesday, April 13, 2010

ತಾರೆ-ವಜ್ರ-ಬಿಳಿ-ಕುಬ್ಜಗಳು(White -Dwarfs)

ಹೀಗೆ ಸೂರ್ಯ ದೈತ್ಯನಾದಾಗ ಸುಮಾರು ಭೂಮಿಯ ವರೆಗೂ ಹಿಗ್ಗುತ್ತಾನೆ .ಆಗ ಅದನ್ನು ನಿಜ ಅರ್ಥದ "ಪ್ರಳಯ "ಅನ್ನಬಹುದು ಆದರೆ  ಭಯಪಡುವ ಅಗತ್ಯವಿಲ್ಲ,ಆಗ ನಾವಲ್ಲ ನಮ್ಮ ಮರಿಮಕ್ಕಳ-ಮರಿಮಕ್ಕಳೂ ಕಾಲಕ್ಕೂ ಇದು ಆಗುವುದಿಲ್ಲ(ಈ ಮಾನವ ಅದಕ್ಕೂ ಮೊದಲೇ ಭೂಮಿಯನ್ನು ಹಾಳುಮಾಡುವುದಿಲ್ಲ ಅನ್ನೋ ಗ್ಯಾರಂಟೀ ಕೋಡಲಾಗದು)  ಇದು ಅಗುವುದು ಸುಮಾರು 6 billion ವರ್ಷಗಳ ನಂತರ
ತಾರೆಗಳ ಹೊರಪದರದಲ್ಲಿ ಎನೂ ಹೆಚ್ಚಿನ ಕ್ರಿಯೆ ನಡೆಯದೆ ಅದು ಹರಡಿ ಹೋದನಂತರ ಕೇಂದ್ರದ ಕತೆ ಏನಾಯಿತು ಅಂತ ನೋಡೋಣ
ಹೀಲಿಯಮ್ ಪರಮಾಣುಗಳು ಕೆಂದ್ರದಲ್ಲಿವೆ ಗುರುತ್ವಬಲ ಹೆಚ್ಚುತ್ತಿದೆ ಹೀಲಿಯಮ್ ನಿಂದ ತುಂಬಿದ ಕೇಂದ್ರ ಇನ್ನೂ ಕುಗ್ಗಿಸಲು ನೋಡುತ್ತಿದೆ ಆಗ

ಹೀಲಿಯಮ್-ಹೀಲಿಯಮ್  ನಡುವೆ ಕ್ರಿಯೆಗಳು ನಡೆಯಲಾರಂಭಿಸುತ್ತವೆ
ಆದರೆ ಈ ಕ್ರಿಯೆ ನಡೆಯಲು ಇನ್ನೂ-ಹೆಚ್ಚಿನ ತಾಪಮಾನ ಅಗತ್ಯ ಅದು ಈ ಸ್ಥಿತಿಯಲ್ಲಿ ಮಾತ್ರ ಲಭ್ಯ
ಈ ಕಾಯಗಳ ಗಾತ್ರ ಕಿರಿದು ಆದರೆ ತಾಪ ಅಧಿಕ ಇವು ಬಿಳಿ-ಕುಬ್ಜಗಳು(White -Dwarfs)
ಇವುಗಳ ಗಾತ್ರ ಸುಮಾರು ನಮ್ಮ ಭೂಮಿಯಷ್ಟು ,ತಾಪ ಸೂರ್ಯನ ಮೂರುಪಟ್ಟು 
ಇಲ್ಲಿ ಸುಮಾರು ೧೫೦೦೦ ಡಿಗ್ರಿ ತಾಪವಿದೆ ಗುರುತ್ವವೂ ಹೆಚ್ಚಿದೆ ಆಗ ಹೀಲಿಯಮ್ ಪರಮಾಣುಗಳು ಸೇರಿ ಕಾರ್ಬನ್ ಆಗುತ್ತದೆ ಅದೂ ಅತೀ ಒತ್ತಡದಲ್ಲಿ 
ನಿಮಗೆ ಗೊತ್ತಿರುವಂತೆ ಹೆಚ್ಚಿನ ಒತ್ತಡದಲ್ಲಿ ಕಾರ್ಬನ್ ಸಿಲುಕಿದರೆ ವಜ್ರ ಆಗಬಲ್ಲದು
ಈ ಮೂಲಕ ಈ  White -Dwarfsಗಳು ವಿಶ್ವದ ದೋಡ್ಡ ವಜ್ರಗಳಿಂದ ಅದ ಕಾಯಗಳಾಗಿವೆ 
ಹಳೆಯ ಕತೆಗಳಲ್ಲಿ "ಹರಳುಗಳ-ಕಣಿವೆ","ರತ್ನಗಳ-ಬೆಟ್ಟ" ಇದರ ಬಗ್ಗೆ ಕೇಳಿರುತ್ತೇವೆ ಅಲ್ಲಿ ಹೋದರೆ ನಮಗೆ ಬೇಕಾದಷ್ಟು ರತ್ನಗಳನ್ನು ಪಡೆಯಬಹುದು ಅಂತಾ ಕನಸು ಕಂಡಿರಬಹುದು
ಹೀಗೆ ಈ--White -Dwarfs--ಗಳ ಬಳಿ ಹೋದರೆ ಬೇಕಾದಷ್ಟು ವಜ್ರವನ್ನು ಕತ್ತರಿಸಿ ತರಬಹುದಲ್ಲವೇ ?
ಅದು ಅಷ್ಟು ಸುಲಭವಲ್ಲ!!!!!
ಏಕೆ ಅಂತ ಕೇಳೋ ಮೊದಲು ಈಗ ಕೇಳಿ ಕಳೆದ ಬಾರಿಯ ಪ್ರಶ್ನೆಗೆ ಉತ್ತರ
ನಮಗೆ ತಿಳಿದಿರುವಂತೆ ವಿಶ್ವದಲ್ಲಿ ದೋಡ್ದ ವಜ್ರಗಳಿರೋದು LUCY ಅನ್ನೋ ಒಂದು --White -Dwarfs-ನಲ್ಲಿ

ಅಲ್ಲಿ ಹೋಗುತ್ತೀರಾ ಹಾಗದರೆ ವಿಳಾಸ ಬರೆದುಕೋಳ್ಳಿ


                       (PHOTO  - Science Daily)
ಅದು ಇರೋದು Centaurs ನಿಹಾರಿಕೆಯಲ್ಲಿ . ಅದು ಇರೋದು 10 ^34 carats,(34 zeros followed by 1)
ನಿಮಗೇನಾದರು ಹೋಗೋಕೆ ಸಾಧ್ಯವಾದರೆ ಸ್ವಲ್ಪ ,-ವಜ್ರವನ್ನು --ಕೋಡೋದು ಬೇಡ ತೋರಿಸಿ ಸಾಕು ಆದರೆ,ಆದರೆ 
ಅದು ಇರೋ ದೂರ ಮಾತ್ರ ಕೇವಲ 40 ಜ್ಯೋತಿರ್ವರ್ಷಗಳು ಸಾಧ್ಯವಾದರೆ ನನಗೆ ಅದರ ಚಿತ್ರ ಕಳಿಸಿದರೆ ಸಾಕು ಪ್ಲೀಸ್
ಸದ್ಯಕ್ಕೆ ನನಗೆ ಸಿಕ್ಕಿರೋ ಅದರ ಚಿತ್ರವನ್ನು ನೋಡಿ  --
ನಮ್ಮ ಸೂರ್ಯ ಸಹ ಹೀಗೇ ---ಅಗುತ್ತಾನೆ

ಇದರ ಬಗ್ಗೆ ಇನ್ನೂ ವಿಸ್ಮಯಕಾರಿ ಸಂಗತಿಗಳಿವೆ 
ಈಗ  ಈ ಬಾರಿಯ ಪ್ರಶ್ನೆ--
-White -Dwarfs--ರಲ್ಲಿನ ಒಂದು ಕ್ಯೂಬಿಕ್ ಸೆಂಟೀ-ಮೀಟರ್ ಗಾತ್ರದ( ಕೇವಲ ಒಂದು ಹಾವು-ಏಣಿ ಆಟದ  ದಾಳದ ಗಾತ್ರದ್ದು) ವಸ್ತುವನ್ನು ಏನಾದರೂ ಭೂಮೆಗ ತರಲು ಸಾಧ್ಯವಾದರೆ ಅದರ ತೂಕ ಎಷ್ಟಿರಬಹುದು ಊಹಿಸಿ ನೋಡೋಣ ?

ಮುಂದೇನಾಗುತ್ತೆ ತಿಳಿಸುತ್ತೇನೆ
ಬೈ!

("ನನ್ನ ಇನ್ನೋಂದು ಬ್ಲಾಗ್ ನಲ್ಲಿ ಸೂರ್ಯನ ಸಂದರ್ಶನವಿದೆ ನೋಡಿ")

("ಗ್ರಹಣ" ಇನ್ನೋಂದು ಬ್ಲಾಗ್ ಹೆಸರು ಬದಲಿಸಲು ಯೋಚಿಸಿದ್ದೇನೆ ಇದನ್ನು ತರಾತುರಿಯಲ್ಲಿ ಗ್ರಹಣದ ಚಿತ್ರಗಳಿಗಾಗಿ ಪ್ರಾರಂಭಿಸಿದೆ ಆದರೆ ಯಾವಾಗಲೂ ಗ್ರಹಣವಿರಬೇಕಲ್ಲ,ಆದ್ದರಿಂದ ಬೇರೆ ಹೆಸರು ಸೂಕ್ತ-"ಗ್ರಹಣ" ಏಕೋ ಋಣಾತ್ಮಕ ಅರ್ಥ ನೀಡುತ್ತದೆ ಅನ್ನಿಸುತ್ತೆ ,ಅದ್ದರಿಂದ ಪ್ರಿಯ ಬ್ಲಾಗ್ ಮಿತ್ರರೇ ನೀವೇ ಒಂದು ಒಳ್ಳೆಯ ಹೆಸರು ತಿಳಿಸಿ ನೋಡೋಣ ಪ್ಲೀಸ್ -ನನ್ನ ಲೇಖನಗಳಿಗೆ ಅನುಗುಣವಾಗಿರುವಂತಿರಲಿ-ನಿಮ್ಮ ಸಲಹೆಗಳಿಗೆ ಸ್ವಾಗತ  )

Friday, March 19, 2010

ತಾರಾ ಲೋಕದ ದೈತ್ಯರು

ಒಂದು ಮಗು ಹುಟ್ಟಿದಾಗ ಹೆಚ್ಚು ತೂಕವಿದ್ದರೆ ಅದು ಹೆಚ್ಚು ಆರೋಗ್ಯವಾಗಿರುತ್ತದೆ ಎನ್ನಬಹುದು ಆದ್ರೆ ತಾರೆಗಳಲ್ಲಿ ಈ ಲೆಕ್ಕಚಾರ ತಳೆಕೆಳಗಾಗುತ್ತದೆ

ತಾರೆ ಹುಟ್ಟುವಾಗ ಹೆಚ್ಚು ದ್ರವ್ಯರಾಶಿ ಹೊಂದಿದಂತೇ ಅದರ ಆಯುಷ್ಯ ಕಡಿಮೆ .ಆರಂಭಿಕ ದ್ರವ್ಯರಾಶಿ ಕಡಿಮೆ ಇದ್ದ ಹಾಗೆ ಅದರ ಆಯಸ್ಸು ಹೆಚ್ಚು ಏಕೆ ಅಂತ ನೀವು ಊಹಿಸಿರಬಹುದಲ್ಲವೇ ?
ಸರಳ ದ್ರವ್ಯರಾಶಿ ಹೆಚ್ಚು ಇದ್ದಂತೆ ಗುರುತ್ವದ ಸೆಳೆತವೂ ಹೆಚ್ಚು ಆಗ ಹೆಚ್ಚು ಹೆಚ್ಚು ಹೈಡ್ರೂಜನ್ ಅನ್ನು ತಾರೆ ದಹಿಸುತ್ತದೆ ಹಾಗೆ ಬೇಗ ಹೈಡ್ರೋಜನ್ ಮುಗಿಯಲೂ ಬಹುದು

ಸರಿ ಹಾಗೆ ಹೈಡ್ರೋಜನ್ ಕಡಿಮೆಯಾದ ತಾರೆಗಳಲ್ಲಿ ಏನಾಗುತ್ತದೆ ಅಂತ ನೋಡೋಣ

ನಿಮಗೆ ಗೊತ್ತಿರುವಂತೆ ಹೈಡ್ರ‍ೋಜನ್ ಪರಮಾಣು ದ್ರವ್ಯರಾಶಿ ಕಡಿಮೆ ಹಾಗೆಯೇ ಹೀಲಿಯಮ್  ದ್ರವ್ಯರಾಶಿ ಹೆಚ್ಚು
ನಿಮಗೆ ಗೊತ್ತಿರುವಂತೆ ಹೈಡ್ರೋಜನ್  ಪರಮಾಣುಗಳು ಸೇರಿ ಹೀಲಿಯಮ್ ಆಗುತ್ತೇ ಅಂತ ಅ ಹೀಲಿಯಮ್ ಪರಮಾಣುಗಳು ದ್ರವ್ಯರಾಶಿ ಹೆಚ್ಚಿರುವಂತೆ ತಾರೆಯ ಕೇಂದ್ರದತ್ತ ಸಾಗುತ್ತವೆ ಕೋನೆಗೋಂದು ಕಾಲಕ್ಕೆ ಕೇಂದ್ರದಲ್ಲಿ ಕೇವಲ ಹೀಲಿಯಮ್ ತುಂಬಿ ಹೋಗುತ್ತದೆ ಆದರೂ ತಾರೆಯ  ಹೊರ ಪದರದಲ್ಲಿ ನ್ಯೂಕ್ಲಿಯರ್ ಕ್ರಿಯೆಗಳು ಮುಂದುವರೆಯುತ್ತವೆ  ಆಗ ಹೊರಪದರ ತಾನಾಗಿಯೇ ಹಿಗ್ಗಲಾರಂಭಿಸುತ್ತವೆ ಅಗ ತಾರೆಯ ಬಾಹ್ಯ ತಾಪಮಾನ ಕುಸಿಯುತ್ತದೆ ಸುಮಾರು  ೩೦೦೦(3000degree) ಡಿಗ್ರಿಗೆ ಇದು " ತಾರೆಯ ಕೆಂಪು ದೈತ್ಯ ಸ್ಥಿತಿ" ನಮ್ಮ ಸೂರ್ಯನೂ ಹಲವು ಬಿಲಿಯನ್ ವರ್ಷಗಳ ನಂತರ ಹೀಗೆ  ಆಗುತ್ತಾನೆ ಸೂರ್ಯ ಸುಮಾರು ಭೂಮಿಯ ಕಕ್ಷೆಯವರೆಗೂ ಹಿಗ್ಗಬಹುದು (ಇಗೇನೂ ಹಾಗಾಗುವುದಿಲ್ಲ ಬಿಡಿ ನಾವೇನೂ ಸುಟ್ಟು ಹೋಗುವ ಭಯವಿಲ್ಲ ಆದರೆ ಅದಕೂ ಮೋದಲೇ ಈ ಸ್ವಾರ್ಥಿ ಮಾನವ ಭೂಮಿಯನ್ನು ನಾಶ ಮಾಡಲೂ ಬಹುದು ಇದಾಗುವುದು ಸುಮಾರು----ಬಿಲಿಯನ್ ವರ್ಷಗಳ ನಂತರ ) ಆಗ ಅ ತಾರೆಯನ್ನು H-R Diagram ನಲ್ಲಿ ಅನ್ವಯಿಸಿದರೆ ಒಂದು ಮೂಲೆಗೆ ಬರುತ್ತವೆ ಅಂದರೆ ತಾಪಮಾನ ಕಡಿಮೆ ಗಾತ್ರ ಹೆಚ್ಚು H-R Diagram ಮತ್ತೋಮ್ಮೆ ಹಳೆಯ ಪೋಸ್ಟ ನಲ್ಲಿ ನೋಡಿ 

ಈ ತರಹದ ತಾರೆಗಳು ಆಗಸದಲ್ಲಿ ಗಲವು ಇವೆ ಅದರಲ್ಲಿ ಪ್ರಮುಖವಾದದ್ದು ಓರಿಯನ್ ನಕ್ಷತ್ರ ಪುಂಜದಲ್ಲಿರುವ "ಬಿಟಲ್ ಗೀಸ್ " ಹೀಗೆ  ಕೆಂಪು ದೈತ್ಯಗಳು ಉಂಟಾಗುತ್ತವೆ 
ಕೆಲಕಾಲಾನಂತರ ಆ ಕೆಂಪು ದೈತ್ಯದ ಹೊರಪದರ  ಸಂಪೂರ್ಣ ಹೊರಕ್ಕೆ ಆಕಾಶದಲ್ಲಿ ಹರಡಿಹೋಗುತ್ತದೆ ಅದನ್ನು ಪ್ಲಾನೆಟರಿ-ನೆಬ್ಯುಲಾ ಎನ್ನುತ್ತಾರೆ ಏಕೆಂದರೆ ಇದೇ  ಮುಂದೆ ಗ್ರಹಗಳ ಉಗಮಕ್ಕೂ ಕಾರಣವಾಗಬಹುದು ಇದಕ್ಕೆ ಉದಾಹರಣೆ ಹೆಲಿಕ್ಸ್-ನೆಬ್ಯುಲಾ



ಆ ಕೆಂಪು ದೈತ್ಯಗಳ ಹೊರಪದರ ಎನೋ ಹೋರಟುಹೋಯಿತು ಆದ್ರೆ ಕೇದ್ರದಲ್ಲಿರುವ ಹೀಲಿಯಮ್ ಪದರ ಹಾಗೆ ಇದೆಯಲ್ಲ ಅದರಲ್ಲಿ ಏನಾಗಬಹುದು ಅಂತ ಕಾತರವಿದ್ದರೆ ನಿರೀಕ್ಷಿಸಿ

ಸರಿ ಈ ಪ್ರಶ್ನೆಗೆ ಉತ್ತರ  ಕೊಡಿ ನೋಡೋಣ 

ವಿಶ್ವದಲ್ಲಿ ಅತೀ ದೋಡ್ಡ ವಜ್ರಗಳು ಎಲ್ಲಿವೆ ಅಂತ 

ತಮ್ಮ ಕಮೆಂಟ್ ಗಳಲ್ಲಿ ನನಗೆ ಪ್ರಶ್ನೆಗಳನ್ನು, ಅನುಮಾನಗಳನ್ನು  ತಿಳಿಸಿದರೆ ಹೆಚ್ಚು ಅನುಕೂಲವಾಗುತ್ತದೆ
ಹಾಗೆ ತಪ್ಪುಗಳಿದ್ದರೆ ತಿಳಿಸಿ ನಿಮಗೆ ಇನ್ನೂ ಹೆಚ್ಚು ಗೋತ್ತಿದ್ದರೆ ಖಂಡಿತಾ ತಿಳಿಸಿ
ಬೈ!!!

ತಾರೆಗಳು ಕೋಟಿಗಟ್ಟಲೇ ವರ್ಷ ಮುಂದುವರೆಯುವುದು ಹೇಗೆ?

ನಿಮಗೆ ಓರಿಯನ್ ಅಥವಾ ಮಹಾವ್ಯಾಧ ನಿಹಾರಿಕೆ ಗೊತ್ತಿರಬಹುದು ಅದರಲ್ಲಿನ ಓರಿಯನ್ ನೆಬ್ಯುಲಾ ಹೆಸರು ಕೇಳಿರಬಹುದು ಅದರಲ್ಲಿ ತಾರೆಗಳು ಹುಟ್ಟುತ್ತಿವೆ ಅದೂ ನಾಲ್ಕು ಇರಬಹುದು ಅದರಲ್ಲಿ  ಈಗಷ್ಟೇ ಪರಮಾಣು ಕ್ರಿಯೆಗಳು ಪ್ರಾರಂಭವಾಗಿವೆ

ವಿಶ್ವದಲ್ಲಿ  ಬಹುಪಾಲು ತಾರೆಗಳು ಜೊತೆಯಾಗಿಯೇ ಇರುತ್ತವೆ  ಅಥವಾ ಒಂದನ್ನೋಂದು ಸುತ್ತುತ್ತವೆ(ಅಪ್ಪಾಲೆ-ತಿಪ್ಪಾಲೆ ಆಡುವಂತೆ) ಆದರೆ ನಮ್ಮ ಸೂರ್ಯ ಏಕೋ ಎಕಾಂಗಿ 

ಅನಿಲದ ಮೊಡಗಳು ಸಾಂದ್ರವಾಗಿ ಪರಮಾಣು ಕ್ರಿಯೆಗಳನ್ನು ನಡೆಸುವಷ್ಟು ತಾಪ ಉಂಟಾದಾಗ ಅದರಲ್ಲಿ ಶಕ್ತಿ ಉತ್ಪಾದನೆಯಾಗುತ್ತದೆ  ಅಂತ ಕಳೆದ ಬಾರಿ ತಿಳಿಸಿದ್ದೆ  ಹಾಗಾದರೆ ಈ ಕ್ರಿಯೆಗಳು ಕೋಟಿಗಟ್ಟಲೇ ವರ್ಷ ಮುಂದುವರೆಯುವುದು ಹೇಗೆ?
ಅದನ್ನು ಹ್ಯಾನ್ಸ್ ಬೆಥೆ ಕಾರ್ಬನ್-ಚಕ್ರದ ವಿವರಣೆಯ ಸಹಾಯದಿಂದ   ತಿಳಿಸುತ್ತಾರೆ
ಅದು ಹೇಗೆ ಅಂತಾ ನೋಡೋಣ ....ಸಂಕೀರ್ಣವಾಗಿದೆ ಅಂದುಕೋಳ್ಳಬೇಡಿ ತಾರೆಯ ಜೀವನದ ಸ್ಥಿರತೆಯನ್ನು ಕೇವಲ ಒಂದು ನ್ಯೂಕ್ಲ್ಯರ್ ಕ್ರಿಯೆಗಳ ಸಮೂಹದಿಂದ ವಿವರಿಸುತ್ತಾರೆ ಹೀಗೆ 
೧)ಮೊದಲು  ಮೂರು ಹೈಡ್ರ‍ೋಜನ್ ಸೇರಿ ಹೀಲಿಯಮ್ ಆಗುತ್ತೆ ಅಂತ ತಿಳಿದಿದೆ ಇದು ಅಪಾರ ಶಕ್ತಿಯನ್ನು ಬಿಡುಗಡೇ ಮಾಡುತ್ತೆ
೨)ಎರಡು ಹೀಲಿಯಮ್ ಮತ್ತೆ ಸೇರಿ ನಾಲ್ಕು ಪ್ರೋಟನ್ ಉಳ್ಳ ಹೀಲಿಯಮ್ ಆದೀತು ಅದರೊಂದಿಗೆ ಪ್ರೋಟನ್ ಹಾಗು Energy ಬರುತ್ತದೆ 
೩)ಈಗ ತಾಪಮಾನ ಏರಡು ಕೋಟಿಯನ್ನೂ ಮೀರಿದಾಗ  ಹೀಲಿಯಮ್ ಪರಮಾಣುಗಳು ಸೇರಿ ಕಾರ್ಬನ್ ಬರುತ್ತದೆ ಈ ಕಾರ್ಬನ್ ನ್ಯೂಕ್ಲಿಯಗಳು ಜಲಜನಕದ ಪರಮಾಣುಗಳನ್ನು ಒಂದರ ಹಿಂದೆ ಒಂದರಂತೆ ಸಾಲಾಗಿ ಪ್ರತಿಕ್ರಿಯೆ ನಡೆಸುವಂತೆ ಕಾರಣವಾಗುತ್ತದೆ 
ಕೋನೆಗೆ ಕಾರ್ಬನ್ ವೇಗವರ್ಧಕದಂತೆ(Catalist ) ವರ್ತಿಸಿ ಕಾರ್ಬನ್ ಯಥಾವತ್ತಾಗಿ ತನ್ನ ಮೂಲರೂಪಕ್ಕೆ ಹಿಂದಿರುಗುತ್ತದೆ 
ಎಲ್ಲಿಯವರೆಗೂ ಈ ಕಾರ್ಬನ್ ಚಕ್ರ ನಿರಂತರವಾಗಿರುವುದೋ ಅಲ್ಲಿಯವರೆಗೆ ತಾರೆ ಸ್ಥಿರವಾಗಿರುತ್ತದೆ
ಕಾರ್ಬನ್ ಚಕ್ರದ ಚಿತ್ರ ನೋಡಿ ಸ್ಪಷ್ಟವಾಗಿ ತಿಳಿಯಬಹುದು
(ಚಿತ್ರ-ದರ್ಶನ)



ಈ ಸ್ಥಿರತೆಯ ಅಂತ್ಯ ಹೇಗಾಗಬಹುದು ಅಂತ  ನೋಡೋಣ 
ಅದು ಆಗೋದು ಹೈಡ್ರೂಜನ್ ಪರಮಾಣುಗಳ ಸಂಖ್ಯೆ ಕಡಿಮೆಯಾದಾಗ ಅದನ್ನು ಮುಂದಿನ ಸಂಚಿಕೆಯಲ್ಲಿ ತಿಳಿಸುವೆ (ಸೂರ್ಯನ ಒಳಗೆ ಏನಿದೆ? ಸೂರ್ಯನ ರಚನೆಯ ಬಗ್ಗೆ "ಗ್ರಹಣ"ದಲ್ಲಿ ಸದ್ಯದಲ್ಲೇ ತಿಳಿಸುತ್ತೇನೆ)
ಬೈ

Thursday, March 18, 2010

ಪ್ಲಾಸ್ಮಾ ಸ್ಥಿತಿ

ಹ್ಯಾನ್ಸ್ ಬೆಥೆ ಹಾಗು ಕಾರ್ಲ್ ವೀಜಾಕ್ಕರ್ ಎನ್ನುವವರು ತಾರೆಗಳಲ್ಲಿನ  ಪರಮಾಣು ಕ್ರಿಯೆಗಳ ರಹಸ್ಯವನ್ನು ವಿವರಿಸಿದರು 
 ಅದರಲ್ಲಿ ಎರಡು ರೀತಿಯ ಕ್ರಿಯೆಗಳು ನಡೆಯುತ್ತವೆ 
1)Hydrogen cycle
2)Carbon Cycle

 ಮೊದಲು ಹೈಡ್ರೋಜನ್ ಪರಮಾಣುಗಳೆಲ್ಲಾ ತಮ್ಮ ಎಲೆಕ್ಟ್ರಾನ್ ಗಳನ್ನು ಕಳೆದುಕೋಂಡು  ಒಂದು ಪ್ರೊಟಾನ್ ಮಾತ್ರ ಉಳಿಸಿಕೊಳ್ಳುತ್ತವೆ ಈ ಸ್ಥಿತಿಯನ್ನೇ ಪ್ಲಾಸ್ಮಾ ಸ್ಥಿತಿ ಎನ್ನುವುದು 

ಈ ಪ್ರೋಟಾನ್ ಗಳು(ಹೈಡ್ರೊಜನ್ ಪರಮಾಣು ಕೇಂದ್ರಗಳು ಅಥವಾ ನ್ಯೂಕ್ಲಿಯಸ್) ಎರಡು ಪ್ರೋಟಾನ್ ಸೇರಿ ಡ್ಯೂಟೇರಿಯಮ್ ಆಗುತ್ತದೆ ಅದಕ್ಕೆ ಮತ್ತೆ ಒಂದು ಪ್ರೋಟನ್ ಸೇರಿ  ಹೀಲಿಯಮ್ ಆಗುತ್ತದೆ




ಈ ಕ್ರಿಯೆಗಳೇ ಸೂರ್ಯನಲ್ಲಿ ಅಪಾರ ಶಕ್ತಿ ಹೊಮ್ಮಲು ಕಾರಣವಾಗುತ್ತವೆ
ಈ ರೀತಿ ತಾರೆಗಳಲ್ಲಿ  ಅಪಾರ ಪ್ರಮಾಣದ ಹೈಡ್ರೋಜನ್ ಹೀಲಿಯಮ್ ಅಗುತ್ತಿರುತ್ತದೆ
ಒಂದು ಸೆಕೆಂಡಿಗೆ ಸೂರ್ಯ ಎಷ್ಟು ಹೈಡ್ರೋಜನ್ ದಹಿಸಬಹುದು ಅಂತಾ ಊಹಿಸಿ ಹೇಳಿ ನೋಡೋಣ

ಈ ಕ್ರಿಯೆಗಳು ನಡೆಯಲು ಸುಮಾರು ಎರಡು ಕೋಟಿ ಡಿಗ್ರೀ ತಾಪಮಾನ ಹಾಗು ಮಹಾ ಒತ್ತಡ ಬೇಕು ಆದ್ದರಿಂದ 
ಇದನ್ನು ಭೂಮಿಯಲ್ಲಿ ಕೃತಕವಾಗಿ ನಿರಂತರ ಶಕ್ತಿಮೂಲವಾಗಿ ಬಳಸಲಾಗದು ಆದ್ರೆ ಇದನ್ನು ಹೈಡ್ರೋಜನ್-ಬಾಂಬ್ ರೂಪದಲ್ಲಿ ಉಪಯೋಗಿಸಬಹುದು

ನಿಮಗೆ ಒಂದು ವಿಸ್ಮಯ ಗೊತ್ತೇ ಗುರುತ್ವ-ಬಲ ವಿಶ್ವದ ಅತ್ಯಂತ ಕ್ಷೀಣವಾದ ಬಲ ಆದರೆ ಪರಮಾಣು ಬಲ ವಿಶ್ವದ ಅತ್ಯಂತ ಶಕ್ತಿಶಾಲಿ ಬಲ  ಅದ್ರೂ ತಾರೆಗಳಲ್ಲಿ ಇವೆರಡರ ನಡುವೆ ಹೋರಾಟ ನಡೆಯುತ್ತೇ ಅಂದ್ರೆ ವಿಸ್ಮಯವಲ್ಲವೇ ಕೊನೆಗೆ ಗೆಲ್ಲುವವರು ತ್ಯಾರು ಗೊತ್ತೆ? 
ಗುರುತ್ವವೇ!!!!! ಖಂಡಿತಾ ಗುರುತ್ವವೇ ಇದೇ ಪ್ರಕೃತಿಯ ಸೋಜಿಗ ಬಲಶಾಲಿಗಳೇ ಗೆಲ್ಲಬೇಕು ಅಂತಾ ಪ್ರಕೃತೀ ಕೂಡ ಒಪ್ಪಲ್ಲಾ ಗೊತ್ತಾ

ಆನೆ ಇರುವೆ ಕತೆ ಮಾತ್ರವಲ್ಲ ,ನಮ್ಮಲ್ಲಿ ಮಾತ್ರವಲ್ಲಾ ತಾರೆಗಳಲ್ಲೂ ಹೀಗಾಗುತ್ತದೆ
 ಹೇಗೆ ಅಂತ ಮುಂದಿನ ಸಂಚಿಕೆಯಲ್ಲಿ ತಿಳಿಸುವೆ

ಕೊನೆಗೆ  ಪ್ರಶ್ನೆ  ನೆನಪಿಟ್ಟುಕೋಳ್ಳಿ ಸೂರ್ಯ  ಎಷ್ಟು ಹೈಡ್ರೂಜನ್ ಉರಿಸಬಹುದು ಅಂತಾ
ಉತ್ತರ ಊಹಿಸುತ್ತಿರಿ ಮುಂದಿನ ಸಂಚಿಕೆಯಲ್ಲಿ ಸೂರ್ಯನ-ತಾರೆಗಳ  ಪಾಕಶಾಲೆಯ  ಸಂಪ್ರೂರ್ಣ ಪರಿಚಯ ಮಾಡಿಕೋಡುತ್ತೇನೆ 

ಬೈ!

ಗುರುತ್ವ - ವಿಕಿರಣ ಹಗ್ಗ ಜಗ್ಗಾಟ

ವಿಜ್ಞಾನ-ತಾರೆಎಲ್ಲರಿಗೂ ಹೊಸ ಸಂವತ್ಸರದ ಶುಭಾಶಯಗಳು

ಭೂಮಿಯಿಂದ ನೋಡಿದಾಗ ಸೂರ್ಯ ಎಲ್ಲಾ ರಾಶಿಗಳನ್ನು ಒಂದು ಸುತ್ತು ಪೂರೈಸಿದಂತೆ ತೋರುವುದೇ ಒಂದು ಸಂವತ್ಸರ ಅದಕ್ಕೂ ಮೊದಲು ಸೂರ್ಯ ಏನಾಗಿದ್ದ ಅಂತ ತಿಳಿಯುವ ಬನ್ನಿ

ಈ ರೀತಿ ಅಂತರಿಕ ಕ್ರಿಯೆಗಳು ಪ್ರಾರಂಭವಾದ ನಂತರ ಆ ಅನಿಲಗಳು ಕುಗ್ಗಿ ಒಂದು ಆಕಾರಕ್ಕೆ ಬರುತ್ತವೆ ಹಾಗು  ಅದರಲ್ಲಿ ಈಗ ಪರಮಾಣು ಕ್ರಿಯೆಗಳು ಪ್ರಾರಂಭವಾಗುತ್ತವೆ ಅದನ್ನು ಈಗ Proto Star  ಎನ್ನುತ್ತಾರೆ



ನೀವು Tug-OF_Warಆಟ ನೋಡಿರಬಹುದು ಅದರಲ್ಲಿ ಎರಡೂ ತಂಡದವರು  ವಿರುದ್ದ ದಿಕ್ಕಿನಲ್ಲಿ ಹಗ್ಗ ಜಗ್ಗುವುದನ್ನು ಕಂಡಿರಬಹುದು ಹೀಗೆ ತಾರೆಗಳಲ್ಲೂ ಸಹ ಗುರುತ್ವ ಹಾಗು ವಿಕಿರಣಗಳು ವಿರುದ್ಧ ದಿಕ್ಕಿನಲ್ಲಿ ವರ್ತಿಸುವುದರಿಂದ ತಾರೆ ಸ್ಥಿರವಾಗುತ್ತದೆ

ಅದು ಹೇಗೆಂದರೆ ತಾರೆಯೋಳಗೆ ನಡೆವ ಕ್ರಿಯೆಗಳು ಹೊರಮುಖ ತಳ್ಳಿದರೆ ಗುರುತ್ವ ಒಳಮುಖ ತಳ್ಳುತ್ತದೆ ಇದರಿಂದ ತಾರೆಯ ಗಾತ್ರ ಸ್ಥಿತಿ ಹಾಗು ಕ್ರಿಯೆಗಳು ಬಹುಕಾಲ ಅಂದರೆ ಬಿಲಿಯನ್ ಗಟ್ಟಲೇ  ವರ್ಷ ಮುಂದುವರೆಯಬಲ್ಲವು 
ಮುಂದಿನ ಸಂಚಿಕೆಯಲ್ಲಿ ನೋಡೋಣ ತಾರೆಗಳಲ್ಲಿ  ನಡೆವ  ಪರಮಾಣು ಕ್ರಿಯೆಗಳೇನು ಅಂತ

Saturday, February 20, 2010

ಪರಮಾಣುಗಳ ನಡುವಿನ ಘರ್ಷಣೆ

ಸೂರ್ಯನಲ್ಲಿ ಹೀಲಿಯಮ್  ಪತ್ತೆಯಾಗಿದ್ದು ತಾರೆಗಳ ಜನ್ಮ ವೃತ್ತಾಂತ ಅರಿಯುವುದರಲ್ಲಿ ಪ್ರಮುಖ ಹೆಜ್ಜೆಯಾಯಿತು ಅಂತ ಕಳೆದ ಬಾರಿ ತಿಳಿಸಿದ್ದೆ

ತಾರೆಗಳ ಜನ್ಮ ಹೀಗೆ ಆಗಬಹುದು ಅಂತ ಬಹುಪಾಲು ಒಪ್ಪಿಕೊಂಡಿರುವ ಸಿದ್ದಾಂತ ಹೀಗಿದೆ
ಆದರೂ ಇದು ವಿವಾದ-ಭಿನ್ನಾಭಿಪ್ರಯಗಳಿಂದ ಮುಕ್ತವಾಗಿಲ್ಲ

--ಅಖಂಡ ವಿಶ್ವದಲ್ಲಿರುವ ಬಹುಪಾಲು ವಿಶ್ವಧೂಳಿ (Cosmic dust)ಹೈಡ್ರೋಜನ್ ಪರಮಾಣುಗಳಿಂದಾಗಿದೆ
ಅದು ಎಲ್ಲಿಂದ ಬಂತು ಅಂತ ಮಾತ್ರ ಕೇಳಬೇಡಿ 
ಬೀಜ ಮೊದಲೋ-ವೃಕ್ಷ ಮೋದಲೋ ಅನ್ನೊ ಪ್ರಶ್ನೆಯಿಂದ ಕೊನೆಯಾಗುವ ಅಂತ್ಯವಿಲ್ಲದ ವಿಷಯಕ್ಕೆ ಹೋಗಿಬಿಡುತ್ತೀರಿ
ಈ ವಿಚಾರದ ಬಗ್ಗೆ ನಂತರ ತಿಳಿಸುತ್ತೇನೆ
ಈ ಹೈಡ್ರೋಜನ್ ಪರಮಾಣುಗಳು ಒಂದನ್ನೋಂದು ಆಕರ್ಷಿಸುತ್ತಾ ಮೋಡಗಳ ಸ್ಥಿತಿಗೆ ಬರುತ್ತವೆ ಹಾಗು ಕುಗ್ಗಲಾರಂಭಿಸುತ್ತವೆ ಇದು ಏಕೆ ಹೀಗೆ ಎಂದು ಇಂದಿಗೂ  ಸ್ಪಷ್ಟವಾಗಿ ಹೇಳಲಾಗಿಲ್ಲ ಸಾವಿರಾರು ಕೋಟಿ ವರ್ಷ ತೆಗೆದುಕೊಳ್ಳುವ ವಿದ್ಯಮಾನವಿದು

ಹೀಗೆ ಸಂಕೋಚಿಸುವ ಹೈಡ್ರೋಜನ್ ಮೋಡಗಳಲ್ಲಿ ನಡೆವ ಮೋದಲ ಪ್ರಕ್ರಿಯೆ ಅಂದರೆ ಘರ್ಷಣೆ  (Friction)
ಈ ಪರಮಾಣುಗಳ ನಡುವಿನ ಘರ್ಷಣೆಯಿಂದ ರಕ್ತಾತೀತ(Infra Red) ಕಿರಣಗಳು ಹೊಮ್ಮಲಾರಂಭಿಸುತ್ತವೆ 
ಇದನ್ನು ಡಾರ್ಕ್ ನೆಬ್ಯುಲಾಗಳಲ್ಲಿ ಕಾಣಬಹುದು ಉದಾಹರಣೆಗೆ ಹಾರ್ಸ್ ಹೆಡ್ ನೆಬ್ಯುಲಾ ಇದು ಸಹಾ ಓರಿಯನ್ ನಕ್ಷತ್ರಪುಂಜದಲ್ಲಿದೆ


ಹಬಲ್ ದೂರದರ್ಶಕದ ಸಹಾಯದಿಂದ ಅಧ್ಯಯನ ನಡೆಸಿದ ಪ್ರಮುಖ ಆಕಾಶಕಾಯಗಳಲ್ಲಿ ಇದು ಒಂದು
ಇದು ತಾರೆಗಳ ಅತ್ಯಂತ ಪ್ರಾರಂಬಿಕ ಸ್ಥಿತಿ

ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ
೧)ತಾರೆಗಳಲ್ಲಿ ಗುರುತ್ವದ ಪಾತ್ರ
೨)ಪರಮಾಣುಗಳು ಅಯಾನ್ ಗಳಾಗುವ ಬಗೆ

Wednesday, January 13, 2010

ಸೂರ್ಯಗ್ರಹಣ ಯಾಕೆ ಅಷ್ಟೋಂದು ಕುತೂಹಲಕರ ?

ಸೂರ್ಯಗ್ರಹಣ ಯಾಕೆ ಅಷ್ಟೋಂದು ಕುತೂಹಲಕರ
ಹಗಲಿನಲ್ಲೇ ಸೂರ್ಯ ಮರೆಯಾಗುತ್ತಾನೆ ಅಂತಲಾ
ಸೂರ್ಯನಿಗೆ ರಾಹು-ಕೇತು ಹಿಡಿಯುತ್ತವೆ ಅಂತಲಾ

ನೇನಪಿರಲಿ! ಸೂರ್ಯಗ್ರಹಣದ ಕಾಲದಲ್ಲಿ ನದೆಸಿದ ಎರ‍ಡು ಪ್ರಯೋಗಗಳು ವಿಜ್ಞಾನದ ದಾರಿಯನ್ನೇ  ಬದಲಿಸಿದವು ಅದರಲ್ಲಿ ಒಂದು ಹೀಗಿದೆ 
ಜಾನ್ಸನ್ ಎನ್ನುವ ವಿಜ್ಞಾನಿ ಪೂರ್ಣ ಸೂರ್ಯ ಗ್ರಹಣದ ವೇಳೆ ಸೂರ್ಯನ ರೋಹಿತವನ್ನು ಪರೀಕ್ಷಿಸಿದಾಗ 
ಅಚ್ಚರಿಯ ಸಂಗತಿ ಹೊರ‍ಬಂತು

ಸೂರ್ಯನ ಕರೋನ(ಸೂರ್ಯನ ಅತ್ಯಂತ ಹೊರಭಾಗ) ಬೇರೆ ಯಾವುದೇ ಸಮಯದಲ್ಲಿ ಕಾಣಿಸುವುದಿಲ್ಲ. ಅದು ಪೊರ್ಣ ಸೂರ್ಯಗ್ರಹಣದ ವೇಳೆ ಮಾತ್ರ ಗೋಚರ 
ಅದರ ರೋಹಿತದಲ್ಲಿ ಕಂಡದ್ದು ಹೀಲಿಯಮ್ ಪರಮಾಣುವಿನ ಗೆರೆಗಳು
ಅದರಲ್ಲಿ ಹೊಸ ಮೂಲವಸ್ತುವನ್ನು ಕಂಡುಕೊಂಡ ಅದು ಹೀಲಿಯಮ್ ಎಂದು ಪತ್ತೆಮಾಡಿದ 
ಆಗ ಭೂಮಿಯ ಹೊರಗೆ ಪತ್ತೆಹಚ್ಚಲಾದ ಪ್ರಥಮ ಮೂಲವಸ್ತು ಆ ಹೀಲಿಯಮ್ ಆಗಿತ್ತು
ಅದಾದ  ೨೭ ವರ್ಷಗಳ ನಂತರ  ಭೂಮಿಯಲ್ಲಿ ಹೀಲಿಯಮ್ ಪತ್ತೆಹಚಲಾಯಿತು

ಈ ಮೂಲಕ ಭೂಮಿಯಿಂದ ಹೊರಗೆ ಪತ್ತೆಯಾದ ಮೊದಲ ಮೂಲವಸ್ತು ಹೀಲಿಯಮ್ ಆಗಿತ್ತು
ಇದನ್ನು ಜಾನ್ಸನ್ ಕಂಡುಹಿದದ್ದು ನಮ್ಮ ವಿಶಾಖಪಟ್ಟಣದಲ್ಲಿ ಸೂರ್ಯನನ್ನು ವೀಕ್ಷಿಸಿದಾಗ
ಇದು ಸೂರ್ಯನ ಜನ್ಮರಹಸ್ಯ ತಿಳಿಯಲು ಅಡಿಯಾಯಿತು
ಹಾಗೆ ತಾರೆಗಳಲ್ಲಿ ಹೈಡ್ರ‍ೋಜನ್ ಪರಮಾಣುಗಳು ಬೈಜಿಕ ಸಮ್ಮಿಳನದಿಂದ(Nuclear Fussion) ಹೀಲಿಯಮ್ ಪರಮಾಣುಗಳಾಗಿ ಬದಲಾಗುತ್ತವೆ ಹಾಗು ಅದರೊಂದಿಗೆ ಅಪಾರ ಶಕ್ತಿ ಬಿಡುಗಡೆಯಾಗುತ್ತದೆ ಎಂದು ತಿಳಿದುಬಂದಿತು

ಅದು ಹೇಗೆ ಪ್ರಾರಂಭವಾಗುತ್ತದೆ ಹಾಗು ಎಲ್ಲಿ ಎಂದು ಮುಂದಿನ ಸಂಚಿಕೆಯಲ್ಲಿ ತಿಳಿಸುತ್ತೇನೆ 
ಬೈ!

ಏ ತಾರೆ ನಿನ್ನೊಳಗೇನಿದೆ?

ತಾರೆಗಳಿಂದ ಅಷ್ಟೆಲ್ಲಾ ಬೆಳಕು-ಶಕ್ತಿ ಹೊರಸೂಸುತ್ತದೆ ಅಂದರೆ ಅದರೊಳಗೇನಿರಬಹುದು
ಯಾವ ಇಂಧನದಿಂದ ಅದು ಉರಿಯುತ್ತದೆ ? ಈ ವಿಚಾರಗಳಿಗೆ ಉತ್ತರ ಹುಡುಕಲು ದೂರದ ತಾರೆಗಳೇಕೆ ಬೇಕು ನಮ್ಮ ಸೂರ್ಯನನ್ನೇ ಅಧ್ಯಯನ ಮಾಡಿದರೆ ಸಾಕಲ್ವಾ ?
ಶಿಲಾಯುಗದ ಜನರಿಂದ ಇಂದಿನ ಕಂಪ್ಯೂಟರ್ ಜಗತ್ತಿನ ಜನರೂ ಇದನ್ನೇ ಯೋಚಿಸುತ್ತಿದ್ದರು ಇಗಲೂ ಹಾಗೇ ಯೋಚಿಸುತ್ತಾರೆ ಕೂಡ
ಸೂರ್ಯನಲ್ಲೇನಿರಬಹುದು?
ಅವರಿಗೆ ತಿಳಿದಿದ್ದ ವಸ್ತುಗಳ ಬಗ್ಗೆ ಎಲ್ಲಾ ಅನ್ವಯಿಸಿದರು
ಕಲ್ಲಿದ್ದಲಿನಿಂದ ಸೂರ್ಯ ಉರಿಯುತ್ತಿರ ಬಹುದಾ --ಊ..ಹೂಂ
ಸೀಮೆ ಎಣ್ಣೆ, ಪೆಟ್ರೋಲ್ ,ಡೀಸೆಲ್ ,--- ಸಾಧ್ಯವಿಲ್ಲ
ಹೈಡ್ರೋಜನ್? ಇರಬಹುದಾ
ಸೂರ್ಯನ ರೋಹಿತದಿಂದ ಇದಂತೂ ಸ್ಪಷ್ಟವಾಯಿತು ಸೂರ್ಯನಲ್ಲಿ ಹೈಡ್ರೋಜನ್? ಇದೆ ಅಂತಾ
ಹಾಗಾದರೆ ಅಲ್ಲಿ ಯಾರೋ ಆ ಜಲಜನಕಕ್ಕೆ ಬೆಂಕಿ ಹಚ್ಚಿರಬಹುದು ಅಲ್ವಾ, ಹಾಗಾದರೆ ದಹನ ಕ್ರಿಯೆಗೆ ಆಮ್ಲಜನಕ ಬೇಕಲ್ವಾ ಅದೆಲ್ಲಿದೆ ಸೂರ್ಯನಲ್ಲಿ? ಇದರ ಅರ್ಥ ಸೂರ್ಯನಲ್ಲಿ ಹೈಡ್ರೋಜನ್ ಬೇರೇ ಯಾವುದೋ ಕಾರಣದಿಂದ ದಹಿಸುತ್ತಿರಬೇಕು ಹಾಗಾದರೆ ಅದು ಏನು?

ಇದಕ್ಕೆ ಉತ್ತರ ಸಿಕ್ಕಿದ್ದು ಐನ್ ಸ್ತೈನ್ ರ ಸಾಪೇಕ್ಷತಾ ಸಿದ್ಧಾಂತದಿಂದ
ಅವರ ಸಿದ್ಧಾಂತದಂತೆ ವಸ್ತುವನ್ನು ಶಕ್ತಿಯಾಗಿ ಪರಿವರ್ತಿಸಬಹುದು ,ಹಾಗೇನೇ ವಸ್ತುವು ಶಕ್ತಿಯ ಸಾಂದ್ರೀಕ್ರತ ರೂಪ ಅಷ್ಟೇ ಇವೆರ‍ಡೂ ಪರಿವರ್ತಿಸಬಹುದಾದವುಗಳು ಎಂದು ತಿಳಿಸಿದರು

ಹಾಗೇ ಅಂದಿನ ಕಾಲಕ್ಕೆ ಪರಮಾಣು ಶಕ್ತಿಯ ಅರಿವು ಆಗತೋಡಗಿತ್ತು
ಸೂರ್ಯನಲ್ಲೂ ಸಹ ಪರಮಾಣು ಕ್ರಿಯೆಗಳು ನಡೆಯುತ್ತಿರಬಹುದು ಎಂದು ತರ್ಕಿಸಿದರು

ಈ ಪ್ರಶ್ನೆಗೆ ಉತ್ತರ ನೀಡಿದ್ದು  ಒಂದು ಪ್ರಯೋಗ ಅದೂ ಸೂರ್ಯಗ್ರಹಣದ ಸಮಯದಲ್ಲಿ ನಡೆಸಿದ ಒಂದು ಪ್ರಯೋಗ ಅದು ಎನು ಅಂತಾ ಮುಂದಿನ ಸಂಚಿಕೆಯಲ್ಲಿ ತಿಳಿಸುತ್ತೇನೆ

ಹೊಸ ವರ್ಷದ ಶುಭಾಶಯಗಳು (ಗ್ರೆಗೋರಿಯನ್ ಕ್ಯಾಲೆಂಡರ‍ಿನಂತೆ)
ಹೊಸ ವರುಷ ನಿಮಗೆಲ್ಲಾ ಹರುಷ ತರುವಂತಾಗಲಿ
ಬೈ! 

ಬೈ!